ಇತ್ತೀಚೆಗೆ ಸೇರಿಸಿದ ಪುಟಗಳು

ಆಧುನಿಕ ಜಗತ್ತಿನ ಅದ್ಭುತಗಳಲ್ಲಿ ಒಂದಾದ ಐಫೆಲ್ ಟವರ್ ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿದೆ. ನಮ್ಮ ಆಧುನಿಕ ಜಗತ್ತಿನಲ್ಲಿ ಅಮೇರಿಕಾದ ‘ಸ್ವಾತಂತ್ರ್ಯ ದೇವಿಯ ಪ್ರತಿಮೆ' (Statue of Liberty), ಭಾರತ ದೇಶದಲ್ಲಿ ಆಗ್ರಾ ನಗರದಲ್ಲಿರುವ ತಾಜ್ ಮಹಲ್ ಹಾಗೂ ಪುರಾತನ ಅದ್ಭುತಗಳಲ್ಲಿ ಈಗ ಉಳಿದಿರುವ ಈಜಿಪ್ಟ್ ದೇಶದ ಕೈರೋದಲ್ಲಿರುವ ಪಿರಮಿಡ್ ಗಳು ನಮ್ಮಲ್ಲಿ ಯಾವಾಗಲೂ ಕುತೂಹಲವನ್ನು ಕೆರಳಿಸುತ್ತಾ ಬಂದಿವೆ 

ಫ್ರಾನ್ಸ್ ದೇಶವು ಅತ್ಯಂತ ಸುಂದರವಾದ ಪ್ರವಾಸೀ…ಮುಂದೆ ಓದಿ...

36 views
Thu, 10/08/2020 - 18:18

೧೭.ಜಗತ್ತಿನಲ್ಲಿ ಅತ್ಯಂತ ಜಾಸ್ತಿ ಹಣ ಒಳರವಾನೆ (ರೆಮಿಟೆನ್ಸ್) ಆಗುವ ದೇಶ ಭಾರತ
ಒಬ್ಬ ವ್ಯಕ್ತಿ ವಿದೇಶದಲ್ಲಿ ಉದ್ಯೋಗ ಮಾಡುತ್ತಾ, ತಾನು ಗಳಿಸಿದ ಹಣವನ್ನು ತನ್ನ ಮಾತೃದೇಶಕ್ಕೆ ರವಾನಿಸಿದಾಗ, ಹಾಗೆ ರವಾನಿಸಿದ ಹಣವನ್ನು “ಒಳರವಾನೆ" (ರೆಮಿಟೆನ್ಸ್) ಎನ್ನುತ್ತಾರೆ.

ವಿದೇಶಗಳಲ್ಲಿ ದುಡಿಯುತ್ತಿರುವ ಭಾರತೀಯರು ಭಾರತಕ್ಕೆ ಒಳರವಾನೆ ಮಾಡುತ್ತಿರುವ ಹಣ ಜಗತ್ತಿನಲ್ಲೇ ಅತ್ಯಧಿಕ. ಕಳೆದ ಕೆಲವು ವರುಷಗಳಲ್ಲಿ ವಿದೇಶಗಳಲ್ಲಿ ದುಡಿಯುವ ಭಾರತೀಯರು ಭಾರತಕ್ಕೆ ಪ್ರತಿ ಆರ್ಥಿಕ ವರುಷದಲ್ಲಿ ಸುಮಾರು ೮೦ ಬಿಲಿಯನ್ ಡಾಲರ್ ಹಣವನ್ನು ಒಳರವಾನೆ ಮಾಡಿದ್ದಾರೆ!

ಈ ಹಣವನ್ನು ಬ್ಯಾಂಕ್ ಡಿಮಾಂಡ್ ಡ್ರಾಫ್ಟ್…ಮುಂದೆ ಓದಿ...

