ವಿಧ: Basic page
August 11, 2007
ಖಾದಿಯ ಪುನರಾವತಾರ :
ಆಗಸ್ಟ್ , ೧೫ ಸಮೀಪಿಸುತ್ತಿದೆ. ನಾವೆಲ್ಲ ನಮ್ಮ ಭಾರತೀಯ ಸ್ವಾತಂತ್ರ್ಯಸಂಗ್ರಾಮದಲ್ಲಿ ಗೆದ್ದು, ಶತಮಾನಗಳ ದಾಸ್ಯದಿಂದ ಇಂದು ಮುಕ್ತರಾಗಿದ್ದೇವೆ. ನಾವು, ನಮ್ಮ ಮಕ್ಕಳು, ಯುವಕರು, ಸ್ವಚ್ಛಂದ ವಾತಾವರಣದಲ್ಲಿ ಉಸಿರಾಡುವಂತಾಗಿದೆ. ನಮ್ಮದೇ ಸರ್ಕಾರ ; ನಮ್ಮವರೇ ನಮಗೆ ಬೇಕಾದಹಾಗೆ ಆಳಲು ಸಾದ್ಯವಾಗಿದೆ. ಈವರ್ಷ ನಮ್ಮ ರಾಷ್ಟ್ರಾದ್ಯಕ್ಷೆಯಾಗಿ, ಶ್ರೀಮತಿ ಪ್ರತಿಭಕ್ಕ ಬಂದಿದ್ದಾರೆ. ಇನ್ನೇನು ಬೇಕು ? ಎಲ್ಲೆಡೆಯೂ ಆನಂದವೇ ಆನಂದ, ಸಂಭ್ರಮ !
ನಾವು ಆ ಸುದಿನದಂದಾದರೂ ನಮ್ಮಗಮನ…
ವಿಧ: ಚರ್ಚೆಯ ವಿಷಯ
August 11, 2007
ಹಳೆಯ ಸಂಗೀತ ನಿರ್ದೇಶಕರು/ರಾಗ ಸಂಯೋಜಕರು/ರಚನೆಮಾಡಿದವರು ಶಾಸ್ತ್ರೋಕ್ತವಾದ ರಾಗಸಂಯೋಜನೆಗೆ ಒತ್ತು ಕೊಡುತ್ತಿದ್ದುದು ಎಲ್ಲರಿಗೂ ಗೊತ್ತೇ ಇದೆ. ಹೀಗಾಗಿ ೯೦% ಹಾಡುಗಳು ಅತಿ ಮಧುರವಾದ ಅನುರಾಗವೇ ಆಗಿವೆ. ಇಂದಿನ ಸಂಗೀತ ನಿರ್ದೇಶಕರಲ್ಲಿ ರಾಗವು ಶಾಸ್ತ್ರೀಯವೇ ಆಗಿರಬೇಕೆನ್ನುವ ಒತ್ತಡವೇನೂ ಇಲ್ಲ. ಅರಿವಿಲ್ಲದ ಮಕ್ಕಳಂತೆ ಏನು ಮಾತನಾಡಿದರೂ ಅದನ್ನು ಹಾಡಿಗಿಳಿಸುವ ಅರ್ಜೆಂಟು. ಯಾಕೆಂದು ಗೊತ್ತಿಲ್ಲ. ಹೀಗಾಗಿ ಹಾಡು ಹಳೆಯದಾಗುವುದಕ್ಕಿಂತ ಮುನ್ನವೇ ಮರೆತು ಹೋಗುವುದು. ಇರಲಿ, ತಿಳಿದವರ್ಯಾರಾರಾದರೂ…
ವಿಧ: ಬ್ಲಾಗ್ ಬರಹ
August 11, 2007
ಇದೇನು ಓದುಗರನ್ನು ಏಪ್ರಿಲ್ ಫೂಲ್ ಮಾಡುವ ಹೊಸವಿಧಾನವೇ? ಆದರೆ, ಈಗ ಇನ್ನೂ ಆಗಸ್ಟ್ ತಾನೇ? :( :(
ವಿಜಯಕರ್ನಾಟಕದಲ್ಲಿ ಈ ಸುದ್ದಿ ಪ್ರಕಟವಾಗಿದೆ:
ಜೆಪೆಗ್ ಕೃಪೆ: http://budubudike.blogspot.com/
ಇದೇ ರೀತಿಯ ಅಭಾಸದ ಸುದ್ದಿಯನ್ನು ದಟ್ಸ್ ಕನ್ನಡದಲ್ಲೂ ಓದಿದೆ.
