ಇತ್ತೀಚೆಗೆ ಸೇರಿಸಿದ ಪುಟಗಳು

ಟೊಮೆಟೊ ಬೆಲೆ ಕುಸಿತ: ಚೀನಾದಿಂದ ಆಮದಿನ ಆಘಾತ

Submitted by addoor on Fri, 01/31/2020 - 22:43

ಆಂಧ್ರ ಪ್ರದೇಶದ ಚಿತ್ತೂರು ಮತ್ತು ಸುತ್ತಮುತ್ತಲಿನ ಟೊಮೆಟೊ ಬೆಳೆಗಾರರಿಗೆ ಖುಷಿಯೋ ಖುಷಿ. ಯಾಕೆಂದರೆ “ಒಂದು ಜಿಲ್ಲೆ ಒಂದು ಉತ್ಪನ್ನ” (ಒನ್ ಡಿಸ್ಟ್ರಿಕ್ಟ್ ಒನ್ ಪ್ರಾಡಕ್ಟ್ – ಒಡಿಒಪಿ) ಯೋಜನೆಯ ಜ್ಯಾರಿಗಾಗಿ ಕೇಂದ್ರ ಸರಕಾರ ಆಯ್ಕೆ ಮಾಡಿದ ಜಿಲ್ಲೆಗಳಲ್ಲಿ ಚಿತ್ತೂರು ಸಹ ಸೇರಿತ್ತು.

Image

ಕದ್ರಿ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ

Submitted by addoor on Thu, 01/30/2020 - 22:01

ಮಂಗಳೂರಿನ ವಾರ್ಷಿಕ “ಹಬ್ಬ”ಗಳಲ್ಲೊಂದು ಜನವರಿ ತಿಂಗಳ ಪ್ರಜಾಪ್ರಭುತ್ವ ದಿನದ ಸಂದರ್ಭದಲ್ಲಿ ಕದ್ರಿ ಉದ್ಯಾನದಲ್ಲಿ ಏರ್ಪಡಿಸಲಾಗುವ “ಫಲಪುಷ್ಪ ಪ್ರದರ್ಶನ.”
೨೦೨೦ರ ಫಲಪುಷ್ಪ ಪ್ರದರ್ಶನ ಮೂರು ದಿನ (ಜನವರಿ ೨೪ರಿಂದ ೨೬ರ ವರೆಗೆ) ಜರಗಿತು. ಪ್ರತಿ ವರುಷದಂತೆ ಈ ವರುಷವೂ ಹೂಗಳಿಂದ ರಚಿಸಿದ ವಿಶೇಷ ಕಲಾಕೃತಿಗಳು ಜನಾಕರ್ಷಣೆಯ ಕೇಂದ್ರಗಳಾಗಿದ್ದವು. ಕೇಸರಿ ಸೇವಂತಿಗೆ ಹೂಗಳಿಂದ ಸ್ವಾಮಿ ವಿವೇಕಾನಂದರ ಮೂರ್ತಿ, ಬಿಳಿ ಸೇವಂತಿಗೆ ಹೂಗಳಿಂದ ಹಾರುವ ಪಾರಿವಾಳದ ಕಲಾಕೃತಿ ಮತ್ತು ಕೆಂಪು ಗುಲಾಬಿಗಳಿಂದ ಐಸ್‍ಕ್ರೀಮ್ ಕೋನ್ ರಚಿಸಿ ಪ್ರದರ್ಶನಕ್ಕೆ ಇಡಲಾಗಿತ್ತು. ಇವುಗಳೊಂದಿಗೆ ಸೆಲ್ಫೀ ತೆಗೆಯುವುದೆಂದರೆ ಹಲವರಿಗೆ ಖುಷಿಯೋ ಖುಷಿ.

Image

ಬದಲಿಮೇವಿನ ಸಂಶೋಧನೆಗೆ ೫೦ ವರುಷ! ಆದರೂ ಮೇವು ಕೊರತೆ ನಿರಂತರ

Submitted by addoor on Wed, 01/29/2020 - 22:54

ತಮಿಳ್ನಾಡಿನ ೨೦೧೬-೧೭ರ ಬರಗಾಲವನ್ನು ಶತಮಾನದ ಅತ್ಯಂತ ದಾರುಣ ಬರಗಾಲ ಎನ್ನಲಾಗಿದೆ. ಆಗ, ತೂತುಕುಡಿಯ ಮಂಗಳಗಿರಿ ಗ್ರಾಮದ ಡಿ. ಕಿಂಗ್ಸ್ ಲೇ ಅವರಿಗೆ ತಮ್ಮ ೧೫ ದನಗಳಿಗೆ ಮೇವು ಒದಗಿಸುವುದು ಹೇಗೆಂಬುದೇ ಚಿಂತೆಯಾಗಿತ್ತು.

Image

ಜಮೀನು ರೈತರಿಗೆ ವಾಪಾಸ್: ಚತ್ತಿಸ್ ಘರ್ ಸರಕಾರದ ದಿಟ್ಟ ಕ್ರಮ

Submitted by addoor on Wed, 01/29/2020 - 22:17

ಚತ್ತಿಸ್‍ಘರ್ ರಾಜ್ಯದ ಬುಡಕಟ್ಟು ಜಿಲ್ಲೆ ಬಸ್ತಾರಿನ ಸಾವಿರಾರು ರೈತರಿಗೆ ಸಂಭ್ರಮ. ಪ್ರತಿ ದಿನವೂ ಲೊಹಾಂಡಿಗುಡ ಮತ್ತು ತಾಕರ್‍ಗುಡ ತಾಲೂಕುಗಳ ಹತ್ತಾರು ರೈತರಿಂದ ಪಂಚಾಯತ್ ಕಚೇರಿಗೆ ಭೇಟಿ – ತಮ್ಮ ಭೂದಾಖಲೆಗಳ ಪರಿಶೀಲನೆಗಾಗಿ.

