ಸಿನಿಮಾ ಯಾವುದಕ್ಕೆ ಸ್ಫೂರ್ತಿ?

To prevent automated spam submissions leave this field empty.

ಹಿಂದೆ ಸಿನಿಮಾ ಎಂದರೆ ಮನೊರಂಜನೆ ಅಂತ ಅಂದ್ಕೊಂಡಿದ್ದೆ , ಇತ್ತೀಚೆಗೆ ಮನೊರಂಜನೆಗೆ ಬದ್ಲು ಮಾರಕವಾಗಿದೆ. ಹಿಂದಿನ ಸಿನಿಮಾಗಳಲ್ಲಿ ನೀತಿ, ಸಾತ್ವಿಕ ಪಾತ್ರಗಳು ,ಒಂಥರ ಚೆನ್ನಾಗಿರುತ್ತಿತ್ತು. ಹಿಂದೆ ಒಂದು ಸಿನಿಮ ಬಂತು, ಅದಾದ್ಮೇಲೆ ಕೆಲವು ಹುಡುಗರು ಆಸಿಡ್ಗಳನ್ನು ಹಾಕೋಕೆ ಸ್ಟಾರ್ಟ್ ಮಾಡಿದ್ರು, ತಮ್ಮ ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕೆ. ಇದು ಯಾಕೆ ಹೀಗೆ, ಹುಡುಗಿಯರಿಗೆ ಅವರಿಗೇ ಆದ ಒಂದು ಕಲ್ಪನೆ, ಆಸೆ, ಪ್ರತಿಯೊಂದು ಅಭಿಪ್ರಾಯ ಇರುತ್ತದೆ, ಅದಕ್ಕೋಸ್ಕರ ಆಸಿಡ್ ಹಾಕೋದು ಎಷ್ಟರ ಮಟ್ಟಿಗೆ ಸರಿ?
ಒಂದು ಸಿನಿಮದಲ್ಲಿ entrance examಗೆ lecturer ಹೋಗಿ ಬರೆಯೋದು, ಈ ಕಡೆ ಸ್ಟೂಡೆಂಟ್ ಆಟ ಆಡೋದು, ಎಕ್ಸಾಮ್ನಲ್ಲಿ ಮೋಬೈಲ್ ನಲ್ಲಿ ಉತ್ತರಗಳನ್ನು ಕೇಳೋದು ನಂತರ ಅವನಿಗೆ ಪ್ರಥಮ ಸ್ಥಾನ. ಇದೇ ರೀತಿ KPSE ಯಲ್ಲಿ ಒಂದು ಸ್ಟೂಡೆಂಟ್ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾಳೆ ಇಂತ ಸೀನ್ಸ್ ಇದ್ರೆ ಸೋಮಾರಿ ಸ್ಟೂಡೆಂಟ್ಸ್ಗೆ ಬಿಟ್ಟಿ ಐಡಿಯ ಹೊಳೆಯುತ್ತೆ. ಇದರಿಂದ ಎಶ್ಟೋ ಬುದ್ದಿವಂತ ಸ್ಟೂಡೆಂಟ್ಸ್ಗೆ ನಿರುತ್ಸಾಹ, ಬೇಜಾರು, ಜೊತೆಗೆ ಆಕ್ರೋಶ. ಇಂತ ಫಿಲ್ಮ್ಸ್ ಯಾಕೆ ತೆಗಿತಾರೆ? ನಮ್ಮ ಅಧಿಕಾರಿಗಳ ನಿರ್ಲಕ್ಶ್ಯ , ಬೇಜವಬ್ದಾರಿತನ ಇವೆಲ್ಲಾ ಇಲ್ಲದಿದ್ದರೆ ಮೊಬೈಲನ್ನು ಎಕ್ಸಾಮ್ ಹಾಲ್ ಗೆ ಬಿಡುತ್ತಿರಲ್ಲಿಲ್ಲ. "ಹಣ ಕೊಟ್ಟರೆ ಹೆಣ ಕೂಡ ಬಾಯಿ ಬಿಡುತ್ತೆ" ಅಂತ ಕೇಳಿದ್ದೆ, ಈಗ ಅದರ ಒಳ ಅರ್ಥ ಗೊತ್ತಾಗ್ತಿದೆ , ಹಣಕ್ಕೋಸ್ಕರ ಎಲ್ಲಾ ಕಾನೂನುಗಳನ್ನು ಕೂಡ ಮುರಿದುಹಾಕುತ್ತಾರೆ. ಇಂತ ವ್ಯವಸ್ಥೆ ಯಾವಾಗ ಹೋಗುತ್ತೊ? ಇಂಥದುಕ್ಕೆ ಯಾಕೆ ಎಕ್ಸಾಮ್ ನೆಡೆಸುತ್ತಾರೆ? ಇದೊಂದು ಉದಾಹರಣೆ ಅಷ್ಟೆ .
ಸಾಪ್ಟ್ ವೇರ್ ಇಂಜಿನೀಯರ್ಗಳು ಸ್ಪೀಡ್ ಸಿನಿಮಾದಿಂದ ಸ್ಪೂರ್ತಿ ಪಡೆದು ದರೋಡೆ ನೆಡೆಸಿದ್ದು , ಐಷರಾಮಿ ಜೀವನಕೋಸ್ಕರ. ವಿದ್ಯಾವಂತರೇ ಹೀಗೆ ಮಾಡಿದ್ರೆ ಹೇಗೆ? ಬೇಲಿಯೇ ಎದ್ದು ಹೊಲ ಮೇಯ್ದಂತಿದೆ, ಈ ರೀತಿಯಿಂದ ಬಂದ ಹಣದಿಂದ ಹೇಗೆ ತಾನೆ ಐಷರಾಮಿ ಜೀವನ ನೆಡೆಸುತ್ತಾರೆ?
ಸಿನಿಮಾದಲ್ಲಿರುವ ಒಳ್ಳೆಯ ನೀತಿಗಳನ್ನು, ಜೀವನದ ಮೌಲ್ಯಗಳನ್ನು, ದೇಶಪ್ರೇಮವನ್ನು ಬೆಳಸಿಕೊಳ್ಳೋದು, ಲಂಚದ ವಿರುದ್ದ ಹೋರಾಡೋದು, ಇವೆಲ್ಲವನ್ನು ರೂಢಿಸಿಕೊಂಡ್ರೆ ನಾವು ಒಳ್ಳೆ ಸಮಾಜವನ್ನು ನಿರ್ಮಾಣ ಮಾಡ್ಬಹುದು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಗುಱುಱಾಜ
www.kannadaguru.blogspot.com

