ಇತ್ತೀಚೆಗೆ ಸೇರಿಸಿದ ಪುಟಗಳು

ಚಂದಮಾಮ, ಬಾಲಮಿತ್ರ, ಬೊಂಬೆಮನೆ ಎಂಬ ಹೆಸರುಗಳನ್ನು ಕೇಳಿದ ಕೂಡಲೇ ನನ್ನಂತಹ ಹಲವರ ಮನಸ್ಸು ತಮ್ಮ ಬಾಲ್ಯದತ್ತ ಚಲಿಸಲು ಶುರು ಮಾಡುತ್ತದೆ ಎಂಬುವುದು ಶೇಕಡಾ ನೂರಕ್ಕೆ ನೂರು ನಿಜ. ಕಳೆದ ಶತಮಾನದಲ್ಲಿ ಮಕ್ಕಳಾಗಿದ್ದ ಎಲ್ಲರ ಮೇಲೂ ಪ್ರಭಾವ ಬೀರಿದ ಮಕ್ಕಳ ಪುಸ್ತಕಗಳಲ್ಲಿ ಚಂದಮಾಮ ಒಂದು. ಆಗಿನ ಮದ್ರಾಸ್ (ಚೆನ್ನೈ) ನಿಂದ ಮುದ್ರಣಗೊಂಡು ಬರುತ್ತಿದ್ದ ಈ ಪುಸ್ತಕಕ್ಕೆ ಸಹಸ್ರಾರು ಓದುಗರಿದ್ದರು. ಸುಮಾರು ಹನ್ನೆರಡು ಭಾಷೆಯಲ್ಲಿ ಹೊರ ಬರುತ್ತಿದ್ದ ಚಂದಮಾಮ ಕನ್ನಡದಲ್ಲೂ ಪ್ರಕಟವಾಗುತ್ತಿತ್ತು. ನಾವೆಲ್ಲಾ ಸಣ್ಣವರಿರುವಾಗ ಮೊಬೈಲ್, ಇಂಟರ್ನೆಟ್ ಎಂಬ ಜಂಜಾಟವಿಲ್ಲದೇ ಚಂದಮಾಮದಂತಹ…ಮುಂದೆ ಓದಿ...

45 views
Fri, 10/02/2020 - 15:11

ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಮರ್ಥವಾಗಿ ತಮ್ಮ ವಿಮರ್ಶಾ ಜ್ಞಾನವನ್ನು ಪಸರಿಸಿದ ಕೀರ್ತಿ ಡಾ. ಗುರುರಾಜ ಶ್ಯಾಮಾಚಾರ್ಯ ಆಮೂರ (ಜಿ. ಎಸ್. ಆಮೂರ) ಇವರಿಗೆ ಸಲ್ಲುತ್ತದೆ. ಆಮೂರರು ತಮ್ಮ ವಿಮರ್ಶಾ ಸಾಹಿತ್ಯವನ್ನು ಮೊದಲು ಪ್ರಾರಂಭಿಸಿದ್ದು ಆಂಗ್ಲ ಭಾಷೆಯಲ್ಲೇ. ಹಲವಾರು ಕನ್ನಡ ಲೇಖಕರಂತೆ ಆಮೂರರೂ ತಮ್ಮ ಸಾಹಿತ್ಯ ಕೃಷಿಯನ್ನು ಆಂಗ್ಲ ಭಾಷೆಯಲ್ಲಿ ಪ್ರಾರಂಭಿಸಿ, ನಂತರದ ದಿನಗಳಲ್ಲಿ ಕನ್ನಡಕ್ಕೆ ಹೊರಳಿದರು. ಆಮೂರರ ವಿಮರ್ಶೆ ಎಂದರೆ ಅದೊಂದು ಪರಿಪೂರ್ಣ ವಿದ್ವತ್ ಪೂರ್ಣ ಲೇಖನದಂತೆ, ಗ್ರಂಥದಂತೆ ಭಾಸವಾಗುತ್ತಿತ್ತು. ಆಮೂರರು ಬದುಕಿನ ಕೊನೆಯ ದಿನಗಳಲ್ಲಿ ಸ್ವಲ್ಪ…ಮುಂದೆ ಓದಿ...

