ಸಂಕ್ರಾಂತಿಗೊಂದಿಷ್ಟು ಎಳ್ಳು-ಬೆಲ್ಲ...

To prevent automated spam submissions leave this field empty.

ಹರಕುಬಟ್ಟೆಯ ನರನ
ತಿರುಕನೆಂ ಜರೆಯದಿರು
ಮರುಕವಿಲ್ಲದ ಮನವು ಹರಕಲ್ಲವೇ?

**********************************

ಸಾಗರದ ಅಲೆಯಿರಲಿ
ನಾಗರದ ಹೆಡೆಯಿರಲಿ
ಬಾಗದೇ ಮೇಲೇರಿದಾಗಲೆಲ್ಲ ?

**********************************

ಬೆಳ್ಳಕ್ಕಿ ಬಾನಲ್ಲಿ
ಸುಳ್ಳೇನೆ ಹಾರಿದ್ದು
ಹಳ್ಳದಾ ಮೀನನ್ನು ಹಿಡಿವ ನೆಪದಲ್ಲಿ

**********************************

ಇರುಳಿನಾಗಸದಲ್ಲಿ
ಹರಳಿನಾ ಚುಕ್ಕಿಗಳು
ಇರಬಹುದು,ಇರದಲವೆ ಕಾಮನಬಿಲ್ಲು?

**********************************

ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.. :-) 

ಲೇಖನ ವರ್ಗ (Category):