ಸುಭಾಷಿತಗಳು

To prevent automated spam submissions leave this field empty.

ಷಣ್ಮಿಥ್ಯಾವಿದ್ಯಾಃ
ಉಪಕಾರಾಯ ಯಾ ಪುಂಸಾಂ ನ ಪರಸ್ಯ ನ ಚಾತ್ಮನಃ|
ಗ್ರನ್ಥಸಞ್ಚಯಸಮ್ಭಾರೈಃ ಕಿಂ ತಯಾ ಭಾರವಿದ್ಯಯಾ||೧||
ಅನ್ಯಾಯಃ ಪ್ರೌಢವಾದೇನ ನೀಯತೇ ನ್ಯಾಯತಾಂ ಯಯಾ|
ನ್ಯಾಯಶ್ಚಾನ್ಯಾಯತಾಂ ಲೋಭಾತ್ ಕಿಂ ತಯಾ ಕ್ಷುದ್ರವಿದ್ಯಯಾ||೨||
ಅನುಷ್ಠಾನೇನ ರಹಿತಾ ಪಾಠಮಾತ್ರೇಣ ಕೇವಲಮ್|
ರಞ್ಜಯತ್ಯೇವ ಯಾ ಲೋಕಂ ಕಿಂ ತಯಾ ಶುಕವಿದ್ಯಯಾ||೩||
ಗೋಪ್ಯತೇ ಯಾ ಬುಧಸ್ಯಾಗ್ರೇ ಮೂರ್ಖಸ್ಯಾಗ್ರೇ ಪ್ರಕಾಶ್ಯತೇ|
ನ ದೀಯತೇ ಚ ಶಿಷ್ಯೇಭ್ಯಃ ಕಿಂ ತಯಾ ಶಠವಿದ್ಯಯಾ||೪||
ಪರಮಾತ್ಸರ್ಯಶೂಲಿನ್ಯಾ ವ್ಯಥಾ ಸಞ್ಜಾಯತೇ ಯಯಾ|
ಸುಖನಿದ್ರಾಪಹಾರಿಣ್ಯಾ ಕಿಂ ತಯಾ ಶೂಲವಿದ್ಯಯಾ||೫||
ಪರಸೂಕ್ತಾಪಹಾರೇಣ ಸ್ವಸುಭಾಷಿತವಾದಿನಾ|
ಉತ್ಕರ್ಷಃ ಖ್ಯಾಪ್ಯತೇ ಯಸ್ಯಾಃ ಕಿಂ ತಯಾ ಚೌರವಿದ್ಯಯಾ||೬||

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಕನ್ನಡಕಂದರೆ,
ನಿಮ್ಮ ಸಕ್ಕದ ಸುಬಾಶಿತದ ತಲೆ ಬುಡ ಅರ್ತ ಆಗಲಿಲ್ಲ. ಕನ್ನಡಯ್ಸಿ ಹಾಕಿದ್ದರೆ ಚೆನ್ನಾಗಿತ್ತು. ಹೆಚ್ಚು ಮಂದಿಗೆ ಅರ್ತ ಆಗುತ್ತದೆ. ಇದು ಕನ್ನಡದ ತಾಣ. ಎಲ್ಲಾರಿಗೂ ಸಕ್ಕದ ಬರಲ್ಲ. :(
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ಅನುವಾದ ಕೊಡುತ್ತೇನೆ. ಕೊಂಚ ಕಾಲಾವಕಾಶ ಕೊಡಿ. ಚುನಾವಣಾಕರ್ತವ್ಯದಲ್ಲಿ ಭಾಗಿಯಾಗಿದ್ದೇನೆ.

ಕನ್ನಡಕಂದರೆ,

ಇಲ್ಲಿಯವರೆಗೆ ಈ ಸುಭಾಷಿತಗಳನ್ನು ನಾನು ಕೇಳಿರಲಿಲ್ಲ! ಧನ್ಯವಾದಗಳು..

