ಗುಡು ಗುಡಿಯಾ ಸೇದಿ ನೋಡಾ

To prevent automated spam submissions leave this field empty.

ಗುಡು ಗುಡಿಯಾ ಸೇದಿ ಅನುಭವವಿಲ್ಲದ ನಂಗೆ, ರಘು ದೀಕ್ಷಿತರು ಹಾಡಿರುವ ಸಂತ ಶಿಶುನಾಳ ಶರೀಫರ ಪದ ಗುಡು ಗುಡಿಯಾ ಸೇದಿದಷ್ಟೇ ಮತ್ತನ್ನು ಬರಿಸಿದೆ; ಅವರ ಈ  ತಾಣದಲ್ಲಿ ತುಣಕನ್ನು ಕೇಳಬಹುದು. -http://raghudixit.com/discography. ಮ್ಯೂಸಿಕ್ಇಂಡಿಯಾಆನ್ಲೈನ್ ನಲ್ಲಿ ಪೂರ್ತಿ ಇದೆ - http://www.musicindiaonline.com/p/x/tV7wwjx3jS.As1NMvHdW/

ಸಿಡಿ ಕೊಂಡು ಕೇಳಿದರೆ ಅತ್ಯುತ್ತಮ :-)

ಪೂರ್ಣ ಪದ:

ಗುಡು ಗುಡಿಯಾ ಸೇದಿ ನೋಡಾ

ಒಡಲೊಳಗಿನ ರೋಗ ತೊರೆದು ಇನ್ಯಾರೋ

ಮನಸೆಂಬ ಸಂಚಿಯ ಬಿಚ್ಚಿ
ದಿನ ದಿನವೂ ಮೋಹ ಅಂಬೋ ಭಂಗಿಯ ಕೊಚ್ಚಿ
ನೆರವೆಂಬ ಚಿಲುಮೆಯ ಹಚ್ಚಿ
ಬುದ್ಧಿ ಅನುವಂಥ ಕೆಂಡವ ಮೇಲಲಿ ಮುಚ್ಚಿ
ಗುಡು ಗುಡಿಯಾ ಸೇದಿ ನೋಡಾ

ಬುರುಡಿಯೆಂಬುದು ಶರೀರ
ಇದನರಿತು ಸುಕೃತಗಿಟ್ಟು ಕೊಡಲಿ ಆಕಾರ
ವರ ಶಿಶುನಾಳನೆಂಬ ನೀರ ತುಂಬಿ
ಅರಿವೆಂಬ ಅರುವೆಯಾ ಹಚ್ಚು ಮೋಜುಗಾರ
ಗುಡು ಗುಡಿಯಾ ಸೇದಿ ನೋಡಾ

ಶುದ್ಧ ಜ್ಞಾನ ಮೇಲೇರಿ ದಾರಿದ್ರ್ಯ ದೇಹ ಸುಟ್ಟು
ಹೊಗೆಯು ಹಾರುವುದು ಬುದ್ಧಿವಂತ ರಾಯನದು
ವರಸಿದ್ಧ ಶಿಶುನಾಳಧೀಶನ ತೋರುವುದು

ಗುಡು ಗುಡಿಯಾ ಸೇದಿ ನೋಡಾ
ಒಡಲೊಳಗಿನ ರೋಗ ತೊರೆದು ಇನ್ಯಾರೋ
ಗುಡು ಗುಡಿಯಾ ಸೇದಿ ನೋಡಾ

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಶಿಶುನಾಳರ ಹಾಡು ಚೆನ್ನಾಗಿದೆ, ಆದರೆ ಹಾಡು ಹಾಡಿರುವ ರೀತಿ ಸರಿಯಿದ್ದಂತಿಲ್ಲ. ವಿಶಾಲ್ ಶೇಖರ್ ತ್ರಾಸು ಪಟ್ಟುಕೊಂಡು ಸಂಗೀತ ಕೊಟ್ಟಂತಿದೆ - ಯಾಕೋ ಸರಿಯಿಲ್ಲ!

ಮೊನ್ನೆ ತಾನೆ ಶಿಶುನಾಳರ ಸಿನಿಮಾದಲ್ಲಿದ್ದ ಕೆಲವು ಹಾಡುಗಳನ್ನು ಯೂ ಟ್ಯೂಬ್ ನಲ್ಲಿ ನೋಡುತ್ತಿದ್ದೆ (ನಿರ್ದೇಶನ:ನಾಗಾಭರಣ, ನಿರ್ಮಾಣ ಮಹಿಮಾ ಪಟೇಲ್, ಸಂಗೀತ: ಶಿವಮೊಗ್ಗ ಸುಬ್ಬಣ್ಣ, ಸಿ ಅಶ್ವಥ್ ಅನ್ಸತ್ತೆ) - ಹಾಡು ಹಳತಂತೆ ಅನ್ನಿಸಿದ್ದರೂ ಲಯಬದ್ಧವಾಗಿತ್ತು.
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

hpn, bang on point!
ಸಾಹಿತ್ಯಕ್ಕೂ ಸಂಗೀತಕ್ಕೂ ಸಂಬಂಧವೇ ಇಲ್ಲ ಅನ್ನಿಸ್ತು. ಸಂಗೀತ ಮನತಟ್ಟಲಿಲ್ಲ ನಂಗೆ. ಅಲ್ಲದೇ ’ಶಿಶಿನಾಳ - ಧೀಶ’ ಅಂತೆಲ್ಲಾ ಪದ ವಿಭಜನೆ ಮಾಡಿಬಿಟ್ಟಿದಾರೆ.
ಇದೊಂದೇ ಅಲ್ಲ, ’ಸೋರುತಿಹುದು ಮನೆಯ ಮಾಳಿಗೆ’ನಲ್ಲಂತೂ ಇದು ಇನ್ನೂ ಜಾಸ್ತಿ ಅನ್ನಿಸ್ತು ನಂಗೆ... ’ಅಜ್ಞಾನದಿಂದ’ ಅನ್ನೋದನ್ನ ಸೆಲೆಬ್ರೇಶನ್ ಥರ ಹಾಡಿಬಿಟ್ಟಿದಾರೆ. ಇದರ ವಿಡಿಯೋ ಕೂಡ mtv ನಲ್ಲಿ ಬರ್ತಿದೆ, ಶಿಶುನಾಳ ಷರೀಫ್ರು national tvಗೆ ಅದ್ರಲ್ಲೂ mtvಗೆ ಬಂದ್ರು ಅಂತ ಖುಷಿ ಪಡಬೇಕಷ್ಟೇ!;)
ಅಶ್ವತ್ಥ್ ಗುಡುಗುಡಿಯ ಸೇದಿರಣ್ಣಾ...ಅಂತ ಹಾಡಿದ್ರೆ ಅದರ ಲೆವೆಲ್ಲೇ ಬೇರೆ ಬಿಡಿ (ನಾಗಾಭರಣರ ಚಿತ್ರದಲ್ಲಿ ಸಂಗೀತ ನಿರ್ದೇಶನ ಅಶ್ವತ್ಥರದ್ದೇ)
ಮುಖ್ಯವಾಗಿ ಹೊಸಬಗೆಯ ಸಂಗೀತವನ್ನ ಇಂಥಾ ಕ್ಲಾಸಿಕ್ಸ್‌ಗೆ ಒಗ್ಗಿಸುವಾಗ ಸಾಹಿತ್ಯಾನೂ ಸ್ವಲ್ಪ ಗಂಭೀರವಾಗಿ ಗಮನಿಸಿದ್ದರೆ ಒಳ್ಳೇದಿತ್ತು...

