ವಿಧ: ಚರ್ಚೆಯ ವಿಷಯ
August 01, 2007
ನಿಮ್ಮ ಸಂಸ್ಥೆಯಲ್ಲಿ ಏನಾದರು ಕನ್ನಡ ನಾಮ ಫಲಕ ಹಾಕಿಲ್ಲ ಅಂದರೆ ಏನು ಮಾಡಬೇಕು?
----------------------------------------------------------------------------------------------------------------------------------------------------
೧: ಬೆಂಗಳೂರು ಮಹಾನಗರ ಪಾಲಿಕೆಗೆ ದೂರು ನೀಡಿ…
ವಿಧ: ಚರ್ಚೆಯ ವಿಷಯ
July 31, 2007
ದಳಕ್ಕೆ ದಿಂಬು, ಕಮಲಕ್ಕೆ ಚೊಂಬು ?
ಸದ್ಯದ ರಾಜಕಿಯ ವ್ಯವಸ್ಥೆಯಲ್ಲಿ, ಕಮಲಕ್ಕೆ ಕುರ್ಚಿ ಸಿಗುತ್ತೊ, ಇಲ್ಲವೊ ಎಂಬ ಭಯವು ಹುಟ್ಟಿದೆ ಎಂದು ಕಾಣಿಸುತ್ತೆ !! ಅದಕ್ಕೆ ಸಾಕಷ್ಟು ಪತ್ರಿಕಾಗೋಷ್ಟಿಯಲ್ಲಿ ತುಂಬ ಹೇಳಿಕೆಗಳು ಕೊಡುತ್ತಿದ್ದಾರೆ ಉ.ಮು.ಮಂ
ಸದ್ಯಕ್ಕೆ ಹಾಸಿಗೆ ದಿಂಬು ಸಹಿತ ಸೆಟ್ಟಲ್ ಆಗಿರುವ ದಳ, ಕಮಲಕ್ಕೆ ಜಾಗ ಕೊಡುತ್ತಾ ?? ಕಾದು ನೋಡಬೇಕು ...
ವಿಧ: ಬ್ಲಾಗ್ ಬರಹ
July 31, 2007
ಸ೦ಕ್ರಮಣ:
ಈ ನಾಟಕ ನೋಡುವ ಪ್ಲಾನ್ ಇರಲಿಲ್ಲಾ. ಆದರೆ ಕೆಲವು ನಾಟಕಗಳೂ ನಾವು ನೋಡಲೇ ಬೇಕಾಗುತ್ತೆ.
ಅ೦ತಹ ಅನಿವಾರ್ಯ ಕಾರಣದಿ೦ದ ನಾನು ಈ ನಾಟಕ ನೋಡಿದ್ದು.
ನಾಟಕದಲ್ಲಿ ಬರುವುದು ಮೂರು ಪಾತ್ರಗಳು. ಒ೦ದು ತ೦ದೆಯ ಪಾತ್ರ, ಮತ್ತೊ೦ದು ತಾಯಿಯ
ಪಾತ್ರ, ಎಲ್ಲಾದಕ್ಕಿನ್ನಾ ಎಲ್ಲಾ ಸ೦ಭಾಷಣೆಯಲ್ಲೂ ಮೂಡಿ ಬರುವುದು ಮಗನ ಪಾತ್ರ.
