ಯಾರಿಗ್ಕೊಟ್ರೂ ಕೊಡ್ಬೊದು ನಿವೃತ್ತಿ ; ಆದ್ರೆ ಲಕ್ಷ್ಮಣ್ಗೆ, ಹೇಗ್ಸಾಧ್ಯ ಮಾರಾಯ !

To prevent automated spam submissions leave this field empty.

ನಾನು ಹೇಳಿದ್ದು, ಇತ್ತೀಚೆಗೆ ಅವರ ವ್ಯಂಗ್ಯ ಚಿತ್ರಾಂಕಣದಲ್ಲಿ ಬರ್ತಿತ್ತಲ್ಲ ; ಆ ಕಾರ್ಟೂನ್ಗಳು, ಮೊದಲಿನ ಮಟ್ಟದ್ದಾಗಿಲ್ಲ ಅಂತ ! ಅಂದ್ರೆ ಅದನ್ನೆಲ್ಲ ಲಕ್ಷ್ಮಣರೇ ಬರೆದಿದ್ದಾರೆ ಅಂದಲ್ಲ ! " ಹುಣಸೆ ಮರಕ್ಕೆ ಮುಪ್ಪು ಪ್ಬಂದರೂ ಅದರ್ ಹುಳೀಗ್ ಬರುತ್ಯೆ ?" ಇಲ್ಲವಲ್ಲ. ಅದೇ ರೀತಿ ಲಕ್ಷ್ಮಣ್ ಗರಡಿಯಲ್ಲಿ ಯಾರ್ನೊ ತಯಾರ್ ಮಾಡ್ತಿದಾರೆ ಅನ್ಸತ್ತೆ. ಆತ ಬರೆದ ರೇಖೆಗಳಂತೂ ಲಕ್ಷ್ಮಣರೇಖೆಗಳಲ್ಲ, ಅನ್ನೊ ಮಾತ್ನ ನಾನು ಹೇಳಿದ್ದು. ನಾನೇನೂ ಲಕ್ಶ್ಮಣ ವ್ಯಂಗ್ಯಚಿತ್ರಗಳಬಗ್ಗೆ ಹಚ್ಚಿಕೊಂಡಿರೊ ಎಲ್ಲ ಬುದ್ಧಿ ಜೀವಿಗಳದೂ ಇದೇ ಅಭಿಪ್ರಾಯ. ( ನಾನು ಒಬ್ಬ ಬುದ್ಧಿ ಜೀವಿಯೆ ? ಗೊತ್ತಿಲ್ಲ.)

ಇನ್ನು ಅವರ ಪರಾಕ್ರಮ ಎಲ್ಲಾರ್ಗೂ ತಿಳಿದದ್ದೆ. ಒಬ್ಬ ಸಾಮಾನ್ಯ ವ್ಯಂಗ್ಯ ಚಿತ್ರಕಾರನಿಗೆ [Times of India ] ನಲ್ಲಿ ಒಂದು ಪ್ರತ್ಯೇಕ ಕೊಠಡಿ ಏರ್ಪಾಡು ಮಾಡಿದ್ದರು ಅಂದರೆ, ನಂಬುವುದು ಕಷ್ಟ. ಕೊಠಡಿ ಏನಿದ್ದರೂ ಚೀಫ್ ಎಡಿಟರ್ ಗೆ ಮಾತ್ರ. ಆದರೆ ಲಕ್ಷ್ಮಣರ ಜನಪ್ರಿಯತೆ ಎಷ್ಟಿತ್ತಪ್ಪ ಅಂದ್ರೆ, ಅವರ ಚಿತ್ರಗಳನ್ನು ನೋಡಲೇ ದಿನ ಪತ್ರಿಕೆ ಖರೀದಿಸುವವರ ಸಂಖ್ಯೆ- ಸಾವಿರಾರು. ಅಥಾವಾ ಲಕ್ಷಗಟ್ಟಲೆನೋ ಗೊತ್ತಿಲ್ಲ. ಇದ್ದರು ಇರಬಹುದು. ಅಂದ ಮೇಲೆ ಅವರನ್ನು ಚೆನ್ನಾಗಿ ನೋಡಿಕೊಂಡಷ್ಟೂ ಲಾಭ ಮಾಲೀಕರಿಗಲ್ಲವೇ ? ಇದು ಜೈನ್ ವ್ಯಾಪಾರ ಧುರೀಣರಿಗೆ ತಿಳಿದಷ್ಟು ಬೇರೆ ಯಾರಿಗೆ ತಿಳಿಯತ್ತೆ ? ಇದೇ ನೋಡಿ ಅವರ ಯಶಸ್ಸಿನ ಹಿಂದಿನ ಗುಟ್ಟು.

ಈಗಲೂ ಲಕ್ಷ್ಮಣ್ ಭಾನುವಾರದ ಅಂಕಣದಲ್ಲಿ [ಟೈಮ್ಸ್] ಅಂಕಲೇಶರ್ ಐಯರ್ ರವರ ಕಾಲಮ್ ಮೇಲೆ ಒಂದು ಚಿತ್ರಾಂಕಣ ಸಾಮಾನ್ಯವಾಗಿ ಇದ್ದೆ ಇರುತ್ತೆ. ಅದರ ಗುಣಮಟ್ಟವಂತೂ Superb ಆಗಿರುತ್ತೆ. ಅದು ಪೇಂಟಿಂಗ್ ; ಮತ್ತು ಅದರಲ್ಲಿನ ವಿಶಯ ನಿರೂಪಣೆ ಮತ್ತು ಅಲ್ಲಿನ ವಿನ್ಯಾಸ ಹಾಗೂ ತಕ್ಕ ಶಿರೋನಾಮ ಇವುಗಳನ್ನು ಲಕ್ಷ್ಮಣ್ ಅಲ್ಲದೆ ಬೇರೆಯವರು ಬರೆಯಲು ಹೇಗೆ ಸಾಧ್ಯ ? ಎಂಬುದನ್ನು ಮನದಟ್ಟು ಮಾಡುತ್ತವೆ.

