ಇತ್ತೀಚೆಗೆ ಸೇರಿಸಿದ ಪುಟಗಳು

೯೦ರ ದಶಕದಲ್ಲಿ ಯುವ ಮನಸ್ಸುಗಳಿಗೆ ಲಗ್ಗೆ ಇಟ್ಟ ಹಲವಾರು ಚಲನಚಿತ್ರಗಳ ಪೈಕಿ ಬಾಲಿವುಡ್ ಚಿತ್ರ ‘ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ’ ಪ್ರಮುಖವಾದದ್ದು. ದಿಲ್, ಆಶಿಕಿ ಮೊದಲಾದ ಚಿತ್ರಗಳ ನಂತರ ಬಿಡುಗಡೆಯಾದ ಈ ಚಿತ್ರ ಮುಂದಿನ ದಿನಗಳಲ್ಲಿ ಸಿನಿಪ್ರಿಯರ ಬಾಯಲ್ಲಿ ಡಿಡಿಎಲ್ ಜೆ (DDLJ) ಅಥವಾ ಡಿಡಿಎಲ್ (DDL) ಎಂದೇ ಕರೆಯಲ್ಪಟ್ಟಿತು. ೧೯೯೫ರ ಅಕ್ಟೋಬರ್ ೨೦ ರಂದು ಬಿಡುಗಡೆಯಾದ ಈ ಸಿನೆಮಾ ಈ ವರ್ಷ (೨೦೨೦) ತನ್ನ ೨೫ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಅಂದು ಯುವಕರಾಗಿದ್ದವರು ಇಂದು ಮಧ್ಯವಯಸ್ಕರಾಗಿದ್ದಾರೆ. ಚಿತ್ರದ ಪಾತ್ರಗಳಾದ ರಾಜ್ ಮಲ್ಹೋತ್ರಾ ಮತ್ತು ಸಿಮ್ರಾನ್ ನಮ್ಮ…ಮುಂದೆ ಓದಿ...

27 views
Mon, 10/26/2020 - 16:06

ಸೋಮಾರಿ ಟೆಡ್ದಿ ಕರಡಿಗೆ ಭಾರೀ ಖುಷಿ ಕೊಡುವುದು ಯಾವುದು ಗೊತ್ತೇ? ಗುಂಡಣ್ಣನ ಹಾಸಿಗೆಯಲ್ಲಿ ಬೆಚ್ಚಗೆ ಮಲಗುವುದು. ಪ್ರತಿ ದಿನ ಬೆಳಗ್ಗೆ ಗಡಿಯಾರದ ಅಲಾರಮ್ ಸದ್ದು ಮಾಡಿದೊಡನೆ ಗುಂಡಣ್ಣ ಹಾಸಿಗೆಯಿಂದ ಜಿಗಿದು, ಕಿಟಕಿಯ ಪರದೆಗಳನ್ನು ಪಕ್ಕಕ್ಕೆ ಸರಿಸುತ್ತಿದ್ದ.

ಸೂರ್ಯನ ಬೆಳಕು ಕಿಟಕಿಯಿಂದ ತೂರಿ ಬಂದು ಕೋಣೆಯನ್ನೆಲ್ಲ ಬೆಳಗುತ್ತಿದ್ದಂತೆ, “ಆಹಾ, ಎಷ್ಟು ಸುಂದರ ಮುಂಜಾನೆ" ಎಂದು ಹೇಳುತ್ತಾ ಅವನು ತನ್ನ ಕೈಗಳನ್ನು ಮೇಲಕ್ಕೆತ್ತಿ ಜೋರಾಗಿ ಉಸಿರೆಳೆದುಕೊಳ್ಳುತ್ತಿದ್ದ. "ನಿನಗೆ ತಲೆಕೆಟ್ಟಿದೆ” ಎಂದು ಗೊಣಗುತ್ತಾ ಟೆಡ್ಡಿ ಕರಡಿ ಗುಂಡಣ್ಣನ ಹಾಸಿಗೆಯ ಕ್ವಿಲ್ಟಿನೊಳಗೆ ಇನ್ನಷ್ಟು ತೂರಿಕೊಳ್ಳುತ್ತಿತ್ತು. ನಂತರ…ಮುಂದೆ ಓದಿ...

