ವಿಧ: Basic page
August 08, 2007
ಇದು ಓಷೋ ಹೇಳಿದ ಕಥೆ.
ಆ ಊರಿನಲ್ಲಿ ಇದ್ದುದು ಅದೊಂದೇ ಗುಡಿ. ಬಲು ಸುಂದರವೂ ಭವ್ಯವೂ ದಿವ್ಯವೂ ಕಲಾಪೂರ್ಣವೂ ಆಗಿತ್ತದು. ಊರಿನ ಸಕಲ ಸಿರಿವಂತರೂ ದೇಣಿಗೆ ನೀಡಿ ಅದನ್ನು ನಿರ್ಮಿಸಿದ್ದರು. ಅದಕ್ಕೆ ಒಬ್ಬ ಪೂಜಾರಿಯನ್ನೂ ನೇಮಿಸಿದ್ದರು. ಆತ ಗುಡಿಯ ಬದಿಯಲ್ಲೇ ಮನೆ ಮಾಡಿಕೊಂಡು ನಿತ್ಯ ಪಾರಾಯಣ, ಪೂಜೆ, ಮಂಗಳಾಭಿಷೇಕ, ಗಂಟಾನಾದ, ಸುಗಂಧ ಧೂಪಗಳೊಂದಿಗೆ ಮಂದಿರವನ್ನು ಸೊಬಗಿನ ತಾಣವಾಗಿಸಿದ್ದ.
ಹೀಗಿರುವಲ್ಲಿ ಒಂದು ರಾತ್ರಿ ಬಡವನೊಬ್ಬ ಬಂದು ಪೂಜಾರಿಯ ಮನೆಯ ಬಾಗಿಲು ತಟ್ಟಿದ. ಹಗಲಿನ ಬೆಳಕಲ್ಲೇ ಆತ…
ವಿಧ: ಬ್ಲಾಗ್ ಬರಹ
August 08, 2007
ನ್ಯೂಯೋರ್ಕಿನ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಅಕ್ಟೋಬರ್ ೧೩, ೧೯೯೪ ರಂದು ಖ್ಯಾತ ಖಗೋಳ ಶಾಸ್ತ್ರಜ್ಞರಾದ ಕಾರ್ಲ್ ಸಗನ್ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುತ್ತಾ, ಮೇಲಿನ ಚಿತ್ರವನ್ನು ತೋರಿಸಿದರು..
ಇದು ೧೯೯೦ರಲ್ಲಿ ಭೂಮಿಯಿಂದ ನಭದತ್ತ ಚಿಮ್ಮಿದ ಅಂತರಿಕ್ಷ ನೌಕೆ ವಾಯೇಜರ್ ೧ ಸುಮಾರು ೪ ಬಿಲಿಯನ್ ಮೈಲುಗಳ ದೂರದಿಂದ ತೆಗೆದದ್ದಾಗಿದೆ. ಅದರ ಮುಖ್ಯ ಉದ್ದೇಶ ಪೂರ್ಣಗೊಂಡ ನಂತರ, ಸೂರ್ಯ ಮಂಡಲದಿಂದ ಹೊರಕ್ಕೆ ತನ್ನ ಯಾನವನ್ನು ಬೆಳಸಿದ್ದ ಅದು ಸೂರ್ಯನ ಸಮತಲದಿಂದ…
ವಿಧ: ಬ್ಲಾಗ್ ಬರಹ
August 08, 2007
ಹೋದ ವರ್ಷ ನಾವು ಮನೆ ರಿಪೇರಿ ಮಾಡಿಸಿದೆವು. ರೂಫ್ ಕೂಡ ರಿಪೇರಿ ಮಾಡಿಸಿದೆವು. ರೂಫ್ ಮೇಲಿನ ಸುರ್‍ಕಿ ತೆಗೆದು ಹಾಕಿದ್ದರು ಮಳೆ ಹಿಡಿಯಿತು ನೋಡಿ ಅಬ್ಬ! ಮನೆ ಪೂರ್ತಿ ನೀರು ಬಕೆಟ್ನಲ್ಲಿ ತೆಗೆತಗೆದು ಹೊರಗೆ ಹಾಕಿದರೂ ಕಾಲು ಮುಳುಗುವಷ್ಟು ನೀರು ಅಡಿಗೆ ಮನೆಯಲ್ಲಿ(ಸಿಮೆಂಟ್ ಜೋಡಿಸಿದ್ದಲ್ಲಿ), ರಾತ್ರಿ ಮಲಗಲೂ ಜಾಗವಿಲ್ಲ ಆದರೂ ಹಾಗೆ ಸವರಿಸಿಕೊಂಡು ನೆನೆದ ಹಾಸಿಗೆಯಲ್ಲೆ ಮಲಗಿದೆವು. ತಮಾಷೆಯೆಂದರೆ ಮನೆಯಲ್ಲಿ ಸುಮಾರು ೫೦ ಮೂಟೆಯಷ್ಟು ಸಿಮೆಂಟ್ ಇತ್ತು, ನಾಲ್ಕು ಇಟ್ಟಿಗೆ ಜೋಡಿಸಿ ಅದರ ಮೇಲೆ…
ವಿಧ: ಬ್ಲಾಗ್ ಬರಹ
August 07, 2007
ನನ್ನ ಗೆಳೆಯ ಇವತ್ತು ಹೊಸ ಲ್ಯಾಪ್ಟಾಪ್ ತಗೊಂಡನಂತೆ ಅವನಿಗೊಸ್ಕರ .
(ಅದೇ ಈ ಕವನದಲ್ಲಿರೊ ಪುಟ್ಟಿ ಅಪಾರ್ಥಮಾಡ್ಕೊಬೇಡಿ ಪ್ಲೀಸ್)
ಪುಟ್ಟನ ಪುಟ್ಟಿ Dell Vostro 1500 -> ಪುಟ್ಟನ ಪ್ಯಾಕೆಟ್ ನಲ್ಲಿ
ಬಂದೇ ಬಂದಳು ಪುಟ್ಟನ ಪುಟ್ಟಿಕಪ್ಪು ಬಣ್ಣದ ಲೆದರ್ ಕೇಸನು ತೊಟ್ಟಿಅಮೇರಿಕೆಯಾ ಸುಂದರಿ ಈಗ ನಮ್ಮ ಪುಟ್ಟನ ಕೂಸುಮರಿಬಂದೇ ಬಂದಳು ಪುಟ್ಟನ ಪುಟ್ಟಿ
ಮೇಕಪ್ ಗೀಕಪ್ ಬೇಕಿಲ್ಲಕರೆಂಟ್ ಇದ್ದರೆ ಸಾಕಲ್ಲಇಲ್ಲದಿದ್ದರೂ ಪರವಾಗಿಲ್ಲಬ್ಯಾಟರಿ ಇದೆಯಲ್ಲ
ಬ್ರಹ್ಮ್ಮಾಂಡ ನೊಡಲು ಇದು…
ವಿಧ: Basic page
August 07, 2007
ಬಾಗಲಕೋಟೆಯಿಂದ ಗೆಳೆಯ ಅನಿಲ್ ಢಗೆ 'ಬಾಲೇ, ಒಂದೆರಡು ದಿನ ಇದ್ದೋಗ್ವಿಯಂತೆ', ಎಂದು ಬಹಳ ದಿನದಿಂದ ಕರೆಯುತ್ತಿದ್ದ. ಅಲ್ಲಿವರೆಗೆ ಬಂದು ಸುಮ್ನೆ ಮನೆಯಲ್ಲಿ ಕೂತ್ಕೊಳ್ಳುದು ನನ್ನಿಂದ ಆಗದು, ಅಲ್ಲಿಲ್ಲಿ ಅಡ್ದಾಡಬೇಕು ಎಂದು ನಾನಂದಾಗ, 'ದುನಿಯಾ ತೋರಿಸ್ತೀನಿ ಮಗನ, ದುನಿಯಾ. ನೀ ಬಾ ಮೊದ್ಲ' ಎಂದು ಕೊಚ್ಚಿಕೊಂಡ. ೨೦೦೪ರ ಜೂನ್ ತಿಂಗಳ ಅದೊಂದು ಶುಕ್ರವಾರ ಮುಂಜಾನೆ ೫ಕ್ಕೆ ಬಾಗಲಕೋಟೆಯ ನವನಗರದಲ್ಲಿಳಿದು ಈ ದುನಿಯಾ ತೋರಿಸುವವನಿಗೆ ಫೋನಾಯಿಸಿದರೆ, 'ಯಾರ, ಯಾರ' ಎಂದು ತೊದಲತೊಡಗಿದ. ಒಂದೆರಡು…
ವಿಧ: ಚರ್ಚೆಯ ವಿಷಯ
August 07, 2007
ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ?
ನೀವು ಪುಸ್ತಕದ ಅಂಗಡಿಗೆ ಹೋದಾಗ, ಹೊಸ ಪುಸ್ತಕ ಬಂದಿರುತ್ತೆ, ಅದರ ವಿಮರ್ಶೆ ಎಲ್ಲ ಬಂದಿರೊಲ್ಲ ಅಂತ ತಿಳ್ಕೊಳ್ಳಿ .
ಆ ಪುಸ್ತಕ ತಗೊಬೇಕೊ , ಬೇಡವೋ ಅಂತ ಹೇಗೆ ನಿರ್ಧಾರ ಮಾಡ್ತಿರಾ !?!