ಇನ್ನು ಲಕ್ಷ್ಮಣರ ಅಮರ ಕೃತಿಗಳ ಬಗ್ಗೆ :

ಮಳೆಗಾಲದ ಮುಂಬೈಕರ್ಗಳ ಪಾಡು, ಮಂತ್ರಿಗಳ ವಿದೇಶಿ ಪ್ರವಾಸ, ಅವರ ಗ್ರಾಮೀಣ ನಾಡಿನ ಪ್ರವಾಸ, ಮಾಂಸೂನ್ ನಂತರ ದ ಶಾಲೆ ಪ್ರಾರಂಭದ ಸನ್ನಿವೇಶ, ಬೆಲೆಯೇರಿಕೆ ಬಗ್ಗೆ, ಭಿಕ್ಷಕರ ಅಭಿಪ್ರಾಯಗಳು, ಮಂತ್ರಿಗಳ ಭಾಷಣಗಳ ತಯಾರಿ, ಎಲೆಕ್ಷನ್ ಗಳು ಮತ್ತು ಅದರ ಪ್ರಚಾರ, ಇತ್ಯಾದಿಗಳು ಸಾರ್ವಕಾಲಿಕ. ಅವು ಲಕ್ಷ್ಮಣರ Master piece ಗಳು.

ಕೈ ನಡುಗಿದರೂ, ಅವರ ತಲೆ ಕೆಲಸ ಮಾಡುತ್ತೆ- ಅದೂ ಪಾದರಸದಂತೆ ! ಐಡಿಯ ಗಳೋ ಎಲೆಕ್ಟ್ರಿಕ್ ಫ್ಲಾಷ್ ಳಂತೆ !

ಮುಂದೆ ಬರೆಯಲು ಆಗಲ್ಲ. ಕ್ಷಮಿಸಿ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ವೆಂಕಟೇಶರೆ,
ಮೊದಲಾಗಿ
ವಿಶಯ ನಿರೂಪಣೆ - ವಿಯ ನಿರೂಪಣೆ.

****

ಲಕ್ಷ್ಮಣ್ ಒಳ್ಳೆಯ ವ್ಯಂಗಚಿತ್ರಕಾರರು ಎಂಬುದು ಹೌದು. ಆದರೆ ಇತ್ತೀಚೆಗೆ ಅವರ ವ್ಯಂಗಚಿತ್ರಗಳು (ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ನಂತೆ) ಹಳೆಯ ನೆನಪುಗಳನ್ನು - nostalgia ತರಿಸುತ್ತದೇ ಹೊರತು ಹೆಚ್ಚಾಗಿ ಆಸಕ್ತಿ ಮೂಡಿಸುವುದಿಲ್ಲ, ಆಕರ್ಷಿಸುವುದಿಲ್ಲ. ಮುಂಬೈಗೆ ಪ್ರಸ್ತುತವಾದ ವ್ಯಂಗಚಿತ್ರ ಬೆಂಗಳೂರಿನಲ್ಲಿ ಹಾಗಿರದಿರಬಹುದು.

ಭಾರತದಲ್ಲಿ ಯೂಡರ್ಝೋ, ಹರ್ಜ್ ನವರಂತ ವ್ಯಂಗಚಿತ್ರಕಾರರು ಬೆಳಕಿಗೆ ಬರಲೇ ಇಲ್ಲವೆಂಬುದು ಅಚ್ಚರಿ ತರುವ ವಿಷಯ - ನಮ್ಮ ಸಾಮಾಜಿಕ ವ್ಯವಸ್ಥೆ ಹಾಗೂ ಸಂಪ್ರದಾಯ ಎಷ್ಟರಮಟ್ಟಿಗೆ ಇದಕ್ಕೆ ಕಾರಣವಾಗಿರಬಹುದು?

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

ನಾಡಿಗ್ ರವರಿಗೆ ನಮಸ್ಕಾರಗಳು.

ನಿಮ್ಮ ಮಾತು ನಿಜ. ಯಾವಾಗಲೂ ನಾಡಿನ ವ್ಯಕ್ತಿ ನಮ್ಮ ದೈನಂದಿನ ಕಾರ್ಯಕಲಾಪಗಳಿಗೆ ಸ್ಪಂದಿಸಿದಂತೆ, ಯಾಡರ್ಝೋ ಮತ್ತು ಹರ್ಝ್ ರಿಗೆ ಸಾಧ್ಯವಾಗದೆ ಇರಬಹುದು. ಅದರಿಂದ ಅವರ ಚಿತ್ರಗಳು ಸ್ವಾಭಾವಿಕವಾಗಿಯೇ ಭಾರದ ಜನರನ್ನು ಆಕರ್ಶಿಸಲು ಅಸಮರ್ಥವಾಗಿರಬಹುದು. ಆದರೆ ಆ ಕಲಾವಿದರು ಖ್ಯಾತರು. ನಾನು ಬೆಂಗಳೂರಿನಲ್ಲಿದ್ದೆ. ಹೋದವಾರ. ನಾನು ನೋಡಿದ್ದು, ನನ್ನ Family circle ನಲ್ಲಿ, ಡೆಕ್ಕನ್ ಹೆರಾಲ್ಡ್, ಹಿಂದು, ವಿಜಯಕರ್ನಾಟಕ. ಇಂಡಿಯನ್ ಎಕ್ಸ್ ಪ್ರೆಸ್, ಟೈಮ್ಸ್ ಕಾಣಿಸಲಿಲ್ಲ.

