ಇತ್ತೀಚೆಗೆ ಸೇರಿಸಿದ ಪುಟಗಳು

 • ನಿಸ್ಸಾರ ಅಹಮದ್ದರಿಗೆ ಶ್ರದ್ಧಾಂಜಲಿ
  msraghu

  ನಾವು ಶಾಲೆಯಲ್ಲಿ ಕನ್ನಡ ಕಲಿಯುವಾಗ ಓದಿದ ಕನ್ನಡ ಪದ್ಯಗಳನ್ನು  ಬಿಟ್ಟರೆ, ಇತರೆ ಕವಿಗಳು/ಕವನಗಳನ್ನು  ನಾನು ಬಲ್ಲವನಲ್ಲ. ಕಾರಣ ಇಷ್ಟೇ. ನನಗೆ ಕವನಗಳು/ಪದ್ಯಗಳು ಸುಲಭವಾಗಿ ಅರ್ಥವಾಗುವುದಿಲ್ಲ. ಮೇಲ್ನೋಟಕ್ಕೆ ಕಂಡದ್ದನ್ನು ಮಾತ್ರ ನಾನು ಓದಿ ತಿಳಿಯಬಲ್ಲೆ. ಕವಿಗಳ ಕವನದ ಒಳಹೊಕ್ಕು ನೋಡಿ ಅವರ ಕವನದ…

  ಮುಂದೆ ಓದಿ...
 • ಅನಂತದ ಸಿರಿಬೆಳಕಿನಲ್ಲಿ ಐಕ್ಯರಾದ ಕವಿ ನಿಸಾರ್ ಅಹಮದ್
  addoor

  “ಜೋಗದ ಸಿರಿಬೆಳಕಿನಲ್ಲಿ ….. ನಿತ್ಯೋತ್ಸವ ತಾಯಿ ನಿನಗೆ ನಿತ್ಯೋತ್ಸವ” - ೧೯೭೦ರ ದಶಕದಲ್ಲಿ, ನನ್ನ ತಲೆಮಾರಿನ ಯುವಕರಲ್ಲಿ ರೋಮಾಂಚನ ಮೂಡಿಸಿದ ಕವನ. ಈಗಲೂ ಕನ್ನಡ ನಾಡಿನ ಎಲ್ಲ ತಲೆಮಾರಿನವರಲ್ಲಿ ರೋಮಾಂಚನ ಚಿಮ್ಮಿಸುವ ಕವಿತೆ. ಅದನ್ನು ಬರೆದ ಕವಿ ಕೆ.ಎಸ್. ನಿಸಾರ್ ಅಹಮದ್ (೮೪) ಇಂದು ನಮ್ಮೊಂದಿಗಿಲ್ಲ. ನಿನ್ನೆ, ೩ ಮೇ ೨೦೨೦ರಂದು ನಮ್ಮನ್ನಗಲಿದರು. (ಜನನ: ೫ ಫೆಬ್ರವರಿ ೧೯೩೬, ದೇವನಹಳ್ಳಿ, ಬೆಂಗಳೂರು ಜಿಲ್ಲೆ)

  ನಮ್ಮ “ಸಂಪದ"ದ "ಶ್ರಾವ್ಯ" ವಿಭಾಗದಲ್ಲಿ ಅವರ ಸಂದರ್ಶನ ಲಭ್ಯ (ಸಂಪುಟ ೭). ಆ ಸಂದರ್ಶನವನ್ನು (೪೮ ನಿಮಿಷ) ಇವತ್ತು ಪುನಃ ಕೇಳಿದೆ. ಜನಪ್ರಿಯ ಕವಿಯಾಗಿ, ಪ್ರಾಧ್ಯಾಪಕರಾಗಿ, ಚಿಂತಕರಾಗಿ,…

  ಮುಂದೆ ಓದಿ...
 • ದಿನದಿನವೂ ಭೂತಾಯಿಗೆ ಶರಣು
  addoor

  ಇವತ್ತು ಬೆಳಗಾಗುತ್ತಿದ್ದಂತೆ ಮಡದಿಯೊಂದಿಗೆ ಅಡ್ಡೂರಿನ ನಮ್ಮ ತೋಟಕ್ಕೆ ಪ್ರಯಾಣ - ತೆಂಗಿನ ಮರಗಳಿಗೂ, ಇತರ ಗಿಡಗಳಿಗೂ ವಾರಾಂತ್ಯದಲ್ಲಿ ನೀರುಣಿಸಲಿಕ್ಕಾಗಿ.

