ಇತ್ತೀಚೆಗೆ ಸೇರಿಸಿದ ಪುಟಗಳು

ಸುಂಯ್, ಸುಂಯ್, ಸುಂಯ್ ! ಮೋಂಟು ಮೊಲ ಹೊಲದಲ್ಲಿ ಇಪ್ಪತ್ತಡಿ ಓಡಿ, ನೆಲದಿಂದ ಸೊಂಯ್ಯನೆ ಎತ್ತರಕ್ಕೆ ಜಿಗಿಯಿತು. “ನೋಡಿ, ನಾನು ಗಾಳಿಯಲ್ಲಿ ಎತ್ತರಕ್ಕೆ ಹಾರಬಲ್ಲೆ” ಎಂದು ಹೊಲದಲ್ಲಿದ್ದ ಇತರ ಪ್ರಾಣಿಗಳಿಗೆ ಕೂಗಿ ಹೇಳಿತು.

“ಓ, ಚೆನ್ನಾಗಿ ಜಿಗಿಯುತ್ತಿ” ಎಂದಿತು ಕುರಿ. “ಚೆನ್ನಾಗಿ ಜಿಗಿಯುತ್ತಿ. ಆದರೆ ನನ್ನಷ್ಟು ಚೆನ್ನಾಗಿ ಜಿಗಿಯಲು ನಿನ್ನಿಂದಾಗದು. ನಾನು ಗೇಟಿನ ಮೇಲೆ ಜಿಗಿಯ ಬಲ್ಲೆ” ಎಂದಿತು ಕಾವಲು ನಾಯಿ. ತಕ್ಷಣವೇ ಕಾವಲು ನಾಯಿ ಓಡಿ ಹೋಗಿ, ಗೇಟಿನ ಮೇಲಕ್ಕೆ ಹಾರಿ ಬಯಲಿಗೆ ಜಿಗಿಯಿತು.

“ಓಹೋ, ಇದು ಅಚ್ಚರಿಯ ಜಿಗಿತ" ಎಂದಿತು ಕುರಿ. "ಅಚ್ಚರಿಯ ಜಿಗಿತ ಹೌದು. ಆದರೆ ನನ್ನ ಜಿಗಿತದಷ್ಟು…ಮುಂದೆ ಓದಿ...

15 views
Sun, 11/15/2020 - 10:10

ದೀಪಾವಳಿ- ಹೆಸರೇ ಹೇಳುವಂತೆ ದೀಪಗಳ ಹಬ್ಬ. ನಾವು ಸಣ್ಣವರಿರುವಾಗ ಆಚರಣೆಯಲ್ಲಿ ಇದ್ದ ಸಂಭ್ರಮ ಈಗ ದೊಡ್ಡವರಾದ ಮೇಲೆ ಕಮ್ಮಿ ಆಗಿದೆ ಎಂದು ನಮಗೆ ಅನಿಸಿದರೂ ಈಗಿನ ಮಕ್ಕಳಿಗೆ ದೀಪಾವಳಿ ಸಂಭ್ರಮದ ಹಬ್ಬವೇ. ಏಕೆಂದರೆ ದೀಪಾವಳಿ ಸಮಯದ ಹೊಸ ಬಟ್ಟೆಗಳು, ಹೂವು ಹಣ್ಣುಗಳು, ಸಿಹಿ ತಿಂಡಿಗಳು, ಆಕಾಶ ಬುಟ್ಟಿ, ಮನೆಗೆ ಬರುವ ಬಂಧು ಮಿತ್ರರು, ಎಣ್ಣೆ ಸ್ನಾನ, ಗೋಪೂಜೆ ಎಲ್ಲದಕ್ಕಿಂತ ಮಿಗಿಲು ಪಟಾಕಿಗಳು. ಬಾಲ್ಯದಲ್ಲಿ ನಮಗೆ ಪಟಾಕಿ ಹೊಡೆಯುವ ಸಂಭ್ರಮವೇ ಬೇರೆಯಾಗಿತ್ತು. ಪಟಾಕಿಯನ್ನು ಸಿಡಿಸಲು ಈಗಿನಂತೆ ನಿರ್ಭಂಧಗಳಿರಲಿಲ್ಲ. ಹಸಿರು ಪಟಾಕಿ, ಶಬ್ದ ರಹಿತ, ವಾಯು ಮಾಲಿನ್ಯ ರಹಿತ…ಮುಂದೆ ಓದಿ...