ಲಕ್ಷ್ಮಣ್ ಅತ್ಯಂತ ಪ್ರಭಾವಿ ಲೇಖಕರು. ಕೇವಲ ಚಿತ್ರಕಾರರಲ್ಲ. ಸೊಗಸಾದ ವಾಟರ್ ಕಲರ್ ಮತ್ತು ತೈಲವರ್ಣಚಿತ್ರಕಾರರು. ಅವರ ಚಿತ್ರ ಪ್ರದರ್ಶನ "ಜಹಾಂಗೀರ್ ಆರ್ಟ್ಸ್ ಗ್ಯಾಲರಿಯ ಪ್ರತಿಷ್ಥಿತ ಹಾಲಿ" ನಲ್ಲಿ ಅದೆಷ್ಟು ಬಾರಿ ಪ್ರದರ್ಶನಗೊಂಡಿದೆಯೊ ! ಇದು ಪ್ರತಿಭೆಯಿಲ್ಲದ ವ್ಯಕ್ತಿಗಳಿಗೆ ದಕ್ಕದ ಮಾತು !

ಇನ್ನೊಂದು . ಲಕ್ಷ್ಮಣ್ ಸ್ವಲ್ಪ ಇರಿಸು -ಮುರುಸು ವ್ಯಕ್ತಿ. ಯಾರೊಡನೆಯೂ ಮನ ಬಿಚ್ಚಿ ಹೆಚ್ಚು ಮಾತಾಡುವುದಿಲ್ಲ. ಕೆಲವು ವಿಷಯಗಳನ್ನು ಅವರ ಹತ್ತಿರದ ಸ್ನೇಹಿತರಿಗೂ ತಿಳಿಸದೆ ಗುಟ್ಟಾಗಿಟ್ಟಿದ್ದಾರೆ. ಪಂ. ಜವಹರ್ ಲಾಲ್ ನೆಹರು ರವರು ಪ್ರತಿದಿನ ಬೆಳಿಗ್ಯ ಎದ್ದಕೂಡಲೇ ಲಕ್ಶ್ಮಣ್ ನೆನ್ನೆಯ ಬಗ್ಗೆ ಏನು ಹೇಳ್ತಾರೆ, ಎಂದು ಕಾದು ನೋಡುತ್ತಿದ್ದರಂತೆ ! ಅವರಿಗೆ ಗಾಂಧಿ ಟೋಪಿ ವ್ಯಂಗ್ಯ ಚಿತ್ರದಲ್ಲಿ ಇಡದೆ, ಒಂದು ದಿನ ತಮ್ಮ ವ್ಯಂಗ್ಯಚಿತ್ರಾಂಕಣದಲ್ಲಿ ಪ್ರಕಟಿಸಿದರಂತೆ ! ಪಂಡಿತ್ ಜೀ ದೆಹಲಿಯಿಂದ ಫೋನಿಸಿ ವಿಚಾರಿಸಬೇಕಾಯಿತಂತೆ ! ಹಿಂದೆ ೧೯೬೦ ರ ದಶಕದಲ್ಲಿ ನೆಹರೂ ಗಾಂಧೀ ಟೋಪಿ ಧರಿಸದೆ ಯಾವ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ಇದಕ್ಕೆ ಕಾರಣವೆಂದರೆ ಟೋಪಿ ತೆಗೆದಾಗ ಅವರು ವಯಸ್ಸಾದವರಂತೆ ಕಾಣಿಸುತ್ತಿದ್ದರು. ನೆಹರೂ ಯಾವಾಗಲೂ ಹಸನ್ಮುಖಿ, ನಗುಮುಖದಿಂದ ಬೀಗುವ ಅವರ ನೋಟ ಎಲ್ಲರಿಗೂ ಪ್ರಿಯ. ಟೈಮ್ಸ್ ಪೇಪರ್ ನೋಡಿ ನೆಹರೂ ಹೌಹಾರಿದರು ! ಅವರ ತಲೆಯ ಟೋಪಿ ಮಾಯವಾಗಿದೆ. ತಕ್ಷಣ ನೆಹರೂ ಕಾರ್ಯದರ್ಶಿ, ಲಕ್ಷ್ಮಣರಿಗೆ ಟೆಲೆಫೋನ್ ಮಾಡಿ ಕಾರಣ ಕೇಳಿದರು. ಅದಕ್ಕೆ ಉತ್ತರವಾಗಿ ಲಕ್ಷ್ಮಣ್ "ಸರ್, ನಿಮ್ಮ ಸುಂದರ ನಗುಮುಖದ ವ್ಯಕ್ತಿತ್ವದಲ್ಲಿ ನನಗೆ ಹಾಸ್ಯ ತರಲು ಪಟ್ಟ ಶ್ರಮವೆಲ್ಲ ವ್ಯರ್ಥವಾಗಿದೆ. ಅದೇನಿದ್ದರು ನಿಮ್ಮ ಬೋಳುತಲೆಯಲ್ಲಿ ಎತ್ತಿ ತೋರಿಸುವ ಪ್ರಯತ್ನ ನಾನು ಮಾಡುತ್ತೇನೆ" ಎಂದರು. ನೆಹರೂ ರವರಿಗೆ ನಗು ತಡೆಯಲಾಗಲಿಲ್ಲ. ಸರಿ. ಹಾಗೇ ಮಾಡಿ; ಎಂದು ತಮ್ಮ ಸಮ್ಮತಿ ಸೂಚಿಸಿದರಂತೆ. ಇಂತಹ ಸಾವಿರಾರು ವಿಷಯಗಳು ನನ್ನ ೪೦ ವರ್ಷದ "ಲಕ್ಶ್ಮಣ್ ಚಿತ್ರ ಸಂಗ್ರಹಗಳ ಅಭ್ಯಾಸ" ದ ಸರಕಿನಲ್ಲಿವೆ.