19 views
Thu, 10/08/2020 - 10:38

ಕಲ್ಲಾರ್ ಎನ್ನುವುದು ಕೇರಳದ ತಿರುವನಂತಪುರಂ ಜಿಲ್ಲೆಯ ಒಂದು ಸಣ್ಣ ಗ್ರಾಮ. ಜೀವನಕ್ಕೆ ಬೇಕಾಗುವ ಪ್ರಾಥಮಿಕ ಸೌಲಭ್ಯಗಳ ಕೊರತೆಗಳು ಈ ಗ್ರಾಮದಲ್ಲಿ ಬಹಳಷ್ಟಿದೆ. ಆದರೆ ಇಲ್ಲಿನ ಗ್ರಾಮಸ್ಥರು ಯಾರಿಗಾದರೂ ಆರೋಗ್ಯದ ಸಮಸ್ಯೆ ಅಥವಾ ವಿಷಪೂರಿತ ಹಾವು ಕಚ್ಚಿದರೆ ಗಾಬರಿ ಪಡುವುದಿಲ್ಲ. ಏಕೆಂದರೆ ಇಲ್ಲಿದ್ದಾರೆ ಅವರೆಲ್ಲರ ‘ಅಮ್ಮ' ಲಕ್ಷ್ಮಿ ಕುಟ್ಟಿ. ಈ ಆದಿವಾಸಿ ಹೆಂಗಸು ಇವರೆಲ್ಲರ ಪಾಲಿಗೆ ಸಾಕ್ಷಾತ್ ಸಂಜೀವಿನಿ. ಏಕೆಂದು ತಿಳಿಯಬೇಕಾದರೆ ನೀವು ಈ ಲೇಖನ ಓದಲೇ ಬೇಕು.

ಮುಂದೆ ಓದಿ...

103 views
Wed, 10/07/2020 - 15:18

ಝೆನ್ ಗುರು ಸೋಯೆನ್ ಶಕುವಿನ ಶಿಷ್ಯರು, ಬಿರು ಬೇಸಗೆಯಲ್ಲಿ ಕೆಲವೊಮ್ಮೆ ಸೆಕೆ ತಾಳಲಾಗದೆ ಹಗಲು ಹೊತ್ತಿನಲ್ಲೇ ನಿದ್ದೆ ಮಾಡುತ್ತಿದ್ದರು. ಸೋಯೆನ್ ಶಕು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಆತ ಮಾತ್ರ ದಿನವಿಡೀ ಸದಾ ಚಟುವಟಿಕೆಯಿಂದಿರುತ್ತಿದ್ದ. ಇದಕ್ಕೆ ಕಾರಣ ಆತ ಶಿಷ್ಯನಾಗಿದ್ದಾಗ ನಡೆದ ಒಂದು ಘಟನೆ.

ಆಗ ಸೊಯೇನ್ ಶಕುವಿಗೆ ಹನ್ನೆರಡರ ವಯಸ್ಸು. ಆತ “ತೆಂಡೆ" ತತ್ತ್ವಜ್ನಾನ ಕಲಿಯುತ್ತಿದ್ದ. ಅದೊಂದು ಬೇಸಗೆಯ ನಡುಹಗಲು. ಉರಿ ಬಿಸಿಲು. ದಣಿದಿದ್ದ ಸೋಯೆನ್ ಶಕುವಿಗೆ ತಂಪುಗಾಳಿ ಬೀಸಿದಾಗ ಮಂಪರು. ಆಶ್ರಮದ ಹೊಸ್ತಿಲಲ್ಲೇ ಮಲಗಿ ಬಿಟ್ಟ.

ಸಮಯ ಸರಿಯುತ್ತಲೇ ಇತ್ತು. ಮೂರು ತಾಸುಗಳ ನಂತರ…ಮುಂದೆ ಓದಿ...

38 views
Tue, 10/06/2020 - 16:46

ಇಲ್ಲಿಂದ ಮುಂದೆ ಕೊರೋನಾ ಕಥೆ ಏನು ?

ಬದುಕು ಸಹಜತೆಯೆಡೆಗೆ ಸಾಗುತ್ತಿದೆ ಎಂದು ಭಾವಿಸಬೇಕೆ ?

ಇನ್ನೂ ಹೆಚ್ಚಾಗುತ್ತಿದೆ ಎಂದು ಆತಂಕ ಪಡಬೇಕೆ ?

ಲಸಿಕೆ ಬರುವವರೆಗೂ ಭಯದಲ್ಲೇ ಬದುಕಬೇಕೆ ?

ಮುಂದೆ ಓದಿ...