  ಅಲ್ಲಿ ಗೇಟಿನ ಪಕ್ಕದಲ್ಲೇ ಇರುವ ಹಳೆಯ ಪುನರ್ಪುಳಿ (ಕೋಕಂ) ಮರದಲ್ಲಿ ಹಣ್ಣುಗಳನ್ನು ಕಂಡು ಖುಷಿ. ಯಾಕೆಂದರೆ, ಕಳೆದ ವರುಷ ಮೆಸ್ಕಾಂ (ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ) ಕೆಲಸಗಾರರು ಅದರ ಗೆಲ್ಲುಗಳನ್ನು ಕಡಿದು ಹಾಕಿದ್ದರಿಂದಾಗಿ ಅದು ಫಲ ಕೊಟ್ಟಿರಲಿಲ್ಲ. ಅಂತೂ ಅದರ ಹಣ್ಣುಗಳನ್ನೆಲ್ಲ ಕೊಯ್ದೆ.

  ಆಗ ಮಡದಿ ಕರೆದು ಹೇಳಿದ್ದು: “ಇಲ್ಲೂ ಇದೆ ನೋಡಿ ಪುನರ್ಪುಳಿ.” ಓ, ಮನೆಯ ಹಿಂಬದಿಯ ಪುನರ್ಪುಳಿ ಮರದಲ್ಲಿ ಮೊದಲ ಬಾರಿ ಹಣ್ಣು! ಅದನ್ನು…

  ಮುಂದೆ ಓದಿ...
 • ಧ್ಯಾನದಿಂದ ಹೊಸ ಬದುಕು (ಭಾಗ 3)
  addoor

  ಧ್ಯಾನ ಮಾಡುವುದು ಹೇಗೆ?
  ಧ್ಯಾನ ದೊಡ್ದ ಸಾಧನೆ. ಧ್ಯಾನದ ಪೂರ್ಣ ಅನುಭವ ಸಿಗಬೇಕಾದರೆ ಪಾಲಿಸಬೇಕಾದ ಕೆಲವು ನಿಯಮಗಳು: ಧ್ಯಾನ ಮಾಡುವಾಗ ಸ್ವಲ್ಪ ಹಸಿವಾಗಿರಬೇಕು, ಸ್ವಲ್ಪ ಸುಸ್ತಾಗಿರಬೇಕು ಮತ್ತು ಯಾವುದೇ ನಿರೀಕ್ಷೆ ಇರಬಾರದು. ಅಂದರೆ, ಆಹಾರ ಸೇವನೆಗೂ ಧ್ಯಾನಕ್ಕೂ ಕನಿಷ್ಥ ಅರ್ಧ ಗಂಟೆಯ ಅಂತರ ಇರಬೇಕು. ಹೆಚ್ಚು ಹಸಿವಾದಾಗ ಅಥವಾ ಹೆಚ್ಚು ಸುಸ್ತಾದಾಗ ಧ್ಯಾನ ಮಾಡಿದರೆ ನಿದ್ದೆ ಬರುತ್ತದೆ. ಹಾಗಾಗಿ, ಕಷಾಯ ಅಥವಾ ಆರೋಗ್ಯಕರ ಪಾನೀಯ ಕುಡಿದು ಹಸಿವು ನಿವಾರಿಸಿಕೊಂಡು ಅರ್ಧ ಗಂಟೆಯ ನಂತರ ಧ್ಯಾನ ಮಾಡಬೇಕು. ಹಾಗೆಯೇ ತೀರಾ ಸುಸ್ತಾಗಿದ್ದಾಗ, ಅರ್ಧ ತಾಸು ಆರಾಮವಾಗಿ ಕುಳಿತು ಅಥವಾ ಶವಾಸನ ಮಾಡಿ ದಣಿವು…

  ಮುಂದೆ ಓದಿ...
 • ಧ್ಯಾನದಿಂದ ಹೊಸ ಬದುಕು (ಭಾಗ 2)
  addoor

  ಧ್ಯಾನ ಎಂದರೇನು?
  ಅದೊಂದು ಅನುಭವ. ಶಬ್ದಕೋಶದ ಪುಟ ನೋಡಿದರೆ, "ದೀರ್ಘ ಚಿಂತನೆ” ಅಥವಾ "ಯಾವುದೇ ಸತ್ಯ, ವಿಸ್ಮಯ ಅಥವಾ ಪವಿತ್ರ ವಸ್ತುವಿನ ಬಗ್ಗೆ ಮನಸ್ಸನ್ನು ನಿರಂತರವಾಗಿ ತೊಡಗಿಸುವುದು" ಎಂಬ ಅರ್ಥ ಸಿಗಬಹುದು. ಆದರೆ, ಧ್ಯಾನ ಇವೆಲ್ಲಕ್ಕಿಂತ ಮಿಗಿಲಾದ ಅನುಭವ. ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು - ಅದೊಂದು ವಿವರಿಸಲಾಗದ ಅನುಭವ ಎಂಬ ಸತ್ಯ.

