ಮಾಸಗಳಿಗೆ ಹಾಗೆ ಹೆಸರೇಕೆ

To prevent automated spam submissions leave this field empty.

ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಮಾರ್ಗಶಿರ, ಪೌಷ, ಮಾಘ ಮತ್ತು ಫಾಲ್ಗುಣ ಹೀಗೇಕೆ ಕರೆಯುತ್ತಾರೆ?

ಕಾರಣ
ಹುಣ್ಣಿಮೆಯ ದಿನಕ್ಕೆ ಸರಿಸುಮಾರಾಗಿ ಚಂದ್ರ (ತಿಂಗಳ್‍) ಆಯಾ ನಕ್ಷತ್ರಗಳನ್ನು ಪ್ರವೇಶಿಸುವುದಱಿಂದ ಮಾಸಗಳಿಗೆ ಆಯಾ ನಕ್ಷತ್ರದ ಸಂಬಂಧದಿಂದ ಕರೆಯುತ್ತಾರೆ.

ಚೈತ್ರ=ಹುಣ್ಣಿಮೆಯ ದಿನ ಸರಿಸುಮಾರು ಚಂದ್ರ ಚಿತ್ರಾ ನಕ್ಷತ್ರಪ್ರವೇಶ
ವೈಶಾಖ= ವಿಶಾಖನಕ್ಷತ್ರದಲ್ಲಿ ಪ್ರವೇಶ
ಹಾಗೆಯೇ ಜ್ಯೇಷ್ಠ=ಜ್ಯೇಷ್ಠಾ ನಕ್ಷತ್ರ, ಆಷಾಢ=ಪೂರ್ವಾಷಾಢ/ಉತ್ತರಾಷಾಢ, ಶ್ರಾವಣ=ಶ್ರವಣ ನಕ್ಷತ್ರದಲ್ಲಿ ಚಂದ್ರನ ಪ್ರವೇಶ
ಮಾರ್ಗಶಿರ=ಮೃಗಶಿರಾನಕ್ಷತ್ರ, ಪೌಷ=ಪುಷ್ಯಾ, ಮಾಘ್ಹ=ಮಘಾನಕ್ಷತ್ರ, ಫಾಲ್ಗುಣ= ಪೂರ್ವಾ/ಉತ್ತರಾ ಫಲ್ಗುಣಿಯಲ್ಲಿ ಸರಿಸುಮಾರಾಗಿ ಚಂದ್ರ ನಕ್ಷತ್ರದಲ್ಲಿ ಪ್ರವೇಶ ಮಾಡುವುದಱಿಂದ ಆಯಾ ನಕ್ಷತ್ರಗಳಿಂದಲೇ ತಿಂಗಳುಗಳನ್ನು ಕರೆಯುತ್ತಾರೆ. ಇಲ್ಲೂ ಕೂಡ ತಿಂಗಳೇ(ಚಂದ್ರ) ತಿಂಗಳಿಗಳಿಗೆ (ಮಾಸ) ಕಾರಣನಾಗಿದ್ದಾನೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಕಾಗುಣಿತದ ತಪ್ಪುಗಳನ್ನು ಸರಿಪಡಿಸಿದ್ದೇನೆ.

ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಮಾರ್ಗಶಿರ, ಪೌಷ, ಮಾಘ ಮತ್ತು ಫಾಲ್ಗುಣ ಹೀಗೇಕೆ ಕರೆಯುತ್ತಾರೆ?

ಕಾರಣ
ಹುಣ್ಣಿಮೆಯ ದಿನಕ್ಕೆ ಸರಿಸುಮಾರಾಗಿ (ಒಂದು ದಿನ ಹಿಂದೆ ಅಥವಾ ಮುಂದೆ) ಚಂದ್ರ (ತಿಂಗಳ್‍) ಆಯಾ ನಕ್ಷತ್ರಗಳನ್ನು ಪ್ರವೇಶಿಸುವುದಱಿಂದ ಮಾಸಗಳಿಗೆ ಆಯಾ ನಕ್ಷತ್ರದ ಸಂಬಂಧದಿಂದ ಕರೆಯುತ್ತಾರೆ.