"ಮಗನನ್ನು ಪಡೆಯದೇ ಇದ್ದರೆ,ನರಕಕ್ಕೆ ಹೋಗಬೇಕಾಗುತ್ತೆ, ಪಿ೦ಡಾ ಇಡುವವರು ಇರೋದಿಲ್ಲಾ"
ಎನ್ನುವ ಸ೦ಪ್ರದಾಯ ಕುಟು೦ಬವದು.ತ೦ದೆಗೆ ತಾನು ಕಷ್ಟ ಪಟ್ಟು ಸ೦ಸಾರವನ್ನು ಮಾಡಿದ್ದೇನೆ…
ವಿಧ: ಚರ್ಚೆಯ ವಿಷಯ
July 31, 2007
ಏಕಾಗ್ರತೆ ಸಾಧಿಸಲು ಕೆಲವರು ಕಣ್ಣು ಮುಚ್ಚಿಕೊಳ್ಳುತ್ತಾರೆ. ಕೆಲವರು ಸಿಗರೇಟ್ ತುದಿಗೆ ಬೆಂಕಿ ಹಚ್ಚಿ, ಬಿಳಿ ಮೋಡಗಳ ಸೃಷ್ಟಿಸುತ್ತಾರೆ. ಇನ್ನೂ ಕೆಲವರು ನಾಲಿಗೆ ಹೊರಚೆಲ್ಲಿ, ಎಡಕ್ಕೆ ಬಲಕ್ಕೆ ನಾಲಿಗೆಯನ್ನು ವಾಕಿಂಗ್ ಮಾಡಿಸುತ್ತಾರೆ! ನಾಲಿಗೆ ಹೊರಚಾಚುವುದರಿಂದ ಯಾರಿಗೇನು ನಷ್ಟವಿಲ್ಲ. ಅವರ ನಾಲಿಗೆ, ಅವರಿಷ್ಟ ಬಿಡಿ! ಇಷ್ಟಕ್ಕೂ ನಾಲಿಗೆ ಹೊರಚಾಚಲು ಏನು ಕಾರಣ? ಅದರಿಂದ ಏನಾದರೂ ಅನುಕೂಲವಿದೆಯಾ? ತಿಳಿಯೋಣ ಬನ್ನಿ
ಓದಿ ವಿಚಿತ್ರಾನ್ನ ಅಂಕಣ ಶ್ರೀವತ್ಸ ಜೋಷಿಯವರದ್ದು...........
ವಿಧ: ಚರ್ಚೆಯ ವಿಷಯ
July 31, 2007
ಬಿ.ಪಿ.ಓ.’ ಗೊತ್ತಲ್ಲ? ವಿದೇಶಿ ಕಂಪನಿಗಳು ತಮ್ಮ ವಹಿವಾಟಿನ ನಿತ್ಯ ಚಟುವಟಿಕೆಗಳನ್ನು ಮತ್ತೊಂದು ಕಂಪನಿಗೆ ಹೊರಗುತ್ತಿಗೆ ನೀಡುವ ಪ್ರಕ್ರಿಯೆಯಿದು. ತಮ್ಮದೇ ತಾಣದಲ್ಲಿ ಕೆಲವೊಂದು ಕೆಲಸಗಳನ್ನು ಮಾಡಿಸುವುದು ತುಟ್ಟಿಯ ಬಾಬ್ತು ಎಂದು ಮನವರಿಕೆಯಾದಾಗ ದೊಡ್ಡ ಕಂಪನಿಗಳು ಅವುಗಳನ್ನು ಅಗ್ಗದ ದರದಲ್ಲಿ ಮಾಡಿಕೊಡಬಲ್ಲ ಪುಟ್ಟ ಕಂಪನಿಗಳ ಮೊರೆಹೋಗುತ್ತವೆ. ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಹಾಗೂ ಯೂರೋಪ್ ದೇಶಗಳಿಂದ ನಮ್ಮ ದೇಶದ ಐ.ಟಿ. ಕಂಪನಿಗಳಿಗೆ ಈ ‘ಬಿ.ಪಿ.ಓ.’ ಪ್ರಕ್ರಿಯೆಯಿಂದ ‘ಬ್ಯುಸಿನೆಸ್’…
ವಿಧ: Basic page
July 31, 2007
