ವಿಶ್ವಕಪ್‍ಗೆ "ದಂಡಯಾತ್ರೆ"

To prevent automated spam submissions leave this field empty.

ಅತಿರಥ ಮಹಾರಥರನ್ನು ಒಳಗೊಂಡ ನಮ್ಮ ಟೀಮ್ ಇಂಡಿಯಾ ಮೊದಲ ಸುತ್ತಿನಲ್ಲೇ ವಸ್ತುಶಃ ಹೊರಬಿದ್ದು ಕ್ರಿಕೆಟ್ ಪ್ರೇಮಿಗಳಿಗೆ ಆಘಾತ ಕೊಟ್ಟಿದೆ. ಆಟದಲ್ಲಿ ಸೋಲು ಗೆಲುವು ಇದ್ದದ್ದೇ ಆದರೂ ಭಾರತದ ಸೋಲನ್ನು ಅರಗಿಸಿಕೊಳ್ಳುವುದು ಸುಲಭವಲ್ಲ. ಸಚಿನ್,ಗಾಂಗೂಲಿಯಂತಹ ನಮ್ಮ ಆಟಗಾರರಿಗೆ ಕರ್ಣನ ಹಾಗೆ ಕೊನೆಗಳಿಗೆಯಲ್ಲ್ಲಿ ಕಲಿತದ್ದನ್ನು ಮರೆಯಲಿ ಎಂಬ ಶಾಪ ಇದೆಯೇನೋ ಅನ್ನುವ ಅನುಮಾನ ಬರುತ್ತದೆ.ವಿಶ್ವಕಪ್ ಜ್ವರ ಉತ್ತುಂಗಕ್ಕೇರಿದ್ದರೆ ಹಲವು ಕಂಪೆನಿಗಳು ಕೋಟಿಗಟ್ಟಲೆ ಬಾಚುತ್ತಿದ್ದುವು. ಟಿವಿಯಂತಹ ಉತ್ಪನ್ನಗಳ ಮಾರಾಟ ತಾರಕಕ್ಕೇರುತ್ತಿದ್ದುವು. ಈಗ ಅವೆಲ್ಲಕ್ಕೂ ಕಲ್ಲು ಬಿದ್ದಂತಾಗಿವೆ. ಪರೀಕ್ಷೆಯ ನಡುವೆ ಕ್ರಿಕೆಟ್‍ಗೆ ಸಮಯ ಹೊಂದಿಸಬೇಕಾದ ಮಕ್ಕಳು ಈಗ ಕ್ರಿಕೆಟ್ ಬಗ್ಗೆ ಅಲ್ಪಕಾಲದ ವೈರಾಗ್ಯ ಹೊಂದಿ,ಓದಿನ ಕಡೆ ಹೆಚ್ಚು ಗಮನ ಹರಿಸಲೂ ಬಹುದು.
ಬರ್ಮುಡಾ ತಂಡ ಬಾಂಗ್ಲಾವನ್ನು ಸೋಲಿಸಿ,ನಮಗೆ ಜೀವದಾನ ಸಿಗಬಹುದೆಂದು ಭಾವಿಸುವವರು ಯಾರಾದರೂ ಇದ್ದಾರೆಯೇ?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಒಳ್ಳೆಯದು ಬಿಡಿ. ನಮಗೆಲ್ಲ ಸಮಯ ಉಳಿಯಿತು. ಸ್ಕೂಲು ಹುಡುಗರಿಗೂ ಎಲ್ಲ ಮರೆತು ಪರೀಕ್ಷೆಯ ಬಗ್ಗೆ ಗಮನ ಹರಿಸುವಂತಾಯಿತು.

ಭಾರತದ ಆಟಗಾರರಿಗೆ ಹೊಟ್ಟೆ ತುಂಬ ಉಂಡವರಿಗೆ ಹಸಿವಿಲ್ಲದಂತೆ ಆಟದಲ್ಲಿ ಗೆಲ್ಲಬೇಕೆಂಬ ಛಲವೇ ಇದ್ದಂತಿರಲಿಲ್ಲ. ಬಹುಶಃ ಎಲ್ಲರೂ ತಂತಮ್ಮ endorsementಉಗಳಿಂದ ಜೀವನಕ್ಕೆ ಬೇಕಾದಷ್ಟಕ್ಕಿಂತಲೂ ಹೆಚ್ಚು ದುಡ್ಡು ಮಾಡಿರುವಂತಿದೆ.
--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"