ಇತ್ತೀಚೆಗೆ ಸೇರಿಸಿದ ಪುಟಗಳು

 • ರಾಬಿನ್ ಹುಡ್ ಕಥೆಗಳಲ್ಲಿ ಸತ್ಯ ಎಷ್ಟು?
  Ashwin Rao K P

  ಬಾಲ್ಯದಲ್ಲಿ ನಾವು ರಾಮಾಯಣ, ಮಹಾಭಾರತ ಕಥೆಗಳ ಜೊತೆಗೆ ಕೆಲವು ಇಂಗ್ಲೀಷ್ ಕಥೆಗಳನ್ನೂ ಕೇಳುತ್ತಾ ಬೆಳೆದಿದ್ದೇವೆ. ಅವುಗಳಲ್ಲಿ ಪ್ರಮುಖವಾದದ್ದು ರಾಬಿನ್ ಹುಡ್. ಇವನು ಕಾಡಿನಲ್ಲಿ ವಾಸಿಸುತ್ತಾ, ಶ್ರೀಮಂತರ ಸಂಪತ್ತನ್ನು ದರೋಡೆ ಮಾಡುತ್ತಾ ಅವುಗಳನ್ನು ಬಡವರಿಗೆ ಹಂಚುತ್ತಿದ್ದ ದಯಾಮಯಿ. ಆದರೆ ಯಾವತ್ತೂ ರಾಜನ ಸೈನಿಕರಿಗೆ ಅಥವಾ ಕೋತ್ವಾಲರ ಕೈಗೆ ಸಿಗುತ್ತಲೇ ಇರಲಿಲ್ಲ. ರಾಬಿನ್ ಹುಡ್ ಕಥಾನಕವನ್ನು ಕೇಳುವಾಗ ಈಗಲೂ ರೋಮಾಂಚನವಾಗುತ್ತದೆ. ನಿಜವಾಗಿಯೂ ರಾಬಿನ್ ಹುಡ್ ಎಂಬ ವ್ಯಕ್ತಿ ಜೀವಂತವಾಗಿದ್ದನೇ? ಅಥವಾ ಕಲ್ಪನಾ ಲೋಕದ ವ್ಯಕ್ತಿಯೇ? ಹಲವಾರು ಗೊಂದಲಗಳಿವೆ. ಕೆಲವರು ರಾಬಿನ್…

  ಮುಂದೆ ಓದಿ...
 • ಒಂದು ನೀತಿಕಥೆ - ಇಬ್ಬರು ರಾಜರು
  Kavitha Mahesh

  ಒಮ್ಮೆ ಇಬ್ಬರು ನೆರೆ ಹೊರೆಯ ರಾಜರು ರಥದಲ್ಲಿ ಪ್ರಯಾಣಿಸುತ್ತ ಒಂದು ಇಕ್ಕಟ್ಟಾದ ಸೇತುವೆಯ ಮೇಲೆ ಎದಿರಾಗುತ್ತಾರೆ. ಒಬ್ಬರು ಮುಂದೆ ಹೋಗಬೇಕಾದರೆ, ಇನ್ನೊಬ್ಬ ರಾಜನು ತನ್ನ ರಥವನ್ನು ಹಿಂತೆಗೆಯಬೇಕು. ಆದರೆ ಇಬ್ಬರು ರಾಜರೂ ಸಹ ರಥವನ್ನು ಹಿಂದೆಗೆಯಲು ಸಿದ್ಧರಿರಲಿಲ್ಲ. ಕೊನೆಗೆ ಇಬ್ಬರ ರಾಜರ ರಥದ ಸಾರಥಿಯರು ಒಂದು ಒಪ್ಪಂದಕ್ಕೆ ಬಂದರು. ಇಬ್ಬರೂ ತಮ್ಮ ರಾಜನು ಮಾಡಿದ ಸತ್ಕಾರ್ಯಗಳನ್ನು ಕುರಿತು ಹೇಳುವುದು. ಯಾವ ರಾಜನು ಹೆಚ್ಚಿನ ಸತ್ಕಾರ್ಯಗಳನ್ನು ಮಾಡಿರುತ್ತಾರೋ ಅಂತಹ ರಾಜನು ಮುಂದೆ ಹೋಗುವುದು. ಇನ್ನೊಬ್ಬ ರಾಜನು ರಥವನ್ನು ಹಿಂತೆಗೆದುಕೊಳ್ಳುವುದು.