ಬೇಸಗೆಯಲ್ಲಿ ವಿದ್ಯುತ್ ಬಳಕೆ ಮಿತಿಮೀರಿ ಹೋಗುವುದು ಎಲ್ಲರ ಅನುಭವ.ಕಟ್ಟಡಗಳನ್ನು ತಂಪುಗೊಳಿಸುವ ವ್ಯವಸ್ಥೆಗಳು ವಿದ್ಯುತ್ ಬೇಡಿಕೆಯ ಮೇಲೆ ಹೆಚ್ಚು ಒತ್ತಡ ಹೇರುತ್ತವೆ. ಅಮೆರಿಕಾದಲ್ಲು ಪರಿಸ್ಥಿತಿ ಭಿನ್ನವಲ್ಲವಂತೆ. ಅಲ್ಲಿಯೂ ಕಚೇರಿ ಸಮಯದಲ್ಲಿ ವಿದ್ಯುತ್ ಬೇಡಿಕೆ ಮಿತಿಮೀರಿ ಹೋಗುತ್ತದೆ. ಈ ಬೇಡಿಕೆಯನ್ನು ತಗ್ಗಿಸಿದರೆ,ಪರಿಸರಸ್ನೇಹಿ ಕ್ರಮಗಳನ್ನು ಕೈಗೊಳ್ಳಲು ಹೆಚ್ಚಿನ ಪ್ರೋತ್ಸಾಹ ಇದೆ. ಕಟ್ಟಡದ ಏ.ಸಿ.ಗಳನ್ನು ಹೊಸ ರೀತಿಯಲ್ಲಿ ಮಾರ್ಪಡಿಸಿ, ವಿದ್ಯುತ್ ಬೇಡಿಕೆಯನ್ನು ತಗ್ಗಿಸುವ…
ವಿಧ: ಬ್ಲಾಗ್ ಬರಹ
July 31, 2007
ಯಾವುದೂ ಪ್ರತೀಕವಾಗಲು ಒಪ್ಪುತ್ತಿಲ್ಲ. ಮುಂದೆ ತೆರೆದುಕೊಳ್ಳುತ್ತಿರುವ ಹಾದಿ. ಹಿಂದೆ ಮುಚ್ಚಿಕೊಳ್ಳುತ್ತಿರುವ ಹೆಜ್ಜೆ ಗುರುತು. ರಸ್ತೆ ಪಕ್ಕದ ಮರದ ಹಳದಿ ಎಲೆಗಳು. ದೂರದ ಬೆಟ್ಟದ ಮೈಯೆಲ್ಲಾ ತುಂಬಿಕೊಂಡಿರುವ ಕುರಚಲು ಗಿಡಗಳು. ಯಾವುದೂ ಪ್ರತೀಕವಾಗಲು ಒಪ್ಪುತ್ತಿಲ್ಲ. ಒಪ್ಪಲೇ ಬೇಕೆಂದು ಒತ್ತಾಯ ಮಾಡಲಾರೆ. ಆದರೂ, ಪ್ರತೀಕವಾದರೆ ಎಲ್ಲಕ್ಕೂ ಹೆಚ್ಚು ಅರ್ಥಬರುತ್ತದೆ ಎಂದು ನನ್ನ ಮನಸ್ಸಿನಾಳದ ಆಸೆ.ಪಕ್ಕದಲ್ಲೇ ಡೊಂಕು ಬಾಲ ಆಡಿಸುತ್ತಿದ್ದ ನಾಯಿ ನನ್ನ ಆಸೆ ಗೊತ್ತಾಗಿ ಹಂಗಿಸುವಂತೆ ಅಂಡು…
ವಿಧ: ಬ್ಲಾಗ್ ಬರಹ
July 31, 2007
ಬೆಂಗಳೂರು ರಿಯಲ್ ಎಸ್ಟೇಟ್ - ಸುದ್ದಿ-ಗುದ್ದು
ಸುದ್ದಿ ೧ : ಬೆಂಗಳೂರು ಪ್ರಾಪರ್ಟಿ ವ್ಯಾಲ್ಯು(property value ) ಹೆಚ್ಚಳ. ಸರ್ಕಾರಕ್ಕೆ ೮೦೦೦ ಕೋಟಿ ಆದಾಯ ನಿರೀಕ್ಷಿತ.
ಸುದ್ದಿ ೨ : ಮನೆ ಸಾಲಗಳ ಬಡ್ಡಿದರ ೧೨% ಗೆ ಹೆಚ್ಚಳ.
ಈ ಸುದ್ದಿಗಳು ಕೇವಲ ಸುದ್ದಿಗಳಾದರೆ , ಇಲ್ಲ ಇದು ವಾಸ್ತವ. ಇದು ಸಾಮಾನ್ಯನಿಗೆ ಬಹಳ ತೊಂದರೆಗೆ ಸಿಗಿಸುತ್ತದೆ.
