ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪುರಾಣ ಕಥಾಕೋಶ

ಪುಸ್ತಕದ ಲೇಖಕ/ಕವಿಯ ಹೆಸರು
ಮೋಹನ ಕುಂಟಾರ್
ಪ್ರಕಾಶಕರು
ಯಾಜಿ ಪ್ರಕಾಶನ, ಪಟೇಲ ನಗರ, ಹೊಸಪೇಟೆ-೫೮೩೨೦೧.
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೫

ಅದೂರು ಕೆಳಗಿನಮನೆ ಅಪ್ಪೋಜಿರಾವ್ ಜಾದವ್ ಸಂಕಲಿಸಿದ ‘ಪುರಾಣ ಕಥಾಕೋಶ’ ಎನ್ನುವ ಕೃತಿಯನ್ನು ರಚಿಸಿದ್ದಾರೆ ಮೋಹನ ಕುಂಟಾರ್. ಪುರಾಣದ ಕಥೆಗಳ ಬಗ್ಗೆ ಎಷ್ಟೇ ತಿಳಿದುಕೊಂಡರೂ ಇನ್ನಷ್ಟು ತಿಳಿಯಲು ಇದ್ದೇ ಇರುತ್ತದೆ. ಪುರಾಣದ ಯಾವುದೇ ಪಾತ್ರವನ್ನು ಬೇಕಾದರೂ ನೀವು ತೆಗೆದುಕೊಳ್ಳಿ, ಅದಕ್ಕೊಂದು ಸೂಕ್ತವಾದ ಹಿನ್ನಲೆ, ಕಥೆ ಇದ್ದೇ ಇರುತ್ತದೆ. ಈ ರೀತಿಯ ಪುರಾಣ ಕಥೆಗಳನ್ನು ಓದಲು ಬಹಳ ಚೆನ್ನಾಗಿರುತ್ತದೆ.

ಪ್ರಶಂಸನೀಯ ಕೆಲಸಕ್ಕಾಗಿ ಅಭಿನಂದನೆಗಳು

ಕರ್ನಾಟಕದ ಆರೋಗ್ಯ ಇಲಾಖೆ ಮತ್ತು ಆರೋಗ್ಯ ಸಚಿವರಿಗೆ ಸ್ವಲ್ಪ ಕೃತಜ್ಞತಾ ಪೂರ್ವಕ ಧನ್ಯವಾದಗಳನ್ನು ಹೇಳೋಣವೇ… ನಿಜ, ಇದು ಅವರ ಕರ್ತವ್ಯ. ಅದಕ್ಕಾಗಿ ಅವರು ಸರ್ಕಾರಿ ಸಂಬಳವನ್ನು ಪಡೆಯುತ್ತಾರೆ. ಆದರು ಕನಿಷ್ಠ ಈಗಲಾದರೂ ಎಚ್ಚೆತ್ತುಕೊಂಡು ಈ ಕೆಲಸ ಮಾಡುತ್ತಿರುವುದಕ್ಕೆ ಅವರನ್ನು ಪ್ರೋತ್ಸಾಹಿಸುವುದು ನಮ್ಮ ಸಣ್ಣ ಜವಾಬ್ದಾರಿ ಎಂದು ಭಾವಿಸುತ್ತಾ....