16 views
Thu, 10/01/2020 - 09:46

ಗುರು ಸೆನ್‌ಗೈಯ ಆಶ್ರಮದಲ್ಲಿ ಧ್ಯಾನ ಕಲಿಯಲು ಸೇರಿಕೊಂಡಿದ್ದರು ಹಲವು ಶಿಷ್ಯರು. ಯೌವನದ ಸಹಜ ಪ್ರವೃತ್ತಿಗಳ ಸೆಳೆತ ಅವರಲ್ಲಿ ಕೆಲವರಿಗೆ. ಒಬ್ಬನಿಗಂತೂ ಪೇಟೆಗೆ ಹೋಗಿ ಸುತ್ತಾಡುವ ಚಾಳಿ. ರಾತ್ರಿ ಎಲ್ಲರೂ ಮಲಗಿದ ನಂತರ ಆಶ್ರಮದ ಗೋಡೆ ಹಾರಿ ಪೇಟೆಗೆ ಹೋಗುತ್ತಿದ್ದ; ಮರುದಿನ ಮುಂಜಾವ ಮೆತ್ತಗೆ ಮರಳುತ್ತಿದ್ದ.

ಅದೊಂದು ದಿನ ರಾತ್ರಿ ಗುರು ಸೆನ್‌ಗೈ ಆಶ್ರಮದ ಗೋಡೆಗೆ ಐದು ಮೆಟ್ಟಲುಗಳ ಪುಟ್ಟ ಏಣಿ ತಗಲಿಸಿ ಇಟ್ಟದ್ದನ್ನು ನೋಡಿದ. ಶಿಷ್ಯರನ್ನೆಲ್ಲ ಗಮನಿಸಿದಾಗ ಒಬ್ಬ ಶಿಷ್ಯ ನಾಪತ್ತೆ ಎಂಬುದು ಪತ್ತೆ. ಸೆನ್‌ಗೈಗೆ ಎಲ್ಲವೂ ಅರ್ಥವಾಯಿತು.

ಅನಂತರ, ಆ ಪುಟ್ಟ ಏಣಿಯನ್ನು ಆಚೆಗಿಟ್ಟು, ಅದಿದ್ದ ಜಾಗದಲ್ಲಿ…ಮುಂದೆ ಓದಿ...

28 views
Tue, 09/29/2020 - 19:03

ನೀವು ಈಗಾಗಲೇ ವಿದ್ಯುತ್ ಮೀನು ಬಗ್ಗೆ ಓದಿರುತ್ತೀರಿ. ಸಮುದ್ರದಾಳದಲ್ಲಿ ಸಾವಿರಾರು ಬಗೆಯ ಅಪರೂಪದ ಜಲಚರಗಳಿವೆ. ಅವುಗಳನ್ನು ಕೆಲವೊಂದನ್ನು ನಿಮಗೆ ಪರಿಚಯ ಮಾಡಿಕೊಡಲಿದ್ದೇನೆ. ಓದುವ ಕೌತುಕ ನಿಮ್ಮದಾಗಲಿ.

ಎಕ್ಸ್ ರೇ ಮೀನು: ನಾವು ಎಕ್ಸ್ ರೇ ಅಥವಾ ಕ್ಷ-ಕಿರಣ ಪರೀಕ್ಷೆಗೆ ಒಳಪಟ್ಟರೆ ನಮ್ಮ ದೇಹದ ಒಳಗಿನ ಅಂಗಗಳು ಕಾಣುತ್ತವೆ. ಹಾಗೆಯೇ ಬರಿಗಣ್ಣಿಗೇ ದೇಹದ ಒಳಗಿರುವ ಎಲ್ಲಾ ಅಂಶಗಳು ಕಾಣಸಿಗುವುದು ಎಕ್ಸ್ ರೇ ಮೀನಿನಲ್ಲಿ. ಇವುಗಳನ್ನು ಪಾರದರ್ಶಕ…ಮುಂದೆ ಓದಿ...

27 views
Tue, 09/29/2020 - 15:54

ತೆರೆಯಿತು ತೆರೆಯಿತು

ಬಾಗಿಲು ತೆರೆಯಿತು

   ನಮ್ಮೆದೆಯೊಳಗೊಂದು!

ಸರಿಯಿತು ಸರಿಯಿತು

ಕತ್ತಲು ಸರಿಯಿತುಮುಂದೆ ಓದಿ...

