ಇಂದಿನ ಸುದ್ದಿ...!

To prevent automated spam submissions leave this field empty.

ಇವತ್ತು ಬೆಳಗ್ಗೆ ಗಂಟೆ ಎಂಟು ಕಾಲಾದರೂ ನ್ಯೂಸ್ ಪೇಪರ್ ಬಂದಿರಲಿಲ್ಲಾ. ಈ ಮೊದಲು ಒಂದೆರಡು ಬಾರಿ ಹೀಗೆಯೆ ಪೇಪರ್ ತಪ್ಪಿಸಿದ್ದರಿಂದ ಈ ಮನುಷ್ಯ ಎಲ್ಲಿ ಹೋದನಪ್ಪಾ ಅಂದು ಕೊಳ್ಳುತ್ತಾ ಆತನ ನಂಬರಿಗೆ ಫೋನಾಯಿಸಿದೆ. ಅತ್ತಕಡೆಯಿಂದ ಚಿಕ್ಕ ಹುಡುಗನೊಬ್ಬನ "ಹಲೋ" ಕೇಳಿಸಿತು. "ಲೋಂಡೆ(ಪೇಪರ್ ಹಾಕುವವನು) ಇದ್ದಾರ? " ಎಂದು ಸ್ವಲ್ಪ ಜೋರಿನಲ್ಲಿ ಕೇಳಿದೆ, ಆತ ಸ್ವಲ್ಪ ಅನುಮಾನಿಸಿ, "ಹೂಂ ಹೇಳಿ, ಏನಾಗಬೇಕಿತ್ತು" ಅಂದ. "ನನ್ನ ಹೆಸರು ಶಂಕರ್ ಅಂತಾ, ನನ್ನ ಮನೆಗಿನ್ನೂ ಪೇಪರ್ ಬಂದಿಲ್ಲಾ, ಎಷ್ಟೊತ್ತಿಗ್ರೀ ಪೇಪರ್ ಹಾಕೋದು, ಇವತ್ತು ಬರುತ್ತೋ ಇಲ್ವೋ" ಎಂದು ದಬಾಯಿಸಿದೆ. ಆ ಕಡೆಯಿಂದ ಇನ್ನಷ್ಟು ಕ್ಷೀಣ ಸ್ವರದಲ್ಲಿ "ಇವತ್ತು ಮತ್ತೆ ನಾಳೆ ಪೇಪರ್ ಬರೋದಿಲ್ಲ" ಎಂದ. ನಾನು ಇನ್ನೂ ಸ್ವಲ್ಪ ಏರಿದ ಸ್ವರದಲ್ಲಿ "ಅದೇ ಯಾಕೋ ಬರೋಲ್ಲ ಅಂತಾ" ಎಂದು ಕೇಳಿದೆ. ಆಗ ಆತ ನಿಸ್ತೇಜವಾದ ಧ್ವನಿಯಲ್ಲಿ"ನನ್ನ ಅಪ್ಪ ಇವತ್ತು ತೀರಿ ಹೋದರು" ಎಂದ. ಮುಂದೆ ನನಗೆ ಮಾತೇ ಹೊರಡಲಿಲ್ಲ. "ಓಹ್ ಐ ಯಾಮ್ ಸಾರಿ!" ಎಂದು ಹೇಳಿ ಮುಂದೆ ಏನು ಹೇಳಬೇಕೆಂದು ತೋಚದೆ ಫೋನ್ ಕಟ್ ಮಾಡಿದೆ.

ಪೇಪರ್ ಬಂದಿರಲಿಲ್ಲಾ ಆದರೆ ಸುದ್ದಿ ಬಂದಿತ್ತು...!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಮನೆಗೆ ದಿನಾಲು ಪೇಪರ್‍ ಹಾಕೋರು, ಹಾಲು ಕೊಡೋರು, ಹೋಮ್ ಡೆಲಿವರಿ ಮಾಡೋ(ಪಿಜ್ಜಾ, ಕೋಕ್, ಹೊಟೇಲುಗಳ ಡೆಲಿವರಿ ಬಾಯ್ಸ ಅಲ್ಲ) ಹುಡುಗರನ್ನ ಕೇಳೋರು ಯಾರು ಹೇಳಿ?

ನಿಮ್ಮವ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.

ಈ ಪೇಪರ್ ಹಾಕೊ ಹುಡುಗರೇನೂ ಕಡಿಮೆ ಇಲ್ಲ ಜಂಭದಲ್ಲಿ.
ನಮ್ಮ ಮನೆಗೆ ಪೇಪರ್ ಹಾಕೋದೆ ೮ ಘಂಟೆಗೆ
ಯಾಕಪ್ಪ ಲೇಟ್ ಅಂದರೆ
ನಿಮ್ಮೊಬ್ಬರದೇ ಮನೆ ಅಲ್ಲ ಮೇಡಮ್ ಎಲ್ಲಾ ಮನೆಗೆ ಹಾಕಿ ಬರ್ಬೇಕಲ್ವಾ ಅಂತಾರೆ

ಯಾಕಪ್ಪ ನೆನ್ನೆ ಸುಧಾ ಹಾಕಿಲ್ಲ ಅಂದ್ರೆ " ನನ್ನೇನು ಕೇಳ್ತೀರಾ ನಮ್ಮ ಓನರ್‌ನ್ ಕೇಳಿ ಅಂತಾರೆ.

ಆ ಪೇಪರ್ ಡೀಲರ್‌ನ ಕೇಳಿದರೆ. ಸಧ್ಯ ಪೇಪರ್ ಹಾಕೋಕೆ ಹುಡುಗರು ಸಿಕ್ಕಿರೋದೆ ಪುಣ್ಯ ಮೇಡಮ್. ಇನ್ನು ಅವರಿಗೆ ಏನಾದರೂ ಅಂದ್ರೆ ಅಷ್ಟೆ ಮುಂದಿನದಿನದಿಂದ ಅವರು ಬರಲ್ಲ. ಅವರೇ ಓನರ್ ನಾನೆ ಕೆಲಸ ಮಾಡೋನು ಅಂತಾಗಿದೆ ಅಂತ ಅತ್ಕೋತಾನೆ
ಹೇಗಾಗಿದೆ ನೋಡಿ ಕಾಲ

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