21 views
Sat, 11/14/2020 - 09:04

ಇಂದು ಬೆಳಿಗ್ಗೆ ಏಳುವಾಗಲೇ ನನ್ನ ಪಾಲಿಗೆ ಶುಕ್ರವಾರ ‘ಬ್ಲ್ಯಾಕ್ ಫ್ರೈಡೇ' ಆಗಿತ್ತು. ಕನ್ನಡದ ಖ್ಯಾತ ಪತ್ರಕರ್ತ, ಲೇಖಕ, ನಿರೂಪಕ ರವಿ ಬೆಳಗೆರೆಯವರು ಇನ್ನಿಲ್ಲ ಎಂಬ ಸುದ್ದಿ ತಿಳಿದು ಮನಸ್ಸಿಗೆ ತುಂಬಾನೇ ಖೇದವಾಯಿತು. ಒಬ್ಬ ಲೇಖಕನಾಗಿ ನಾನು ಅವರ ಬರಹಗಳನ್ನು ತುಂಬಾ ಮೆಚ್ಚಿ ಕೊಂಡಿದ್ದೇನೆ. ಅವರ ಬಗೆಗಿನ ಬಹಳಷ್ಟು ವಿವರಗಳು ದೃಶ್ಯ ಮಾಧ್ಯಮದಲ್ಲಿ ಇವತ್ತು ದಿನವಿಡೀ ತೋರಿಸುವುದರಿಂದ ನಾನು ಅಧಿಕವಾಗಿ ಹೇಳಲೇನೂ ಹೋಗುವುದಿಲ್ಲ. ನನ್ನ ಅವರ ನಡುವಿನ ಸಣ್ಣಗಿನ ಒಡನಾಟದ ಬಗ್ಗೆ ಒಂದೆರಡು ಮಾತುಗಳನ್ನು ಬರೆಯಲಷ್ಟೇ ಈ ಲೇಖನ ಮುಡಿಪು.ಮುಂದೆ ಓದಿ...

62 views
Fri, 11/13/2020 - 11:18

೨೭.ಜಗತ್ತಿನ ಅತಿ ವಿಸ್ತಾರವಾದ ನದಿಬಯಲು
ಸಿಂಧೂ - ಗಂಗಾ - ಬ್ರಹ್ಮಪುತ್ರ ನದಿಬಯಲು ಜಗತ್ತಿನ ಅತಿ ವಿಸ್ತಾರವಾದ ನದಿಬಯಲು. ಇದರ ಉದ್ದ ೩,೨೦೦ ಕಿಮೀ. ಇದರ ಒಂದು ಭಾಗ ಭಾರತದಲ್ಲಿದ್ದರೆ, ಇನ್ನೊಂದು ಭಾಗ ಪಾಕಿಸ್ಥಾನದಲ್ಲಿದೆ. ಭಾರತದಲ್ಲಿರುವ ಭಾಗದ ಉದ್ದ ೨,೪೦೦ ಕಿಮೀ. ಮತ್ತು ಸರಾಸರಿ ಅಗಲ ೧೫೦ರಿಂದ ೩೦೦ ಕಿಮೀ. ಇದು ವ್ಯಾಪಿಸಿರುವ ಪ್ರದೇಶ ೭.೮ ಲಕ್ಷ ಚದರ ಕಿಮೀ.

ಈ ನದಿಬಯಲು ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರ ನದಿಗಳ ಹಾಗೂ ಅವುಗಳ ಉಪನದಿಗಳ ಬಯಲುಗಳನ್ನು ಒಳಗೊಂಡಿದೆ. ಇದು ಜಗತ್ತಿನಲ್ಲೇ ಜನಸಾಂದ್ರತೆ ಅತ್ಯಂತ ಹೆಚ್ಚಾಗಿರುವ ಪ್ರದೇಶಗಳಲ್ಲಿ ಒಂದಾಗಿದೆ. ಹಾಗೂ ಇದು ಬಹಳ ಫಲವತ್ತಾದ ನದಿಬಯಲು.…ಮುಂದೆ ಓದಿ...