44 views
Tue, 10/06/2020 - 12:16

ಥಾಮಸ್ ಆಲ್ವ ಎಡಿಸನ್ ಯಾರಿಗೆ ಗೊತ್ತಿಲ್ಲ? ಎಡಿಸನ್ ಓರ್ವ ಅಮೇರಿಕಾದ ವಿಜ್ಞಾನಿ ಹಾಗೂ ಸಂಶೋಧಕ. ಅವರು ಹಲವಾರು ವಸ್ತುಗಳನ್ನು ಸಂಶೋಧಿಸಿದ ಖ್ಯಾತ ಅನ್ವೇಷಕ ಎಂದು ಹೆಸರುವಾಸಿ. ಎಡಿಸನ್ ೧೮೪೭ ರಿಂದ ೧೯೩೧ರ ಕಾಲಘಟ್ಟದಲ್ಲಿ ಬದುಕಿದ್ದರು. ಬಾಲ್ಯದ ಬಡತನದ ಜೀವನ, ದಡ್ಡ ಹುಡುಗ ಎಂಬೆಲ್ಲಾ ಕೀಳಿರಿಮೆಗಳಿಂದ ಹೊರಬಂದು ಅವರು ಗಳಿಸಿದ ಕೀರ್ತಿ ಸದಾ ಅನುಕರಣೀಯ. ಅವರ ಬಾಳಿನ ಎರಡು ಘಟನೆಗಳನ್ನು ಇಲ್ಲಿ ಬರೆಯುತ್ತಿರುವೆ. ಅದರಿಂದ ಎಡಿಸನ್ ಅವರ ವ್ಯಕ್ತಿತ್ವ ಎಂಥದ್ದು ಎಂದು ಅರ್ಥವಾಗುತ್ತದೆ.

ಮುಂದೆ ಓದಿ...

46 views
Tue, 10/06/2020 - 10:46

ಮೊನ್ನೆ, ೨ ಅಕ್ಟೋಬರ್ ೨೦೨೦ರಂದು, ಮಹಾತ್ಮಾ ಗಾಂಧಿಯವರ ೧೫೧ನೇ ಜನ್ಮದಿನದಂದು ಅವರಿಗೆ ನಮ್ಮ ದೇಶವಾಸಿಗಳಿಂದ ಗೌರವಾರ್ಪಣೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಮಹಾನ್ ಲೇಖಕರೂ ಆಗಿದ್ದರು. ಅವರು ಬರೆದದ್ದು ಸುಮಾರು ೧೦೦ ಸಂಪುಟಗಳ “ಕಲೆಕ್ಟೆಡ್ ವರ್ಕ್ಸ್ ಆಫ್ ಮಹಾತ್ಮಾ ಗಾಂಧಿ” ಎಂಬ ಪುಸ್ತಕ ಸರಣಿಗೆ ಸಾಕಾಗುವಷ್ಟಿತ್ತು!

ತಮ್ಮ ಬಿಡುವಿಲ್ಲದ ಕೆಲಸಕಾರ್ಯಗಳ ನಡುವೆ ಇಷ್ಟೊಂದು ಬರೆಯಲು ಅವರಿಗೆ ಹೇಗೆ ಸಾಧ್ಯವಾಯಿತು ಎಂಬುದೊಂದು ವಿಸ್ಮಯ. ಅವರು ಯಾಕೆ ಇಷ್ಟೆಲ್ಲ ಬರೆದರು ಎಂಬ ಪ್ರಶ್ನೆಯೂ ಮುಖ್ಯವಾಗುತ್ತದೆ.

ಅವರ ಈ ಎರಡು ಪುಸ್ತಕಗಳನ್ನು ಪರಿಶೀಲಿಸಿದರೆ, ಆ ಪ್ರಶ್ನೆಗೆ ಉತ್ತರ ಸಿಗಬಹುದು: “ಹಿಂದ್…ಮುಂದೆ ಓದಿ...

22 views
Sun, 10/04/2020 - 23:43

ಅದೊಂದು ಪುಟಾಣಿ ಹಂದಿಮರಿ. ರಾತ್ರಿ ಬೆಚ್ಚಗಿನ ಹುಲ್ಲಿನ ಮೇಲೆ ಸೋದರ ಮತ್ತು ಸೋದರಿ ಹಂದಿಮರಿಗಳ ಜೊತೆ ಮಲಗಿದ್ದಾಗ, ಅದು ತಲೆಯೆತ್ತಿ ಆಕಾಶದ ನಕ್ಷತ್ರಗಳನ್ನು ನೋಡುತ್ತಾ ಮುಗುಳ್ನಗುತ್ತಿತ್ತು - ತನ್ನ ಗುಟ್ಟನ್ನು ನೆನೆಯುತ್ತಾ.  ತಾನು ಪುಟಾಣಿ ಹಂದಿ ಮರಿ ಆಗಿದ್ದರೆ ಒಳ್ಳೆಯದೇ ಎಂದುಕೊಳ್ಳುತ್ತಿತ್ತು.