20 views
Tue, 09/29/2020 - 15:21

ಕೊರೊನಾ ವೈರಸ್ ಧಾಳಿಯಿಂದಾಗಿ ಮಾರ್ಚ್ ೨೦೨೦ರಿಂದ ತೊಡಗಿ ಜಗತ್ತಿನಲ್ಲೆಲ್ಲ ಅಲ್ಲೋಲಕಲ್ಲೋಲ. ಭಾರತದಲ್ಲೇ ೫೦ ಲಕ್ಷಕ್ಕಿಂತ ಅಧಿಕ ಜನರಿಗೆ ಈ ವರೆಗೆ ಇದರ ಸೋಂಕು ತಗಲಿದೆ. ಇಂತಹ ಪರಿಸ್ಥಿತಿಯಲ್ಲಿ, ನಗರಗಳಿಂದ ನೂರಾರು ಕಿಲೋಮೀಟರುಗಳ ದೂರದಲ್ಲಿ, ದಟ್ಟ ಕಾಡುಗಳ ಒಳಗೆ ಶತಮಾನಗಳಿಂದ ವಾಸ ಮಾಡುತ್ತಿರುವ ಆದಿ ಬುಡಕಟ್ಟುಗಳಿಗೆ ದೊಡ್ಡ ಅಪಾಯವಿದೆ. ಯಾಕೆಂದರೆ, ನಗರವಾಸಿಗಳನ್ನು ಬಾಧಿಸುವ ಯಾವುದೇ ರೋಗಗಳಿಂದ ಅವರು ಈ ವರೆಗೆ ಮುಕ್ತರಾಗಿದ್ದರು. ಹಾಗಾಗಿ, ಇಂತಹ ಯಾವುದೇ ರೋಗಗಳ ನಿರೋಧ ಶಕ್ತಿ ಬುಡಕಟ್ಟಿನವರಲ್ಲಿ ಇಲ್ಲವೆಂದೇ ಹೇಳಬಹುದು.

ಭಾರತದ ಆದಿ ಬುಡಕಟ್ಟುಗಳಲ್ಲೊಂದು ಚೆಂಚು. ಈ ಬುಡಕಟ್ಟಿನವರು ಬೇಟೆಯಾಡಿ,…ಮುಂದೆ ಓದಿ...

25 views
Sun, 09/27/2020 - 18:12

ಕುಮುದ ಮರದ ನೆರಳಿನಲ್ಲಿ ಮಲಗಿದ್ದಾಗ ಅವಳ ಗೊಂಬೆ ಕಾಳು ಕರಡಿ ಕಾಡಿನೊಳಗೆ ಸುತ್ತಾಟಕ್ಕೆ ಹೋಗಿ ದಾರಿ ತಪ್ಪಿತು. ಅದಕ್ಕೆ ವಾಪಾಸು ಬರುವ ದಾರಿ ಗೊತ್ತಾಗಲೇ ಇಲ್ಲ. ಹಾಗಾಗಿ ಅದು ಒಂದು ಮರದ ಕೆಳಗೆ ಕುಳಿತು, “ಈಗ ಏನಪ್ಪಾ ಮಾಡೋದು" ಎಂದು ಯೋಚಿಸ ತೊಡಗಿತು.

ಕುಮುದ ನಿದ್ದೆಯಿಂದೆದ್ದು ನೋಡಿದಾಗ ಅವಳ ಕಾಳು ಕರಡಿ ಎಲ್ಲಿಯೂ ಕಾಣಿಸಲಿಲ್ಲ. ಅದನ್ನು ಯಾರೋ ಎತ್ತಿಕೊಂಡು ಹೋಗಿರಬೇಕು ಎಂದು ಅವಳು ಯೋಚಿಸಿದಳು. ಯಾಕೆಂದರೆ, ಮನುಷ್ಯರು ಮಲಗಿದಾಗ ಅವರ ಆಟದ ಗೊಂಬೆ ಕರಡಿಗಳು ಸುತ್ತಾಟಕ್ಕೆ ಹೋಗುತ್ತವೆ ಎಂಬುದು ಅವಳಿಗೆ ಗೊತ್ತಿರಲಿಲ್ಲ.

"ಕಾಳೂ, ಕಾಳೂ, ಎಲ್ಲಿದ್ದೀಯಾ?” ಎಂದು ಕೂಗಿದಳು ಕುಮುದ. ಕಾಳೂ…ಮುಂದೆ ಓದಿ...