12 views
Thu, 11/12/2020 - 20:39

ಪರಿಸರ ಮಾಲಿನ್ಯ ನಮ್ಮ ದೇಶದ ಅತೀದೊಡ್ಡ ಸಮಸ್ಯೆಯಾಗಿ ಪರಿವರ್ತನೆಯಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಪ್ಲಾಸ್ಟಿಕ್ ಎಂದರೆ ತಪ್ಪಾಗಲಾರದು. ನಾವಿನ್ನೂ ಈ ಪ್ಲಾಸ್ಟಿಕ್ ಪೆಡಂಭೂತಕ್ಕೆ ಪರ್ಯಾಯವನ್ನು ಕಂಡುಹುಡುಕಿಲ್ಲ. ಮಣ್ಣಿನಲ್ಲಿ ಕರಗುವ ಪ್ಲಾಸ್ಟಿಕ್ ಕಂಡು ಹಿಡಿದರೆ ಬಹಳಷ್ಟು ಉಪಕಾರವಿದೆ. ಆದರೆ ಪ್ಲಾಸ್ಟಿಕ್ ಉತ್ಪನ್ನಗಳಿಗೆ ಪರ್ಯಾಯವಾಗಿ ನಾವು ಬಿದಿರು ಬಳಸಬಹುದು. ಕಳೆದ ವರ್ಷ ‘ಸಂಪದ’ದಲ್ಲಿ ಶ್ರೀ ಅಡ್ಡೂರು ಕೃಷ್ಣ ರಾವ್ ಇವರು ಬಿದಿರಿನ ಬಾಟಲಿ ಬಗ್ಗೆ ಒಂದು ಲೇಖನ ಬರೆದಿದ್ದರು. ಅದು ಅಸ್ಸಾಂನ ಡಿಬಿ ಇಂಡಸ್ಟ್ರೀಸ್ ನ ಸ್ಥಾಪಕರಾದ ಧೃತಿಮಾನ್ ಬೋರಾ ಸಾಧನೆ ಬಗ್ಗೆ…ಮುಂದೆ ಓದಿ...

19 views
Thu, 11/12/2020 - 15:19

ಈ ಕಥೆಯನ್ನು ನೀವು ಈಗಾಗಲೇ ಓದಿರಲೂ ಬಹುದು. ಆದರೆ ಪ್ರತೀ ಬಾರಿ ಓದಿದಾಗಲೂ ನನ್ನ ಕಣ್ಣಿನಿಂದ ನೀರು ಬರುತ್ತದೆ. ಅಷ್ಟು ಭಾವನಾತ್ಮಕವಾದ ಮಾನವೀಯತೆಯ ಕಥೆ ಇದು. ನೀವು ಓದಿ, ಬೇರೆಯವರಿಗೂ ಹಂಚಿರಿ.

ಹರಿದುಹೋದ ಧೋತಿ ಮತ್ತು ಹರಿದ ಅಂಗಿಯನ್ನು ಧರಿಸಿದ ವ್ಯಕ್ತಿ ತನ್ನ 15-16 ವರ್ಷದ ಮಗಳ ಜೊತೆ ದೊಡ್ಡ ಸ್ಟಾರ್ ಹೋಟೆಲ್ ಗೆ ಹೋದರು. ಇಬ್ಬರೂ ಕುರ್ಚಿಯ ಮೇಲೆ ಕುಳಿತಿದ್ದನ್ನು ನೋಡಿ, ವೇಟರ್ ಬಂದು ಎರಡು ನೀರಿನ ಲೋಟ ಇಟ್ಟು ಕೇಳಿದ. ತಮಗೇನು ಬೇಕು? ಆಗ ಆ ವ್ಯಕ್ತಿ "…ಮುಂದೆ ಓದಿ...

