ಜಿ ಟಿ ನಾರಾಯಣರಾವ್ ಇನ್ನಿಲ್ಲ

To prevent automated spam submissions leave this field empty.

ಕನ್ನಡ ವಿಜ್ಞಾನ ಸಾಹಿತ್ಯದ ಪ್ರವರ್ತಕರಲ್ಲಿ ಒಬ್ಬರಾದ ಜಿ. ಟಿ ನಾರಾಯಣರಾವ್ ಇನ್ನಿಲ್ಲ. ಇಂದು (೨೭ ಜೂನ್ ೨೦೦೮ ಶುಕ್ರವಾರ) ಬೆಳಿಗ್ಗೆ ಏಳುಗಂಟೆಯ ವೇಳೆಗೆ ನಿಧನರಾದರೆಂದು ಕುಟುಂಬದವರು ತಿಳಿಸಿದ್ದಾರೆ.

~

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಆಘಾತದ ಸುದ್ದಿ. ಕನ್ನಡ ವಿಜ್ಞಾನ ಸಾಹಿತ್ಯದ ಪ್ರಪಂಚಕ್ಕೆ ಮತ್ತು ಜನತೆಗೆ ಎಂತಹಾ ನಷ್ಟ. ಸಂಪದದಲ್ಲಿ ಅವರ ಸಂದರ್ಶನ ಎಷ್ಟು ಸಲ ಕೇಳಿ ದಣಿದೆನೋ ನಾನು. ನಿಜವಾಗಿಯು ನಮಗೆ ಇದು ತುಂಬಲಾಗದ ನಷ್ಟವೇ.
ಶೈಲಾಸ್ವಾಮಿ

ಬಲು ಬೇಸರದ ಸಂಗತಿ.
ಜಿಟಿ ನಾರಾಯಣ ರಾವ್ ಅವರ ಒಡನೆ ಮೂರು ನಾಕು ದಿನ ಒಡನಾಡುವ ಸಂದರ್ಭ ನನಗೆ ದೊರೆತಿತ್ತು. ಅವರು ನನ್ನ ಮೇಲೆ ಮರೆಯಲಾರದ ಪರಿಣಾಮ ಬೀರಿದ್ದರು.

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

ಸಂಪ್ರದಾಯವಾದಿಗಳು ಎಷ್ಟೇ ಹೊಡಕೊಂಡ್ರೂ ಇವರು ವಿಜ್ಣಾನದ ಸತ್ಯಗಳನ್ನು ನಿರ್ಭಿಢೆಯಿಂದ ಪ್ರತಿಪಾದಿಸುತ್ತಿದ್ದರು.

ಪ್ರೀತಿಯಿಂದ
ಸಿ ಮರಿಜೋಸೆಫ್

ಹಿರಿಯ ಚೇತನ, ತೇನೆ.ನಮ್ಮನ್ನು ಅಗಲಿದ್ದಾರೆ. ಅವರ ಸ್ಪಷ್ಟ ನಿಲವುಗಳನ್ನು ನಾವು ಪಾಡ್ಕ್ಯಾಸ್ಟ್ ನಲ್ಲಿ ಕೇಳಿದ್ದೆವು.
ಅವರ ಆತ್ಮಕ್ಕೆ ಶಾಂತಿ ಕೋರುತ್ತ್ತೇನೆ.