ವಿಧ: Basic page
August 05, 2007
ಒಂದು ಸಲ ಒಬ್ಬನಿಗೆ ಒಂದು ಮಂಗ ಸಿಕ್ತು. ಅರೇ ಅದರಲ್ಲೇನು ವಿಶೇಷ ಅಂತೀರಾ? ಆ ಮಂಗಕ್ಕೆ ಮಾತಾಡೊಕೆ ಬರ್ತಿತ್ತು! ಕನ್ನಡದಲ್ಲಿ ನಿಛ್ಛಳವಾಗಿ ಮಾತಾಡ್ತಿತ್ತು. ಆತ ಮನಸ್ಸಿನಲ್ಲೆ ಮಂಡಿಗಿ ತಿಂದ! ಇದನ್ನ ಇಟ್ಕೊಂಡು ಎಷ್ಟೊಂದು ದುಡ್ಡು ಮಾಡ್ಬಹುದು ಅಂತ ಲೆಕ್ಕ ಹಾಕಿದ. ಎಷ್ಟಂದ್ರು ಹುಲು ಮಾನವನಲ್ವೆ?! ಆ ಮಂಗಣ್ಣನ್ನ ಮನೆಗೆ ಕರ್ಕೊಂಡು ಬಂದ. ಇಡೀ ರಾತ್ರಿಯೆಲ್ಲ ಅದ್ರ ಜೊತೆ ಮಾತಾಡೊದ್ರಲ್ಲೆ ಕಳೆದ...
ಮರುದಿನ ಆಫೀಸಿಗೆ ಹೋಗಿ, ಸಹೋದ್ಯೊಗಿಗಳಿಗೆ ಮಂಗಣ್ಣನ ಸುದ್ದಿ ಹೇಳಿದ. ಅದರ ಸುದ್ದಿ ಕೇಳಿ,…
ವಿಧ: ಚರ್ಚೆಯ ವಿಷಯ
August 05, 2007
ಸಂದೀಪ್ ಅವರ ಬರಹ ಚೆನ್ನಾಗಿದೆ, ಓದಿ:
http://www.sandeepweb.com/
(Nehru's Love For Edwina is India's Continuing Nightmare)
ವಿಧ: ಚರ್ಚೆಯ ವಿಷಯ
August 05, 2007
ಕನ್ನಡದಲ್ಲಿ ಬಳಕೆಯಲ್ಲಿ ಇಲ್ಲವೇ ಇಲ್ಲ ಎನ್ನಬಹುದು. ಸಕ್ಕದದಲ್ಲಿ ಇರಬಹುದೇ?
ಮಾದರಿ: ಖ್ಖ, ಘ್ಘ, ಛ್ಛ, ಝ್ಝ, ಠ್ಠ, ಢ್ಢ, ಥ್ಥ, ಧ್ಧ, ಫ್ಫ, ಭ್ಭ,
ಅಬ್ಬಾ, ಸಿಕ್ಕಾಪಟ್ಟೆ ಉಲಿಯಲು ತುಂಬಾ ಎಡರು-ತೊಡರು :(
ವಿಧ: Basic page
August 05, 2007
"ಸೀ ಯಾ, ನೋ ಡಾ... ಕಮಿಂಗ್ ಡಾ.... " ಇದೇ ನಾವಾಡುವ ನುಡಿ! ಇದೇ ಸ್ವಾಮಿ ನಮ್ಮ ಗಂಧದ ಗುಡಿಯ ಪಾಡು! ಇಂಗ್ಲೀಷು ನಮ್ಮನ್ನ ಯಾವ ಪರಿ ಆಳ್ತಾ ಇದೆಯೋ ನೋಡಿ. ನಮ್ಮ ಪಕ್ಕದಲ್ಲೇ ಜನರನ್ನು ನೋಡ್ತಾ ಇರ್ತೀವಿ, ತಮ್ಮ ಮಕ್ಕಳ ಜೊತೆ, ಇಂಗ್ಲಿಷಲ್ಲೇ ಅವರ ಸಂಭಾಷಣೆ. ಮೊನ್ನೆ ಒಬ್ಬ ತಾಯಿ ಮಗನಿಗೆ ಕರೀತಾ ಇದ್ದ್ಲು "ಕಮ್ ಫಾಸ್ಟ್". ಎಂಥ ವಿಪರ್ಯಾಸ ನೋಡಿ. ಮಾತೃ ಭಾಷೆ ಅನ್ನೋದಕ್ಕೆ ಅರ್ಥವೇ ಇಲ್ಲದಂತಾಗಿದೆ! ಕನ್ನಡದಲ್ಲಿ "ಬೇಗ ಬಾ ಮಗು" ಅಂತ ಕರದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವೆ? ನಾನು ಇಂಗ್ಲಿಷ್…
ವಿಧ: ಬ್ಲಾಗ್ ಬರಹ
August 05, 2007
ಬೀರ್ ಹೀರಿ "ಎಂಡ್ಕುಡ್ಕ ರತ್ನ ನಂಜಿನ ಹೊಗಳೊ" ಹಂಗೆ ನನ್ನ ಗೆಳೆಯ 'ವಿಶ್ವ' ನನ್ನ ಬ್ಲಾಗ್ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸುತ್ತಿದ್ದ. ಬಡಪಾಯಿ ನಾನು, ನಿಜ ಇರಬಹುದೇನೊ ಅನ್ಕೊಂಡು, ಸ್ವರ್ಗಕ್ಕೆ ಮೂರೇ ಗೇಣು ಅಂತ ಎಣಿಸ್ತಿದ್ದೆ. "ಕುಡುದ್ ಬಿಟ್ ಮಾತಾಡ್ತವ್ನೆ ನನ್ ಮಗ" ಅಂತ ಕೊಂಚ ಬೇಜಾರೇನೊ ಆಯಿತು. ಅವನು ಅಂದಿದ್ರಲ್ಲಿ ಸ್ವಲ್ಪನಾದ್ರು ನಿಜ ಇರಬೇಕಲ್ಲ ಅಂತ ಸಮಧಾನ ಪಟ್ಟುಕೊಂಡೆ. ಅವನು ಯಾವುದೇ ಸಂಧರ್ಭದಲ್ಲಿ ಹಿಂಗಿಂಗೇ ಪ್ರತಿಕ್ರಿಯೆ ಕೊಡ್ತಾನೆ ಅಂತ ಹೇಳೊಕ್ಕಾಗಲ್ಲ. ಅವಾಗಾವಾಗ ಮಖದ ಮೇಲೆ…
ವಿಧ: ಬ್ಲಾಗ್ ಬರಹ
August 05, 2007
ಬರ್ಗ್‌ಮನ್ ತೀರಿಕೊಂಡ ಸುದ್ದಿ ಕೇಳಿ ಅವನ ವಿಂಟರ್‌ಲೈಟ್ ಮತ್ತೆ ನೋಡಿದೆ. ೮೧ ನಿಮಿಷದ ಅವಧಿಯ ಚಿತ್ರ. ವಾಸ್ತವ ಜಗತ್ತಿನ ಮೂರು ಗಂಟೆಗಳಲ್ಲಿ ತೆರೆದುಕೊಳ್ಳುವ ಪಾತ್ರಗಳು, ಮಾನಸಿಕ ಹೊಯ್ದಾಟ, ಧಾರ್ಮಿಕವಲ್ಲದ ಧರ್ಮದ ಬಗೆಗಿನ ಚಿಂತನೆ, ನೋವು ಮತ್ತು ನರಳಾಟದ ಬಗೆಗಿನ ಒಳನೋಟ ನಮ್ಮನ್ನು ಹಿಡಿದಿಡುತ್ತದೆ.