ಹೀಗೊಂದು ವಿವಾಹ ಮಹೋತ್ಸವ ಆಹ್ವಾನ ಪತ್ರಿಕೆ

To prevent automated spam submissions leave this field empty.

ವಿವಾಹ ಮಹೋತ್ಸವ ಆಹ್ವಾನ ಪತ್ರಿಕಾ

ಕೊತ್ತೊಂಬರಿ ತಾಲ್ಲೂಕು ಹುಣಸೇಕಾಯಿ ಹೋಬಳಿ ಹೀರೇಕಾಯಿ ಗ್ರಾಮದ ಶ್ರೀಮತಿ ಮತ್ತು ಶ್ರೀ ಪಡವಲಕಾಯಿ ಮತ್ತು ಮೆಣಸಿನಕಾಯಿ ತಾಲ್ಲೂಕು ಸೌತೇಕಾಯಿ ಹೋಬಳಿ
ಸೋರೇಕಾಯಿ ಗ್ರಾಮದ ಶ್ರೀಮತಿ ಮತ್ತು ಶ್ರೀ ಬೇವಿನಕಾಯಿ ಸಹ ಮಾಡುವ ವಿಜ್ನಾಪನೆಗಳು

ಇದೇ ಸೀಮೆ ಎಣ್ಣೆ ಸಂವತ್ಸರದ ಜ್ಯೇಷ್ಟಬಹುಳ ದ್ವಿತೀಯ ಗೆಣಸಿನ ತಾ-೩೨-೧೦-೧೯೦೮ ಈ ಶುಭದಿನ ಬೆಳಿಗ್ಗೆ ೪ಗಂಟೆ ೨೦ ನಿಮಿಷದ ಒಳಗೆ ಸಲ್ಲುವ
ಈ ಶುಭ ಕುಂಬಳಕಾಯಿ ಲಗ್ನದಲ್ಲಿ

ಚಿ.ರಾ.ನವಿಲುಕೋಸು
(ಹಸಿರು ಎಲೆ ಕ್ಯಾರಟ್ ಅವರ ಏಕೈಕ ಪುತ್ರ)

ಚಿ.ಸೌ.ಹೂಕೋಸು
ಇವರ ವಿವಾಹ ಮಹೋತ್ಸವವನ್ನು ಹೀರೇಕಾಯಿ ಗ್ರಾಮದ ವರನ ಸ್ವಗೃಹದಲ್ಲಿ ನಡೆಸಲು ಓಲಗದಲ್ಲಿ ನಿಶ್ಚಯಿಸಿರುವುದರಿಂದ ನೀವೆಲ್ಲರೂ ಈ ಶುಭ ಮಹೋತ್ಸವಕ್ಕೆ
ನಿಮ್ಮ ಕೈ, ಬಾಯಿಗಳ ಸಮೇತ ತಪ್ಪದೆ ದಯಮಾಡಿಸಿ ವಧೂ ವರರನ್ನು ತಿಂದು ತೇಗಿ ಆಶೀರವದಿಸ ಬೇಕಾಗಿ ಕೋರುತ್ತೇವೆ.

ತಮ್ಮ ವಿಧೇಯರು
ಪಟೇಲ್ ಬೀಟ್ ರೂಟ್ ಮತ್ತು ಛೇರ್ಮನ್ ಕ್ಯಾರಟ್

ಬ್ಯಾಡಗಿ ಮೆಣಸಿನಕಾಯಿ ಮತ್ತು ವೃಂದದವರಿಂದ ವಾದ್ಯಗೋಷ್ಠಿ
ದಾವಣಗೆರೆ ಡಬ್ಬಲ್ ಬೀನ್ಸ್ ರವರಿಂದ ಡಿಸ್ಕೋ ಡ್ಯಾನ್ಸ್
ಬೆಂಗಳೂರು ಬೆಂಡೇಕಾಯಿ ಮತ್ತು ವೃಂದದವರಿಂದ ಭರತ ನಾಟ್ಯ

ಲೇಖನ ವರ್ಗ (Category):