ಉದಾಹರಣೆ : ಬಿ.ಟಿ.ಎಂ ಲೇಔಟ್ ನಲ್ಲಿ ಈಗ ಒಂದು ಸೈಟ್ ಗೆ ಮನೆಗೆ ೭೦ ಲಕ್ಷ ಕೊಡಬೇಕು. ಈ ರೀತಿ ನೋಡಿದರೆ ತಿಂಗಳಿಗೆ ೭೦ ಸಾವಿರ ಈ.ಎಮ್.ಐ ಕೊಡಬೇಕು…
ವಿಧ: Basic page
July 31, 2007
ಈಗ ಕೆಲವು ದಿನಗಳಿಂದ ಸುದ್ದಿಮಾಡಿರುವ ಬಸವಣ್ಣನವರ ಬಗ್ಗೆಯ ಜಯಪ್ರಕಾಶರ ಪುಸ್ತಕದ ಬಗ್ಗೆ ನಾವೆಲ್ಲಾ ಸಂಪದದಲ್ಲಿ ಬಹಳಷ್ಟು ಓದಿದ್ದೇವೆ. ಆದರೆ, ಬಸವಣ್ಣ ನಮಗೆ ಬೇಕಾಗಿರುವುದು ನಮಗೆ ಅವರು ಏನು ಹೇಳಿದರು ಎನ್ನುವುದರಿಂದಲೇ ಹೊರತು, ಅವರ ಹಿನ್ನಲೆ ಏನು ಎನ್ನುವ ಕಾರಣಕ್ಕೆ ಅಲ್ಲ. ಇದನ್ನು ನಾವು ಮರೆಯದಿದ್ದರೆ, ಎಷ್ಟೋ ಗೊಂದಲಗಳಿಂದ, ಗದ್ದಲಗಳಿಂದ ದೂರಾಗಬಹುದು. ಇದು ಬಸವಣ್ಣ ಒಬ್ಬರೇ ಅಲ್ಲ, ಇನ್ನ್ಯಾವ ಮಹಾಪುರುಷರಿಗೂ, ಕವಿ-ಕಲಾವಿದರಿಗೂ ಹೊಂದುವ ಮಾತೇ.
ನೆನ್ನೆ ಸುಮಾರು ಎರಡು ವರ್ಷಗಳ ಹಿಂದೆ…
ವಿಧ: ಚರ್ಚೆಯ ವಿಷಯ
July 30, 2007
ನನ್ನ ತಾಯಿನುಡಿ ಕನ್ನಡಕ್ಕೂ, ತಮಿಳಿಗೂ ನಡುವಿನ ಒಂದು ಭಾಷೆ. ಮೂಲವಾಗಿ ತಮಿಳಿನಿಂದ ಬಂದರೂ, ಶತಮಾನಗಳಿಂದ ಕನ್ನಡನಾಡಿನಲ್ಲಿರುವುದರಿಂದ ನಮ್ಮ ಮಾತು ಕನ್ನಡಿಗರಿಗೆ ಸ್ವಲ್ಪ ತಮಿಳಿನಂತೆಯೂ, ತಮಿಳಿನವರಿಗಂತೂ ತೀರಾ ಕನ್ನಡದಂತೆಯೂ ತೋರುತ್ತೆ.
ನನಗೆ ತಿಳಿದಂತೆ ಕನ್ನಡದಲ್ಲಿಲ್ಲದ inclusive we ಮತ್ತು exclusive we ನನ್ನ ತಾಯ್ನುಡಿಯಲ್ಲಿದೆ.
ಎಂಗಡೆ, ಎಂಗ್ಳುಕ್ಕು -> ನಮ್ಮ,ನಮಗೆ : ಆದರೆ ನಾನು ಯಾರಿಗೆ ಈ ಮಾತನ್ನು ಹೇಳುತ್ತಿದ್ದೇನೋ ಅವರನ್ನು ಬಿಟ್ಟು ; ಉದಾಹರಣೆಗೆ ಹೇಳುವುದಾದರೆ ಬೇರೆ…