ಚೈತ್ರ=ಹುಣ್ಣಿಮೆಯ ದಿನ ಸರಿಸುಮಾರು ಚಂದ್ರ ಚಿತ್ರಾ ನಕ್ಷತ್ರಪ್ರವೇಶ
ವೈಶಾಖ= ವಿಶಾಖನಕ್ಷತ್ರದಲ್ಲಿ ಪ್ರವೇಶ
ಹಾಗೆಯೇ ಜ್ಯೇಷ್ಠ=ಜ್ಯೇಷ್ಠಾ ನಕ್ಷತ್ರ, ಆಷಾಢ=ಪೂರ್ವಾಷಾಢ/ಉತ್ತರಾಷಾಢ, ಶ್ರಾವಣ=ಶ್ರವಣ ನಕ್ಷತ್ರದಲ್ಲಿ ಚಂದ್ರನ ಪ್ರವೇಶ
ಮಾರ್ಗಶಿರ=ಮೃಗಶಿರಾನಕ್ಷತ್ರ, ಪೌಷ=ಪುಷ್ಯಾ, ಮಾಘ=ಮಘಾನಕ್ಷತ್ರ, ಫಾಲ್ಗುಣ= ಪೂರ್ವಾ/ಉತ್ತರಾ ಫಲ್ಗುಣಿಯಲ್ಲಿ ಹುಣ್ಣಿಮೆಯ ದಿನ ಸರಿಸುಮಾರಾಗಿ (ಒಂದು ದಿನ ಹಿಂದೆ ಅಥವಾ ಮುಂದೆ) ಚಂದ್ರ ನಕ್ಷತ್ರದಲ್ಲಿ ಪ್ರವೇಶ ಮಾಡುವುದಱಿಂದ ಆಯಾ ನಕ್ಷತ್ರಗಳಿಂದಲೇ ತಿಂಗಳುಗಳನ್ನು ಕರೆಯುತ್ತಾರೆ. ಇಲ್ಲೂ ಕೂಡ ತಿಂಗಳೇ(ಚಂದ್ರ) ತಿಂಗಳುಗಳಿಗೆ (ಮಾಸ) ಕಾರಣನಾಗಿದ್ದಾನೆ.

ಇಲ್ಲಿ ಸ್ವಲ್ಪ ಟಿಪ್ಪಣಿ ಹಾಕಲು ಬಯಸುವೆ:

ಮಾಸಗಳ ವಿಷಯ ಬಂದಾಗ, ಚಂದ್ರ ಚಿತ್ತಾ ನಕ್ಷತ್ರವನ್ನು, ಅಥವಾ ಶ್ರವಣ ನಕ್ಷತ್ರವನ್ನು ’ಪ್ರವೇಶಿಸುವುದು’ ಅನ್ನುವುದಕ್ಕಿಂತ, ಆ ನಕ್ಷತ್ರದ ಸಮೀಪ ಇರುವುದು, ಅಥವಾ ಆಕಾಶದಲ್ಲಿ ಆ ನಕ್ಷತ್ರದ ಭಾಗದಲ್ಲಿ ಇರುವುದು ಎನ್ನುವ ವಿವರಣೆ ಹೆಚ್ಚು ಸೂಕ್ತ.

ಚಂದ್ರ ಆಕಾಶದ ಒಂದು ಪ್ರದಕ್ಷಿಣೆಯನ್ನು ೨೭ವರೆ ದಿನದಲ್ಲಿ ಮುಗಿಸುತ್ತಾನೆ. ಹಾಗೆಂದೇ ಆಕಾಶವನ್ನು ೨೭ (ಅಥವಾ ೨೮) ನಕ್ಷತ್ರಗಳಾಗಿ ಪಾಲು ಮಾಡಿದೆ. ಪ್ರತಿನಿತ್ಯ ಚಂದ್ರ ಒಂದು ನಕ್ಷತ್ರದ ಭಾಗದಲ್ಲಿ ಇರುತ್ತಾನೆ (ಹಾಗೆ, ಅದರಿಂದ ಮುಂದಕ್ಕೂ ಸರಿಯುತ್ತಾನೆ). ಸೂರ್ಯನಾದರೆ ಒಂದು ನಕ್ಷತ್ರದ ಭಾಗದಲ್ಲಿ ೧೨-೧೩ ದಿನವಿರುತ್ತಾನೆ. ಹಾಗಾಗಿಯೇ ಸೂರ್ಯ ಚಿತ್ತಾ ನಕ್ಷತ್ರವನ್ನು ’ಪ್ರವೇಶಿಸುವುದು’ ಅನ್ನುವಷ್ಟು ಸರಿಯಾಗಿ, ಚಂದ್ರ ಚಿತ್ತಾ ನಕ್ಷತ್ರವನ್ನು ಪ್ರವೇಶಿಸುವುದು ಅನ್ನುವುದು ಕೇಳುವುದಿಲ್ಲ.