http://thatskannada.oneindia.in/news/2007/08/09/news_bytes.html
ಈ ರೀತಿಯ (ಅ)ವೈಜ್ಞಾನಿಕ ಬರಹಗಳನ್ನು ಏಕಾದರೂ ಬರೆಯುತ್ತಾರೋ ಎನ್ನಿಸಿತು. ಇಂಗ್ಲಿಷ್ ನಿಂದ ಕನ್ನಡಕ್ಕೆ ತರುವಾಗ, ಮೂಲ ಅರ್ಥವನ್ನೇ ನೋಡದೆ…
ವಿಧ: ಚರ್ಚೆಯ ವಿಷಯ
August 10, 2007
ಬಿಡುಗಡೆಯ ಅರವತ್ತನೇ ಏಡಿಗೆ ಅಡಿ ಇಟ್ಟ ಇಂಡಿಯಾ, ೧೯೪೭ರಲ್ಲಿ ಒಂದೊಮ್ಮೆ ’ಬಂಗಾರದ ಹಕ್ಕಿ’ ಅಂತ ಕರೆಸಿಕೊಳ್ಳುತ್ತಿದ್ದುದನ್ನು ಮತ್ತೆ ಪಡೆದುಕೊಳ್ಳುವ ಕನಸು ಕಂಡಿತ್ತು. ಆನೆ ತೂಕದ ನಮ್ಮ ಈ ಡೆಮಾಕ್ರಸಿ ಇಂದು ಅದರಂತೆ ಬದುಕುತ್ತಿದೆ ಅಂತ ಟೈಮ್ ವರದಿ ಮಾಡಿದೆ. ಇಂಡಿಯಾಗೆ ಹರೆಯ ಮೂಡಿದೆ, ಇಂಡಿಯಾ ಬಡ ನಾಡು ಎಂಬ ಪಡುವಣ(ಪಾಶ್ಚಾತ್ಯ) ನಾಡುಗಳಲ್ಲಿ ಇರುವ ಅನಿಸಿಕೆ, ತುಂಬಾ ಇತ್ತೀಚಿನದು, ಹಿಂದೊಮ್ಮೆ ನಮ್ಮ ನಾಡು ಇದೇ ಪಡುವಣಿಗರಿಂದ ಬಂಗಾರದ ಹಕ್ಕಿ ಅನಿಸಿಕೊಂಡಿದ್ದು ಸುಳ್ಳಲ್ಲ. ಆದರೆ…
ವಿಧ: Basic page
August 10, 2007
ಮದುವೆಗಿಂತ ಮೊದಲು ನಾನು ಅಂದುಕೊಳ್ಳುತ್ತಿದ್ದೆ, ನನ್ನ ಮದುವೆ ಆದರ್ಶ ಮದುವೆ ಅಗಬೇಕು. ಹುಚ್ಚಾ ಪಟ್ಟೆ ಖರ್ಚು ಆಗಬಾರ್ದು, ರೆಜಿಸ್ಟರ್ ಮ್ಯಾರೇಜ್ ಆಗ್ಬೇಕು! ಇತ್ಯಾದಿ ಇತ್ಯಾದಿ. ಡೊಡ್ಡ ದೊಡ್ಡ ಆದರ್ಶಗಳು. ಆದರೆ ಅದದ್ದೆ ಬೇರೆ! ರೆಜಿಸ್ಟರ್ ಮ್ಯಾರೇಜ್ ಆಗ್ಲಿಲ್ಲಾ. ಒಳ್ಳೆ ಅದ್ಧೂರಿಯಾಗಿ ಮದುವೆಯಾಯ್ತು. ಅಂದುಕೊಂಡದ್ದಕ್ಕಿಂತ ಜಾಸ್ತಿ ಖರ್ಚು ಆಯ್ತು! ಅದಕ್ಕೆಲ್ಲಾ ಕಾರಣಗಳು ಇದ್ವು ಅಥವ ಅದಕ್ಕೆ ನಾನೇ ಕಾರಣ ಹುಡುಕಿದ್ದಿರಬೆಕು. ಆದರೆ ಒಂದು ಮಾತ್ರಾ ನಿಜ ಏನೇ ಆದರ್ಶಗಳನ್ನು ಇಟ್ಟುಕೊಂಡ್ರೂ…
ವಿಧ: ಚರ್ಚೆಯ ವಿಷಯ
August 10, 2007
ವಿ.ಸೂ : ನವರತ್ನರಾಮ್ ಅವರು ಬರೆಯುತ್ತಿರುವ ವಿಷಯ ಎಷ್ಟೊ ವರ್ಷಗಳವರೆಗೆ ಓದುಗರಿಗೆ ಸಸ್ಪೆನ್ಸ್ ಹಾಗೆ ಉಳಿದಿತ್ತು :) .
ವಿಧ: ಚರ್ಚೆಯ ವಿಷಯ
August 10, 2007
??