  ಮುಂದೆ ಓದಿ...
 • ಎರಡು ಟೆಡ್ದಿ ಕರಡಿಗಳ ಕಿತಾಪತಿ
  addoor

  ಟೋರಾ ಮತ್ತು ಬೋರಾ ಎಂಬ ಎರಡು ಟೆಡ್ದಿ ಕರಡಿಗಳು ಜೀವದ ಗೆಳೆಯರು. ಅವರಿಬ್ಬರೂ ಸ್ವೀಟಿ ಎಂಬ ಪುಟ್ಟ ಹುಡುಗಿಯೊಂದಿಗೆ ಇದ್ದರು. ಅವಳು ಅವರನ್ನು ತನ್ನ ಹಾಸಿಗೆಯಲ್ಲೆಯೇ ಇಟ್ಟಿದ್ದಳು.

  ಅವಳ ತಲೆದಿಂಬುಗಳನ್ನೇರಿದರೆ ಕಿಟಕಿಯ ಮೂಲಕ ಅವುಗಳಿಗೆ ಹೊರಗಿನ ಉದ್ಯಾನ ಕಾಣಿಸುತ್ತಿತ್ತು. ಹಂಗಾಮಿನಿಂದ ಹಂಗಾಮಿಗೆ ಬಣ್ಣ ಬದಲಾಯಿಸುವ ಆ ಉದ್ಯಾನದ ಗಿಡಗಳನ್ನು ನೋಡುವುದೆಂದರೆ ಅವುಗಳಿಗೆ ಖುಷಿಯೋ ಖುಷಿ.

  ಚಳಿಗಾಲದ ಒಂದು ಮುಂಜಾವದಲ್ಲಿ ಸ್ವೀಟಿ ಹಾಸಿಗೆಯಿಂದ ಎದ್ದು, ಪರದೆಗಳನ್ನು ಪಕ್ಕಕ್ಕೆ ಸರಿಸಿ, ಕಿಟಕಿಯಿಂದ ಹೊರಗೆ ನೋಡುತ್ತಾ “ಓ, ಹಿಮ ಬೀಳುತ್ತಿದೆ” ಎಂದು ಕೂಗಿದಳು.

  ಅವಳು ತನ್ನ ಕಪಾಟಿನ ಬಾಗಿಲು…

  ಮುಂದೆ ಓದಿ...
 • ಬಹು ಉಪಯೋಗಿ ರೋಸ್ ಮೇರಿ ಸಸ್ಯ
  Ashwin Rao K P

  ರೋಸ್ ಮೇರಿ ಸಸ್ಯದ ಹೆಸರನ್ನು ಬಹಳಷ್ಟು ಮಂದಿ ಕೇಳಿಯೇ ಇರುತ್ತೀರಿ. ಇದನ್ನು ಸಾಂಬಾರ ಪದಾರ್ಥವಾಗಿಯೂ ಉಪಯೋಗಿಸುತ್ತಾರೆ. ಬಹಳಷ್ಟು ಮಂದಿ ಇದರ ಎಣ್ಣೆ ಹಾಗೂ ಹುಡಿಯನ್ನು ನೋಡಿರಲೂ ಬಹುದು. ಆದರೆ ಗಿಡವನ್ನು, ಹೂವನ್ನು ನೋಡಿರುವವರು ಕಮ್ಮಿ. ರೋಸ್ ಮೇರಿ ಗಿಡದ ಬಗ್ಗೆ ಹಾಗೂ ಅದರ ಉಪಯೋಗಗಳ ಬಗ್ಗೆ ಸ್ವಲ್ಪ ಮಾಹಿತಿ ಪಡೆಯೋಣ.

  ರೋಸ್ ಮೇರಿ ಗಿಡವನ್ನು ಭಾರತದ ಬಹುತೇಕ ಭಾಷೆಗಳಲ್ಲಿ ರೋಸ್ ಮೇರಿ (Rosemary) ಎಂದೇ ಕರೆಯುತ್ತಾರೆ. ಬ್ರಿಟನ್ ಹಾಗೂ ಇಟಲಿಯ ಜನರಿಗೆ ಈ ಸಸ್ಯ…