ರಾಜೇಶ್ವರಿಯವರ ಉದ್ದೇಶವೇನೋ ಚೆನ್ನಾಗಿದೆ, ದುರ೦ತವೆ೦ದರೇ ಹೆಚ್ಚಿನ ಜನ ಚಿತ್ರದಲ್ಲಿನ ಒಳ್ಳೆಯ ಮೌಲ್ಯಗಳ ಬದಲು ಕೆಟ್ಟ ವಿಚಾರಗಳನ್ನೇ ಅನುಕರಣೆ ಮಾಡಲು ಪ್ರಯತ್ನಿಸುತ್ತಾರೆ.ನೆಚ್ಚಿನ ಹೀರೊ ಸಿಗರೇಟು ಸೇದುತ್ತಾನೆ೦ಬ ಕಾರಣಕ್ಕೆ ಅಭಿಮಾನಿ ಅವನ ಶೈಲಿಯಲ್ಲಿಯೇ ಸಿಗರೇಟು ಸೇದಿದ೦ತೆ.ಇತ್ತೀಚೆಗೆ ಒ೦ದು ಸಿನಿಮಾ ಬ೦ದಿತ್ತು.ನಾಯಕನೊಬ್ಬ ಅಪ್ರಾಪ್ತ ವಯಸ್ಸಿನ ಬಾಲಕಿಯ ಪ್ರೇಮಪಾಶಕ್ಕೆ ಸಿಲುಕಿ,ಅವಳನ್ನು ಓಡಿಸಿಕೊ೦ಡು ಹೋಗುವ ಆ ನ೦ತರ ಅವರು ಪಡುವ ಪರಿಪಾಟಲುಗಳ ಬಗ್ಗೆ ಅದರಲ್ಲಿ ತೋರಿಸಲಾಗಿತ್ತು. ನಿಜ ಹೇಳಬೇಕೆ೦ದರೇ ,ಅದನ್ನು ನೋಡಿದವರಿಗೆ ಅಪ್ರಾಪ್ತ ವಯಸ್ಸಿನ ಪ್ರೇಮ ಪ್ರಕರಣಗಳ ಸಮಸ್ಯೆಗಳು,ದುರ೦ತಗಳು ಅರ್ಥವಾಗುತ್ತವೆ.ಆದರೆ ಚಿತ್ರ ನೋಡಿದ ಅನೇಕ ಹುಡುಗ ಹುಡುಗಿಯರು ಸಿನಿಮಾದ ಶೈಲಿಯಲ್ಲಿಯೇ ಮನೆ ಬಿಟ್ಟು ಪರಾರಿಯಾದರು!.ನನಗನ್ನಿಸಿದ ಪ್ರಕಾರ ಚಿತ್ರದ ಮೂಲ ಉದ್ದೇಶದ ದುರ್ಬಲ ನಿರೂಪಣೆ,ಋಣಾತ್ಮಕ ಅ೦ಶಗಳ ವಿಜೃ೦ಭಣೆ ಇವೆಲ್ಲದಕ್ಕೂ ಕಾರಣವಿರಬಹುದು

