ಜ್ಯೇಷ್ಟ ಮಾಸದ ಶ್ರೇಷ್ಟ ಪುಷ್ಪ - ಬ್ರಹ್ಮಕಮಲ

To prevent automated spam submissions leave this field empty.

ಜ್ಯೇಷ್ಟ ಮಾಸಕ್ಕೂ ಬ್ರಹ್ಮಕಮಲಕ್ಕೂ ಅದೇನು ಅನುಬಂಧವೋ ತಿಳಿಯಿದು. ಮುಂಗಾರಿನ ಮಳೆ ಹನಿಗಳು ಧರೆಗಿಳಿದಂತೆ ಕ್ಯಾಕ್ಟಸ್ ಜಾತಿಯ ಬ್ರಹ್ಮಕಮಲದ ಗಿಡದಲ್ಲಿ ಮೊಗ್ಗುಗಳು ಹೊರಹೊಮ್ಮತೊಡಗುತ್ತವೆ. ಕೆಲವೇ ದಿನಗಳಲ್ಲಿ ಮೊಗ್ಗರಳಿ ಹೂವಾಗಿ ಮನಸ್ಸನ್ನಾಕರ್ಷಿಸುತ್ತವೆ. ಆದರೆ ಈ ಸುಂದರ ಬ್ರಹ್ಮಕಮಲಕ್ಕೂ ಸೂರ್ಯನಿಗೂ ಬದ್ದ ದ್ವೇಶವಿರಬೇಕು. ಅತ್ಬವಾ ಚಂದ್ರನಮೇಲಿನ ಮೋಹವೋ ತಿಳಿಯದು. ಅದಕ್ಕೋ ಏನೋ ಈ ಪುಷ್ಪಗಳು ರಾತ್ರಿಯಲ್ಲಿಯೇ ಅರಳುವುದು. ಬೆಳಗಾಗುವಹೊತ್ತಿಗೆ ಮುದುಡಿಕೊಂಡುಬಿಡುವುದು ಇದರ ಜಾಯಮಾನ. ಪುಷ್ಪದ ಚುಕ್ಕೆಯಿಲ್ಲದ ಶ್ವೇತ ವರ್ಣಕ್ಕೂ ರಾತ್ರಿಯ ಕಪ್ಪಿಗೂ ಅದೆಂಥ ತಾಳಮೇಳ!! ಆದರೊಂದು ಕೊರತೆ ಈ ಪುಷ್ಪದಲ್ಲಿದೆ. ಅದೆಂದರೆ ಇದರಲ್ಲಿ ಯಾವರೀತಿಯ ಸುವಾಸನೆಯೂ ಇಲ್ಲ.
ವಿಜ್ಞಾನದ ಈ ಯುಗದಲ್ಲಿ ಈ ನಿಶಾಸುಂದರಿಯನ್ನು ಬೆಳಗಿಗೂ ಪರಿಚಯಿಸುವುದು ಸುಲಭವಾಗಿದೆ. ರಾತ್ರಿ ಸುಮಾರು ೯.೦೦ರ ಹೊತ್ತಿಗೆ ಅರ್ಧಂಬರ್ಧ ಅರಳಿರುವ ಮೊಗ್ಗುಗಳನ್ನು ಗಿಡದಿಂದ ಕಿತ್ತು ಫ್ರಿಡ್ಜಿನಲ್ಲಿಡಿ. ಬೆಳಗಾಗೆದ್ದು ಪುಷ್ಪದ ಸೌಂದರ್ಯದ ಆನಂದವನ್ನು ಸವಿಯಿರಿ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಬ್ರಹ್ಮ ಕಮಲ ( Saussurea obvallata ) ಕ್ಯಾಕ್ಟಸ್ ಜಾತಿಯದ್ದಲ್ಲ ಮತ್ತು ಹಿಮಾಲಯ ಪರ್ವತ ಪ್ರದೇಶಗಳಲ್ಲಿ ಮಾತ್ರ ಬೆಳೆಯುವಂತದ್ದು ಅಂತ ಕೇಳಿದ್ದೇನೆ.

ಇದು ರಾತ್ರಿ ರಾಣಿ ಅಂದರೆ "Selenicereus grandiflora" ಆಗಿರಬೇಕು. ರಾತ್ರಿ ರಾಣಿ ಕ್ಯಾಕ್ಟಸ್ ಜಾತಿಯದು.

ನನ್ನ ಅನಿಸಿಕೆ ಸರಿಯೇ?

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

ಶ್ರೀನಿಧಿ,

ನಿಮ್ಮ ಅನಿಸಿಕೆ ಸರಿ. ಮಧ್ಯ ಅಮೆರಿಕಾದಲ್ಲಿ ಸಿಗುವ Selenicereus grandiflora ವೇ ರಾತ್ರಿ ರಾಣಿ.
ಅದನ್ನೇ ಭಾರತದಲ್ಲಿ ಬ್ರಹ್ಮಕಮಲ ಎನ್ನುವರು(Saussurea obvallata). ಹಿಮಾಲಯ ಆಸುಪಾಸಿನಲ್ಲಿ ಮಾತ್ರ ಬೆಳೆಯುವುದು-ಇದೂ ಸರಿ.

