ಎಲ್ಲ ಪುಟಗಳು

ಲೇಖಕರು: omshivaprakash
ವಿಧ: ಬ್ಲಾಗ್ ಬರಹ
August 10, 2007
ಎಲ್ಲರಿಗೂ ಸ್ವಾತಂತ್ರೊತ್ಸವದ ಶುಭಾಶಯಗಳು,  ಮುಕ್ತ ತಂತ್ರಾಂಶ ಪ್ರತಿಷ್ಠಾನ (ಎಪ್ಸೆಪ್) ದ ಜಿ ಎನ್ ಯು (ಗ್ನೂ) ವೆಬ್ ಸೈಟನ್ನು ಕನ್ನಡಕ್ಕೆ ಅನುವಾದಿಸುವ ಕೆಲಸವನ್ನ ಶುರು ಮಾಡಿದ್ದೇನೆ. ಗ್ನೂ ಬಗ್ಗೆ ತಿಳಿಯಲಿಚ್ಚಿಸುವ ಎಲ್ಲ ಕನ್ನಡಗರು ಇದರ ಉಪಯೊಗ ಪಡೆದು ಕೊಳ್ಳಬಹುದು. ಮುಕ್ತ  ತಂತ್ರಾಂಶವನ್ನು ಬಹುದಿನಗಳಿಂದ ಉಪಯೊಗಿಸುತ್ತಿರುವ ನಾವು ನಮ್ಮ ಭಾಷೆಯಲ್ಲಿ ಗ್ನೂನ ವೆಬ್ ಸೈಟ್ ಏಕೆ ಅನುವಾದಿಸಿಲ್ಲ ಎಂಬ ಚಿಂತೆ  ನನಗೆ ಈ ಕಾರ್ಯವನ್ನ  ಶುರು ಮಾಡಲು ಪ್ರೇರೇಪಿಸಿದ ಅಂಶ. ಮೂಲ  ವೆಬ್ ಸೈಟ್ :…
ಲೇಖಕರು: navidyarthi
ವಿಧ: ಬ್ಲಾಗ್ ಬರಹ
August 10, 2007
ಭಾರದ ಹೃದಯ ನಿರ್ಬಲ ತೋಳುಗಳು ಎದೆಯ ಕಟ್ಟೆಯೊಡೆದು ಧುಮಕಲು ಕಾದಿರುವ ಹನಿಗಳು ಎಲ್ಲಿ ಎಡವಿದೆನೋ ಎಲ್ಲಿಗೆ ಒಡುವೆನೋ ಮುಳುಗಿದ ಆ ಸೂರ್ಯನನ್ನರಸಿ, ಮತ್ತೆ ಮೂಡುವನೆಂದೆನಿಸಿ, ಸಾಗಿದೆ ದಿಕ್ಕಿಲ್ಲದ ಪಯಣ, ಜೀವನ...