  ಮುಂದೆ ಓದಿ...
 • ನಮ್ಮ ಹೆಮ್ಮೆಯ ಭಾರತ (ಭಾಗ 29 - 30)
  addoor

  ೨೯.ಜಗತ್ತಿನ ಅಪರೂಪದ ದೈತ್ಯ ಪ್ರಾಣಿ ಏಷ್ಯಾದ ಆನೆ
  ಅತ್ಯಧಿಕ ಸಂಖ್ಯೆಯ ಏಷ್ಯಾದ ಆನೆಗಳು ಭಾರತದಲ್ಲಿವೆ. ಗಾತ್ರದಲ್ಲಿ ಇವು ಆಫ್ರಿಕಾದ ಆನೆಗಳಿಗಿಂತ ಸಣ್ಣವು. ಇವುಗಳ ಸೊಂಡಿಲುಗಳ ತುದಿಯಲ್ಲಿರುವ ಪುಟ್ಟ ಬೆರಳಿನಂತಹ ಭಾಗದಿಂದ ಇವು ಅತ್ಯಂತ ಸಣ್ಣ ವಸ್ತುಗಳನ್ನೂ ಎತ್ತಿಕೊಳ್ಳಬಲ್ಲವು. ಏಷ್ಯಾದ ಗಂಡಾನೆಗಳಿಗೆ ಮಾತ್ರ ಎರಡೆರಡು ದಂತಗಳಿವೆ.

  ಈ ಆನೆಗಳು ದಕ್ಷಿಣ ಭಾರತದ ಮತ್ತು ಈಶಾನ್ಯ ಭಾರತದ ಕಾಡುಗಳಲ್ಲಿ ಗುಂಪುಗುಂಪಾಗಿ ವಾಸ ಮಾಡುತ್ತವೆ. ಇವು ಸಣ್ಣ ಮರಗಳನ್ನೂ ದೊಡ್ಡ ಮರಗಳ ಕೊಂಬೆಗಳನ್ನೂ ನೆಲಕ್ಕೆಳೆದು ಎಲೆಗಳನ್ನು ತಿನ್ನುತ್ತವೆ. ಕಾಡಿನಲ್ಲಿ ಇವು ಸಾಗಿದ ದಾರಿ ಇತರ ಪ್ರಾಣಿಗಳಿಗೂ ದಾರಿಯಾಗುತ್ತದೆ. "…

  ಮುಂದೆ ಓದಿ...
 • ದಕ್ಷಿಣ ಭಾರತದ ಗಾಂಧಿ- ಕಾರ್ನಾಡ್ ಸದಾಶಿವ ರಾವ್
  Ashwin Rao K P

  ಮಂಗಳೂರಿನ ಹೃದಯಭಾಗದಲ್ಲಿ ಒಂದು ರಸ್ತೆ ಇದೆ. ಅದನ್ನು ಎಲ್ಲರೂ ಕೆ.ಎಸ್. ಆರ್. ರಸ್ತೆ  ಅಥವಾ ಕೆ.ಎಸ್. ರಾವ್ ರಸ್ತೆ ಎಂದು ಕರೆಯುತ್ತಾರೆ. ಅದರ ವಿಸ್ತರಣಾ ರೂಪ ಹಲವರಿಗೆ ಮರೆತೇ ಹೋಗಿದೆ ಎಂದು ಕಾಣುತ್ತದೆ. ಮಹಾತ್ಮಾ ಗಾಂಧಿ ರಸ್ತೆ ಎಂಜಿ ರಸ್ತೆ ಆದಂತೆ ಮುಂದೊಂದು ದಿನ ಅಪ್ರತಿಮ ಸ್ವಾತಂತ್ರ್ಯ ಯೋಧ, ಸಮಾಜ ಸೇವಕ ಕಾರ್ನಾಡು ಸದಾಶಿವ ರಾವ್ ಅವರನ್ನು ನಮ್ಮ ಮುಂದಿನ ಪೀಳಿಗೆ ಕೇವಲ ಕೆ.ಎಸ್. ಆರ್ ಎಂದು ಗುರುತಿಸತೊಡಗುತ್ತದೆ ಎಂಬುದೇ ಬೇಸರದ ಸಂಗತಿ ಅಲ್ಲವೇ? ನಮ್ಮ ಸರಕಾರಗಳಿಗೂ ಯಾವುದಾದರೂ ರಸ್ತೆಗೆ, ವೃತ್ತಕ್ಕೆ ಅಥವಾ ಚೌಕಕ್ಕೆ ಮಹನೀಯರ ಹೆಸರು ಇಡಲಷ್ಟೇ ಆತುರ. ಆ…