ಓದಿದಕೂಡಲೆ, ಕನ್ನಡಿಸಬೇಕೆಂದು ಮನಕ್ಕೆ ಬಂದಹಾಗೆ ಬರೆದಿದ್ದೇನೆ :) ತಪ್ಪು ತಿಳಿಯದಿರಿ. ನಿಮ್ಮ ಒಳ್ಳೇ ಭಾಷಾಂತರಕ್ಕೆ ಕಾಯುವೆ.

ಆರು ಬಗೆಯ ಹುಸಿವಿದ್ಯೆಗಳು:

ಕಲಿತ ವಿದ್ಯೆ ಮಾಡಬೇಕುಪಕಾರ ತನಗೋ ಮೇಣ್ ಪರರಿಗೋ
ಇಲ್ಲದೆ ಅದಿರಲು ಬರಿ ಹೊತ್ತಿಗೆಯೊಳು, ಅದರಿಂದೇನು ಭಾರವಿದ್ಯೆಯಿಂ? || 1||

ಹಿರಿಮೆಯಿಂದ ಒಯ್ಯಬೇಕದು ಸಟೆಯಿಂ ದಿಟದೆಡೆಗೆ
ಅಲ್ಲದೆ ದಿಟದಿಂ ಸಟೆಯೆಡೆಗೊಯ್ದರದು ಕೀಳುವಿದ್ಯೆಯು ||2||

ಬಾಯ್ಮಾತಿನಲಿದ್ದು ಬಳಕೆಯಲಿ ಇಲ್ಲದೆಲೆ
ಬರಿ ರಂಜಿಸಲು ಇರಲದು ಗಿಳಿಪಾಠವು ||3||

ಬಲ್ಲವರ ಮುಂದೆ ತೋರದೆಲೆ, ಮೂರ್ಖರ ಮುಂದೆಯೆ ಬೆಳಗುತಲಿ
ಬಯಸಿದವರಿಗೆ ಕಲಿಸದಿರಲದುವೆ ಧೂರ್ತ ವಿದ್ಯೆಯು || ೪||

ಆವಕಲಿಕೆಯದು ಹೆರರ ಮಚ್ಚರವ ತರಿಸುತಲಿ
ಸುಖನಿದಿರೆಯ ಕೆಡಿಸುವುದದು ಶೂಲವಿದ್ಯೆಯು! || ೫||

ಇತರರಿಗೆ ಅಪಕಾರಿ ತನಗೆ ಮಾತ್ರ ಒಳಿತಾಗಲೆಂತಿರಲು
ಕಲಿತದ್ದು ಕಲಿಕೆಯಲ್ಲದುವೆ ಚೋರವಿದ್ಯೆಯು! ||೬||

ಕಡೆಯ ಶ್ಲೋಕದ ಅರ್ಥ ಸರಿಯಾಗಿ ಬಂದಿಲ್ಲ ಎಂದು ಎನಿಸುತ್ತಿದೆ. :(

ಷಣ್ಮಿಥ್ಯಾವಿದ್ಯಾಃ
ಉಪಕಾರಾಯ ಯಾ ಪುಂಸಾಂ ನ ಪರಸ್ಯ ನ ಚಾತ್ಮನಃ|
ಗ್ರನ್ಥಸಞ್ಚಯಸಮ್ಭಾರೈಃ ಕಿಂ ತಯಾ ಭಾರವಿದ್ಯಯಾ||೧||
ಅನ್ಯಾಯಃ ಪ್ರೌಢವಾದೇನ ನೀಯತೇ ನ್ಯಾಯತಾಂ ಯಯಾ|
ನ್ಯಾಯಶ್ಚಾನ್ಯಾಯತಾಂ ಲೋಭಾತ್ ಕಿಂ ತಯಾ ಕ್ಷುದ್ರವಿದ್ಯಯಾ||೨||
ಅನುಷ್ಠಾನೇನ ರಹಿತಾ ಪಾಠಮಾತ್ರೇಣ ಕೇವಲಮ್|
ರಞ್ಜಯತ್ಯೇವ ಯಾ ಲೋಕಂ ಕಿಂ ತಯಾ ಶುಕವಿದ್ಯಯಾ||೩||
ಗೋಪ್ಯತೇ ಯಾ ಬುಧಸ್ಯಾಗ್ರೇ ಮೂರ್ಖಸ್ಯಾಗ್ರೇ ಪ್ರಕಾಶ್ಯತೇ|
ನ ದೀಯತೇ ಚ ಶಿಷ್ಯೇಭ್ಯಃ ಕಿಂ ತಯಾ ಶಠವಿದ್ಯಯಾ||೪||
ಪರಮಾತ್ಸರ್ಯಶೂಲಿನ್ಯಾ ವ್ಯಥಾ ಸಞ್ಜಾಯತೇ ಯಯಾ|
ಸುಖನಿದ್ರಾಪಹಾರಿಣ್ಯಾ ಕಿಂ ತಯಾ ಶೂಲವಿದ್ಯಯಾ||೫||
ಪರಸೂಕ್ತಾಪಹಾರೇಣ ಸ್ವಸುಭಾಷಿತವಾದಿನಾ|
ಉತ್ಕರ್ಷಃ ಖ್ಯಾಪ್ಯತೇ ಯಸ್ಯಾಃ ಕಿಂ ತಯಾ ಚೌರವಿದ್ಯಯಾ||೬

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/

ಕೊನೆಯದಱ ಅನುವಾದ ಹೀಗಿದೆ.

ಬೇಱೆಯವರ ಒಳ್ಳೆಯ ನುಡಿ ಅಥವಾ ಕೆಲಸವನ್ನು ಅಪಹರಿಸಿ ತನ್ನದೆನ್ನುತ್ತ ಅದಱ ದೊಡ್ದತನವನ್ನೆ (ಕದ್ದುದಱ ದೊಡ್ಡತನವನ್ನೆ ಹೇೞುತ್ತ) ಹೇೞುವಂತ ಚೌರವಿದ್ಯೆ(ಕಳ್ಳಬಿಜ್ಜೆ)ಯಿಂದೇನು?

ಷಣ್ಮಿಥ್ಯಾವಿದ್ಯಾಃ
ಆಱು ಮಿಥ್ಯಾ ವಿದ್ಯೆಗಳು (ಆಱು ಸುಳ್ಳು ಬಿಜ್ಜೆಗಳು)
ಉಪಕಾರಾಯ ಯಾ ಪುಂಸಾಂ ನ ಪರಸ್ಯ ನ ಚಾತ್ಮನಃ|
ಗ್ರಂಥಸಂಚಯಸಂಭಾರೈಃ ಕಿಂ ತಯಾ ಭಾರವಿದ್ಯಯಾ||೧||

ಅನುವಾದ: ಯಾವುದೇ ಪುರುಷನಿಗೆ (ಸ್ತೀಗೂ ಕೂಡ) ತನಗಾಗಲಿ ಅಥವಾ ಪರರಿಗಾಗಲಿ ಉಪಯೋಗಕ್ಕೆ ಬಾರದೆ ಬಱಿ ಗ್ರಂಥಸಂಗ್ರಹ ಮಾಡಿದರೆ ಅಂಥ ಭಾರವಿದ್ಯೆಯಿಂದೇನು? (ಪ್ರಯೋಜನವಿಲ್ಲ.)

ಅನ್ಯಾಯಃ ಪ್ರೌಢವಾದೇನ ನೀಯತೇ ನ್ಯಾಯತಾಂ ಯಯಾ|
ನ್ಯಾಯಶ್ಚಾನ್ಯಾಯತಾಂ ಲೋಭಾತ್ ಕಿಂ ತಯಾ ಕ್ಷುದ್ರವಿದ್ಯಯಾ||೨||

ಅನುವಾದ: ದೊಡ್ಡ ದೊಡ್ಡ ಮತುಗಳಿಂದ ಅನ್ಯಾಯವನ್ನು ನ್ಯಾಯವೆಂದೂ ನ್ಯಾಯವನ್ನು ದುರಾಸೆಗೋಸ್ಕರ ಅನ್ಯಾಯವೆಂದು ಹೇೞುವ ಕ್ಷುದ್ರವಿದ್ಯೆ(ಕೀೞುಬಿಜ್ಜೆ)ಯಿಂದೇನು? (ಪ್ರಯೋಜನವಿಲ್ಲ.)