ಆ ಚಿತ್ರದ ಹಾಡು ನೋಡಿದ ನಮ್ಮ ಮನೆಗೆ ಕೆಲಸಕ್ಕೆ ಬರುವ ಲಕ್ಶ್ಮಿಯ ೧೪ ವರ್ಷದ ಮಗಳು ಈಗಾಗಲೆ ಯಾರಿಗೋ ಲೈನ್ ಹೊಡೆಯಲು ಸ್ಕೆಚ್ ಹಾಕುತ್ತಿದ್ದಾಳೆ :)
ಉಲ್ಲಾಸದ ಹೂ ಮಳೆ ಹೇಳಿಕೊಂಡು ಕುಣಿಯೋದೇ ಕೆಲಸ
ಯಾಕೆ ಪುಷ್ಪ ಹೇಗೆ ಹಾಡ್ಕೊಂಡು ಕುಣೀತಿಯಾ ಅಂದರೆ ಥೇಟ್ ಅಮೂಲ್ಯ ಥರಾನೆ ನಾಚಿಕೊಳ್ತಾಳೆ.
ಆ ಹುಡುಗೀಗೂ ನನ್ನಷ್ಟೆ ವಯಸಾ ಮೇಡಂ ಅಂತ ನೂರ್ ಸಲ ಕೇಳಿದಾಳೆ. ಹೌದು ಅಂದ ತಕ್ಷಣ ಅವಳ ಕಣ್ಣಲ್ಲಿ ಮಿಂಚು :)

ಒಟ್ಟಿನಲ್ಲಿ ಸಿನಿಮಾ ಪ್ರೀತಿ ಹರಡಲು ಸ್ಪೂರ್ತಿಯಾಗಿದೆ

http://thereda-mana.blogspot.com/

ರೂಪ

ಸಿನಿಮಾ ಯಾವುದಕ್ಕೆ ಸ್ಪೂರ್ತಿ ...

ಎನ್ನುವುದಕ್ಕಿಂತ.. ಸ್ಪೂರ್ತಿಯ ಉದ್ದೆಶದಿಂದ ಚರ್ಚೆಯ ಅವಶ್ಯಕತೆ ಇಲ್ಲವೆನ್ನಬಹುದೇನೊ..

ಕಾರಣ..

ಸಿನಿಮಾ ಎನ್ನುವುದು ಲಲಿತಕಲೆಗಳ ಸಮೂಹ ಮಾದ್ಯಮವಾಗಿರುವುದರಿಂದ ಅದು ಅಬಿವ್ಯಕ್ತಿಯ ಪರಿದಿಯಲ್ಲೇ ನಿಲ್ಲುತ್ತದೆಯೇ ಹೊರತು ಸ್ಪೂರ್ತಿಯಾಗಿಯಲ್ಲ...
ದ್ರುಶ್ಯದ ಪ್ರಬಾವದಿಂದ ಪ್ರಬಾವಿತನಾಗಿ ಅನುಕರಿಸುವುದು ಮಾನವನ ಹುಟ್ಟಿನಿಂದ ಬಂದ ಸಹಜ ಗುಣ...ಸಿನಿಮಾ ಎಂದೂ ಸ್ಪೂರ್ತಿಯ ಉದ್ದೇಶದಿಂದ ನಿರ್ಮಾಣವಾಗುವುದಿಲ್ಲ... ಕೆಲವೊಂದು ಸಿನಿಮಾಗಳು ಆ ಉದ್ದೇಶದಿಂದ ನಿರ್ಮಾಣವಾದರು ಅದನ್ನು ಎಷ್ಟು ಜನ ಸ್ವೀಕರಿಸುತ್ತಾರೆ ಎನ್ನುವ ಪ್ರಶ್ನೆ ಉದ್ಬವವಾಗುತ್ತದೆ.

ಉದಾ; ಗಾಂದಿ ಕುರಿತಾದ ಸಿನಿಮಾ ಒಂದು ದಿನವೂ ಚಿತ್ರ ಮಂದಿರದಲ್ಲಿ ಓಡುವುದಿಲ್ಲ... 'ಓಡು'ತ್ತದೆ.

ನಿಮ್ಮೆಲ್ಲಾ ಪ್ರತಿಕ್ರಿಯೆಗಳಿಗೆ ದನ್ಯವಾದಗಳು. ಈ ಲೇಖನ ಬರೆಯುವಾಗ ತುಂಬಾ ಹಿಂಜರಿಕೆ ಇತ್ತು ಇದು ನನ್ನ ಜೀವನದಲ್ಲಿ ಮೊಟ್ಟ ಮೊದಲ ಲೇಖನ.

ದನ್ಯವಾದಗಳು
ರಾಜೇಶ್ವರಿ

ಎಲ್ಲರೂ ಅವರವರ ಕೆಲಸಗಳನ್ನು ಕರ್ತವ್ಯ ಲೋಪವಿಲ್ಲದೆ , ಸಮಾಜಕ್ಕೆ ಅಹಿತವಾಗಿರದೆ ಮಾಡಿದ್ರೆ ಬೆಕ್ಕಿಗೆ ಘಂಟೆ ಕಟ್ಟುವ ಪ್ರಮೇಯವೇ ಇರುವುದಿಲ್ಲ , ಆಗ ಯಾರೊಬ್ಬರು ಇನ್ನೊಬ್ಬರು ಹೋರಾಡಲಿ ಎಂದು ಆಶಿಸುವುದಿಲ್ಲ. :smile: