ಇತ್ತೀಚೆಗೆ ಸೇರಿಸಿದ ಪುಟಗಳು

ರೋಸ್ ಮೇರಿ ಸಸ್ಯದ ಹೆಸರನ್ನು ಬಹಳಷ್ಟು ಮಂದಿ ಕೇಳಿಯೇ ಇರುತ್ತೀರಿ. ಇದನ್ನು ಸಾಂಬಾರ ಪದಾರ್ಥವಾಗಿಯೂ ಉಪಯೋಗಿಸುತ್ತಾರೆ. ಬಹಳಷ್ಟು ಮಂದಿ ಇದರ ಎಣ್ಣೆ ಹಾಗೂ ಹುಡಿಯನ್ನು ನೋಡಿರಲೂ ಬಹುದು. ಆದರೆ ಗಿಡವನ್ನು, ಹೂವನ್ನು ನೋಡಿರುವವರು ಕಮ್ಮಿ. ರೋಸ್ ಮೇರಿ ಗಿಡದ ಬಗ್ಗೆ ಹಾಗೂ ಅದರ ಉಪಯೋಗಗಳ ಬಗ್ಗೆ ಸ್ವಲ್ಪ ಮಾಹಿತಿ ಪಡೆಯೋಣ.

ರೋಸ್ ಮೇರಿ ಗಿಡವನ್ನು ಭಾರತದ ಬಹುತೇಕ ಭಾಷೆಗಳಲ್ಲಿ ರೋಸ್ ಮೇರಿ (Rosemary) ಎಂದೇ ಕರೆಯುತ್ತಾರೆ. ಬ್ರಿಟನ್ ಹಾಗೂ ಇಟಲಿಯ ಜನರಿಗೆ ಈ ಸಸ್ಯ…ಮುಂದೆ ಓದಿ...

19 views
Sat, 11/21/2020 - 15:40

೨೯.ಜಗತ್ತಿನ ಅಪರೂಪದ ದೈತ್ಯ ಪ್ರಾಣಿ ಏಷ್ಯಾದ ಆನೆ
ಅತ್ಯಧಿಕ ಸಂಖ್ಯೆಯ ಏಷ್ಯಾದ ಆನೆಗಳು ಭಾರತದಲ್ಲಿವೆ. ಗಾತ್ರದಲ್ಲಿ ಇವು ಆಫ್ರಿಕಾದ ಆನೆಗಳಿಗಿಂತ ಸಣ್ಣವು. ಇವುಗಳ ಸೊಂಡಿಲುಗಳ ತುದಿಯಲ್ಲಿರುವ ಪುಟ್ಟ ಬೆರಳಿನಂತಹ ಭಾಗದಿಂದ ಇವು ಅತ್ಯಂತ ಸಣ್ಣ ವಸ್ತುಗಳನ್ನೂ ಎತ್ತಿಕೊಳ್ಳಬಲ್ಲವು. ಏಷ್ಯಾದ ಗಂಡಾನೆಗಳಿಗೆ ಮಾತ್ರ ಎರಡೆರಡು ದಂತಗಳಿವೆ.

ಈ ಆನೆಗಳು ದಕ್ಷಿಣ ಭಾರತದ ಮತ್ತು ಈಶಾನ್ಯ ಭಾರತದ ಕಾಡುಗಳಲ್ಲಿ ಗುಂಪುಗುಂಪಾಗಿ ವಾಸ ಮಾಡುತ್ತವೆ. ಇವು ಸಣ್ಣ ಮರಗಳನ್ನೂ ದೊಡ್ಡ ಮರಗಳ ಕೊಂಬೆಗಳನ್ನೂ ನೆಲಕ್ಕೆಳೆದು ಎಲೆಗಳನ್ನು ತಿನ್ನುತ್ತವೆ. ಕಾಡಿನಲ್ಲಿ ಇವು ಸಾಗಿದ ದಾರಿ ಇತರ ಪ್ರಾಣಿಗಳಿಗೂ ದಾರಿಯಾಗುತ್ತದೆ. "…ಮುಂದೆ ಓದಿ...

11 views
Fri, 11/20/2020 - 22:29

ಮಂಗಳೂರಿನ ಹೃದಯಭಾಗದಲ್ಲಿ ಒಂದು ರಸ್ತೆ ಇದೆ. ಅದನ್ನು ಎಲ್ಲರೂ ಕೆ.ಎಸ್. ಆರ್. ರಸ್ತೆ  ಅಥವಾ ಕೆ.ಎಸ್. ರಾವ್ ರಸ್ತೆ ಎಂದು ಕರೆಯುತ್ತಾರೆ. ಅದರ ವಿಸ್ತರಣಾ ರೂಪ ಹಲವರಿಗೆ ಮರೆತೇ ಹೋಗಿದೆ ಎಂದು ಕಾಣುತ್ತದೆ. ಮಹಾತ್ಮಾ ಗಾಂಧಿ ರಸ್ತೆ ಎಂಜಿ ರಸ್ತೆ ಆದಂತೆ ಮುಂದೊಂದು ದಿನ ಅಪ್ರತಿಮ ಸ್ವಾತಂತ್ರ್ಯ ಯೋಧ, ಸಮಾಜ ಸೇವಕ ಕಾರ್ನಾಡು ಸದಾಶಿವ ರಾವ್ ಅವರನ್ನು ನಮ್ಮ ಮುಂದಿನ ಪೀಳಿಗೆ ಕೇವಲ ಕೆ.ಎಸ್. ಆರ್ ಎಂದು ಗುರುತಿಸತೊಡಗುತ್ತದೆ ಎಂಬುದೇ ಬೇಸರದ ಸಂಗತಿ ಅಲ್ಲವೇ? ನಮ್ಮ ಸರಕಾರಗಳಿಗೂ ಯಾವುದಾದರೂ ರಸ್ತೆಗೆ, ವೃತ್ತಕ್ಕೆ ಅಥವಾ ಚೌಕಕ್ಕೆ ಮಹನೀಯರ ಹೆಸರು ಇಡಲಷ್ಟೇ ಆತುರ. ಆ…ಮುಂದೆ ಓದಿ...

26 views
Fri, 11/20/2020 - 09:29

ಅಲೆಕ್ಸಾಂಡರ್ ‘ದಿ ಗ್ರೇಟ್' ಎಂಬ ಗ್ರೀಕ್ (ಗ್ರೀಸ್) ಚಕ್ರವರ್ತಿಯ ಬಗ್ಗೆ ಇತಿಹಾಸ ಜ್ಞಾನವಿರುವ ಯಾರಿಗೆ ತಾನೇ ಗೊತ್ತಿಲ್ಲ? ಇಡೀ ವಿಶ್ವವನ್ನು ಜಯಿಸಿ ‘ವಿಶ್ವ ವಿಜೇತ’ನಾಗಬೇಕೆಂಬ ಕನಸು ಹೊತ್ತ ಅಲೆಕ್ಸಾಂಡರ್ ಅದರಲ್ಲಿ ಅಸಫಲವಾಗುತ್ತಾನೆ. ಅಲೆಕ್ಸಾಂಡರ್ ಬದುಕಿದ್ದು ಕೇವಲ ೩೩ ವರ್ಷ ಮಾತ್ರ. ಆದರೆ ಅವನ ಸಾಹಸ ಕಥೆಗಳು ಈಗಲೂ ಜನಜನಿತ. ಇವನು ಭಾರತದಲ್ಲೂ ಸುಮಾರು ೧೯ ತಿಂಗಳು ತನ್ನ ದಂಡಯಾತ್ರೆಯನ್ನು ಮಾಡಿದ್ದ. ಅವನಿಗೆ ಜಮ್ಮುವಿನ ರಾಜ ಪುರೂರವ ಅಥವಾ ಪೋರಸ್ ಮಾತ್ರ ತೀವ್ರ ಪೈಪೋಟಿ ನೀಡಿದ್ದ. ಅಲೆಕ್ಸಾಂಡರ್ ವಿರುದ್ಧ ವೀರಾವೇಷದಿಂದ ಹೋರಾಡಿದ್ದ ವೀರ ಪುರೂರವ. ಆ…ಮುಂದೆ ಓದಿ...

40 views
Thu, 11/19/2020 - 16:00

ಭಗವಾನ್ ಬುದ್ಧನಿಂದ ಸ್ಥಾಪಿತವಾದ ಬೌದ್ಧ ಧರ್ಮವು ಪ್ರಪಂಚದ ಎಲ್ಲೆಡೆ ಹಬ್ಬಿದೆ. ಬೌದ್ಧ ಭಿಕ್ಷುಗಳ ಬಗ್ಗೆ ಹಲವಾರು ಕಥೆಗಳಿವೆ. ಅವರ ಅಖಂಡ ನಿರ್ಲಿಪ್ತತೆಯು ಸಾಮಾನ್ಯ ಜನರನ್ನು ಹುಬ್ಬೇರಿಸುವಂತೆ ಮಾಡುತ್ತದೆ. ಭಗವಾನ್ ಬುದ್ಧನು ‘ಆಸೆಯೇ ದುಃಖಕ್ಕೆ ಮೂಲ' ಎಂದು ಹೇಳಿದ. ಅದರಂತೆ ಬೌದ್ಧ ಭಿಕ್ಷುಗಳು ತಮ್ಮ ಜೀವನ ಪರ್ಯಂತ ಅತ್ಯಂತ ನಿರ್ಮೋಹಿಗಳಾಗಿ ಬದುಕುತ್ತಿದ್ದಾರೆ. ಈ ಹಂತ ತಲುಪಲು ಅವರು ಅನೇಕ ಸಾಧನೆಗಳನ್ನು ಮಾಡಬೇಕಾಗುತ್ತದೆ. ಸುಖಾಸುಮ್ಮನೇ ಯಾರಿಗೂ ಪ್ರಾಪಂಚಿಕ ಜೀವನದ ಮೋಹದಿಂದ ಹೊರ ಬರಲು ಸಾಧ್ಯವಾಗುವುದಿಲ್ಲ. ಹಲವಾರು ಮಹನೀಯರು ಈ ಧರ್ಮದ ಗುಣಗಳಿಂದ ಪ್ರೇರಿತರಾಗಿ…ಮುಂದೆ ಓದಿ...

23 views
Wed, 11/18/2020 - 14:26

ಝೆನ್ ವಿದ್ಯಾರ್ಥಿ ಯಮಒಕನಿಗೆ ಎಲ್ಲವನ್ನೂ ತಿಳಿಯಬೇಕೆಂಬ ಬಯಕೆ. ಒಬ್ಬರಾದ ನಂತರ ಇನ್ನೊಬ್ಬ ಝೆನ್ ಗುರುಗಳನ್ನು ಕಂಡು ಮುಂದುವರಿಯುತ್ತಿದ್ದ.

ಕೊನೆಗೆ ಝೆನ್ ಗುರು ಡೊಕುಓನ್ ಅವರ ದರ್ಶನ ಪಡೆದ. ತನ್ನ ಬಗ್ಗೆ ಅವರಿಗೆ ತಿಳಿಸುತ್ತಾ, ತನ್ನ ಜ್ನಾನ ಪ್ರದರ್ಶಿಸಲಿಕ್ಕಾಗಿ ಹೀಗೆಂದ, "ಗುರುಗಳೇ, ನಮನಗಳು. ನಾನು ತಿಳಿದದ್ದು ಏನೆಂದರೆ ಮನಸ್ಸು ಎಂಬುದಿಲ್ಲ, ದೇಹ ಎಂಬುದೂ ಇಲ್ಲ. ಒಳ್ಳೆಯದು, ಕೆಟ್ಟದ್ದು ಎರಡೂ ಇಲ್ಲ. ಅರಿವು ಎಂಬುದಿಲ್ಲ, ಭ್ರಮೆ ಎಂಬುದೂ ಇಲ್ಲ. ನಾವು ನೋಡುತ್ತೇವೆ ಹಾಗೂ ಅನುಭವಿಸುತ್ತೇವೆ ಅನ್ನೋದೂ ಸತ್ಯವಲ್ಲ. ನಮಗೆ ಕಾಣುವ, ನಮ್ಮ ಗ್ರಹಿಕೆಗೆ ಸಿಗುವ ಯಾವ ವಸ್ತುವಿಗೂ ಅಸ್ತಿತ್ವವಿಲ್ಲ. ನಿಜವಾಗಿ…ಮುಂದೆ ಓದಿ...

17 views
Wed, 11/18/2020 - 14:24

ಕ್ಯಾಪ್ಟನ್ ಗೋಪಿನಾಥ್ ನಮ್ಮ ಹೆಮ್ಮೆಯ ಕನ್ನಡಿಗರು. ಏರ್ ಡೆಕ್ಕನ್ ವಿಮಾನಯಾನ ಸಂಸ್ಥೆಯನ್ನು ಸ್ಥಾಪಿಸಿ ಜನ ಸಾಮಾನ್ಯರೂ ವಿಮಾನದಲ್ಲಿ ಹೋಗಬಹುದೆಂಬ ಕನಸನ್ನು ನನಸು ಮಾಡಿದವರು. ಮೊನ್ನೆ ಕ್ಯಾಪ್ಟನ್ ಗೋಪಿನಾಥ್ ಅವರ ಒಂದು ಸಂದರ್ಶನ ನೋಡುತ್ತಿದ್ದೆ.‌ ಅವರು ತಮ್ಮ ಡೆಕ್ಕನ್ ಹೆಲಿಕಾಪ್ಟರ್ ಸರ್ವಿಸಸ್ ಸಂಸ್ಥೆಯಲ್ಲಿ ಆದ ಒಂದು ಗ್ರಾಹಕ ಅನುಭವದ ಬಗ್ಗೆ ಹೇಳಿದ್ದು ಹೀಗೆ...

‘ಒಂದು ದಿನ ಅಮೇರಿಕದಿಂದ ಮಂಜುನಾಥ್ ಅನ್ನುವವರ ಕರೆ ಬಂತು. ಅಲ್ಲಿ ಜಿ.ಎಂ ಸಂಸ್ಥೆಯಲ್ಲಿ ಜನರಲ್…ಮುಂದೆ ಓದಿ...

16 views
Tue, 11/17/2020 - 16:26

ದೇವರು ಮಾನವನಿಗೆ ನೀಡಿದ ಎಲ್ಲಾ ಅಂಗಾಂಗಗಳು ಅತ್ಯಮೂಲ್ಯವೇ. ಆದರೆ ಕಣ್ಣು ಅವುಗಳಲ್ಲಿ ಶ್ರೇಷ್ಣವಾದ ಅಂಗ. ಅದಕ್ಕೇ ಹೇಳುವುದು ನೇತ್ರದಾನ ಮಹಾದಾನ ಎಂದು. ನಾವು ಸತ್ತ ನಂತರ ಮಣ್ಣಲ್ಲಿ ಮಣ್ಣಾಗುವ ಅಥವಾ ಸುಟ್ಟು ಬೂದಿಯಾಗುವ ಕಣ್ಣುಗಳನ್ನು ದಾನವಾಗಿ ನೀಡಿದರೆ ಇನ್ನೂ ಇಬ್ಬರು ನೇತ್ರಹೀನರು ಈ ಸುಂದರ ಪ್ರಪಂಚವನ್ನು ನೋಡಬಹುದು. ವೈದ್ಯರು ದೇವರ ಪ್ರತಿರೂಪ ಎನ್ನುತ್ತಾರೆ. ಹಲವಾರು ವೈದ್ಯರು ತಮ್ಮ ಕಾರ್ಯದ ಮೂಲಕ ಈ ಮಾತನ್ನು ನಿಜವಾಗಿಸಿದ್ದಾರೆ. ಇಂತಹದ್ದೇ ಓರ್ವ ಕಣ್ಣಿನ ವೈದ್ಯರ ಬಗ್ಗೆ ನಾನಿಂದು ನಿಮಗೆ ಕಿರು ಲೇಖನದ ಮೂಲಕ ತಿಳಿಸುವೆ.ಮುಂದೆ ಓದಿ...

35 views
Tue, 11/17/2020 - 15:44

ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಇನ್ನಷ್ಟು “ಜನಸ್ನೇಹಿ"ಯಾಗಿಸುವ ಮತ್ತು ಕೊರೋನಾ ವೈರಸ್ ಹಾವಳಿಯ ಈ ಸಮಯದಲ್ಲಿ ಮಾನಸಿಕ ಒತ್ತಡ ನಿರ್ವಹಣೆಯ ವಿಧಾನಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಮಂಗಳೂರಿನ ಜಿಲ್ಲಾ ಪೊಲೀಸ್ ಕಚೇರಿ ವತಿಯಿಂದ ಉಪನ್ಯಾಸ ಕಾರ್ಯಕ್ರಮವನ್ನು ೯ ನವಂಬರ್ ೨೦೨೦ರಂದು ಆಯೋಜಿಸಲಾಗಿತ್ತು.

ಮಂಗಳೂರಿನ ಪಾಂಡೇಶ್ವರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಸಭಾಂಗಣದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪ್ರೇರಣಾ ತರಬೇತಿದಾರರೂ “ಮನಸ್ಸಿನ ಮ್ಯಾಜಿಕ್” ಪುಸ್ತಕದ ಲೇಖಕರೂ ಆದ ಅಡ್ಡೂರು ಕೃಷ್ಣ ರಾವ್ ಮಾನಸಿಕ ಒತ್ತಡ ನಿರ್ವಹಣೆ ಮತ್ತು ವೃತ್ತಿ ಜೀವನದ ಸಾಧನೆಗಾಗಿ "ಮನಸ್ಸಿನ…ಮುಂದೆ ಓದಿ...

38 views
Mon, 11/16/2020 - 20:33

ನೀವು ಯಾವುದೋ ಕೆಲಸದ ಮೇಲೆ ವಿದೇಶಕ್ಕೆ ಹೋಗಿರುತ್ತೀರಿ. ಅಲ್ಲಿ ಎಲ್ಲಿ ನೋಡಿದರೂ ಹೊಸ ಮುಖ. ಹೊಸ ಜನ. ಹೊಸ ಭಾಷೆ, ಆಚಾರ ವಿಚಾರ. ಅಲ್ಲಿನ ಹೋಟೇಲ್ ಹೊಕ್ಕು ನೀವು ಕಾಫಿ ಹೀರುತ್ತಾ ಕುಳಿತಿರುವಾಗ ನಿಮ್ಮ ಹಿಂದಿನಿಂದ ‘ಕನ್ನಡ’ ಭಾಷೆಯ ಮಾತು ನಿಮಗೆ ಕಿವಿಗೆ ಬೀಳುತ್ತದೆ. ಕೂಡಲೇ ನೀವು ಹಿಂದಕ್ಕೆ ತಿರುಗಿ ನೋಡುತ್ತೀರಿ. ಅಲ್ಲೊಂದು ಕುಟುಂಬ ಇದೆ. ಅಪ್ಪ, ಅಮ್ಮ ಹಾಗೂ ಮಕ್ಕಳು. ಎಲ್ಲರೂ ಕನ್ನಡದಲ್ಲಿ ಮಾತನಾಡುತ್ತಿದ್ದಾರೆ. ನಿಮಗೆ ಆಗ ಬೆಂಗಳೂರಿನ ಮೆಜೆಸ್ಟಿಕ್ ನ ಹೋಟೇಲ್ ನಲ್ಲಿ ಕಾಫಿ ಕುಡಿಯುವ ಅನುಭವವಾಗುತ್ತದೆ. ಅಲ್ಲವೇ? ನೀವೇ ಅವರ ಬಳಿ ಹೋಗಿ ನೀವು ಕರ್ನಾಟಕದವರಾ? ಎಂದು…ಮುಂದೆ ಓದಿ...

60 views
Mon, 11/16/2020 - 17:32