ಇಲ್ಲಿ ಬೆಳೆಯುವ ರಾತ್ರಿ ರಾಣಿಯನ್ನೂ ಬ್ರಹ್ಮಕಮಲ ಎನ್ನುವರು.
ಎಲ್ಲವೂ ನಿಜ. :)

-ಗಣೇಶ.

ಜ್ಯೇಷ್ಟ ಮಾಸದ ಶ್ರೇಷ್ಟ ಪುಷ್ಪ- ವಾಹ್.

ಈ 'ನಿಶಾ ಸುಂದರಿ'ಯನ್ನು ಬೆಳಗಿಗೂ ಪರಿಚಯಿಸುವ ವಿಧಾನ ತಿಳಿಸಿದ್ದಕ್ಕೆ ಧನ್ಯವಾದಗಳು.
ಆದರೆ ಇದರಲ್ಲಿ ಯಾವ ರೀತಿಯ ಸುವಾಸನೆ ಇಲ್ಲ !? (ಫ್ರಿಡ್ಜ್‌ನಲ್ಲಿಟ್ಟು ಅರಳಿದ ಪುಷ್ಪಕ್ಕೋ?)
ಹೂ ಅರಳುವಾಗ ವಿಶಿಷ್ಟ ಸುಗಂಧವಿರುವುದು.

-ಗಣೇಶ.

ನನ್ನ ಚುಟುಕು ಲೇಖನಕ್ಕೆ ಪ್ರತಿಕ್ರಿಯಿಸಿದ್ದಕ್ಕೆ ಸಂಪದ್ಬಾಂಧವರಿಗೆ ಧನ್ಯವಾದಗಳು. ಈ ಹೂವಿನ ಬಗ್ಗೆ ನನಗೆ ತಿಳಿಯದಿದ್ದ ಕೆಲವು ವಿಷಯಗಳನ್ನು ತಿಳಿಸಿಕೊಟ್ಟದ್ದಕೆ ಕೃತಜ್ಞತೆಗಳು ಕೂಡ.
ಹೂವು ಗಿಡದಲ್ಲಿದ್ದರೇ ಚೆನ್ನ ಎನ್ನುವುದು ನನ್ನ ಅಭಿಪ್ರಾಯವೂ ಕೂಡ. ಆದರೆ, ಒಂದೇ ರಾತ್ರಿಯಲ್ಲಿ ಅರಳಿ ಬೆಳಗಾಗುವುದರೊಳಗೆ ಮುದುಡಿ ಹೋಗುವ ಈ ಹೂವಿನ ಸೌಂದರ್ಯವನ್ನು ಅನುಭವಿಸುವುದಕ್ಕೆ ಬೇರೆ ದಾರಿ ಇಲ್ಲವಲ್ಲಾ? ಹಾಗಾಗಿ, ಹೂವನ್ನು ಕಿತ್ತು ಪ್ರಿಡ್ಜಿನಲ್ಲಿಡಲು ತಿಳಿಸಿದ್ದು. ಇನ್ನು ವಾಸನೆ - ಅದು ಇದ್ದೂ ಇಲ್ಲದಂತಿರುವುದರಿಂದ ವಾಸನಾರಹಿತ ಎಂದು ತಿಳಿಸಿದ್ದೆ. ಕ್ಷಮೆ ಇರಲಿ.
ಬ್ರಹ್ಮ ಕಮಲಕ್ಕೆ "ರಾತ್ರಿ ರಾಣಿ" ಎಂಬ ಇನ್ನೊಂದು ಹೆಸರಿದೆಯೆಂದು ತಿಳಿಸಿದ್ದೀರಿ. ನನಗೆ ತಿಳಿದಂತೆ "ರಾತ್ರಿರಾಣಿ" ಎಂಬ ಹೂವು ಸಣ್ಣ ಸಣ್ಣ ಎಲೆಗಳ ಗುಲಾಬಿಯಂತಹ ಗಿಡದಲ್ಲಿ ಬಿಡುವ ಸುಗಂಧರಾಜ ಪುಷ್ಪದಂತಹುದು. ಇದರ ಸುಮಧುರ ವಾಸನೆ ರಾತ್ರಿ ಇಡೀ ಗಲ್ಲಿಯ ತುಂಬಾ ಹರಡಿರುತ್ತದೆ. ಬೆಳಗಾಗುವುದರೊಳಗೆ ಹೂವು ಮುದುಡಿರುತ್ತದೆ, ವಾಸನೆಯೂ ಮಾಯವಾಗಿರುತ್ತದೆ. ಸಾಧ್ಯವಾದರೆ ಅದರ ಚಿತ್ರವನ್ನೂ ನೀಡುತ್ತೇನೆ. ಇನ್ನಾವ ಸಂಪದ್ಬಾಂಧವರಲ್ಲಿ ಇದ್ದರೆ ಅವರು ಪ್ರಕಟಿಸಿದರೂ ಕೃತಜ್ಞ.