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
August 10, 2007
ನಯಸೇನ ( 1112 )   ಈತ ಜಿನ ಕಬ್ಬಿಗ.  'ಧರಮಾಮ್ರುತ' ಈತನ ನೆಗೞ್ಚು. ಬೇಕರನದ/ವ್ಯಾಕರಣದ ಬಗ್ಗೆ ಕೂಡ ಬರೆದಿದ್ದಾನೆ. ಈತನ ಕಬ್ಬದಲ್ಲಿ ' ಮುಳುಗುಂದದೊಳಿರ್ದು.." ಇರುವುದರಿಂದ ಇವನು ಮುಳುಗುಂದದಲ್ಲಿ ಇದ್ದನೆಂದು ತಿಳಿಯಬಹುದು. ಕೆಳಗೆ ಕೊಟ್ಟಿರುವ ಸಾಲುಗಳಿಂದ ತಿಳಿಯುವುದೇನೆಂದರೆ ಈತನ ಹೊತ್ತಿ/ಕಾಲದಲ್ಲಿಯೇ ಕಬ್ಬಿಗರು ಬೇಡದೇ ಇರುವ ಸಕ್ಕದದ ಒರೆಗಳನ್ನು ಬಳಸುತ್ತಿದ್ದರೆಂದು ತಿಳಿಯುತ್ತದೆ. ೧)  ಪೊಸಗನ್ನಡದಿಂ ವ್ಯಾವ|      ರ್ಣಿಸುವೆಂ ಸತ್ಕೃತಿಯನೆಂದು ಕನ್ನಡಮಂ ಚಿಂ|      ತಿಸಿ…
ಲೇಖಕರು: prapancha
ವಿಧ: ಬ್ಲಾಗ್ ಬರಹ
August 10, 2007
 ಕಾವ್ಯವಾಚನ ನಿಜವಾಗಿಯೂ ಒ೦ದು ಸೊಗಸಾದ ಕಲೆ ನಾನು ಹಳ್ಳಿಯಲ್ಲಿದ್ದಾಗ ನಮ್ಮ ಮನೆಯಲ್ಲಿ ಏನಾದರೂ ವಿಶೇಷ ಕಾರ್ಯಕ್ರಮಗಳಿದ್ದರೆ ನಮ್ಮ ಬ೦ದುವರ್ಗದವರೆಲ್ಲ ಬ೦ದು ಸೇರುತ್ತಿದ್ದರು. ಬ೦ದು ವರ್ಗದವರೆಲ್ಲ ಸೇರುತ್ತಿದ್ದರು ಎ೦ದರೆ ನಮ್ಮ ಪಟ್ಟಣದ ಜನರ ತರಹ ಹೀಗೆ ಬ೦ದು ಹಾಯ್ ಹೇಳಿ ಹಾಗೆ ಬಾಯ್ ಎ೦ದು ಹೇಳಿ ಹೋಗುವ ರೀತಿಯಲ್ಲ. ಒ೦ದು ದಿವಸ ಮು೦ಚೆ ಬ೦ದು ಕಾರ್ಯಕ್ರಮದ ಪ್ರತಿಯೊ೦ದು ಹ೦ತದಲ್ಲಿಯೂ ಬಾಗವಹಿಸುತ್ತಿದ್ದರು. ಸಾಮಾನ್ಯವಾಗಿ ವಿಶೇಷ ಕಾರ್ಯಕ್ರಮಗಳ ಹಿ೦ದಿನ ದಿನದಿ೦ದಲೇ ಮನೆಯ ಹೊರಗೆ ದಪ್ಪ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
August 10, 2007