hpn, Srimatha,

ಖಂಡಿತವಾಗಿಯೂ ನೀವು ಹೇಳಿರುವುದು ಸರಿಯೇ. ಸಂಗೀತ Mexican folk ಮತ್ತು ಸೂಫಿ ಶೈಲಿಗಳ ಮಿಶ್ರಣವೆಂಬಂತಿದೆ. ಸಂಗೀತಕ್ಕೆ ಹೊಂದಿಸಲು ಸಾಹಿತ್ಯವನ್ನು ಸ್ವಲ್ಪ adjust ಮಾಡಿದ್ದಾರೆ. :-)
ಆದರೂ, ಅದರದೇ ಆದ ಒಂದು "haunting effect' ಇದೆ ಅನ್ನೋದು ನನ್ನ ಭಾವನೆ. ಮತ್ತು ಶಿಶುನಾಳರನ್ನು ಹೊರಗಿನವರಿಗೆ ಪರಿಚಯಿಸುವ ಕೆಲಸವನ್ನು ಚೆನ್ನಾಗಿ ನಿಭಾಯಿಸುತ್ತಿದೆ - http://back2sender.blogspot.com/2008/03/raghu-dixit-review.html , http://www.akgoyal.com/2008/03/09/raghu-dixit-music-review/
ಅಂದಹಾಗೆ, ಅಶ್ವತ್ಥರು ಈ ಪದವನ್ನು ಹಾಡಿದ್ದಾರಾ?

ಏನೋ ನಂಗೆ ಸಂಗೀತದ ಬಗ್ಗೆಯೂ ಸಿರಿಯಸ್ ಆಗಿ ಕೆಲ್ಸ ಮಾಡಿರೋದು ಸಾಲದೇನೋ ಅನ್ನಿಸ್ತು. ಮತ್ತೆ ಹಾಂ, ಅಶ್ವಥ್ ’ಗುಡುಗುಡಿಯ’ ಹಾಡಿದ್ದಾರೆ, ಅದು ನಾಗಾಭರಣರ ಚಿತ್ರದಲ್ಲಿದ್ಯೋ ಇಲ್ವೋ ನೆನಪಿಲ್ಲ, ಆದ್ರೆ ಈ ಚಿತ್ರ ಬರೋದಕ್ಕೂ ಬಹಳ ಮುಂಚೆಯೇ ಅಶ್ವಥ್ ಶರೀಫರ ಪದಗಳದ್ದೇ ಆಲ್ಬಂ ಹೊರತಂದಿದ್ರು, ಮನೆಯಲ್ಲಿ ಕ್ಯಾಸೆಟ್ ಇದ್ದಿದ್ದು ನೆನಪು. ಆಕಾಶವಾಣಿಯಲ್ಲೂ ಈ ಹಾಡನ್ನ ಪ್ರಸಾರ ಮಾಡ್ತಿದ್ರು.
ಆ ಟ್ಯೂನ್ ಹೊಸಬರನ್ನ ಮುಟ್ಟಲ್ಲ ಅಂತೀರಾ??:) ’adjust’ ಮಾಡಿದ ಸಾಹಿತ್ಯದ ಜೊತೆ ಹೊಸಬರಿಗೆ ತಲ್ಪಿದ್ದು ಏನು? ಶರೀಫರ ಹಾಡಾ ರಘು ದೀಕ್ಷಿತ್ ಸಂಗೀತವಾ?;)
ಗಂಭೀರವಾಗಿ ಮಾತಾಡೋದಾದ್ರೆ ಆ ಎಲ್ಲ ಸೂಫಿ ಗುಂಗುಗಳೂ ಅಶ್ವಥ್‌ರ ಸಂಗೀತಕ್ಕಿದೆ ಅನ್ನಿಸುತ್ತೆ - ಅದನ್ನೇ ಯಾರಾದ್ರೂ ಹೊಸ ಮಾಧ್ಯಮಕ್ಕೆ, ಹೊಸತಲೆಮಾರಿನ ವೀಕ್ಷಕರಿಗೆ ಒಗ್ಗಿಸಿ ಒಂದು ಮ್ಯೂಸಿಕ್ ವಿಡಿಯೋ ಮಾಡಿದ್ರೆ ಚೆನ್ನಾಗಿರ್ತಿತ್ತು, ಹೀಗೆ ಶರೀಫರನ್ನ ಹಿಗ್ಗಾಮುಗ್ಗಾ ಎಳೆದು ’ಕನ್ನಡ ಫೋಕ್’ ಅಂತ ಯಾವುದೋ ಹೊಂದದ ಸಂಗೀತದ ಮೂಲಕ ’ಪರಿಚಯಿಸೋ’ ಬದಲು ಅಂತಲೂ ಅನ್ನಿಸುತ್ತೆ.