ಮುಂಬೈ ಜನರಿಗಂತೂ ಅವರು ಆರಾಧ್ಯದೇವತೆ. ಬಲಿಷ್ಟ ಬಾಲ್ ಠಾಕರೆಯವರನ್ನು ( ವ್ಯಂಗ್ಯಚಿತ್ರಾಗ್ರೇಸರ ಎಂದು ಆಗಿನ ಬಾಂಬೆಯಲ್ಲಿ ಅವರು ಹೆಸರು ಮಾಡಿದ್ದರು ) ಬದಿಗೆ ಸರಿಸಿ ಮುಂಬೈ ತಮ್ಮ ಮುಷ್ಠಿಯಲ್ಲಿ ಇಟ್ಟುಕೊಳ್ಳಬೇಕಾದರೆ ಅದೆಷ್ಟು ಕಷ್ಟ, ಎನ್ನುವುದು ನೀವೂ ಒಬ್ಬ ವ್ಯಂಗ್ಯಚಿತ್ರಕಾರರಾದ್ದರಿಂದ ಊಹಿಸಬಹುದು.
ಅವರು ಬಂದದ್ದು ಅತಿ ಸಾಮಾನ್ಯ ಪರಿವಾರದಿಂದ. ಯಾವ ಹಿನ್ನೆಲೆ ಮತ್ತು ಬೆಂಬಲ ಇರಲಿಲ್ಲ. ಅವರ ಸ್ವಂತ ಸಾಮರ್ಥ್ಯದಿಂದ ಮುಂಬೈಕರ್ ಗಳನ್ನು ಮೆಚ್ಚಿಸಿದ್ದಾರೆ.

ಮಾನ್ಯ ವೆಂಕಟೇಶರೆ,

ನಾನು ಹೇಳಿದ್ದು ನಮ್ಮ ಭಾರತದಲ್ಲಿ [:http://en.wikipedia.org/wiki/Uderzo|ಯೂಡರ್ಝೋ], [:http://en.wikipedia.org/wiki/Herge|ಹರ್ಜ್] ನಂತಹ ಕ್ರಾಂತಿಕಾರಿ ವ್ಯಂಗಚಿತ್ರಕಾರರು ಬೆಳಕು ಕಾಣಲಿಲ್ಲವಲ್ಲ ಎಂದು. ಯೂಡರ್ಝೋ ಮತ್ತು ಹರ್ಜ್ ನಂತವರು ನಮ್ಮ ಸಮಾಜ, ನಮ್ಮ ಸಂಪ್ರದಾಯಗಳ ಪರಿಸರದಲ್ಲಿ ಏನು ಮಾಡುತ್ತಿದ್ದರೋ ಎಂಬುದು ಕುತೂಹಲ ತರಿಸುವ ವಿಷಯವಾದರೂ ಊಹಿಸಲಾಗದಂತದ್ದು.

ಭಾರತದಲ್ಲಿ ನಡೆದ ಪ್ರಯೋಗಗಳು ಬಹಳ ಕಡಿಮೆ. ನಡೆದವುಗಳಲ್ಲಿ ಸಂಜೀವ್ ವಾಯೀರ್ಕರ್, ಸೌರೇನ್ ರಾಯ್, ದಿಲೀಪ್ ಕದಮ್, ರಾಮ್ ವಾಯೀರ್ಕರ್ ಮುಂತಾದವರ ಬಹಳ ಒಳ್ಳೆಯ ಇಲ್ಲಸ್ಟ್ರೇಶನ್ ಇರುವ ಅಮರ ಚಿತ್ರ ಕಥೆಯೊಂದೇ ನನಗೆ ಈಗಿನಂತೆ ನೆನಪಿಗೆ ಬರುತ್ತಿರುವುದು.

ಆರ್ ಕೆ ಲಕ್ಷ್ಮಣ್ ಅಸಮಾನ್ಯ ವ್ಯಂಗಚಿತ್ರಕಾರರು ಎಂದು ನನಗನ್ನಿಸುವುದಿಲ್ಲ. ಅವರು ಒಳ್ಳೆಯ ವ್ಯಂಗಚಿತ್ರಕಾರರು, ಅಷ್ಟೆ.

ಟಿ:

ಅವರ ಚಿತ್ರಗಳು ಸ್ವಾಭಾವಿಕವಾಗಿಯೇ ಭಾರದ ಜನರನ್ನು ಆಕರ್ಶಿಸಲು ಅಸಮರ್ಥವಾಗಿರಬಹುದು

ಈ ನಿಮ್ಮ ಟೈಪಿಂಗ್ ಸಮಯದ ತಪ್ಪು 'ಒಂದು ರೀತಿಯಲ್ಲಿ ನಿಜವೇ?' ಎನ್ನಿಸದಿರಲಿಲ್ಲ. ಓದಿದ ಕೂಡಲೆ ನಗು ಬಂತು. ಭಾರತದಲ್ಲಿ ಜನಸಂಖ್ಯೆ ಅತಿ ಹೆಚ್ಚಲ್ಲವೆ? ಆದ್ದರಿಂದ ನಾವು ಭಾರತದವರು 'ಭಾರದ' ಜನರೂ ಹೌದು ಅಲ್ವೆ? ;)