26 views
Sat, 10/24/2020 - 20:56

ಕ್ಷಣಮಾತ್ರದಲ್ಲಿ ಇಡೀ ಜಗತ್ತನ್ನೇ ಸುತ್ತಿ ಬರುವಷ್ಟು ವೇಗ ಪಡೆದಿರುವುದು ಮನಸ್ಸು ಮಾತ್ರ. ಭೂಮಿಯ ಯಾವುದೋ ಮೂಲೆಯಲ್ಲಿದ್ದ ಮನುಷ್ಯ ಚಂದ್ರಯಾನ, ಮಂಗಳಯಾನ ಎಲ್ಲವನ್ನೂ ಕ್ಷಣಾರ್ಧದಲ್ಲಿ ಮುಗಿಸಿ ಮತ್ತೆ ಬಂದು ಸ್ವಸ್ಥಾನವನ್ನು ಸೇರಿಬಿಡುತ್ತಾನೆ. ಈ *ಮನಸ್ಸು ಸರಿಯಾಗಿದ್ದರೆ ಸ್ವರ್ಗವನ್ನೇ ಸೃಷ್ಟಿಸಬಲ್ಲದು; ಕೆಟ್ಟರೆ ಘೋರ ನರಕವನ್ನೇ ಸೃಷ್ಟಿಸುತ್ತದೆ.* ಅದಕ್ಕೇ ಆಂಗ್ಲ ಬರಹಗಾರ ಮಿಲ್ಟನ್ ಹೇಳುತ್ತಾರೆ. *The mind in its own place and itself can make a heaven of hell and hell of heaven* ಎಂದು. ಎಲ್ಲ ಸುಖ, ಸಂತೋಷ, ನೆಮ್ಮದಿ, ಪ್ರೀತಿಯ ಮಹಾಪೂರವನ್ನೇ…ಮುಂದೆ ಓದಿ...

19 views
Sat, 10/24/2020 - 11:46

ವಾಕಿಂಗ್‌ ಅಥವಾ ನಡಿಗೆಯಿಂದ ಹಲವು ಪ್ರಯೋಜನಗಳಿವೆ ಎಂದು ಹಲವರು ಹೇಳುತ್ತಾರೆ. ವಾಕಿಂಗ್‌ನ ಪ್ರಯೋಜನಗಳನ್ನು ತಿಳಿದಿದ್ದರೂ ಅನೇಕ ಜನರು ನಡೆಯುವುದನ್ನು ತಪ್ಪಿಸುತ್ತಾರೆ. ಆದರೆ ಇಂದಿನ ಜೀವನಶೈಲಿಯಲ್ಲಿ ವಾಕಿಂಗ್ ಬಹಳ ಅವಶ್ಯಕವಾಗಿದೆ. ಚುರುಕಾದ ವಾಕಿಂಗ್ ಖಿನ್ನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಇತ್ತೀಚಿನ ಅಧ್ಯಯನವು ಕಂಡುಹಿಡಿದಿದೆ. ವೇಗವಾಗಿ ನಡೆಯುವುದರಿಂದ ಆಸ್ಪತ್ರೆಗೆ ದಾಖಲಾಗುವ ಅಪಾಯ ಮತ್ತು ಕಡಿಮೆ ಸಮಯ ಉಳಿಯಬೇಕಾಗುತ್ತದೆ.

ನಿಧಾನವಾಗಿ…ಮುಂದೆ ಓದಿ...

35 views
Fri, 10/23/2020 - 15:21

ಉಯಿಲು ಅಂದರೆ ವಿಲ್ (Will) ಈಗೀಗ ಬಹಳಷ್ಟು ಪ್ರಚಲಿತದಲ್ಲಿರುವ ವಿಷಯ. ಒಬ್ಬ ವ್ಯಕ್ತಿ ತನ್ನ ಮರಣಾನಂತರ ಏನೆಲ್ಲಾ ಕಾರ್ಯಗಳು ಆಗಬೇಕು, ಆಸ್ತಿ ಹೇಗೆ ವಿಲೇವಾರಿಯಾಗಬೇಕು, ಹಣ ಯಾರಿಗೆ ಸಿಗಬೇಕು, ಎಷ್ಟು ಪಾಲು ಹಂಚಬೇಕು ಎಂಬೆಲ್ಲಾ ವಿಷಯಗಳನ್ನು ತನ್ನ ಜೀವಿತಾವಧಿಯಲ್ಲಿ ಬರೆದು ಇಡುವ ಮರಣ ಪತ್ರವೇ ಉಯಿಲು ಅಥವಾ ವಿಲ್. ಮಾನಸಿಕವಾಗಿ ಸ್ವಸ್ಥವಿರುವ ವ್ಯಕ್ತಿ ತನಗೆ ಬೇಕಾದ ರೀತಿಯಲ್ಲಿ ಉಯಿಲು ಬರೆದು ಇಬ್ಬರು ಸಾಕ್ಷಿಗಳ ಸಹಿ ಮಾಡಿಸಿದರೆ ಉಯಿಲು ಅಧಿಕೃತವಾಗುತ್ತದೆ. ಅದನ್ನು ನೊಂದಾಯಿಸಿದರೆ ಇನ್ನೂ ಉತ್ತಮ. ಸಾಕ್ಷಿಗಳಿಗೆ ಉಯಿಲಿನಲ್ಲಿ ಬರೆದ ವಿಷಯ ತಿಳಿಸಬೇಕೆಂದೇನೂ ಇಲ್ಲ.…ಮುಂದೆ ಓದಿ...