ನನ್ನ ಪ್ರಕಾರ ಅಶ್ವತ್ಥರ ಹಾಡುಗಳಲ್ಲೂ tuneಗೆ ಸರಿ ಹೊಂದೋ ಹಾಗೆ ಪದಗಳನ್ನ ಅಡ್ಜಸ್ಟ್ ಮಾಡೋದನ್ನ ನೋಡಿದೀನಿ. ನಾನೇನು ಇದ್ರಲ್ಲಿ expert ಅಲ್ಲ :P
ಅಶ್ವತ್ಥರ ಹಾಡು ಅದ್ಭುತವಾಗಿದೆ ಬಿಡಿ, ಎರಡು ಮಾತಿಲ್ಲ, ಹಾಗಂತ ರಘುರವರ ಹಾಡು ಚೆನ್ನಾಗಿಲ್ಲ ಅಂತ ಅಂದ್ರೆ ತಪ್ಪಾಗ್ಬೋದು. ನಾನೂ ಮೊದಲ ಸಲ ಈ ಹಾಡನ್ನ ಕೇಳ್ದಾಗ ಯಾಕೋ ಸರಿ ಇಲ್ಲ ಅಂತ ಅನ್ಸ್ತು. ಆದ್ರೆ ೩-೪ ಸಲ ಕೆಳಿದ್ಮೇಲೆ ಇದರಲ್ಲು ಒಂದು ಗಮ್ಮತ್ತಿದೆ ಅಂತ ಅನ್ಸ್ತು.

ನಾಡಿಗ್, ಇದಕ್ಕೆ ವಿಶಾಲ್ ಶೇಖರ್ ಸಂಗೀತ ಕೊಟ್ಟಿದ್ದಲ್ಲ. ಇದನ್ನ (ಮತ್ತು ಆಲ್ಬಂನಲ್ಲಿರೋ ಇನ್ನು ಉಳಿದ ಹಾಡುಗಳನ್ನ) ರಘು ದೀಕ್ಶಿತ್ ತುಂಬಾ ವರ್ಶಗಳಿಂದ ಹಾಡಿಕೊಂಡು ಬಂದಿದ್ದಾರೆ.

ಸಕ್ಕತ್ತಾಗಿದೆ. ಅದ್ಭುತ. ಒಂದು ವರ್ಷದಿಂದ ಕೇಳ್ ತಿದ್ದೆ.
ಗುಡುಗುಡಿ ಚೆನ್ನಾಗಿದೆ, ಸೊರುತಿಹುದು ಎನ್ ಕಮ್ಮಿ ಇಲ್ಲ.
ಶರೀಫರ ಸಾಹಿತ್ಯ ತಗೋಂಡು, ಕನ್ನಡ ಹಾಡುಗಳಿಗೆ ಒಂದು ಹೊಸ ಧಾಟಿ ಕೊಟ್ಟಂಗಿಲ್ಲ? ಪಿಂಕ್ ಫ್ಲಾಯಡ್ ನೇರಕ್ಕಿದೆ.

ಗುಡುಗುಡಿ ಚಿತ್ರಕ್ಕಿಳಿಸಿದಾರ? ಎಲ್ಲಾದ್ರು ನೊಡಬಹುದ?

ಎನ್ನ ಭಕ್ತಿ ಬಸವಣ್ಣ
http://youtube.com/watch?v=n0mGlBJ4O7k

ಇನ್ನು ಸುಮಾರ್ ಇದೆ ಮೌದ್ಗಲ್ಯರ ಸೈಟಲ್ಲಿ.

ವೆಂಕಟೇಶ ಕುಮರರದೊಂದು ಕ್ಯಾಸೆಟ್ಟ್ ಇದೆ.
ಅದರಲ್ಲಿ ’ಎಮ್ಮವರು ಬೆಸಗೊಂಡರೆ’ ವಚನ ಕೇಳಿ. ದೇವರೆ ಹಾಡಿದೆ ಹಾಗಿದೆ. ಜೀವ ಠುಸ್ಸ್ ಅನ್ನುತ್ತೆ, ಎದೆ ಮಿಡಿತ ತಪ್ಪುತ್ತೆ.