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

ನಿಮ್ಮ ಅನಿಸಿಕೆ ಸರಿಯಾಗಿದೆ. ಖ್ಯಾತ ಬ್ರಿಟಿಷ್ ರಾಜಕೀಯ ವ್ಯವಸ್ಥೆಯ ವ್ಯಂಗ್ಯಚಿತ್ರಕಾರ, "ಡೇವಿಡ್ ಲೋ " ರವರ ಮರಣದ ನಂತರ, ಆರ್. ಕೆ. ಲಕ್ಷ್ಮಣ್ ರವರಿಗೆ ಇಂಗ್ಲೆಂಡಿಗೆ ಬರಲು ಆಹ್ವಾನ ಬಂದಿತ್ತು - ಅವರನ್ನು ಡೇವಿಡ್ ರವರ ಸ್ಥಾನವನ್ನು ಅಲಂಕರಿಸಲು ಕರೆದಿದ್ದರು. ಆದರೆ ಲಕ್ಷ್ಮಣ್ ಆ ’ಆಫರ್” ನ್ನು ನಿರಾಕರಿಸಿದರು.

ಭಾರತದಂತಹ ವೈವಿಧ್ಯಮಯ ಜೀವನದ, ಹಲವು ಭಾಷೆಗಳ ಆಗರದ, ರೀತಿ-ನೀತಿಗಳ ತಾಣ- ವಿಶ್ವದ ಯಾವ ಜಾಗದಲ್ಲೂ ಸಿಗುವುದು ಕಷ್ಟ. ಮೇಲಾಗಿ ವ್ಯಂಗ್ಯಚಿತ್ರಕಾರರ ಮೆಕ್ಕಾ, ಭಾರತ. ಬೊಂಬಾಯಿ ಆ ಮಿನಿ ಭಾರತದ ಒಂದು ಪುಟ್ಟ ತುಣುಕು ! ಅದಕ್ಕಾಗಿ ಅವರು ನಮ್ಮ ದೇಶದಲ್ಲೇ ಉಳಿದರು.

ಇನ್ನು ಅವರ ಬಗ್ಗೆ ಟೈಮ್ಸ್ ಆಫ್ ಇಂಡಿಯಾದ ಲಕ್ಷಾಂತರ ಓದುಗರು ಅವರುಗಳ ಅಭಿಪ್ರಾಯಗಳನ್ನು ಸಮಯ ಬಂದಾಗ ಕೊಡುತ್ತಾರೆ. ನನ್ನ ಅನಿಸಿಕೆಯನ್ನು ಎಲ್ಲರೂ ಒಪ್ಪಲೇ ಬೇಕೆಂಬ ಆಸೆ ನನಗಿಲ್ಲ. ನಾನು ಎಲ್ಲರ ಅನಿಸಿಕೆಗಳಿಗೆ ಮರ್ಯಾದೆ ಕೊಡುತ್ತೇನೆ.

"ಲಕ್ಷ್ಮಣ್ ಬರೆದದ್ದು ಎರಡೇ ಕಾರ್ಟೂನ್. ಒಂದು ಎರಡು ಸ್ಟಿಯರಿಂಗ್ ನ ವಾಹನ ಮತ್ತೊಂದು ನಾಲ್ಕು ಚಕ್ರಗಳಿಲ್ಲದ ವಾಹನ."  ಇದನ್ನು ಹೇಳಿದ್ದು ಕಾರ್ಟೂನಿಸ್ಟ್ ರವಿಶಂಕರ್. ಈ ಅಭಿಪ್ರಾಯವನ್ನು ನಾನೂ ಒಪ್ಪುತ್ತೇನೆ. ಲಕ್ಷ್ಮಣ್ ರ ಹಳೆಯ ಕಾರ್ಟೂನುಗಳು ಚೆನ್ನಾಗಿದ್ದವು. ನಾವು ಅವರ ಕಾರ್ಟೂನುಗಳನ್ನು ನೋಡುವ ಹೊತ್ತಿಗೆ ಅವೆಲ್ಲವೂ ಪೇಲವವಾಗಿದ್ದವು. ಅವರು 70ರ ದಶಕದವರೆಗಿನ ರಾಜಕಾರಣಕ್ಕೆ ನಿಂತು ಹೋಗಿದ್ದಾರೆ. ಅವರ ಚಿತ್ರಗಳು ಚೆಂದ. ಒಳ್ಳೆಯ ಫೋಟೋಗ್ರಾಫ್ ಗಳಂತೆ ಅವುಗಳಲ್ಲಿ ವಿವರಗಳಿರುತ್ತವೆ. ಬರೇ ಚಿತ್ರ ಬಿಡಿಸುವ ಕೌಶಲ್ಯಕ್ಕಾಗಿ ಮಾತ್ರ ಕಾರ್ಟೂನ್ ಒಂದನ್ನು ಮೆಚ್ಚಲು ಸಾಧ್ಯವಾಗುವುದಿಲ್ಲ. ನನಗೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಪೊನ್ನಪ್ಪ ಅವರ ಕಾರ್ಟೂನ್ ಹೆಚ್ಚು ಇಷ್ಟ. ಹಾಗೆ ನೋಡಿದರೆ ಭಾರತೀಯ ಕಾರ್ಟೂನಿಸ್ಟರಲ್ಲಿ ಪೊನ್ನಪ್ಪ ವಿಶಿಷ್ಟ ಕಾರ್ಟೂನಿಸ್ಟ್.

ಇಸ್ಮಾಯಿಲ್ ನನ್ನ ಬ್ಲಾಗ್: http://ismail.sampada.net

ಪೊನ್ನಪ್ಪರವರ ವ್ಯಂಗಚಿತ್ರಗಳು ಒಂದೊಂದು ಸಾರಿ ಚೆನ್ನಾಗಿರುತ್ವೆ. ಯಾವಾಗಲೂ ಚೆನ್ನಾಗಿರೋದಿಲ್ಲ.