34 views
Fri, 10/23/2020 - 14:24

೨೧.ಭಾರತದ ಅದ್ಭುತ ವನ್ಯಜೀವಿಗಳು
ಭಾರತದ ವನ್ಯಜೀವಿ ಸಂಪತ್ತು ಅದರ ವೈವಿಧ್ಯತೆಯಿಂದಾಗಿಯೇ ಅದ್ಭುತ. ಇದಕ್ಕೆ ಕಾರಣ ಭಾರತದ ವೈವಿಧ್ಯಮಯ ಮಣ್ಣು, ಹವಾಮಾನ ಮತ್ತು ಭೂಲಕ್ಷಣಗಳು.

ಗಮನಿಸಿ: ಜಗತ್ತಿನ ಸುಮಾರು ಶೇಕಡಾ ೭೦ರಷ್ಟು ಜೀವವೈವಿಧ್ಯತೆಗೆ ಭಾರತವೇ ತವರೂರು. ಹಾಗೆಯೇ, ಜಗತ್ತಿನ ಸುಮಾರು ಶೇಕಡಾ ೩೩ರಷ್ಟು ಸಸ್ಯ ಪ್ರಭೇದಗಳು (ಸ್ಪಿಷೀಸ್) ಭಾರತದಲ್ಲಿ ಮಾತ್ರ ಇವೆ.

ಭಾರತದಲ್ಲಿ ೩೭೨ ಸಸ್ತನಿಗಳ ಸ್ಪಿಷೀಸ್‌ಗಳಿವೆ. ಆನೆ, ಭಾರತೀಯ ಕಾಡುಕೋಣ, ಖಡ್ಗಮೃಗ, ಹಿಮಾಲಯದ ಕುರಿ ಇವುಗಳಲ್ಲಿ ಸೇರಿವೆ. ದೊಡ್ಡ ಬೆಕ್ಕುಗಳಾದ ಹುಲಿ ಮತ್ತು ಸಿಂಹಗಳೂ ಭಾರತದಲ್ಲಿವೆ.

ಭಾರತದಲ್ಲಿರುವ ೧,೨೨೮ ಹಕ್ಕಿಗಳ…ಮುಂದೆ ಓದಿ...

20 views
Thu, 10/22/2020 - 22:36

 

 

ಈ ಎರಡು ಸಂಗತಿಗಳನ್ನು ನೀವು ಎಲ್ಲಿಯಾದರೂ ಓದಿರಬಹುದು.
1) ಅವನಿಗೆ ಸಾವಿರ ತಲೆಗಳು, ಸಾವಿರ ಕಣ್ಣುಗಳು, ಸಾವಿರ ಕೈಗಳು, ಸಾವಿರ  ಕಾಲುಗಳು  ಇತ್ಯಾದಿ
2) ಅವನ ಮುಖದಿಂದ ಬ್ರಾಹ್ಮಣರೂ,  ಅವನ ತೋಳುಗಳಿಂದ ಕ್ಷತ್ರಿಯರೂ  ಅವನ ತೊಡೆಗಳಿಂದ ವೈಶ್ಯರೂ  ಅವನ ಅಡಿಗಳಿಂದ ಶೂದ್ರರೂ  ಹುಟ್ಟಿದರು.   

ಇವು ಪುರುಷಸೂಕ್ತದಲ್ಲಿ ಬರುತ್ತವೆ.  ಇತ್ತೀಚೆಗೆ ಗೂಗಲ್ - e-ಪುಸ್ತಕಗಳಲ್ಲಿ ಡಿ ವಿ ಜಿ ಅವರು ಬರೆದ ಈ ಪುಸ್ತಕವು ಗಮನ ಸೆಳೆಯಿತು. ಗೂಗಲ್ ನ e-ಪುಸ್ತಕಗಳ ಅನುಕೂಲ ವೆಂದರೆ ಖರೀದಿಸುವ ಮೊದಲೇ ಕೆಲವು ಪುಟಗಳನ್ನು sample ಎ೦ದು ಓದುವ ಸೌಲಭ್ಯ ಇದೆ.…ಮುಂದೆ ಓದಿ...