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

ನಿಮ್ಮ ವಿಚಾರ ವಾದಗಳಿಗೆಲ್ಲ ನನ್ನ ಒಪ್ಪಿಗೆ ಖಂಡಿತ ಇದೆ. ಯಾಕೆಂದರೆ ಚಂದ್ರನ ಕೌನಿಕ ಚಲನೆ ತೀರಾ ವೇಗವಾಗಿದ್ದು ಕೇವಲ ಸರಿಸುಮಾರು ಒಂದೇ ದಿನಕ್ಕೆ ನಕ್ಶತ್ರಗಳನ್ನು ದಾಟುವುದಱಿಂದ ನಿಮ್ಮ ವಾದ ಒಪ್ಪಲೇಬೇಕು. ನನ್ನ ನಕ್ಷತ್ರ ಪ್ರವೇಶ ಎನ್ನುವುದಕ್ಕಿಂತ ನಕ್ಷತ್ರ ಸನ್ನಿಧಾನಕ್ಕೆ ಬರುತ್ತಾನೆಂಬ ಮಾತಿಗೆ ಧಕ್ಕೆಯಿಲ್ಲವೆಂದೇ ನನ್ನ ಅಭ್ಹಿಪ್ರಾಯ. ಅಂದರೆ ಹುಣ್ಣಿಮೆಯ ದಿನದಂದು ಆಯಾ ನಕ್ಷತ್ರದ ಸನ್ನಿಧಾನಕ್ಕೆ ಬರುತ್ತಾನೆಂದೇ ಹೇೞಬಹುದು.

ನಮ್ ತಾಯಿ ತಿಂಗಳುಗಳ ಲೆಕ್ಕ ಹಾಕುವಾಗ ’ಚೆಟ್ಟಿ’, ’ಎಳ್ಳಾಮಾಸಿ’,.’ಹಬ್ಬ’,..’ಕಾರುಣಿವಿ’ ಅಂತಾ ಎನೇನೋ ಹೆಳುತ್ತಿರುತ್ತಾರೆ,.. "ಕನ್ನಡ ಕಂದ" ರೇ ಕನ್ನಡ ತಿಂಗಳುಗಳ ಬಗ್ಗೆ ತುಸು ಉಸುರಿ.....