ಅನುಷ್ಠಾನೇನ ರಹಿತಾ ಪಾಠಮಾತ್ರೇಣ ಕೇವಲಮ್|
ರಂಜಯತ್ಯೇವ ಯಾ ಲೋಕಂ ಕಿಂ ತಯಾ ಶುಕವಿದ್ಯಯಾ||೩||

ಅನುವಾದ: ಅನುಷ್ಠಾನದಲ್ಲಿಲ್ಲದೆ ಬಱಿ ಪಾಠಮಾತ್ರದಿಂದ ಜನರನ್ನು ರಂಜಿಸುವ ಗಿಳಿಪಾಠದಿಂದೇನು? (ಪ್ರಯೋಜನವಿಲ್ಲ.)

ಗೋಪ್ಯತೇ ಯಾ ಬುಧಸ್ಯಾಗ್ರೇ ಮೂರ್ಖಸ್ಯಾಗ್ರೇ ಪ್ರಕಾಶ್ಯತೇ|
ನ ದೀಯತೇ ಚ ಶಿಷ್ಯೇಭ್ಯಃ ಕಿಂ ತಯಾ ಶಠವಿದ್ಯಯಾ||೪||

ಅನುವಾದ: ಬುದ್ಧಿವಂತರೆದುರು ಮುಚ್ಚಿ (ಗೌಪ್ಯವಾಗಿರಿಸಿ) ಮೂರ್ಖರೆದುರು ತೋಱಿಸುವ (ಪ್ರಕಾಶಿಸುವ) ಮತ್ತು ಶಿಷ್ಯರಿಗೆ ಹೇೞಲಾಗದ (ಬೋಧಿಸಲಾಗದ) ಶಠವಿದ್ಯೆ(ಮೋಸಬಿಜ್ಜೆ)ಯಿಂದೇನು? (ಪ್ರಯೋಜನವಿಲ್ಲ.)

ಪರಮಾತ್ಸರ್ಯಶೂಲಿನ್ಯಾ ವ್ಯಥಾ ಸಂಜಾಯತೇ ಯಯಾ|
ಸುಖನಿದ್ರಾಪಹಾರಿಣ್ಯಾ ಕಿಂ ತಯಾ ಶೂಲವಿದ್ಯಯಾ||೫||

ಅನುವಾದ: ಬೇಱೆಯವರ ಮೇಲೆ ಹೊಟ್ಟೆಕಿಚ್ಚು ತರುವಂಥ ಹಾಗೂ ವ್ಯಥೆ ತಂದು ಸುಖ ನಿದ್ರೆಯನ್ನೊಯ್ಯುವಂಥಹ ಶೂಲವಿದ್ಯೆಯಿಂದೇನು? (ಪ್ರಯೋಜನವಿಲ್ಲ.)

ಪರಸೂಕ್ತಾಪಹಾರೇಣ ಸ್ವಸುಭಾಷಿತವಾದಿನಾ|
ಉತ್ಕರ್ಷಃ ಖ್ಯಾಪ್ಯತೇ ಯಸ್ಯಾಃ ಕಿಂ ತಯಾ ಚೌರವಿದ್ಯಯಾ||೬||

ಅನುವಾದ: ಬೇಱೆಯವರ ಒಳ್ಲೆಯ ನುಡಿ ಹಾಗೂ ಕೃತಿಗಳನ್ನು ಅಪಹರಿಸಿ ತನ್ನದೆಂದು ಹೇೞಿ ಅದಱ ದೊಡ್ಡಸ್ತಿಕೆಯನ್ನು (ತನ್ನದಲ್ಲದ ಬೇಱೆಯವರ) ಹೇೞುವಂಥ ಚೌರವಿದ್ಯೆ(ಕಳ್ಳಬಿಜ್ಜೆ)ಯಿಂದೇನು? (ಪ್ರಯೋಜನವಿಲ್ಲ.)

೨(ಎರಡನೆಯ ಪದ್ಯದ ಅನುವಾದದಲ್ಲಿ ’ಮತುಗಳನ್ನು’ ಎಂಬುದಱ ಬದಲಾಗಿ ’ಮಾತುಗಳನ್ನು’ ಎಂದು ಓದಿ.