- ಪುಸ್ತಕದ ಮುಖಪುಟ ?- ಪುಸ್ತಕದ ಪೀಠಿಕೆ ?- ಲೇಖಕರನ್ನು ?
:)
ವಿಧ: ಬ್ಲಾಗ್ ಬರಹ
August 07, 2007
ಪೇಪರ್ ಲೆಸ್ ಆಫಿಸ್
ಇದು ಒಂದು ಉತ್ತಮ ಪ್ರಯತ್ನ. ಈ ಪೇಪರ್ ಬಳಕೆಯಿಂದ ಮಿಲ್ಲಿಯನ್ ಮರಗಳು ನಾಶವಾಗುತ್ತಿವೆ. ನಮ್ಮ ಬ್ಯಾಂಕ್ ಸ್ಟೆಟ್ಮೆಂಟುಗಳು, ಬಿಲ್ಲುಗಳು, ಫ಼್ಯಾಕ್ಸ, ಪುಸ್ತಕಗಳು ಆನ್ಲೈನ್ ಇನ್ನು ಹೆಚ್ಚು ಆದರೆ, ಮರಗಳನ್ನು ಉಳಿಸಿದ ಭಾಗ್ಯ ಎಲ್ಲರಿಗು ಸಿಗುತ್ತದೆ.
ನಿಮ್ಮಗೆ ಏನು ಅನ್ನಿಸುತ್ತೆ !?!
ವಿಧ: ಬ್ಲಾಗ್ ಬರಹ
August 07, 2007
"ಕಾಲಚಕ್ರ ಉರುಳಿದಂತೆಬದುಕಲ್ಲಿ ಬಂದದ್ದು ಹೋಗುತ್ತದೆ,ಹೋದದ್ದು ಬರುತ್ತದೆ"ಎಂಬ ಅವನ ಉಪದೇಶ ಕೇಳಿ-"ಆ ಚಕ್ರದ ನಡು ಎಲ್ಲಿದೆ?"-"ಯೌವ್ವನ ಯಾವಾಗ ಮರಳತ್ತೆ?"ಎಂದೆಲ್ಲಾ ಅವನನ್ನು ಮುದ್ದಿಸಿಚರ್ಚೆಯನ್ನೇ ನಾಚಿಸಿಬಿಟ್ಟಳು ತುಂಟಿ.
ವಿಧ: ಬ್ಲಾಗ್ ಬರಹ
August 07, 2007
ಉತ್ತರ ಕರ್ನಾಟಕದ ಭಾಷೆ ಎಷ್ಟು ಸ್ವಾರಸ್ಯಕರ, ಸುಂದರವೋ, ಅಷ್ಟೇ ರಸಮಯ ಅಲ್ಲಿನ ತಿಂಡಿ ತಿನಿಸುಗಳು, ಹಾಗೂ ಅಲ್ಲಿನ ಮಂದಿಯ ಅಡ್ಡಹೆಸರುಗಳು. (ಸರ್ ನೇಮು) ನೀವು ಯಾರನೇ ಪರಿಚಯ ಮಾಡಿಕೊಂಡರೂ ಅವರು ಒಂದು ಪ್ರಶ್ನೆ ಕೇಳೇ ಕೇಳ್ತಾರೆ. ನಿಮ್ಮ ಅಡ್ಡಹೆಸರೇನ್ರೀ ? ಎಂದು. ನನಗೆ ಅಡ್ಡಹೆಸರಿಲ್ಲ ಎಂದರೆ ಆಶ್ಚರ್ಯ ಅವರಿಗೆ. ನನ್ನ ವೃತ್ತಿಯಲ್ಲಿ ಸಾಗಿ ಬಂದ ಕೆಲವು ವ್ಯಕ್ತಿಗಳ ಸ್ವಾರಸ್ಯಕರ
ಅಡ್ಡಹೆಸರುಗಳಲ್ಲಿ ಕೆಲವೊಂದನ್ನು ಇಲ್ಲಿ ಕೊಟ್ಟಿದ್ದೇನೆ. ಇಲ್ಲಿ ಇ ಕಾರದ ಬಳಕೆಯೂ ಹೆಚ್ಚು.
ಅಂಗಡಿ…
ವಿಧ: ಚರ್ಚೆಯ ವಿಷಯ
August 07, 2007
ಬಕ್ಕಮ್ಬಯಲ್ಕೂಳಬಕ್ಕಬಯಕೆಮರಬಿನ್ನಣಿಬರ್ದುಗಬಿಸುಗಣ್ಣಣುಗಬೆಂಗದಿರಬೆಂಗದಿರಣುಗ