ಆದರೆ, ಕೆಲವೇ ದಿನಗಳ ಮುಂಚೆ, ಪುಟಾಣಿ ಹಂದಿಮರಿಗೆ ಬಹಳ ಬೇಜಾರಾಗಿತ್ತು. ಅದರ ಕುಟುಂಬದಲ್ಲಿ ಪುಟಾಣಿ ಹಂದಿಮರಿಯೇ ಅತ್ಯಂತ ಕಿರಿಯ ಮತ್ತು ಅತ್ಯಂತ ಪುಟಾಣಿ. ಅದರ ಐದು ಅಣ್ಣಂದಿರು ಮತ್ತು ಐದು ಅಕ್ಕಂದಿರು ಅದಕ್ಕಿಂತ ಗಾತ್ರದಲ್ಲಿ ದೊಡ್ಡದಾಗಿದ್ದವು. ರೈತನ ಮಡದಿ ಇದನ್ನು "ಪುಟಾಣಿ" ಎಂದು…ಮುಂದೆ ಓದಿ...

17 views
Sat, 10/03/2020 - 22:23

ಹಿಂದೂ ಪುರಾಣಗಳ ಪ್ರಕಾರ ಮಹಾ ವಿಷ್ಣುವಿನ ವಾಹನ ಗರುಡ ಎಂದು ಬಹುತೇಕರಿಗೆ ತಿಳಿದೇ ಇದೆ. ಆದರೆ ಈ ಗರುಡನಿಗೆ ಒಂದು ದೇವಸ್ಥಾನವಿದೆ ಮತ್ತು ಅಲ್ಲಿ ದೇವರ ರೂಪದಲ್ಲಿ ಅವನಿಗೆ ಪೂಜೆ ಸಲ್ಲಿಕೆಯಾಗುತ್ತದೆ ಎಂಬ ಸಂಗತಿ ಬಹುತೇಕರಿಗೆ ತಿಳಿಯದೇ ಇರಬಹುದು. ಗರುಡನನ್ನು ಇಲ್ಲಿ ಶ್ರೀ ಗರುಡಸ್ವಾಮಿ ಅಥವಾ ಗರುಡೇಶ್ವರ ಸ್ವಾಮಿ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಗರುಡನನ್ನೇ ಮುಖ್ಯದೇವರಾಗಿ ಆರಾಧಿಸುವ ಈ ಏಕೈಕ ದೇವಸ್ಥಾನ ಇರುವುದು ನಮ್ಮ ಕರ್ನಾಟಕ ರಾಜ್ಯದಲ್ಲೇ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊಲದೇವಿ ಎಂಬಲ್ಲಿ ಶ್ರೀ ಗರುಡ ಸ್ವಾಮಿ ದೇವಸ್ಥಾನ ಇದೆ. ಕೊಲದೇವಿ ಎಂಬ…ಮುಂದೆ ಓದಿ...

31 views
Sat, 10/03/2020 - 17:33

೧೫. ಭಾರತದ ಉಡುಪುಗಳ ವೈವಿಧ್ಯತೆಗೆ ಜಗತ್ತಿನಲ್ಲಿ ಸಾಟಿಯಿಲ್ಲ.
ಭಾರತದಲ್ಲಿ ಸಾಂಪ್ರದಾಯಿಕ ಉಡುಪು ಪ್ರದೇಶದಿಂದ ಪ್ರದೇಶಕ್ಕೆ, ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಬದಲಾಗುತ್ತದೆ. ಭಾರತದ ಹಲವು ಬುಡಕಟ್ಟಿನವರ ಮತ್ತು ಈಶಾನ್ಯ ರಾಜ್ಯಗಳ ಜನರ ಉಡುಪುಗಳಂತೂ ವರ್ಣಮಯ.

ಪ್ರತಿಯೊಬ್ಬನು ಧರಿಸುವ ಉಡುಪು ಆತನ/ ಆಕೆಯ ವಾಸಸ್ಥಳ, ಸ್ಥಳೀಯ ಪದ್ಧತಿ, ಹವಾಮಾನ ಮತ್ತು ಸಾಮಾಜಿಕ ಅಂತಸ್ತು ಅವಲಂಬಿಸಿ ಬದಲಾಗುತ್ತದೆ. ಭಾರತದ ಉದ್ದಗಲದಲ್ಲಿ ಮಹಿಳೆಯರು ಸೀರೆ ಧರಿಸುವುದು ಸಾಮಾನ್ಯ; ಆದರೆ ಅದನ್ನು ಉಡುವ ರೀತಿ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ!

ಉತ್ತರ ಭಾರತದಲ್ಲಿ ಮಹಿಳೆಯರು…ಮುಂದೆ ಓದಿ...

19 views
Fri, 10/02/2020 - 21:15