ಇದ್ದಕಿದ್ದ ಹಾಗೆ ಬಣ್ಣದ ಪಲ್ಯ ಮಾಡೋಣ ಅಂತ ಮನಸಾಯಿತು. ಬಾಣಲಿಯಲ್ಲಿ ಒಂದಷ್ಟು ಬಣ್ಣ ಉದುರಿಸಿ, ತಟಕ್ಕು ಎಣೆ ಹಾಕಿ ಹುರಿಯೋಕೆ ಶುರು ಮಾಡಿದೆ. ಹುರಿದಾಗ ಬಣ್ಣಗಳೆಲ್ಲಾ ಒಂದೇ ರೀತಿ ಆಗಲ್ಲ. ಒಂದೊಂದು ಬಣ್ಣ ಒಂದೊಂದು ರೂಪ ರಾದ್ಧಾಂತ ಮಾಡ್ಕೋತಾವೆ. ಕೆಲವು ಮುರುಟಿಕೊಂಡರೆ ಕೆಲವು ಅರಳಕೋತಾವೆ. ಕೆಲವು ಹರಡಿಕೊಂಡರೆ ಇನ್ನು ಕೆಲವು ಸುರಟಿಕೋತಾವೆ. ಒಟ್ಟಿನಲ್ಲಿ ಏನೋ ಒಂದು ಹದ ಅಂತೂ ಇರತ್ತೆ. ಮುರುಟಿಕೊಂಡಿದ್ದು ಅರಳಿಕೊಂಡಿದ್ದು ಪಕ್ಕಪಕ್ಕದಲ್ಲಿ ಬಿದ್ದುಕೊಂಡು ಕಷ್ಟಸುಖ ಮಾತಾಡಿಕೋತಾ ಇರೋದು…
ಲೇಖಕರು: ismail
ವಿಧ: Basic page
August 10, 2007
[:video/1|ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ]   ಸಂಪದ ತಂಡ ಹೊಸತೇನನ್ನಾದರೂ ಯೋಚಿಸಿದರೆ ಅದನ್ನು ಸಾಧ್ಯವಾಗಿಸುವುದಕ್ಕೆ ವಿಶ್ವವೇ ನಮ್ಮ ಪರವಾಗಿ ಸಂಚು ಹೂಡುತ್ತದೆ ಎನಿಸುತ್ತದೆ. ಕನ್ನಡ ವಿಜ್ಞಾನ ಸಾಹಿತ್ಯ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಜಿ.ಟಿ.ನಾರಾಯಣರಾವ್‌ ಅವರದ್ದೊಂದು ಪಾಡ್‌ಕ್ಯಾಸ್ಟ್‌ ಮಾಡಬೇಕು ಎಂಬ ಯೋಜನೆ ಬಹಳ ಹಳೆಯದು. ಆದರೆ ಅದು ಸಾಧ್ಯವಾಗಿರಲಿಲ್ಲ. ಈ ನಡುವೆ ಹರಿಪ್ರಸಾದ್‌ ನಾಡಿಗರು ಪಾಡ್‌ಕ್ಯಾಸ್ಟ್‌ ಜತೆ ವಿಡಿಯೋ ಕೂಡಾ ಹಾಕಬಹುದು ಎನ್ನುತ್ತಿದ್ದರು.…
ಲೇಖಕರು: rajeshnaik111
ವಿಧ: Basic page
August 10, 2007
ಎರಡನೇ ದಿನ ನಾವು ಹೊರಟದ್ದು ಗೋಕಾಕ ಮತ್ತು ಗೊಡಚಿನಮಲ್ಕಿ ಜಲಪಾತಗಳನ್ನು ನೋಡಲು. ಬಾಗಲಕೋಟೆಯಿಂದ ಗದ್ದನಕೇರಿ, ಕಲಾದಗಿ, ಲೋಕಾಪುರ ಮಾರ್ಗವಾಗಿ ಯರಗಟ್ಟಿಗೆ ಬಸ್ಸೊಂದರಲ್ಲಿ ಬಂದೆವು. ಯರಗಟ್ಟಿಯಿಂದ ಟೆಂಪೋದಲ್ಲಿ ಗೋಕಾಕಕ್ಕೆ ಪಯಣ. ಗೋಕಾಕ ಜಲಪಾತದಲ್ಲಿ ನೀರಿನ ಪ್ರಮಾಣ ಕಡಿಮೆಯಿತ್ತು. ನೀರಿನ ಪ್ರಮಾಣ ಕಡಿಮೆ ಇದ್ದಾಗ ಜಲಪಾತವೊಂದರ ಎತ್ತರ ಅರಿವಾಗುವುದು. ಸುಮಾರು ೪೦೦ ಅಡಿಯಷ್ಟು ಎತ್ತರವಿದ್ದು, ೧೭೫ ಅಡಿಯಷ್ಟು ಅಗಲವಿರುವ ಗೋಕಾಕ ಜಲಪಾತದಲ್ಲಿ ನೀರಿನ ಹರಿವು, ಮೇಲ್ಭಾಗದಲ್ಲಿ ಘಟಪ್ರಭಾ ನದಿಗೆ…