ಡೆಕ್ಕನ್ ಹೆರಾಲ್ಡ್ ದಿನಾ ಓದೋರು ಇದ್ದರೆ ಗಮನಿಸಿರುತ್ತೀರಿ... ಇತ್ತೀಚೆಗೆ ವ್ಯಂಗಚಿತ್ರಗಳೇ ಕಾಣಿಸ್ತಿಲ್ಲ (ಮಧ್ಯದ ಪೇಜುಗಳಲ್ಲಿ ಎಲ್ಲೋ ಒಂದೋ ಎರಡೋ ಇರತ್ವೆ, ಅಷ್ಟೆ). ಇಲ್ಲಿಯವರ ಕಾರ್ಟೂನು ಬಿಟ್ಟು ವಿದೇಶದ ಯಾವುದೋ ಕಾರ್ಟೂನುಗಳನ್ನ ಪ್ರಕಟಿಸುತ್ತಾರೆ. 'ಬೀಟಲ್ ಬೇಯ್ಲಿ' ಎಲ್ಲ ಓದಲು ಮಜವಾಗಿರುತ್ತದೆ, ನಿಜ. ಉಳಿದವು ಅಷ್ಟು ಚೆನ್ನಾಗಿರೋದಿಲ್ಲ - ಅಮೇರಿಕದ ಜಗತ್ತಿನಲ್ಲಿ, ಅಮೇರಿಕದ ದಿನನಿತ್ಯದ ಆಗುಹೋಗುಗಳಿಗೆ, ಸಮಾಜಕ್ಕೆ, ಜೀವನಕ್ಕೆ ಬರೆದದ್ದು ಇಲ್ಲಿ ಹಲವು ಬಾರಿ ಅಪ್ರಸ್ತುತವೆನಿಸದಿರುವುದಿಲ್ಲ.

ಎಕನಾಮಿಕ್ ಟೈಮ್ಸ್ ನಲ್ಲೂ ಒಂದೇ ವ್ಯಂಗಚಿತ್ರ - ಸ್ಕಾಟ್ ಆಡಮ್ಸ್ ನ ಡಿಲ್ಬರ್ಟ್. ಡಿಲ್ಬರ್ಟ್ ನಲ್ಲಿ ಬರೋ ಎಷ್ಟೋ ಪ್ರಸಂಗಗಳು ಭಾರತಕ್ಕೆ ಅನ್ವಯಿಸೋದಿಲ್ಲ.

ಈಗಿನ ಹಲವು ಸುದ್ದಿಪತ್ರಿಕೆಗಳಲ್ಲಿ ಇಂತಹ ನೆಗೆಟಿವ್ ಟ್ರೆಂಡಿನಿಂದ ಬಹುಶಃ ನಮ್ಮಲ್ಲಿ ಹೊಸ ಅಲೆಯ ವ್ಯಂಗಚಿತ್ರಕಾರರು ತಯಾರಾಗಿಲ್ಲ ಅಂತ ಒಂದೊಂದ್ಸಾರಿ ಅನ್ಸತ್ತೆ. ಬಲವಂತವಾಗಿ ನಗು ಬರಿಸಿಕೊಳ್ಳಬೇಕಷ್ಟೆ ಎಂಬಂತಿರುವ so called ಜೋಕ್ಸನ್ನು ಒಳಗೊಂಡ ಸುಧಾ, ತರಂಗ ವ್ಯಂಗಚಿತ್ರಗಳ ಟ್ರೆಂಡೇ ಇನ್ನು ಅಲೆದಾಡಿಕೊಂಡಿದೆ!

ಜಗತ್ತಿನ ಅತ್ಯುತ್ತಮ ವ್ಯಂಗಚಿತ್ರಕಾರರ ಬಯೋ ಓದಿದರೆ ತಿಳಿಯತ್ತೆ. ಸುಮಾರು ಎಲ್ರೂ ಪತ್ರಿಕೆಯೊಂದರ ಛಾವಣಿ ಕೆಳಗೆ ಕೆಲಸ ಮಾಡಿದ ನಂತರವೇ ಮೇಲೆ ಬಂದದ್ದು ಎಂದು. ಇತ್ತೀಚೆಗೆ ಇಂತಹ ಪ್ರೋತ್ಸಾಹ ನಮ್ಮ ಭಾರತದ ಪ್ರೆಸ್ ನಲ್ಲಿ ಕಡಿಮೆಯಾಗುತ್ತಿದೆಯೇ? [:http://wearethebest.wordpress.com/|ಕೆ ಪಿ ಯವರನ್ನೊಮ್ಮೆ] ಕೇಳಿನೋಡ್ಬೇಕು.
--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

ನನಗೆ ಕಾರ್ಟೂನಿಸ್ಟರ ಬಗ್ಗೆ ಹೆಚ್ಚು ಗೊತ್ತಿಲ್ಲ. ಆದರೆ ಕಾರ್ಟೂನ್‌ಗಳ ಮೇಲೆ ಒಂದು ಕ್ಷಣ ತಂಗದೇ ಪತ್ರಿಕೆ ಓದಲು ಸಾಧ್ಯವೇ ಆಗೊಲ್ಲ. ಬೆಂಗಳೂರಿನಲ್ಲಿ ಪ್ರಜಾವಾಣಿ/ಡೆಕ್ಕನ್‌ಹೆರಾಲ್ಡ್‌ನ ಬಿ.ವಿ.ರಾಮಮೂರ್ತಿಯವರ ಕಾರ್ಟೂನ್‌ಗಳು ಖುಷಿಕೊಡುತ್ತಿದ್ದವು.