56 views
Thu, 11/12/2020 - 09:19

ಆ ದಿನ ಮಂಗಳೂರಿನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ಸೇರಿದ್ದೆ - ಚಿಕ್ಕಮಗಳೂರಿಗೆ ಪ್ರಯಾಣಿಸಲಿಕ್ಕಾಗಿ. ನಮ್ಮ ಬಸ್ ಉಜಿರೆ ತಲಪಿದಾಗ ಇಬ್ಬರು ಬಸ್ಸೇರಿ ನನ್ನ ಹಿಂದಿನ ಸೀಟಿನಲ್ಲಿ ಕುಳಿತರು. ಅವರ ಪಕ್ಕದಲ್ಲಿ ಕುಳ್ಳ ವ್ಯಕ್ತಿಯೊಬ್ಬ ಆಸೀನನಾದ.

ಬಸ್ ಉಜಿರೆಯಿಂದ ಹೊರಟಾಗ ಆ ಇಬ್ಬರು ಮಾತಿಗೆ ಶುರುವಿಟ್ಟರು. ಚಾರ್ಮಾಡಿ ಘಾಟಿ ಏರಲು ಬಸ್ ಏದುಸಿರು ಬಿಡುತ್ತಿದ್ದಂತೆ, ಇವರಿಬ್ಬರ ಮಾತು ಜೋರುಜೋರಾಯಿತು. ಅದರಿಂದಾಗಿ ಎಲ್ಲ ಸಹಪ್ರಯಾಣಿಕರಿಗೆ ಕಿರಿಕಿರಿ. ಘಾಟಿ ಏರಿದ ಬಸ್ ಕೊಟ್ಟಿಗೆಹಾರ ಹಾದು, ಬಣಕಲ್ ತಲಪಿತು. ಅಲ್ಲಿಂದ ಬಸ್ ಹೊರಟಾಗಲೂ ತಡೆಬಡೆಯಿಲ್ಲದೆ ಸಾಗಿತ್ತು ಅವರು ಮಾತು. ಆ ತನಕ ಅವರಿಬ್ಬರ ಅಬ್ಬರದ ಮಾತುಕತೆ…ಮುಂದೆ ಓದಿ...

31 views
Wed, 11/11/2020 - 10:35

ಮೇಲಿನ ಚಿತ್ರದಲ್ಲಿ ನೀವು ನೋಡುತ್ತಿರುವುದೇನು ಎಂದು ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಸಣ್ಣ ಸಣ್ಣ ಹತ್ತಿಯ ಉಂಡೆಯಂತೆ ಅಥವಾ ಹಕ್ಕಿಯ ಮೊಟ್ಟೆಯಂತೆ ಕಾಣುವ ಈ ವಸ್ತುವೇ ಮಖಾನಾ ಬೀಜಗಳು. ಇತ್ತೀಚೆಗೆ ಬಹಳವಾಗಿ ಕೇಳಿ ಬರುತ್ತಿರುವ ಮಖಾನಾ (ತಾವರೆ ಬೀಜ) ಬೀಜದ ವಿವರಗಳು ನಿಮಗೆ ತಿಳಿದಿದೆಯೇ? ಈ ಬೀಜಗಳ ಸಂಗ್ರಹಣೆ ಹೇಗೆ? ಅದನ್ನು ಖಾದ್ಯಕ್ಕೆ ಬಳಸುವಂತೆ ಮಾಡಲು ಹೇಗೆ ಸಂಸ್ಕರಿಸುತ್ತಾರೆ? ಬಹುತೇಕ ಮಂದಿಗೆ ಈ ಬಗ್ಗೆ ತಿಳಿದಿಲ್ಲ. ನಮ್ಮ ಕರ್ನಾಟಕದಲ್ಲಿ ಇನ್ನೂ ಈ ತಾವರೆ ಬೀಜದ ಖಾದ್ಯಗಳ ಪರಿಚಯ ಅಷ್ಟಾಗಿ ಆಗಿಲ್ಲ. ಆದರೆ ಉತ್ತರ ಭಾರತದೆಡೆ ಇದನ್ನು ಯಥೇಚ್ಛವಾಗಿ…ಮುಂದೆ ಓದಿ...