  ಧ್ಯಾನವೆಂದರೆ ಇವೆಲ್ಲದರೊಂದಿಗೆ ಒಂದಾಗುವುದು: ಪ್ರಕೃತಿ, ಅನಂತ ವಿಶ್ವಚೈತನ್ಯ, ಮೌನ, ಈ ಕ್ಷಣ ಮತ್ತು ಸಾಕ್ಷೀಭಾವ. ಧ್ಯಾನವೆಂದರೆ ಪ್ರಕೃತಿಯೊಂದಿಗೆ ಒಂದಾಗುವುದು. ನಾನು ಬೇರೆ, ಪ್ರಕೃತಿ ಬೇರೆ ಅಲ್ಲ; ನಾನು ಬಂದಿರುವುದು ಪ್ರಕೃತಿಯಿಂದ, ಹೋಗಿ…

  ಮುಂದೆ ಓದಿ...
 • ಧ್ಯಾನದಿಂದ ಹೊಸ ಬದುಕು (ಭಾಗ ೧)
  addoor

  ಜೆನ್ ಗುರುಗಳೊಬ್ಬರಲ್ಲಿ ಶಿಷ್ಯನೊಬ್ಬ ಕೇಳಿದ ಪ್ರಶ್ನೆ: "ಗುರುಗಳೇ, ಎಲ್ಲರೂ ನಿಮ್ಮನ್ನು ಗೌರವಿಸುತ್ತಾರೆ. ಇಂತಹ ಮಹಾತ್ಮರಾಗಲು ನೀವೇನು ಮಾಡಿದಿರಿ?" ತಕ್ಷಣ ಗುರುಗಳ ಉತ್ತರ, “ನನಗೆ ಹಸಿವಾದಾಗ ತಿಂದೆ ಮತ್ತು ನಿದ್ದೆ ಬಂದಾಗ ಮಲಗಿದೆ.”

  ಚಕಿತನಾದ ಶಿಷ್ಯ ಕೇಳಿದ, "ಗುರುಗಳೇ, ಎಲ್ಲರೂ ಇದನ್ನು ಮಾಡುತ್ತಾರೆ. ಹಾಗಿರುವಾಗ ಇದರಲ್ಲಿ ವಿಶೇಷ ಏನಿದೆ?” ಈ ಪ್ರಶ್ನೆಗೆ ಗುರುಗಳ ಮಾರ್ಮಿಕ ಉತ್ತರ, “ಎಲ್ಲರೂ ಇದನ್ನು ಮಾಡುವುದಿಲ್ಲ. ಅವರೆಲ್ಲ ಏನು ಮಾಡುತ್ತಾರೆಂದು ಗಮನಿಸು. ಅವರು ಹಸಿವಿಲ್ಲದಿದ್ದರೂ ರುಚಿಯ ಚಪಲದಿಂದ ತಿನ್ನುತ್ತಾರೆ. ನಿದ್ದೆ ಬಾರದಿದ್ದರೂ ಮಲಗಿ ನಿದ್ರಿಸಲು ಚಡಪಡಿಸುತ್ತಾರೆ; ಹಾಸಿಗೆಯಲ್ಲಿ…