ಆದರೆ, ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌ನಲ್ಲಿ ಕಾರ್ಟೂನಿಸ್ಟನ ಈ ಬ್ಲಾಗ್‌ನಲ್ಲಿ ಕಾರ್ಟೂನ್‌ ಹೇಗೆ ರಚನೆಯಾಗುತ್ತದೆ, ಅದರ ಹಿಂದಿನ ಕಲಾವಿದನ ಯೋಚನೆಗಳು ಇತ್ಯಾದಿಯ ದಾಖಲೆ ಇದೆ. http://blogs.smh.com.au/newsblog/archives/rocco_bloggo/index.html . ಅದರ ಸಂದರ್ಭಗಳು ಆಸ್ಟ್ರೇಲಿಯಾಕ್ಕೆ ಮಾತ್ರ ಸೀಮಿತವಾದರೂ ಕೂಡ, ಈ ಬ್ಲಾಗ್‌ ಒಳ್ಳೆ ಪ್ರಯತ್ನ ಎಂದು ಕಾಣುತ್ತದೆ.

ಅಂದ ಹಾಗೆ ಇತ್ತೀಚೆಗೆ ಇಲ್ಲಿ ಒಂದು ಟಿವಿ ಕಾರ್ಯಕ್ರಮ (difference of opinion ಎಂಬ ಪಬ್ಲಿಕ್‌ ಫೋರಮ್) ನಲ್ಲಿ ಕಾರ್ಯಕ್ರಮದ ನಡುವೆಯೇ ಒಬ್ಬ ಕಾರ್ಟೂನ್ ಕಲಾವಿದ ಅಲ್ಲಿ ನಡೆಯುವ ಮಾತುಕತೆಗೆ ಸ್ಪಂದಿಸುತ್ತಾ ಚಿತ್ರ ರಚಿಸುವುದೂ ಒಂದು ಹೊಸ ಪ್ರಯತ್ನವಿರಬಹುದೇ? ಅವನು ರಚಿಸುವ ಚಿತ್ರಗಳೆಲ್ಲಾ ಚೆನ್ನಾಗಿರುತ್ತದೆ ಎಂದು ಹೇಳಲಾಗದು, ಆದರೆ ತಾಜಾತನ ಖುಷಿಕೊಡುತ್ತದೆ.

ಮತ್ತೊಂದು, ಪ್ರತಿ ಭಾನುವಾರ insiders ಎಂಬ ಟಿವಿ ಕಾರ್ಯಕ್ರಮದಲ್ಲಿ ಆ ವಾರದ ಎಲ್ಲ ಪತ್ರಿಕೆಗಳ ಕಾರ್ಟೂನ್‌ಗಳನ್ನು ಬೇರೆ ಬೇರೆ ಕಾರ್ಟೂನಿಸ್ಟರ ಜತೆ ಕೂತು ಚರ್ಚಿಸುವ ಭಾಗವೂ ಚೆನ್ನಾಗಿರುತ್ತದೆ. 

ಇದಿಷ್ಟು ನಮ್ಮೂರು ಸುದ್ದಿ! 

ಆ . ...ಹಾಗೆ ನನಗೆ ಅನ್ನಿಸುತ್ತಿಲ್ಲವಲ್ಲ ! ಮಂಚ ಒಂದೇ ; ತೆರೆ ಬೀಳುತ್ತೆ. ತಕ್ಷಣ ಅಲ್ಲಿ ಇನ್ನೊಬ್ಬ ವ್ಯಕ್ತಿ ಹಾಜರ್- ಹೊಸ ವಿಷಯ ಸಂಗ್ರಹದೊಂದಿಗೆ ! ಅದನ್ನು ಹಳೆಯದಕ್ಕೆ ಹೋಲಿಸುವುದು ತರವಲ್ಲ. -ಇದು ಮತ್ತೆ ನನ್ನ ಅನಿಸಿಕೆ !

ಮೇಲಿನ ಅಂಕಣ ನಿಜವಾಗಿಯೂ ನಮ್ಮೆಲ್ಲರ ಆಸೆ, ಅಪೇಕ್ಷೆ, ಹಾಗೂ ಸರ್ವರ ಅನಿಸಿಕೆಗಳಿಗೆ ಎಡೆಮಾಡಿಕೊಟ್ಟಿದೆ. ಇಲ್ಲಿ ಭಾಗವಹಿಸಿಸವರಲ್ಲಿ ಶ್ರೀ ನಾಡಿಗರಿದ್ದಾರೆ- ಅವರೊಬ್ಬ ವ್ಯಂಗ್ಯಚಿತ್ರ ಕಲಾವಿದ, ಒಬ್ಬ ಪತ್ರಿಕೋದ್ಯಮಿ, ಇನ್ನೊಬ್ಬ ಕಾಮನ್ ಮ್ಯಾನ್ - ನನ್ನ ತರಹ, ಸನ್ನಿವೇಷಕ್ಕೆ ಸ್ಪಂದಿಸಿ ದಿಗ್ಮೂಢನಾಗಿ ನೋಡುತ್ತಿರುವ ಒಬ್ಬ ವೀಕ್ಷಕ. ನಾನು ಆ ಕೆಲಸವನ್ನು ಹಲವು ದಶಕಗಳಿಂದ ಮಾಡಿಕೊಂಡುಬಂದಿದ್ದೇನೆ. ಟಿನ್ ಟಿನ್ ನಿಂದ ಹಿಡಿದು ಅಮರಚಿತ್ರಕಥೆ, ಪಂಚ್, ಟಿಂಕಲ್ ಇನ್ನೂ ಹಲವಾರು ವ್ಯಂ. ಚಿ. ಗಳನ್ನು ನೋಡಿದ್ದೇನೆ. ನಮ್ಮ ಆಫೀಸಿನಲ್ಲಿ ವ್ಯಂ. ಚಿ. ಬರೆಯುವ ಸಮರ್ಥರ ಜೊತೆಗೆ ದಿನ-ನಿತ್ಯ ಮಾತುಕತೆ ಯಾಗುತ್ತಿತ್ತು. ಗುರುದತ್ತರ "ಮಿ. ಅಂಡ್ ಮಿಸೆಸ್ -೫೫ " ಚಿತ್ರ ಬಂದಾಗ, ಆರ್. ಕೆ. ನಾರಾಯಣರ "ಸ್ವಾಮಿ" ಕಿರುತೆರೆ ಕಂಡಾಗ, ಲಕ್ಶ್ಮಣ್ ರ ಚಿತ್ರಸಹಾಯದ ಬಗ್ಗೆ, ದಿನಗಟ್ಟಲೆ, ತಿಂಗಳುಗಟ್ಟಲೆ ವಿಚಾರ ವಿನಿಮಯವಾಗಿತ್ತು. ಇನ್ನು ಮುಂಬೈನ ಎಲ್ಲೆಡೆ ಹೋದರೂ ಆಫೀಸ್, ರೆಸ್ಟೋರೆಂಟ್, ಲೋಕಲ್ ಟ್ರೇನ್ ಮತ್ತಿತರ ಜಾಗಗಳಲ್ಲಿ ಲಕ್ಷ್ಮಣರ ಬಗ್ಗೆಯೇ ಮಾತು. ಅವರ ಅಂದಿನ ವಿಚಾರಧಾರೆಗಳಬಗ್ಗೆ. ಅದರಲ್ಲಿ ಲೋಕಲ್ ಜನರ ಪ್ರತಿಕ್ರಿಯೆಯೇ ಹೆಚ್ಚು.