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

ಚಟ್ಟಿ ಅಮಾವಾಸ್ಯೆ=ಕಾರ್ತಿಕ ಮಾಸದ ಅಮಾವಾಸ್ಯೆ
ಎಳ್ಳಮಾವಾಸ್ಯೆ=ಮಾರ್ಗಶಿರ ಅಮಾವಾಸ್ಯೆ

ಅಕ್ಕನ ಹುಣ್ಣಿಮೆ=ಚೈತ್ರ ಹುಣ್ಣಿಮೆ (ಬೆಂಗಳೂರು ಕರಗ)
ಅಕ್ಷತ ತದಿಗೆ (ಮುನ್ನ) ಅಮಾವಾಸ್ಯೆ=ಚೈತ್ರ ಅಮಾವಾಸ್ಯೆ (ಚಾಂದ್ರಮಾನದ ಮೊದಲ ತಿಂಗಳ ಅಮಾವಾಸ್ಯೆ)
ಅಗೆ ಹುಣ್ಣಿಮೆ= ವೈಶಾಖ ಹುಣ್ಣಿಮೆ (ಬುದ್ಧ ಪೂರ್ಣಿಮಾ)
ಶನೀಶ್ವರ ಅಮಾವಾಸ್ಯೆ=ವೈಶಾಖ ಅಮಾವಾಸ್ಯೆ
ಕಾರ ಹುಣ್ಣಿಮೆ= ಜ್ಯೇಷ್ಠ ಹುಣ್ಣಿಮೆ (ವಟ ಸಾವಿತ್ರೀ ವ್ರತ)
ಮಣ್ಣೆತ್ತಿನ ಅಮಾವಾಸ್ಯೆ= ಜ್ಯೇಷ್ಠ ಮಾಸದ ಅಮಾವಾಸ್ಯೆ
ವ್ಯಾಸಪೂರ್ಣಿಮಾ (ಗುರು ಪೂರ್ಣಿಮಾ)= ಆಷಾಢ ಹುಣ್ಣಿಮೆ
ಭೀಮನಮಾವಾಸ್ಯೆ=ಆಷಾಢ ಅಮಾವಾಸ್ಯೆ
ನೂಲು ಹುಣ್ಣಿಮೆ=ಶ್ರಾವಣ ಹುಣ್ಣಿಮೆ (ಯಜುರುಪಾಕರ್ಮ) ಶ್ರವಣನಕ್ಷತ್ರ ಬಂದಿದ್ದಾಗ ಋಗುಪಾಕರ್ಮ
ಬೆನಕನ ಅಮಾವಾಸ್ಯೆ=ಶ್ರಾವಣ ಅಮಾವಾಸ್ಯೆ
ಅನಂತನ ಹುಣ್ಣಿಮೆ=ಭಾದ್ರಪದ ಮಾಸದ (ಅನಂತನ ಚತುರ್ದಶಿಯ ಮಱುದಿನದ ಹುಣ್ಣಿಮೆ)
ಮಹಾಲಯಾಮಾವಾಸ್ಯೆ= ಮಹಾನವಮೀ (ಮುನ್ನ) ಅಮಾವಾಸ್ಯೆ=ಭಾದ್ರಪದ ಅಮಾವಾಸ್ಯೆ(ದಸರಾ ಹಬ್ಬದ ಮುಂಚಿನ ದಿನ)
ಶೀಗೀ ಹುಣ್ಣಿಮೆ=ಆಶ್ವಯುಜ ಹುಣ್ಣಿಮೆ
ದೀಪಾವಳಿ ಅಮಾವಾಸ್ಯೆ=ಮಹಾಲಕ್ಷ್ಮಿ ಹಬ್ಬ=ಆಶ್ವಯುಜ ಅಮಾವಾಸ್ಯೆ
ಗುರುನಾನಕ ಜಯಂತಿ= ಕಾರ್ತಿಕ ಹುಣ್ಣಿಮೆ
ಚಟ್ಟಿ ಅಮಾವಾಸ್ಯೆ=ಕಾರ್ತಿಕ ಅಮಾವಾಸ್ಯೆ
ದತ್ತಜಯಂತಿ, ಹುತ್ತರಿ ಹಬ್ಬ=ಮಾರ್ಗಶಿರ ಹುಣ್ಣಿಮೆ
ಎಳ್ಳಮಾವಾಸ್ಯೆ=ಮಾರ್ಗಶಿರ ಅಮಾವಾಸ್ಯೆ
ಬನದ ಹುಣ್ಣಿಮೆ (ಬನಶಂಕರೀವ್ರತ)=ಪೌಷ ಹುಣ್ಣಿಮೆ
ಭಾರತ ಹುಣ್ಣಿಮೆ=ಮಾಘ ಹುಣ್ಣಿಮೆ
ಹೋಳಿ ಹುಣ್ಣಿಮೆ=ಫಾಲ್ಗುಣ ಹುಣ್ಣಿಮೆ
ಯುಗಾದಿ (ಮುನ್ನ) ಅಮಾವಾಸ್ಯೆ=ಫಾಲ್ಗುಣ ಅಮಾವಾಸ್ಯೆ