Image

ಏಳು ವರುಷ ಕೃತಕ ಹಾಲು ಮಾರಿ ಕೋಟಿಗಟ್ಟಲೆ ರೂಪಾಯಿ ಕೊಳ್ಳೆ!

Submitted by addoor on Fri, 01/24/2020 - 22:50

ಲೀಟರಿಗೆ ಕೇವಲ ಆರು ರೂಪಾಯಿ ವೆಚ್ಚದಲ್ಲಿ ಉತ್ಪಾದಿಸಿದ ಕೃತಕ ಹಾಲನ್ನು ಲೀಟರಿಗೆ ೨೫ ರೂಪಾಯಿಗೆ ಏಳು ವರುಷ ಮಾರಾಟ ಮಾಡಿ ಕೋಟಿಗಟ್ಟಲೆ ರೂಪಾಯಿ ಕೊಳ್ಳೆ ಹೊಡೆದಿದ್ದಾರೆ ಇಬ್ಬರು ಸೋದರರು!

Image

ದೇಶದ ಸಮಸ್ಯೆಗಳು ನಿಜಕ್ಕೂ ಬಗೆಹರಿಯುತ್ತಾ?

Submitted by Ashwin Rao K P on Fri, 01/24/2020 - 10:51

ಬಹಳ ಹಿಂದೆ ಅನಿಲ್ ಕಪೂರ್ ನಾಯಕರಾಗಿರುವ ನಾಯಕ್ ಎಂಬ ಒಂದು ಹಿಂದಿ ಚಲನ ಚಿತ್ರ ತೆರೆ ಕಂಡಿತ್ತು. ಅದರಲ್ಲಿ ಟಿವಿ ವರದಿಗಾರನಾಗಿರುವ ನಾಯಕ ರಾಜ್ಯದ ಮುಖ್ಯ ಮಂತ್ರಿಯಾಗಿ ನಟಿಸಿದ ಅಮರೀಶ್ ಪುರಿಯವರಿಗೆ ರಾಜ್ಯದಲ್ಲಾದ ಗಲಭೆಯ ವರದಿಯನ್ನು ತೋರಿಸಿದಾಗ ಆ ಮುಖ್ಯಮಂತ್ರಿ ಒಂದು ದಿನಕ್ಕೆ ರಾಜ್ಯದ ಆಡಳಿತವನ್ನು ಆ ವರದಿಗಾರನ ಕೈಗೆ ನೀಡಿ ಆಡಳಿತ ನಡೆಸುವುದು ಎಷ್ಟು ಕಷ್ಟ ಎಂದು ನಿರೂಪಿಸಲು ಬಯಸುತ್ತಾನೆ. ಆಗ ಮುಖ್ಯಮಂತ್ರಿಯ ಪಾತ್ರಧಾರಿಯಾದ ಅಮರೀಶ್ ಪುರಿ ಒಂದು ಮಾತು ಹೇಳುತ್ತಾರೆ ರಾಜಕಾರಣಿಗಳು ಯಾವತ್ತೂ ಯಾವ ಸಮಸ್ಯೆಯನ್ನೂ ಪರಿಹಾರ ಮಾಡಲು ಹೋಗಬಾರದು. ಆ ಸಮಸ್ಯೆಯನ್ನು ಪರಿಹರಿಸಿದರೆ ಮುಂದಿನ ಚುನಾವಣೆಯಲ್ಲಿ ಜನರಿಗೆ ಯಾವ ವಿಷಯದ ಬಗ್ಗೆ ಭರವಸೆಯನ್ನು ಕೊಡುವುದು? ಹೇಗೆ ಚುನಾವಣೆಯನ್ನು ಗೆಲ್ಲುವುದು?

Image

ಬಿಳಿ ಹಾಲಿನ ಕಪ್ಪು ವಹಿವಾಟು

Submitted by addoor on Wed, 01/22/2020 - 19:38

ಈಗ ಜಗತ್ತಿನಲ್ಲೇ ಅತ್ಯಧಿಕ ಹಾಲು ಉತ್ಪಾದಿಸುವ ದೇಶ ಭಾರತ. ೨೦೧೭-೧೮ರಲ್ಲಿ ಯುರೋಪಿಯನ್ ಒಕ್ಕೂಟಕ್ಕಿಂತಲೂ ಹೆಚ್ಚು ಹಾಲು ಉತ್ಪಾದಿಸುವ ಮೂಲಕ ಮೊದಲ ಸ್ಥಾನಕ್ಕೇರಿದೆ.

Image

ಕರಾವಳಿ ಜಿಲ್ಲೆಗಳ ಜನರ ಜೀವನ ಮಟ್ಟ ಏರುತ್ತಿದೆಯೇ?

Submitted by Ashwin Rao K P on Tue, 01/21/2020 - 15:34

ಸರಕಾರಿ ಲೆಕ್ಕಾಚಾರದಲ್ಲಿ ಕರ್ನಾಟಕದ  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರು ಇರಬಹುದು. ಆದರೆ ವಾಸ್ತವಿಕತೆ ಇದಕ್ಕಿಂತ ಭಿನ್ನವಾಗಿದೆ. ಬಡತನ ಇರಬೇಕಾದರೆ ದುಡಿಯಲು ಉದ್ಯೋಗ ಅವಕಾಶ ಇಲ್ಲದಾಗಬೇಕು. ಇಲ್ಲಿ ಉದ್ಯೋಗಕ್ಕೆ ಬರವಿಲ್ಲ. ಉದ್ಯೋಗ ವಿಲ್ಲದೆ ಇರುವವರೇ ಇಲ್ಲ.