27 views
Sat, 09/26/2020 - 18:16

ಅಂದು ಆಗಸ್ಟ್ ೭, ೨೦೦೬ರಂದು ಕೊಲಂಬೋದಲ್ಲಿ ಶ್ರೀಲಂಕಾ ಹಾಗೂ ಪ್ರವಾಸೀ ದಕ್ಷಿಣ ಆಫ್ರಿಕಾ ನಡುವೆ ಆಡಲಾಗುತ್ತಿದ್ದ ಟೆಸ್ಟ್ ಪಂದ್ಯದ ನಾಲ್ಕನೇ ದಿನ. ಫೀಲ್ಡಿಂಗ್ ಮಾಡುತ್ತಿದ್ದ ದಕ್ಷಿಣ ಆಫ್ರಿಕಾದ ಆಟಗಾರ ಹಾಶಿಂ ಆಮ್ಲಾ ಒಂದು ಕ್ಯಾಚ್ ಪಡೆದುಕೊಳ್ಳುತ್ತಾರೆ. ಆಗ ಅವರನ್ನು ವೀಕ್ಷಕ ವಿವರಣೆ ನೀಡುತ್ತಿದ್ದ ವ್ಯಕ್ತಿ ‘ಭಯೋತ್ಪಾದಕ ಇನ್ನೊಂದು ವಿಕೆಟ್ ಪಡೆದುಕೊಂಡ' ( the Terrorist gets another wicket) ಎಂದು ವಿವರಿಸುತ್ತಾರೆ. ಹಾಶಿಂ ಆಮ್ಲಾ ಮುಸಲ್ಮಾನನಾಗಿದ್ದು, ಉದ್ದನೆಯ ಗಡ್ಡ ಬಿಟ್ಟಿರುತ್ತಾರೆ. ಆ ಕಾರಣದಿಂದ ಈ ‘ಭಯೋತ್ಪಾದಕ' ಎಂಬ ಮಾತು ದೊಡ್ಡ ಸುದ್ದಿಯಾಗಿ…ಮುಂದೆ ಓದಿ...

27 views
Sat, 09/26/2020 - 15:52

ಯಾರೋ ಸಂಗ್ರಹಿಸಿದ ಅಮೃತವಾಣಿಗಳ ಗುಚ್ಛ ಇಲ್ಲಿದೆ. ಓದಿರಿ - ಆನಂದಿಸಿರಿ. ಅರ್ಥ ತಿಳಿಯಿರಿ, ಬದುಕಿನುದ್ದಕ್ಕೂ ಅನ್ವಯಿಸುವುದನ್ನು ಅಳವಡಿಸಿಕೊಳ್ಳಿರಿ.

  • "ರಸ್ತೆ ಮೇಲೆ ಕಲ್ಲಿನ ಹರಳುಗಳಿದ್ದರೆ ಒಳ್ಳೆಯ ಬೂಟು ಹಾಕಿಕೊಂಡು ನಡೆಯಬಹುದು..!!" ಆದರೆ...."ಒಳ್ಳೆಯ ಬೂಟಿನೊಳಗೆ ಒಂದೇ ಒಂದು ಕಲ್ಲಿನ ಹರಳು ಇದ್ದಲ್ಲಿ ಅತ್ಯುತ್ತಮ ರಸ್ತೆಯ ಮೇಲೂ‌ ನಾಲ್ಕು ಹೆಜ್ಜೆ…ಮುಂದೆ ಓದಿ...
    47 views
    Sat, 09/26/2020 - 08:55

‘ಪೆನ್-ಪೆನ್ಸಿಲ್’ ನಾವು ಶಾಲೆಯಲ್ಲಿ ಕಲಿಯುವಾಗ ಅವಳಿ ಜವಳಿ ಪದಗಳಂತೆಯೇ ಬಳಕೆಯಾಗುತ್ತಿದ್ದುವು. ಪರೀಕ್ಷೆಗೆ ಹೊರಡುವಾಗ ಮನೆಯಲ್ಲಿ ‘ಪೆನ್-ಪೆನ್ಸಿಲ್' ತಕೊಂಡಿದ್ದೀಯಾ? ‘ ಎಂದು ಕೇಳುವುದು ಒಂದು ಸಹಜ ಮಾತಾಗಿತ್ತು. ನಾವು ಬರೆಯಲು ಅಧಿಕವಾಗಿ ಬಳಸುವ ವಸ್ತುಗಳೆಂದರೆ ಪೆನ್ ಮತ್ತು ಪೆನ್ಸಿಲ್. ಪೆನ್ ಮೂಲಕ ಬರೆಯುವುದು ಸುಲಭ. ಶಾಯಿ ಹಾಕಿ ಅಥವಾ ಶಾಯಿ ತುಂಬಿದ ರಿಫಿಲ್ ಹಾಕಿ ಎಷ್ಟು ಸಮಯವಾದರೂ ಬರೆಯಬಹುದು. ಆದರೆ ಪೆನ್ಸಿಲ್ ಮೂಲಕ ಬರೆಯಲು ಅದರ ಮೇಲಿರುವ ಮರದ ಕವಚವನ್ನು ಕಟ್ಟರ್ ಅಥವಾ ಶಾರ್ಪ್ ನರ್ ಎಂಬ ಯಂತ್ರ (?!)ದ ಮೂಲಕ ಕತ್ತರಿಸಿ ತೆಗೆದು ಮೊನಚುಗೊಳಿಸಿ ಒಳಗಿನ…ಮುಂದೆ ಓದಿ...

42 views
Fri, 09/25/2020 - 09:19