" ಸಂಶೋಧನೆ, ವಿದ್ವತ್ತು, ಸಂಪಾದನೆ, ಬೃಹತ್ ಅವತಾರವಾಗಿ ಕೃತಿರೂಪು ತಳೆದಿದೆ. ಇದು ಒಂದು ಶ್ಲಾಘನೀಯವಾದ ಸಂಗತಿ,"-ಡಾ. ಬಿ. ಎ. ವಿವೇಕ್ ರೈ !

To prevent automated spam submissions leave this field empty.

ಶುಕಯೋಗಿ ಚಾಟು ವಿಠಲನಾಥರ ರಾಮಣ್ಣಯ್ಯ ರಚೇತ, (ತಾಳೆಗರಿಯಲ್ಲಿ ಲಿಖಿತ) ’ಕರ್ಣಾಟಕ ಭಾಗವತ ’ ದ ಎರಡು ಸಂಪುಟಗಳನ್ನು ಸಂಶೋಧಕ, ಲಿಪಿಕಾರ, ಹಾಗೂ ಸಂಪಾದಕ, ಡಾ. ಚಂದ್ರಶೇಖರ್ ರವರು, ಕರ್ಣಾಟದದ ಜನತೆಗೆ ಸಮರ್ಪಿಸಿದ್ದಾರೆ. " ಕರ್ಣಾಟಕ ಭಾಗವತ " ದ ಎರಡು ಬೃಹತ್ ಗ್ರಂಥಗಳ ’ಲೋಕಾರ್ಪಣ ಸಮಾರಂಭ’ , ಮೈಸೂರುನಗರದಲ್ಲಿ ಅತ್ಯಂತ ಯಶಸ್ವಿಯಾಗಿ ನೆರೆವೇರಿತು.

’ ಸಂಶೋಧನೆ, ವಿದ್ವತ್ತು, ಸಂಪಾದನೆ, ಬೃಹತ್ ಅವತಾರವಾಗಿ ಕೃತಿರೂಪು ತಳೆದಿದೆ. ಇದು ಒಂದು ಶ್ಲಾಘನೀಯವಾದ ಸಂಗತಿ,’ ಎಂದು, ಕರ್ಣಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಕುಲಪತಿ, ಡಾ. ಬಿ. ಎ. ವಿವೇಕ್ ರೈ, ಗ್ರಂಥದ ಲೋಕಾರ್ಪಣೆಮಾಡಿದಸಮಯದಲ್ಲಿ ನುಡಿದರು. ’ ಈ ಅಮೆರಿಕನ್ನಡಿಗನ ಸಾಧನೆ ನಿಜಕ್ಕೂ ಅಭಿನಂದನೀಯ ; ಕೃಷ್ಣಾವತಾರಕ್ಕಿಂತ ಹೆಚ್ಚು ಧನ್ಯತೆಯ ಸಂಗತಿ." ಮುಂದೆ ಓದಿ.....

ಕೊಂಡಿ :

http://www.prajavani.net/Content/Jun282008/state2008062785751.asp

ಕರ್ಣಾಟಕ ಭಾಗವತಗ್ರಂಥದ ಬೆಲೆಯಲ್ಲಿ ರಿಯಾಯಿತಿ :

ಸಮಾರಂಭದ ಕೊನೆಯಲ್ಲಿ ಆಹ್ವಾನಿತರಿಗೆಲ್ಲಾ ಕಲ್ಲುಸಕ್ಕರೆ, ದ್ರಾಕ್ಷಿ-ಗೋಡಂಬಿ, ಬಾದಾಮಿ, ಹಾಗೂ ಸಿಹಿಯನ್ನು ವಿತರಿಸಲಾಯಿತು. ಲೋಕಾರ್ಪಣೆಯದಿನದಂದು, ಕರ್ಣಾಟಕ ಭಾಗವತದ ಪ್ರತಿಗಳನ್ನು ರಿಯಾಯಿತಿಯದರದಲ್ಲಿ, ಅಂದರೆ, ೧,೦೦೦ ರೂಪಾಯಿಗಳಿಗೆ ನೀಡಲಾಯಿತು. ಅದರ ಮೂಲಬೆಲೆ, ೧,೫೦೦ ರೂಪಾಯಿಗಳು.

ಇದೇ ತರಹ, ಬೆಂಗಳೂರು ನಗರದಲ್ಲಿ ನಡೆದ ಅತ್ಯಂತ ಜನಾನುರಾಗಿ ಕಾರ್ಯಕ್ರಮವನ್ನು ಕಂಡು ವರದಿಮಾಡಿದ ಶ್ರೀ. ನಟರಾಜ್ ರವರು, ತಮ್ಮ ದಟ್ಸ್ ಕನ್ನಡ ಇ-ಪತ್ರಿಕೆಯ ವರದಿಯಲ್ಲಿ ದಾಖಲಿಸಿದ ಮಾತುಗಳು.

ಇದರ ಬಗ್ಗೆ ಅಂತರಜಾಲದಲ್ಲಿ ಜಾಲಾಡಲು ನಿಮಗೆ ಸಿಗಲಿರುವ ಕೊಂಡಿ :

http://thatskannada.oneindia.in/column/nataraj/2008/0710-karnataka-bhaga...

ಲೇಖನ ವರ್ಗ (Category):