57 views
Wed, 11/11/2020 - 10:32

ಈ ಸಲದ ಪ್ರಜಾವಾಣಿ ವಿಶೇಷಾಂಕವು, ಎರಡೂವರೆ ಸಾವಿರ ವರ್ಷ ಹಳೆಯದಾದರೂ ಹೊಸ ಹೊಳಹುಗಳನ್ನು ಕಾಣ್ಕೆಗಳನ್ನು ಕೊಡುತ್ತಲೇ ಇರುವ ರಾಮಾಯಣ ಕಥಾನಕಗಳ ಕುರಿತಾಗಿದೆ. ರಾಮನು ಧರ್ಮವೇ ಮೂರ್ತಿವೆತ್ತಂತೆ ಅಂತೆ . ಧರ್ಮ ಯಾವುದು, ರಾಮನು ಅದನ್ನು ಹೇಗೆ ಬದುಕಿ ತೋರಿದನು ಎಂಬೆಲ್ಲ ವಿಷಯಗಳು ಇಲ್ಲಿವೆ. ಈ ದೀಪಾವಳಿ ಸಂಚಿಕೆಯಲ್ಲಿ ಯಾವುದೇ ಕಟ್ಟುಪಾಡಿಗೆ ಸೀಮಿತಗೊಳ್ಳದೆ ತುಂಬ ವ್ಯಾಪಕವಾಗಿ ಜನಮಾನಸದಲ್ಲಿ ನೆಲೆಯೂರಿದ್ದು ಹೇಗೆ? ಇಷ್ಟೊಂದು ರಾಮನ ಕಥೆಗಳು ಏಕೆ ರೂಪುಗೊಂಡವು? ಎಂಬುದನ್ನು ಇನ್ನೊಂದು ಲೇಖನದಲ್ಲಿ ಚರ್ಚಿಸಲಾಗಿದೆ. ಕನ್ನಡದಲ್ಲಿನ ರಾಮ ಕಥೆಗಳು, ತೆಲುಗಿನಲ್ಲಿ ರಾಮ ಕಥೆಗಳು, ವಿದೇಶಗಳಲ್ಲಿನ ರಾಮಕಥೆಗಳ ಕುರಿತಾಗಿ…ಮುಂದೆ ಓದಿ...

74 views
Wed, 11/11/2020 - 09:15

ಝೆನ್ ಗುರುವಿನ ಬಳಿ ಶಿಷ್ಯನೊಬ್ಬ ಕೇಳಿದ, “ಸೌಂದರ್ಯ ಎಂದರೇನು?" ಗುರುವಿನ ಉತ್ತರ: “ಸೌಂದರ್ಯವನ್ನು ಮೊದಲು ನೋಡಲು ಕಲಿಯಬೇಕು.” ಆಗ ಶಿಷ್ಯ ಅಮಾಯಕನಂತೆ ಪ್ರಶ್ನಿಸಿದ, “ಎಲ್ಲಿ? ಹೇಗೆ?”

ಗುರು ಅವನನ್ನು ಊರಿನ ಕೆರೆಯ ಬಳಿಗೆ ಕರೆದೊಯ್ದು ಕೇಳಿದರು, “ಕೆರೆ ಹೇಗಿದೆ?” ಶಿಷ್ಯ ಕೆರೆಯನ್ನೊಮ್ಮೆ ನೋಡಿ ಹೇಳಿದ, “ಕೆರೆ ಶಾಂತವಾಗಿದೆ.” “ಬಾಗಿ ನೋಡು, ಏನು ಕಾಣಿಸುತ್ತಿದೆ?” ಎಂದು ಪುನಃ ಪ್ರಶ್ನಿಸಿದರು ಗುರು. ಶಿಷ್ಯ ಬಾಗಿ ನೋಡಿ, "ನನ್ನ ಮುಖ ಕಾಣಿಸುತ್ತಿದೆ” ಎಂದು ಉತ್ತರಿಸಿದ.

ಅದಾಗಿ ಒಂದು ತಿಂಗಳ ನಂತರ ಗುರು ಮತ್ತು ಶಿಷ್ಯ ಪುನಃ ಅದೇ ಕೆರೆಯ ಬಳಿಗೆ ಬಂದರು. ಈಗಲೂ ಗುರುವಿನ ಅದೇ ಪ್ರಶ್ನೆಗೆ ಅದೇ…ಮುಂದೆ ಓದಿ...

21 views
Tue, 11/10/2020 - 15:30