ಲೇಖಕರು: vijayamma
ವಿಧ: ಬ್ಲಾಗ್ ಬರಹ
August 09, 2007
ಸಂಸ್ಕೃತ ಸುಂದರ,ಸುಲಲಿತ,ಸುಶ್ರಾವ್ಯ ಭಾಷೆ.ಆದರೆ ಕೇವಲ ಕೆಲವೇ ಪಂಡಿತರು ಸೇರಿ ವ್ಯಾಕರಣಕ್ಕೇ,ಉಚ್ಛಾರಕ್ಕೇ ಮಹತ್ವ ಕೊಟ್ಟು,ಉಳಿದವರು ಕಲಿಯದಂತೆ, ಕಲಿತವರು ಮಾತನಾಡಲು ಹಿಂಜರಿಯುವಂತೆ ಮಾಡಿದರು. ಇದೇ ರೀತಿ ಇಂಗ್ಲೀಷನ್ನೂ ಸಹ-ಸ್ಕೂಲ್ ನ ಇಂಗ್ಲೀಷ್ ಟೀಚರುಗಳು ಮಕ್ಕಳು ಮಾತನಾಡುವುದಕ್ಕೆ ಪ್ರೋತ್ಸಾಹಿಸದೇ ಬರೀ ವ್ಯಾಕರಣ ಬರಿಸಿ ಬರಿಸಿ ಇಂಗ್ಲೀಷಂದ್ರೆ ಭಯ ಪಡುವಂತೆ ಮಾಡಿದರು.(ಈಗ ಬಿಡಿ,ಕಸಗುಡಿಸುವವಳೂ ಸಹ ಟಸ್ ಪುಸ್ ಮಾತನಾಡುವಳು.) ಹೀಗೆ…
ಲೇಖಕರು: rajeshnaik111
ವಿಧ: ಬ್ಲಾಗ್ ಬರಹ
August 09, 2007
ನನ್ನ ಮೊದಲ ನೌಕರಿ ಚೆನ್ನೈನಲ್ಲಿ ಆಗಿತ್ತು. ಈ ಘಟನೆ ನಡೆದದ್ದು ನಾನು ಚೆನ್ನೈಗೆ ಕಾಲಿಟ್ಟ ಮೊದಲ ದಿನವೇ.  ಗೆಳೆಯ ವಿಕ್ರಮ್ ಪಾಟೀಲ ಅದಾಗಲೇ ಅಲ್ಲಿ ನೌಕರಿ ಮಾಡುತ್ತಿದ್ದು, 'ಬ್ಯಾಚೆಲರ್ಸ್ ಪ್ಯಾರಡೈಸ್' ಎಂದು ಕರೆಸಿಕೊಳ್ಳುತ್ತಿದ್ದ ಟ್ರಿಪ್ಲಿಕೇನ್-ನಲ್ಲಿ ವಾಸವಾಗಿದ್ದ. ಮಧ್ಯಾಹ್ನ ಸುಮಾರು ೨ ಗಂಟೆಗೆ ಚೆನ್ನೈ ತಲುಪಿದ ನನ್ನನ್ನು ಸ್ಟೇಷನ್-ನಿಂದ ರೂಮಿಗೆ ತಲುಪಿಸಿ ಮತ್ತೆ ಆಫೀಸಿಗೆ ತೆರಳಿ ಸಂಜೆ ಹಾಜರಾದ. ಬಂದವನೇ,'ಇಲ್ಲೇ ಹೋಗಿ ಬರುತ್ತೇನೆ. ನನ್ನ ಗೆಳೆಯನೊಬ್ಬ ಬರಲಿದ್ದಾನೆ. ಕಾಯಲು ಹೇಳು'…
ಲೇಖಕರು: betala
ವಿಧ: ಚರ್ಚೆಯ ವಿಷಯ
August 09, 2007
ಗೊತ್ತಿದ್ರೆ ಹೇಳಿ :)