Image

ಸ್ಟೇಟಸ್ ಕತೆಗಳು (ಭಾಗ ೧೨೫೧) - ವರ್ತನೆ

ಅಮ್ಮ‌ ನನಗ್ಯಾಕೆ‌ ಹೊಡೆಯುತ್ತಿದ್ದಾರೆ, ಅರ್ಥವೇ ಅಗುತ್ತಿಲ್ಲ. ಇತ್ತೀಚಿಗೆ ನಮ್ಮೂರಿನ ವಾರ್ಷಿಕೋತ್ಸವದಲ್ಲಿ ನಮ್ಮ ತಂಡದ ನೃತ್ಯ ಇತ್ತು. ಅದಕ್ಕೆ ತಿಂಗಳಿನಿಂದ ಮನೆಯಲ್ಲಿ ಅಭ್ಯಾಸವೂ ನಡೆದಿತ್ತು. ಅಮ್ಮನೇ ಆ ನೃತ್ಯವನ್ನು  ಅಭ್ಯಾಸವೂ ಮಾಡಿಸಿದ್ದರು. ಆದರೆ ಆ ದಿನ ವಾರ್ಷಿಕೋತ್ಸವದಲ್ಲಿ ನೃತ್ಯ ಮಾಡುವುದ್ದಕ್ಕೆ ವೇದಿಕೆಯ ಮೇಲೆ ಹತ್ತಿದವನಿಗೆ ಒಮ್ಮೆಲೆ‌ ಭಯವಾಯಿತು.

Image

ಬಾಳೆಹಣ್ಣಿನ ಬನ್ಸ್

Image

ಬಾಳೆಹಣ್ಣಿನ ತಿರುಳಿಗೆ ಉಪ್ಪು, ಸಕ್ಕರೆ, ೧ ಚಮಚ ಎಣ್ಣೆ, ಚಿಟಿಕೆ ಸೋಡಾ, ಮೈದಾ ಸೇರಿಸಿ ಚೆನ್ನಾಗಿ ಕಲಸಿ. ೭-೮ ಗಂಟೆ ಬಿಟ್ಟು ತಟ್ಟಿ, ಎಣ್ಣೆಯಲ್ಲಿ ಕರಿಯಿರಿ. ಇದನ್ನು ಯಾವುದೇ ಸಾಂಬಾರ್ ಜೊತೆ ತಿನ್ನಬಹುದು. ಅಥವಾ ಟೀ, ಕಾಫಿ ಜೊತೆ ಹಾಗೆಯೇ ತಿನ್ನಲೂ ಚೆನ್ನಾಗಿರುತ್ತದೆ. ಇದು ಕರಾವಳಿ ಜನರ ಅಚ್ಚುಮೆಚ್ಚಿನ ತಿಂಡಿ.

ಬೇಕಿರುವ ಸಾಮಗ್ರಿ

ಬಾಳೆಹಣ್ಣಿನ ತಿರುಳು ೧ ಕಪ್, ಮೈದಾಹಿಟ್ಟು ೨ ಕಪ್, ಸಕ್ಕರೆ ಸ್ವಲ್ಪ, ಎಣ್ಣೆ ಕರಿಯಲು, ಸೋಡಾ ಚಿಟಿಕೆ, ಉಪ್ಪು ರುಚಿಗೆ.

ಮನಸ್ಸು

ಮನಸ್ಸು ಎಂಬ ಪದಕ್ಕೆ ವ್ಯಾಪಕ ಅರ್ಥಗಳಿವೆ. ಚಿತ್ತ, ಗಮನ, ಆತ್ಮ, ಅಂತರಂಗ, ಭಾವನೆ… ಇವೆಲ್ಲವೂ ಮನಸ್ಸಿಗೆ ಪೂರಕವಾದ ಸಂಗತಿಗಳು. ಚಂಚಲ ಮನಸ್ಸು, ನಿರಾಳ ಮನಸ್ಸು, ಶುದ್ಧ ಮನಸ್ಸು, ಮಲಿನ ಮನಸ್ಸು, ಕುತ್ಸಿತ ಮನಸ್ಸು, ಕೊಳಕು ಮನಸ್ಸು, ಕ್ರೂರ ಮನಸ್ಸು, ಮೃದು ಮನಸ್ಸು, ಶ್ರೀಮಂತ ಮನಸ್ಸು, ಕಳ್ಳಮನಸ್ಸು ಹೀಗೆ ಮನೋಧರ್ಮವನ್ನನುಸರಿಸಿ ಮನಸ್ಸನ್ನು ವಿಶ್ಲೇಷಿಸುತ್ತೇವೆ.