  ಮುಂದೆ ಓದಿ...
 • ಇರ್ಫಾನ್ ಖಾನ್ ಎಂಬ ಅಪ್ರತಿಮ ನಟನ ಹೇಗೆ ಮರೆಯಲಿ?
  Ashwin Rao K P

  ಬಾಲಿವುಡ್ ನಟ ಇರ್ಫಾನ್ ಖಾನ್ ಇನ್ನಿಲ್ಲ ಎಂಬ ಸುದ್ದಿ ಈ ಕೊರೋನಾ ಮಹಾಮಾರಿಯ ಸುದ್ದಿಯ ನಡುವೆ ದೊಡ್ಡ ಸುದ್ದಿಯಾಗಲೇ ಇಲ್ಲ. ಇರ್ಫಾನ್ ಖಾನ್ ಎಂಬ ಈ ನಟ ಯಾವತ್ತೂ ನಮ್ಮ ಪಕ್ಕಾ ಹೀರೋ ಛಾಯೆ ಹೊಂದಿರುವ ನಟ ಎಂದು ಅನಿಸಲೇ ಇಲ್ಲ. ಪಕ್ಕದ ಮನೆಯ ಬೆರಗು ಕಣ್ಣಿನ ಹುಡುಗನಂತೆಯೇ ಭಾಸವಾಗುತ್ತಿತ್ತು. ಎಲ್ಲಾ ನಟರಂತೆ ಸುಂದರ ವರ್ಣ, ಚಾಕಲೇಟ್ ಮುಖ, ಅದ್ಭುತ ನೃತ್ಯಗಾರ ಎಂಬೆಲ್ಲಾ ಗುಣವಿಶೇಷಗಳನ್ನು ಹೊಂದಿರಲಿಲ್ಲ. ಆದರೆ ಒಬ್ಬ ಪಕ್ಕಾ ಕಮರ್ಶಿಯಲ್ ನಟನಿಗೆ ಬೇಕಾದ ಎಲ್ಲಾ ಗುಣಗಳು ಈ ನಟನಿಗೆ ಇತ್ತು ಎಂದರೆ ತಪ್ಪಾಗದು. ಬಹುತೇಕ ಮಂದಿ ಇವರ ಚಿತ್ರಗಳನ್ನು ನೋಡಿರಲೂ ಬಹುದು. 
  ೧೯೬೭ರ ಜನವರಿ ೭ ರಂದು ರಾಜಸ್ಥಾನದ…

  ಮುಂದೆ ಓದಿ...
 • ಕಥೆಯಾದಳಾ ಕಪ್ಪು ಹುಡುಗಿ !!
  Ashwin Rao K P

  ಮೊದಲ ಬಾರಿ ಅವಳನ್ನು ನಾನು ನೋಡಿದ್ದು ನನ್ನ ತ೦ಗಿ ವನಿತಾಳ ಬಟ್ಟೆ ಹೊಲಿಯುವ ಅ೦ಗಡಿಯಲ್ಲಿ. ಕಪ್ಪಗೆ, ಕುಳ್ಳಗೆ ವ್ಯಕ್ತಿತ್ವ ಯಾರನ್ನೂ ಆಕರ್ಷಿಸುವ೦ತಿರಲಿಲ್ಲ. ವನಿತಾಳ ಹತ್ತಿರದ ಬ್ಯೂಟಿ ಪಾರ್ಲರ್‌ಗೆ ಕೆಲಸಕ್ಕೆ ಬ೦ದ ಹೊಸ ಬ್ಯೂಟಿಷನ್ ಎ೦ದು ಕೇಳಿದಾಗ ನನಗೆ ನ೦ಬಲಾಗಲಿಲ್ಲ. ಇಷ್ಟೊ೦ದು ಕಪ್ಪಾಗಿ ಇರುವವರೂ ಬ್ಯೂಟಿಷನ್‌ಗಳಾಗುತ್ತಾರಾ ಎ೦ದು ನಾನು ವನಿತಾ ಹತ್ತಿರ ಕೇಳಿದಾಗ ಅವಳು ಜೋರಾಗಿ ನಕ್ಕಿದ್ದಳು. ಚ೦ದಗೆ, ಬೆಳ್ಳಗೆ ಇರುವವರು ಮಾತ್ರ ಆ ಕೆಲಸ ಮಾಡ ಬೇಕಾ? ಚ೦ದವನ್ನು ಅವಳು ಮಾಡುವ ಕೆಲಸದಲಿ ಹುಡುಕು ಎ೦ದು ನನ್ನ ಬಾಯಿ ಮುಚ್ಚಿಸಿದ್ದಳು.
      ಅದು ಸರಿನೇ ಅನ್ನಿ, ಯಾಕೆ೦ದರೆ ಶಾರುಖ್ ಖಾನ್‌ನ ಕೂದಲು…

  ಮುಂದೆ ಓದಿ...
 • ಮಹಾ ಸಮಾಜ ಸುಧಾರಕ ಬಸವಣ್ಣನವರು
  addoor

  ಮಹಾ ಸಮಾಜ ಸುಧಾರಕ ಬಸವಣ್ಣನವರು ಜನಿಸಿದ್ದು ೧೧೦೫ರಲ್ಲಿ - ವಿಜಯಪುರ ಜಿಲ್ಲೆಯ ಬಾಗೇವಾಡಿಯಲ್ಲಿ. ಇವರ ತಂದೆ ಮಾದರಸ, ತಾಯಿ ಮಾದಲಾಂಬಿಕೆ. ಎಪ್ರಿಲ್ ೨೬ ಬಸವಣ್ಣನವರ ಜಯಂತಿ.