  ಮುಂದೆ ಓದಿ...
 • ಅಲೆಕ್ಸಾಂಡರನ ದಂಡಯಾತ್ರೆ ಮತ್ತು ಹಿಂದೂ ಗುರು ಫಣೀಶ
  Ashwin Rao K P

  ಅಲೆಕ್ಸಾಂಡರ್ ‘ದಿ ಗ್ರೇಟ್' ಎಂಬ ಗ್ರೀಕ್ (ಗ್ರೀಸ್) ಚಕ್ರವರ್ತಿಯ ಬಗ್ಗೆ ಇತಿಹಾಸ ಜ್ಞಾನವಿರುವ ಯಾರಿಗೆ ತಾನೇ ಗೊತ್ತಿಲ್ಲ? ಇಡೀ ವಿಶ್ವವನ್ನು ಜಯಿಸಿ ‘ವಿಶ್ವ ವಿಜೇತ’ನಾಗಬೇಕೆಂಬ ಕನಸು ಹೊತ್ತ ಅಲೆಕ್ಸಾಂಡರ್ ಅದರಲ್ಲಿ ಅಸಫಲವಾಗುತ್ತಾನೆ. ಅಲೆಕ್ಸಾಂಡರ್ ಬದುಕಿದ್ದು ಕೇವಲ ೩೩ ವರ್ಷ ಮಾತ್ರ. ಆದರೆ ಅವನ ಸಾಹಸ ಕಥೆಗಳು ಈಗಲೂ ಜನಜನಿತ. ಇವನು ಭಾರತದಲ್ಲೂ ಸುಮಾರು ೧೯ ತಿಂಗಳು ತನ್ನ ದಂಡಯಾತ್ರೆಯನ್ನು ಮಾಡಿದ್ದ. ಅವನಿಗೆ ಜಮ್ಮುವಿನ ರಾಜ ಪುರೂರವ ಅಥವಾ ಪೋರಸ್ ಮಾತ್ರ ತೀವ್ರ ಪೈಪೋಟಿ ನೀಡಿದ್ದ. ಅಲೆಕ್ಸಾಂಡರ್ ವಿರುದ್ಧ ವೀರಾವೇಷದಿಂದ ಹೋರಾಡಿದ್ದ ವೀರ ಪುರೂರವ. ಆ…

  ಮುಂದೆ ಓದಿ...
 • ಬೌದ್ಧ ಭಿಕ್ಷುಗಳ ನಿರ್ಲಿಪ್ತತೆ
  Ashwin Rao K P

  ಭಗವಾನ್ ಬುದ್ಧನಿಂದ ಸ್ಥಾಪಿತವಾದ ಬೌದ್ಧ ಧರ್ಮವು ಪ್ರಪಂಚದ ಎಲ್ಲೆಡೆ ಹಬ್ಬಿದೆ. ಬೌದ್ಧ ಭಿಕ್ಷುಗಳ ಬಗ್ಗೆ ಹಲವಾರು ಕಥೆಗಳಿವೆ. ಅವರ ಅಖಂಡ ನಿರ್ಲಿಪ್ತತೆಯು ಸಾಮಾನ್ಯ ಜನರನ್ನು ಹುಬ್ಬೇರಿಸುವಂತೆ ಮಾಡುತ್ತದೆ. ಭಗವಾನ್ ಬುದ್ಧನು ‘ಆಸೆಯೇ ದುಃಖಕ್ಕೆ ಮೂಲ' ಎಂದು ಹೇಳಿದ. ಅದರಂತೆ ಬೌದ್ಧ ಭಿಕ್ಷುಗಳು ತಮ್ಮ ಜೀವನ ಪರ್ಯಂತ ಅತ್ಯಂತ ನಿರ್ಮೋಹಿಗಳಾಗಿ ಬದುಕುತ್ತಿದ್ದಾರೆ. ಈ ಹಂತ ತಲುಪಲು ಅವರು ಅನೇಕ ಸಾಧನೆಗಳನ್ನು ಮಾಡಬೇಕಾಗುತ್ತದೆ. ಸುಖಾಸುಮ್ಮನೇ ಯಾರಿಗೂ ಪ್ರಾಪಂಚಿಕ ಜೀವನದ ಮೋಹದಿಂದ ಹೊರ ಬರಲು ಸಾಧ್ಯವಾಗುವುದಿಲ್ಲ. ಹಲವಾರು ಮಹನೀಯರು ಈ ಧರ್ಮದ ಗುಣಗಳಿಂದ ಪ್ರೇರಿತರಾಗಿ…