Image

ಸದ್ಗುರು ಜಗ್ಗಿ ವಾಸುದೇವ್ (ಭಾಗ 2)

ಅಲ್ಲದೆ ಅಧ್ಯಾತ್ಮ ಬಿಟ್ಟು ಸಮಾಜ ಸೇವೆ ಮತ್ತು ವ್ಯಾಪಾರದ ಮುಖವಾಡ ಧರಿಸಿದರೆ ಅಧ್ಯಾತ್ಮದ ಆಳ ಅರಿವಾಗುವುದು ಮತ್ತು ಅದನ್ನು ಸಾಮಾನ್ಯ ಜನರಿಗೆ ತಲುಪಿಸುವವರು ಯಾರು. ಯಾವುದೇ ಕಾರಣದಿಂದ ಖಾಸಗಿ ಸಂಸ್ಥೆ ಮತ್ತು ವ್ಯಕ್ತಿಗಳು ಜನರಿಂದ ಹಣ ವಸೂಲಿ ಮಾಡುವುದು ಈ ದೇಶದಲ್ಲಿ ಎಷ್ಟೊಂದು ಅಪಾಯಕಾರಿ ನಿಮಗೆ ತಿಳಿದಿಲ್ಲವೇ?

Image

ಲವಂಗದ ನೀರಿನ ಬಹು ಉಪಯೋಗಗಳು

ಕಳೆದ ವಾರ ನಾವು ದಾಲ್ಚಿನ್ನಿ ನೀರಿನ ಉಪಯೋಗದ ಬಗ್ಗೆ ಹಾಗೂ ಅದನ್ನು ತಯಾರಿಸುವ ವಿಧಾನವನ್ನು ಕಂಡುಕೊಂಡೆವು. ಈ ವಾರ ಮತ್ತೊಂದು ಬಹು ಉಪಕಾರಿ ಸಾಂಬಾರ ಪದಾರ್ಥವಾದ ಲವಂಗದ ನೀರು ತಯಾರಿಸುವ ಬಗ್ಗೆ ಹಾಗೂ ಅದರ ಬಹು ಉಪಯೋಗಗಳ ಬಗ್ಗೆ ತಿಳಿದುಕೊಳ್ಳೋಣ. ಮೊದಲಿಗೆ ಲವಂಗದ ನೀರನ್ನು ಹೇಗೆ ತಯಾರಿಸುವುದು ಎಂದು ನೋಡೋಣ.

Image

ಪಶ್ಚಿಮಘಟ್ಟಕ್ಕೆ ಅಪಾಯ ತಟ್ಟದಿರಲಿ

ಹಿಮಾಲಯ ಪರ್ವತ ಶ್ರೇಣಿಗಿಂತಲೂ ಪುರಾತನವಾದ ಪಶ್ಚಿಮ ಘಟ್ಟ ಶ್ರೇಣಿ ಜಗತ್ತಿಗೆ ನೀಡುತ್ತಿರುವ ಕೊಡುಗೆ ಅಪೂರ್ವ.

Image

ಸದ್ಗುರು ಜಗ್ಗಿ ವಾಸುದೇವ್ (ಭಾಗ 1)

ಜಗತ್ತಿನ ಇತಿಹಾಸದಲ್ಲಿ ಭಾರತದ ಆಧ್ಯಾತ್ಮಿಕತೆಗೆ ಸಾಕಷ್ಟು ತೂಕವಿದೆ. ಇಲ್ಲಿ ಬೆಳೆದ ಆಧ್ಯಾತ್ಮಿಕ ಚಿಂತಕರು ಬದುಕಿನ ನೆಮ್ಮದಿಗೆ, ಸಾರ್ಥಕತೆಗೆ ಸಾಕಷ್ಟು ದಾರಿಗಳನ್ನು ತಿಳಿಸಿಕೊಟ್ಟಿದ್ದಾರೆ. ಬುದ್ಧರಿಂದ ಸಿದ್ದೇಶ್ವರ ಸ್ವಾಮಿಗಳವರೆಗೆ, ಹಾಗೆಯೇ ಪೌರಾಣಿಕ ರಾಮ, ಕೃಷ್ಣ ಮುಂತಾದ ಹಲವಾರು ವ್ಯಕ್ತಿಗಳ ಮೂಲಕ ಆಧ್ಯಾತ್ಮಿಕವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತದೆ.

Image