  ಜನಸಾಮಾನ್ಯರ ಆಡುಮಾತಿನಲ್ಲಿ ರಚಿಸಿದ ವಚನಗಳ ಮೂಲಕ ಸಾಮಾಜಿಕ ಬದಲಾವಣೆಯ ಕಹಳೆ ಮೊಳಗಿಸಿದವರು ಬಸವಣ್ಣ. ಬಾಲ್ಯದಿಂದಲೇ ಅವರ ಚಿಂತನಶೀಲತೆ, ಗೊಡ್ಡು ಸಂಪ್ರದಾಯಗಳನ್ನು ಪ್ರಶ್ನಿಸುವ ಮತ್ತು ಪ್ರತಿಭಟಿಸುವ ಸ್ವಭಾವ ಎದ್ದು ಕಾಣುತ್ತಿತ್ತು. ಉದಾಹರಣೆಗೆ ಎಂಟು ವರುಷ ವಯಸ್ಸಿನಲ್ಲಿ ಹೆತ್ತವರು ಉಪನಯನ ಮಾಡಲು ಮುಂದಾದಾಗ, ಬಸವಣ್ಣ ಅದನ್ನು ನಿರಾಕರಿಸಿದರು.

  ಅಷ್ಟೇ ಅಲ್ಲ, ಕುಟುಂಬವನ್ನೇ ತೊರೆದು ಕೂಡಲಸಂಗಮಕ್ಕೆ ನಡೆದರು. ಅಲ್ಲಿ…

  ಮುಂದೆ ಓದಿ...
 • ಕೊರೋನಾ: ಮನೆಯಲ್ಲೇ ಇರೋಣಾ
  Ashwin Rao K P

  ಬಹುಷಃ ಸುಮಾರು ಒಂದುವರೆ ತಿಂಗಳಿಂದ ಎಲ್ಲಾ ಕಡೆ ಕೊರೋನಾ ಮಹಾ ಮಾರಿಯದ್ದೇ ಸುದ್ದಿ. ಯಾವ ಪತ್ರಿಕೆಯೇ ಆಗಿರಲಿ, ಸುದ್ದಿ ಚಾನೆಲ್‌ಗಳೇ ಆಗಿರಲಿ ಇದರದ್ದೇ ಸುದ್ದಿ. ಉಳಿದ ಯವುದೇ ಕಾರ್ಯಕ್ರಮಗಳು ಇಲ್ಲವೇ ಇಲ್ಲ ಅವರಾದರೂ ಏನು ಮಾಡುವುದು? ಈ ಸುದ್ದಿಗಳನ್ನು ಕೇಳಿ ಕೇಳಿ ನಿಮಗೂ ಬೋರಾಗಿರಬಹುದಲ್ವಾ? ಅದಕ್ಕೇ ನಾನು ಕೊರೋನಾ ರೋಗ ಮತ್ತು ಅದರ ಪರಿಣಾಮ ಮತ್ತು ನಿಯಂತ್ರಣಗಳ ಬಗ್ಗೆ ಕೊರೆಯಲು ಹೋಗಲ್ಲ. ನೀವು ಈಗಾಗಲೇ ಅದರ ಬಗ್ಗೆ ತಿಳಿದುಕೊಂಡು ಮುಂಜಾಗ್ರತೆಯನ್ನು ವಹಿಸಿಕೊಂಡು ಮನೆಯಲ್ಲೇ ಆರೋಗ್ಯವಂತರಾಗಿರುವಿರಿ ಎಂದು ನನ್ನ ನಂಬಿಕೆ. 
      ನಾನು ಹೇಳಬಯಸಿರುವುದು ಕೊರೋನಾ ಅಥವಾ ಯಾವುದೇ ಹೆಮ್ಮಾರಿ ನಮ್ಮ ನಡುವೆ…

  ಮುಂದೆ ಓದಿ...