ಜನರಿಗೆ ಹೊಸದು ಬೇಕು. ಬೇರೆ ಜನ ಸಿಕ್ಕರೆ , ಅವರ ಕೆಲಸ ಚೆನ್ನಾಗಿದ್ದರೆ, ಒಪ್ಪೇ ಒಪ್ಪುತ್ತಾರೆ. ಹೊಸತನ, ನಗೆ, ಲೇವಡಿ, ಮುದುಡಿದ ಜನಜೀವನಕ್ಕೆ ಸ್ವಲ್ಪ ಬೇಕಲ್ಲವೇ ?

ಈ ಸಂವಾದದಲ್ಲಿ ಗಮನಿಸಿದರೆ, ಕೇವಲ ೩-೪ ಜನರ ಅಭಿಪ್ರಾಯಗಳಲ್ಲೇ ಇಷ್ಟು ವಿವಿಧತೆ ಇದ್ದರೆ, ಇನ್ನು ಮಿಲಿಯಗಟ್ಟಲೆ ಜನರಲ್ಲಿ ಎಷ್ಟಿರಬಹುದು. ಒಟ್ಟಿನಲ್ಲಿ ಜನ ಒಳ್ಳೆಯದನ್ನು ಈ ಕ್ಶೇತ್ರದಲ್ಲಿ ಖಂಡಿತ ಸ್ವಾಗತಿಸುತ್ತಾರೆ. ಇದು ನನ್ನ ಅನಿಸಿಕೆ.

ಮೈಸೂರಿನಿಂದ ಬಂದ ಒಬ್ಬ ಸಾಧಾರಣ ವ್ಯಕ್ತಿ, ವ್ಯಂಗ್ಯ ಚಿತ್ರದ ಇತಿ-ಮಿತಿಗಳ ಅರಿವಿಲ್ಲದ ಆಗಿನಕಾಲದ ಬಾಂಬೆ ನಗರದಲ್ಲಿ, ( ನಮ್ಮ ದೇಶದಲ್ಲಿ ) ಒಂದು ಕಾಲುದಾರಿಯನ್ನು ನಿರ್ಮಿಸಿ, ಅದರಲ್ಲಿ ಅನೇಕರು ತಮ್ಮ ಕೊಡುಗೆಗಳನ್ನು ಕೊಡಲು ಅನುವುಮಾಡಿಕೊಟ್ಟು, ತಾವು ಚುನಾಯಿಸಿಕೊಂಡ ಕ್ಷೇತ್ರದಲ್ಲಿ ತ್ರಿವಿಕ್ರಮನಾಗಿ ಬೆಳೆದು, ತನ್ನ ಛಾಪನ್ನು ಮಿಲಿಯಗಟ್ಟಲೆ ಜನರ ಮೇಲೆ ಬೀರುವ ಆ ಪಂಚ್, ಥ್ರಿಲ್, ವಿಟ್, ಇಥೊಸ್, ಇತ್ಯಾದಿ ಇತ್ಯಾದಿ, ಅನನ್ಯ ! ಈಗ ಅನೇಕರು ತಮ್ಮ ಜೀವನದ ಪ್ರಮುಖ ಕರಿಯರ್ ಆಗಿ "ವ್ಯಂಗ್ಯ-ಚಿತ್ರಕಲಾಭ್ಯಾಸ " ಮಾಡುತ್ತಿದ್ದಾರೆ. ಅತ್ಯಂತ ಪ್ರಜ್ವಲಿತ ಪ್ರಭಾವಿ ಪ್ರತಿಭೆಗಳು ಬೆಳಕಿಗೆ ಬಂದಿವೆ. ಇದು ನನ್ನ ಅನಿಸಿಕೆ.

ಇಲ್ಲಿಗೆ ಮೇಲಿನ ವಿಷಯದ ಬಗ್ಗೆ ಪುನಃ ಏನೂ ಹೇಳಬಯಸುವುದಿಲ್ಲ.
ಥ್ಯಾಂಕ್ಸ್.