ನಾಕು ವರ್ಷದ ಹಿಂದೆ ಹೆಂಡತಿ ಕಳೆದುಕೊಂಡ ಸಣ್ಣ ಊರೊಂದರ ಪಾದ್ರಿ. ತನ್ನನ್ನು ಮದುವೆಯಾಗೆಂದು ಪೀಡಿಸುವ ಶಾಲಾ ಶಿಕ್ಷಕಿಯಾದ ಅವನ ಗೆಳತಿ. ಜಗತ್ತಿನ ಕರಾಳ ವಿದ್ಯಮಾನಗಳ ಬಗ್ಗೆ ಕಂಗೆಟ್ಟಿರುವ…
ವಿಧ: ಬ್ಲಾಗ್ ಬರಹ
August 05, 2007
ನನ್ನ ಪ್ರಿಯ ಮಿತ್ರನೊಬ್ಬ ಕಳೆದ ವಾರಾಂತ್ಯದಲ್ಲಿ ಊರಿಗೆ ಹೊರಡುತ್ತಿದ್ದ. ಯುಕೆಯಿಂದ ಭಾರತಕ್ಕೆ ಪ್ರಯಾಣಿಸಬೇಕಾದರೆ, ವಿಮಾನದಲ್ಲಿ ೨೫ ಕೆಜಿಗಿಂತ ಹೆಚ್ಚು ಲಗೇಜ್ ಇರುವಂತಿಲ್ಲ. ಅವನಲ್ಲಿ ಅದಾಗಲೇ ಲಗೇಜ್ ೩೦ ಕೆಜಿಗಿಂತ ಹೆಚ್ಚಿತ್ತು!, ನನ್ನ ಪ್ರಾಜೆಕ್ಟ್ ಮ್ಯಾನೇಜರ್ ಅವರ ಸಂಬಂಧಿ ಮಕ್ಕಳಿಗಾಗಿ ರಿಮೋಟ್ ಕಂಟ್ರೋಲ್ಲರ್ ಚಾಲಿತ ಅಗ್ನಿಶಾಮಕ (ಆಟದ) ಟ್ರಕ್ ಒಂದನ್ನು ಅವನ ಮೂಲಕ ತರಿಸುತ್ತಿದ್ದರು. ಅವನಲ್ಲಿ ಅದನ್ನು ಹಿಡಿಸುವಂತ ಸೂಟ್ ಕೇಸ್ ಇಲ್ಲವಾಗಿ, ನಾನು ನನ್ನ ದೊಡ್ಡ ಸೂಟ್ ಕೇಸಿನಿಂದ…
ವಿಧ: ಚರ್ಚೆಯ ವಿಷಯ
August 05, 2007
ಭೈರಪ್ಪನವರ ದಾಟು ಓದಿ ಮುಗಿಸಿದೆ. ತು೦ಬಾ ಚೆನ್ನಾಗಿ ಜಾತಿ ವ್ಯವಸ್ಥೆಯ ಒಳಿತು, ಕೆಡುಕುಗಳನ್ನು ವಿವರಿಸಿದ್ದಾರೆ.
ಈ ಕಾದ೦ಬರಿಯನ್ನು ಓದಿದ ಮೇಲೆ ಜಾತಿ ಪದ್ದತಿಯ ಬಗ್ಗೆ ಕೆಲವು ಪ್ರಶ್ನೆಗಳೆದ್ದವು.
೧ ಇ೦ದಿನ ಸಮಾಜದಲ್ಲಿ ಒಬ್ಬ ಮಾನವನು ತಾನು ಯಾವ ತ೦ದೆ ತಾಯಿಗೆ ಹುಟ್ಟಿದ್ದಾನೆ ಎ೦ಬ ಆಧಾರದಲ್ಲಿ ಅವನ ಜಾತಿಯ ನಿರ್‍ಣಯವಾಗುತ್ತದೆ. ಇದು ಜಾತಿಯನ್ನು ನಿರ್‍ಣಯಿಸುವ ಸರಿಯಾದ ವಿಧಾನವೆ?
೨ ಬ್ರಾಹ್ಮಣಿಕೆ ಅಥವಾ ಬ್ರಾಹ್ಮಣತ್ವ ದ ಅರ್ಥವೇನು?