ವಿಧ: ಬ್ಲಾಗ್ ಬರಹ
August 10, 2007
ಅರವತ್ತರ ಭಾರತದ ಅರಳು ಮರುಳು
ಕಳೆದ ಶುಕ್ರವಾರ(3.8.07) ಎಚ್.ಗಣಪತಿಯಪ್ಪನವರ 84ನೇ ಹುಟ್ಟುಹಬ್ಬ. ಸಾಗರದಲ್ಲಿ ನಡೆದ ಈ ಸಮಾರಂಭದಲ್ಲಿ ಒಬ್ಬ ಅತಿಥಿಯಾಗಿ ಭಾಗವಹಿಸಿದ ಹೆಮ್ಮೆ ನನ್ನದು. ಈ ವಾರ ತನ್ನ ಅರವತ್ತನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸ್ವತಂತ್ರ ಭಾರತದಲ್ಲಿ, ಇಂತಹ ಮರೆತು ಹೋದ-ಮತ್ತು ಒಂದರ್ಥದಲ್ಲಿ ತಮ್ಮನ್ನು ತಾವೇ ಮರೆತುಕೊಂಡಿರುವ - ಮಹಾನುಭಾವರ ಹುಟ್ಟು ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸುವ ಜನ - ಅದೂ ಯುವ ಜನ - ಇನ್ನೂ ಇದ್ದಾರೆ ಎನ್ನುವುದೇ, ಈ ಭಾರತ…
ವಿಧ: ಬ್ಲಾಗ್ ಬರಹ
August 10, 2007
ಮುಂಬೈಯಲ್ಲಿರುವ ನಾನು ಇತ್ತೀಚೆಗೆ ಧಾರವಾಡಕ್ಕೆ ಹೋದಾಗ ಮತ್ತಷ್ಟು ಪುಸ್ತಕ ಹೊತ್ತು ತಂದೆ .
ಅವು ಇಂತಿವೆ .
೧) ನೀಲು ; ಹಿಂದೆ ಲಂಕೇಶ್ ಪತ್ರಿಕೆಯಲ್ಲಿ ಬಂದ ಲಂಕೇಶರ ’ನೀಲು’ ಕವನಗಳ ಸಂಗ್ರಹ - ಭಾಗ ೧ . ೪-೫ ಸಾಲುಗಳ ಹೇಳಿಕೆಗಳು , ತುಂಟತನ , ವಾಸ್ತವಿಕತೆ , ಸತ್ಯಗಳು ಇಲ್ಲಿವೆ . ಕವಿತೆಗಳು ಅನ್ನುವದಕ್ಕಿಂತ ವಚನ ಎನ್ನಬಹುದು . ೮೦ % ಓದಿದ್ದೇನೆ. ಒಂದೆರಡು ದಿನದಲ್ಲಿ ಮುಗಿಸುವೆ. ಒಳ್ಳೆಯ ಓದು ( ಐದರಲ್ಲಿ ನಾಲ್ಕು ಅಂಕ)
೨) ಕರ್ವಾಲೋ ; ಹಿಂದೆ ತುಷಾರದಲ್ಲಿ ಧಾರಾವಾಹಿಯಾಗಿ…
ವಿಧ: ಬ್ಲಾಗ್ ಬರಹ
August 10, 2007
ಅವತ್ತು ರಾಯರ ಮಠದಲ್ಲಿ ಅಷ್ಟೊಂದು ತನ್ಮಯತೆಯಿಂದ ಕಣ್ಣು ಮುಚ್ಚಿ ನಮಿಸುತ್ತಿದ್ದ ನಿನ್ನ ಆರಾಧನಾ ಭಾವ ಬೇಡವೆಂದರೂ ನನ್ನ ಕಂಗಳಿಂದ, ನನ್ನ ಮನದಂಗಳದಿಂದ ದೂರವಾಗುತ್ತಿಲ್ಲಾ. ಅಷ್ಟು ತಾದ್ಯಾತ್ಮದಿಂದ ಪಾದದ ಮುಂದೊಂದು ಪಾದ ಇಟ್ಟು ಅದೆಷ್ಟು ಪ್ರದಕ್ಷಿಣೆ ಹಾಕಿದ್ಯೋ ನಂಗಂತು ಆ ರಾಯರಾಣೆಗೂ ನೆನಪಿಲ್ಲಾ.ಆದ್ರೆ ನೆನಪಿರೋದು ನಿನ್ನ ನೀಲಿ ಜೀನ್ಸಿನ ಮೇಲೆ ತೊಟ್ಟ ತಿಳಿಗುಲಾಬಿ ಬಣ್ಣದ ಕುರ್ತಾ ಮತ್ತು ಹಣೆಯ ಮದ್ಯದ ಕಂಡು ಕಾಣದಂತಿರುವ ನಿನ್ನ ಪುಟ್ಟ ಬಿಂದಿ.ನಿಂಗ್ಯಾರೆ ಹೇಳಿದ್ದು ನಂಗೆ ತಿಳಿಗುಲಾಬಿ…