ಚಿ ಶ್ರೀನಿವಾಸರಾಜು ಇನ್ನಿಲ್ಲ

To prevent automated spam submissions leave this field empty.

 

 

ಕರ್ನಾಟಕದ ಸಾಹಿತ್ಯಾಸಕ್ತರಿಗೆಲ್ಲಾ ಮೇಷ್ಟ್ರಾಗಿದ್ದ ಚಿ. ಶ್ರೀನಿವಾಸರಾಜು ಇನ್ನಿಲ್ಲ.

ಕನ್ನಡ ಸಾಹಿತ್ಯ ಲೋಕಕ್ಕೆ ಬರೆಹಗಾರರ ದೊಡ್ಡ ಬಳಗವನ್ನು ಪರಿಚಯಿಸಿದ ಹೆಗ್ಗಳಿಕೆ ಅವರದ್ದು. ಕ್ರೈಸ್ಟ್ ಕಾಲೇಜು ಕನ್ನಡ ಸಂಘದ ಮೂಲಕ ವಿದ್ಯಾರ್ಥಿಗಳ ಸಾಹಿತ್ಯಾಸಕ್ತಿಯನ್ನು ತಿದ್ದಿ ತೀಡಿ ಮಾರ್ಗ ದರ್ಶನ ಮಾಡಿದ ಶ್ರೀನಿವಾಸರಾಜು ಅವರ ಅಗಲಿಕೆ ಕನ್ನಡ ಸಾಹಿತ್ಯ ಜಗತ್ತಿಗೆ ಆದ ದೊಡ್ಡ ನಷ್ಟ.

ಮೇಷ್ಟ್ರ ಅಭಿನಂದನಾ ಗ್ರಂಥಕ್ಕೆಂದು ರಶೀದ್ ಬರೆದ ಕವನ ಇಲ್ಲಿದೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹೌದು. ಪುಸ್ತಕಪ್ರೀತಿಯನ್ನು ಕನ್ನಡಿಗರಲ್ಲಿ ಬೆಳೆಸಿದ ನಮ್ಮ ಪ್ರೀತಿಯ ಮೇಷ್ಟ್ರು ಚಿ.ಶ್ರೀನಿವಾಸರಾಜು ಇನ್ನು ನಮ್ಮೊಡನೆ ಇಲ್ಲ. ಇಂದು ಮಧ್ಯಾಹ್ನ ತೀರ್ಥಹಳ್ಳಿಯಲ್ಲಿ ಚಹ ಕುಡಿಯುತ್ತಾ ಹಠಾತ್ತನೇ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದರು.

ಅವರ ಪಾರ್ಥವ ಶರೀರವು ಇಂದು ಸುಮಾರು ೬.೦೦-೬.೩೦ ರ ಹೊತ್ತಿಗೆ ಬೆಂಗಳೂರು ತಲುಪುವ ನಿರೀಕ್ಷೆಯಿದೆ.

ದೇಹವನ್ನು ಸುಮಾರು ಒಂದು ಗಂಟೆ ಕಾಲ ಅವರ ಮನೆಯಲ್ಲಿ ಇಡಲಾಗುವುದು. ಆ ನಂತರ ದೇಹವನ್ನು ಶೀತಲ ಸಂರಕ್ಷಕದಲ್ಲಿಟ್ಟು (ಕೋಲ್ಡ್ ಸ್ಟೋರೇಜ್') ನಾಳೆ ಅವರ ದೇಹವನ್ನು ಬಹುಶಃ ರಾಮಯ್ಯ ಕಾಲೇಜಿಗೆ ದಾನ ಮಾಡಲಾಗುವುದು.

ಅವರ ಅಭಿಮಾನಿಗಳು, ದಯವಿಟ್ಟು ಅವರ ಮನೆಗೆ ಬನ್ನಿ. ಕೊನೆಯ ದರ್ಶನವನ್ನು ಪಡೆಯಿರಿ. ಮಲ್ಲೇಶ್ವರದ ಕಾರ್ಪೋರೇಶನ್ ಶಾಲೆಯ / ಕಾಡುಮಲ್ಲೇಶ್ವರ ದೇವಸ್ಠಾನದ ಹಿಂಭಾಗ ಬಳಿ ಬಂದರೆ, ಅವರ ಮನೆ ನಿಮಗೆ ತಿಳಿಯುತ್ತದೆ.

- ನಾಸೋ

ತಣ್ಣಗೆ ಉರಿಯುವ ದೀಪದ ಕುಡಿಯನ್ನು ನೆನಪಿಸುವ ಅವರ ವ್ಯಕ್ತಿತ್ವದಂತೆ ಅವರ ಹೊರರೂಪ ಕೂಡ. ಬಟ್ಟೆ, ಬಿಳಿಗೂದಲು, ಮುಖ ಎಲ್ಲ ನನಗಂತೂ ಅವರನ್ನು ಕನ್ನಡದ ಕಾಯಕಕ್ಕೆ ಹಚ್ಚಿದ ಶ್ರೀ ಜಿ.ಪಿ. ರಾಜರತ್ನಂ ಅವರನ್ನೇ ನೆನಪಿಸುತ್ತದೆ.