ಆರ್ಕುಟ್ ಬೆಂಗಳೂರು ಕಮ್ಯುನಿಟಿಯಲ್ಲಿ ಸುಮಾರು 2 ವರ್ಷಗಳ ಹಿಂದೆ ಈ ಹಾಡುಗಳ ಡೌನ್‍ಲೋಡ್ ಲಿಂಕ್ ಕೊಟ್ಟಿದ್ದರು..ಅವತ್ತಿನಿಂದ ಈ ಹಾಡನ್ನು ಕೇಳುತ್ತಿದ್ದೇನೆ.
'ಗುಡುಗುಡಿಯಾ ಸೇದಿ' ಮೊದಲ ಬಾರಿ ಕೇಳಿದಾಗಲೇ ಇಷ್ಟವಾಗಿತ್ತು.ಗಿಟಾರ್ ಸೌಂಡ್, ರಘು ದೀಕ್ಷಿತರ ಧ್ವನಿ ಎಲ್ಲಾ ಒಂದಕ್ಕೊಂದು ಸಕತ್ತಾಗಿ ಹೊಂದಾಣಿಕೆಯಾಗುತ್ತದೆ.

ಟ್ಯೂನಿಗೆ ಸಾಹಿತ್ಯ ಹೊಂದಿಸೋದ್ ಸರಿ, ಸಾಹಿತ್ಯದ್ ಅರ್ಥಕ್ಕೆ ಹೊಂದದಂತೆ ’ಅಜ್ಞಾನದಿಂದ’ ಅಂತ ಹಾಡಿಬಿಡೋದು ಶರೀಫರಿಗೆ ನ್ಯಾಯ ಮಾಡಿದಹಂಗಾಗುತ್ತಾ?:) ( ಆ ವಿಡಿಯೋ ಎಂಟಿವಿಯಲ್ಲಿ ನೋಡಿ, ರಘು ಫುಲ್ ಖುಷಿಯಾಗ್ಬಿಟ್ಟಿದ್ದಾರೆ ಮನೆಯ ಮಾಳಿಗಿ ಅಜ್ಞಾನದಿಂದ ಸೋರ್ತಿರೋದರ್ ಬಗ್ಗೆ ಅನ್ನಿಸುತ್ತೆ!)
ಅಶ್ವಥ್ ಚೆನ್ನಾಗಿದ್ರೆ ರಘು ದೀಕ್ಷಿತ್ ಚೆನ್ನಾಗಿರಬಾರ್ದು ಅಂತೇನ್ ಇಲ್ಲ, ಸರಿ, ಆದ್ರೆ ಅಶ್ವಥ್ ಪ್ರಯತ್ನದಲ್ಲಿ ಸಾಹಿತ್ಯದ ಅರ್ಥಕ್ಕೆ, ಸಂಗೀತಕ್ಕೆ ಇರೋ ಸಂಬಂಧ ಇಲ್ಲಿ ಕಾಣ್ಲಿಲ್ಲ ಅನ್ನೋದು ವಿಷ್ಯ. ಸುಮ್ನೆ ಒಂದು ಇಂಡಿಪಾಪ್ ಹಾಡು ಅಂದಿದ್ರೆ ಅದು ಬೇರೆ ಕಥೆ, ಆದ್ರೆ ಶರೀಫರನ್ನ ಹೊಸಬರಿಗೆ ’ಪರಿಚಯ ಮಾಡ್ಸೋ’ claimಗೆ ಸಾಹಿತ್ಯದ್ ಕಡೆ ಗಮನ ಸಾಲ್ದು ಅನ್ನಿಸ್ತು. ಅಶ್ವಥ್ ಪದಗಳನ್ನ್ ಹೊಂದಿಸಿದ್ರೂ ಸಾಹಿತ್ಯ ಕೊಲ್ಲೋದಿಲ್ಲ, ಅವರ ಸಂಗೀತ ಸಾಹಿತ್ಯಕ್ಕೆ ಹೊಂದೋ ಥರ, ಸಾಹಿತ್ಯವನ್ನ ಅರ್ಥಮಾಡಿಕೊಂಡು ಮಾಡಿರೋದು ಗೊತ್ತಾಗುತ್ತೆ.