55 views
Thu, 10/22/2020 - 05:05

‘ಕತ್ತೆಗೇನು ಗೊತ್ತು ಕಸ್ತೂರಿಯ ಗಂಧ' ಎಂಬುದು ಹಳೆಯ ಗಾದೆ ಮಾತು. ಕಸ್ತೂರಿಯ ಸುವಾಸನೆಯು ಬಹಳ ಪ್ರಸಿದ್ಧ. ನೈಜವಾದ ಕಸ್ತೂರಿ ಉತ್ಪಾದನೆಯಾಗುವುದು ಕಸ್ತೂರಿ ಮೃಗ ಎಂಬ ಜಿಂಕೆ ಜಾತಿಯ ಪ್ರಾಣಿಯ ಗ್ರಂಥಿಗಳಲ್ಲಿ. ಕಸ್ತೂರಿ ಪರಿಮಳ ಸೂಸುವಾಗ ಕಸ್ತೂರಿ ಮೃಗಕ್ಕೆ ಆ ಸುವಾಸನೆ ಎಲ್ಲಿಂದ ಬರುತ್ತದೆ ಎಂದು ತಿಳಿಯದೇ, ಇಡೀ ಕಾಡಿನಲ್ಲಿ ಓಡಾಡಿ ಸುಸ್ತು ಮಾಡಿಕೊಳ್ಳುತ್ತದೆಯಂತೆ. ಹೀಗೆ ಬಳಲಿದ ಪ್ರಾಣಿಯನ್ನು ಬೇಟೆಗಾರರು ಸುಲಭವಾಗಿ ಹಿಡಿದು ಕೊಂಡು ಅದರ ಗ್ರಂಥಿಯಿಂದ ಕಸ್ತೂರಿಯನ್ನು ಹೊರತೆಗೆಯುತ್ತಾರಂತೆ. ಇದು ಎಷ್ಟು ಸತ್ಯ ಮಾತೋ ಗೊತ್ತಿಲ್ಲ. ಆದರೆ ಬಹು ಸಮಯದಿಂದ ಪ್ರಚಲಿತವಿರುವ…ಮುಂದೆ ಓದಿ...

54 views
Wed, 10/21/2020 - 15:08

ಆ ಗುರುಮಠದಲ್ಲಿ ನೂರಾರು ಶಿಷ್ಯರು. ಅಲ್ಲಿನ ಬೋಧನಾ ಭವನದ ಸ್ಥಳ ಸಾಕಾಗುತ್ತಿರಲಿಲ್ಲ. ವಿಶಾಲವಾದ ಕಟ್ಟಡ ಕಟ್ಟಿಸಲು ಗುರುವಿಗೆ ಹಣ ಬೇಕಾಗಿತ್ತು.

ಆಗ ಅಲ್ಲಿಗೆ ಬಂದ ವ್ಯಾಪಾರಿಯೊಬ್ಬ ಗುರುಗಳಿಗೆ ಸಹಾಯ ಮಾಡಲು ನಿರ್ಧರಿಸಿದ. ಆತ ಐನೂರು ಚಿನ್ನದ ನಾಣ್ಯಗಳನ್ನು ಮಠಕ್ಕೆ ಕಾಣಿಕೆಯಾಗಿ ಸಮರ್ಪಿಸಿದ.

“ಆಗಲಿ, ಮಠಕ್ಕಾಗಿ ಇದನ್ನು ಸ್ವೀಕರಿಸುತ್ತೇನೆ” ಎಂದರು ಅಲ್ಲಿನ ಗುರುಗಳು. ಇದನ್ನು ಕೇಳಿ ಆ ವ್ಯಾಪಾರಿ ಪೆಚ್ಚಾದ. ಒಂದಲ್ಲ, ಎರಡಲ್ಲ, ಐನೂರು ಚಿನ್ನದ ನಾಣ್ಯ ಸಮರ್ಪಿಸಿದ್ದೇನೆ. ಈ ಗುರುಗಳು ಒಂದೇ ಒಂದು ಕೃತಜ್ನತೆಯ ಮಾತು ಹೇಳುತ್ತಿಲ್ಲವಲ್ಲ ಎಂದುಕೊಂಡ ವ್ಯಾಪಾರಿ. ಕೊನೆಗೆ ತಡೆಯಲಾಗದೆ ವ್ಯಾಪಾರಿ…ಮುಂದೆ ಓದಿ...

24 views
Tue, 10/20/2020 - 16:59

ಅಪ್ಪ ಬುದ್ದಿ ಹೇಳಿದರೆಂದು ನೀ ಕೋಪಿಸಿಕೊಳ್ಳಬೇಡ,

ಎಷ್ಟೋ ಜನಕ್ಕೆ ಅಪ್ಪನೇ ಇರುವುದಿಲ್ಲ.

ಅಮ್ಮ ಬೈದಳೆಂದು ನೀ ಸಿಟ್ಟಾಗಬೇಡ,

ಎಷ್ಟೋ ಜನಕ್ಕೆ ತಾಯಿಯೇ ಇರುವುದಿಲ್ಲ.

ಮುಂದೆ ಓದಿ...

32 views
Tue, 10/20/2020 - 15:47