೩ ಓಬ್ಬ ಮಾನವನು ಇನ್ನೊಬ್ಬ ಮಾನವನಿಗೆ…
ವಿಧ: ಬ್ಲಾಗ್ ಬರಹ
August 04, 2007
ನಾನೊಬ್ಬ ಡಾಕ್ಟರ್, ಐಟಿ ಅಲ್ಲ. ನನ್ನ ಗೆಳೆಯನೊಬ್ಬ ಕೇಳುತ್ತಿದ್ದ ಈ ಮೇಲಿನ ಪ್ರಶ್ನೆಗೆ ನಾನು ಬ್ಲಾಗಿಸಿದರೆ ಬೇರೆಯವರಿಗೂ ಉಪಯೋಗವಾದೀತು ಎಂದು ಬ್ಲಾಗಿಸುತ್ತಿದ್ದೇನೆ. ನನಗೆ ಗೊತ್ತು, ಬ್ಲಾಗಿಸುವವರಲ್ಲಿ ತುಂಬಾ ಜನ ಐಟಿಯವರೇ. ಅವರಿಗೇನೂ ಈ ವಿಷಯ ಹೊಸದಲ್ಲ. ನನ್ನ ಬ್ಲಾಗಿನಲ್ಲಿ ಕನ್ನಡ ಬ್ಲಾಗುಲೋಕ ಎಂಬ ಖಾನೆಯಲ್ಲಿ ಕನ್ನಡದ ನೂರಾರೊ ಬ್ಲಾಗುಗಳ ಕೊಂಡಿಯನ್ನು ಕೊಟ್ಟಿದ್ದೇನೆ. ನಿಮಗೆ ಇಷ್ಟವಾಗಿರುವ ಎಲ್ಲ ಬ್ಲಾಗುಗಳನ್ನು ದಿನಾಲೂ ಸರ್ಫ್ ಮಾಡುವುದು ಅಸಾಧ್ಯದ ಮಾತು. ವೆಬ್ ನ RSS feed ಬಳಸಿ…
ವಿಧ: ಬ್ಲಾಗ್ ಬರಹ
August 04, 2007
ನಾನೊಬ್ಬ ಡಾಕ್ಟರ್, ಐಟಿ ಅಲ್ಲ. ನನ್ನ ಗೆಳೆಯನೊಬ್ಬ ಕೇಳುತ್ತಿದ್ದ ಈ ಮೇಲಿನ ಪ್ರಶ್ನೆಗೆ ನಾನು ಬ್ಲಾಗಿಸಿದರೆ ಬೇರೆಯವರಿಗೂ ಉಪಯೋಗವಾದೀತು ಎಂದು ಬ್ಲಾಗಿಸುತ್ತಿದ್ದೇನೆ. ನನಗೆ ಗೊತ್ತು, ಬ್ಲಾಗಿಸುವವರಲ್ಲಿ ತುಂಬಾ ಜನ ಐಟಿಯವರೇ. ಅವರಿಗೇನೂ ಈ ವಿಷಯ ಹೊಸದಲ್ಲ. ನನ್ನ ಬ್ಲಾಗಿನಲ್ಲಿ ಕನ್ನಡ ಬ್ಲಾಗುಲೋಕ ಎಂಬ ಖಾನೆಯಲ್ಲಿ ಕನ್ನಡದ ನೂರಾರೊ ಬ್ಲಾಗುಗಳ ಕೊಂಡಿಯನ್ನು ಕೊಟ್ಟಿದ್ದೇನೆ. ನಿಮಗೆ ಇಷ್ಟವಾಗಿರುವ ಎಲ್ಲ ಬ್ಲಾಗುಗಳನ್ನು ದಿನಾಲೂ ಸರ್ಫ್ ಮಾಡುವುದು ಅಸಾಧ್ಯದ ಮಾತು. ವೆಬ್ ನ RSS feed ಬಳಸಿ…