  ಮುಂದೆ ಓದಿ...
 • ಝೆನ್ ಪ್ರಸಂಗ: ಕೋಪ ಎಲ್ಲಿಂದ ಬಂತು?
  addoor

  ಝೆನ್ ವಿದ್ಯಾರ್ಥಿ ಯಮಒಕನಿಗೆ ಎಲ್ಲವನ್ನೂ ತಿಳಿಯಬೇಕೆಂಬ ಬಯಕೆ. ಒಬ್ಬರಾದ ನಂತರ ಇನ್ನೊಬ್ಬ ಝೆನ್ ಗುರುಗಳನ್ನು ಕಂಡು ಮುಂದುವರಿಯುತ್ತಿದ್ದ.

  ಕೊನೆಗೆ ಝೆನ್ ಗುರು ಡೊಕುಓನ್ ಅವರ ದರ್ಶನ ಪಡೆದ. ತನ್ನ ಬಗ್ಗೆ ಅವರಿಗೆ ತಿಳಿಸುತ್ತಾ, ತನ್ನ ಜ್ನಾನ ಪ್ರದರ್ಶಿಸಲಿಕ್ಕಾಗಿ ಹೀಗೆಂದ, "ಗುರುಗಳೇ, ನಮನಗಳು. ನಾನು ತಿಳಿದದ್ದು ಏನೆಂದರೆ ಮನಸ್ಸು ಎಂಬುದಿಲ್ಲ, ದೇಹ ಎಂಬುದೂ ಇಲ್ಲ. ಒಳ್ಳೆಯದು, ಕೆಟ್ಟದ್ದು ಎರಡೂ ಇಲ್ಲ. ಅರಿವು ಎಂಬುದಿಲ್ಲ, ಭ್ರಮೆ ಎಂಬುದೂ ಇಲ್ಲ. ನಾವು ನೋಡುತ್ತೇವೆ ಹಾಗೂ ಅನುಭವಿಸುತ್ತೇವೆ ಅನ್ನೋದೂ ಸತ್ಯವಲ್ಲ. ನಮಗೆ ಕಾಣುವ, ನಮ್ಮ ಗ್ರಹಿಕೆಗೆ ಸಿಗುವ ಯಾವ ವಸ್ತುವಿಗೂ ಅಸ್ತಿತ್ವವಿಲ್ಲ. ನಿಜವಾಗಿ…

  ಮುಂದೆ ಓದಿ...
 • ಈ ಕುರಿ‌ ಕಾಯೋನ ಮಗನಿಗ್ಯಾಕ್ರೋ ಪಿಯುಸಿ ಎಲ್ಲ..
  Kavitha Mahesh

  ಕ್ಯಾಪ್ಟನ್ ಗೋಪಿನಾಥ್ ನಮ್ಮ ಹೆಮ್ಮೆಯ ಕನ್ನಡಿಗರು. ಏರ್ ಡೆಕ್ಕನ್ ವಿಮಾನಯಾನ ಸಂಸ್ಥೆಯನ್ನು ಸ್ಥಾಪಿಸಿ ಜನ ಸಾಮಾನ್ಯರೂ ವಿಮಾನದಲ್ಲಿ ಹೋಗಬಹುದೆಂಬ ಕನಸನ್ನು ನನಸು ಮಾಡಿದವರು. ಮೊನ್ನೆ ಕ್ಯಾಪ್ಟನ್ ಗೋಪಿನಾಥ್ ಅವರ ಒಂದು ಸಂದರ್ಶನ ನೋಡುತ್ತಿದ್ದೆ.‌ ಅವರು ತಮ್ಮ ಡೆಕ್ಕನ್ ಹೆಲಿಕಾಪ್ಟರ್ ಸರ್ವಿಸಸ್ ಸಂಸ್ಥೆಯಲ್ಲಿ ಆದ ಒಂದು ಗ್ರಾಹಕ ಅನುಭವದ ಬಗ್ಗೆ ಹೇಳಿದ್ದು ಹೀಗೆ...

  ‘ಒಂದು ದಿನ ಅಮೇರಿಕದಿಂದ ಮಂಜುನಾಥ್ ಅನ್ನುವವರ ಕರೆ ಬಂತು. ಅಲ್ಲಿ ಜಿ.ಎಂ ಸಂಸ್ಥೆಯಲ್ಲಿ ಜನರಲ್…

  ಮುಂದೆ ಓದಿ...