ಇತ್ತೀಚೆಗೆ ಸೇರಿಸಿದ ಪುಟಗಳು

ಮೋದಿ ಪ್ರಮಾಣ

ಒಳ್ಳೆ ದಿನಗಳನ್ನು ನೀಡುತ್ತೇನೆ ಎಂದು ಗೆದ್ದು ಬಂದ, ನೀನು, ಇಂದು ಸ್ವೀಕರಿಸುವೆ ಪ್ರಮಾಣವಚನ,
ದೇಶದ ಜನ ಅಭಿಮಾನವಿಟ್ಟು, ನಿನ್ನ ಆರಿಸಿ ಕಳಿಸಿದ್ದಾರೆ, ಪ್ರಧಾನಿಪೀಠದ ಮೇಲೆ ಇಂದಾಗುವೆ, ಆಸೀನ,
ನಮಗೆ ರಿಯಾಯಿತಿ ಊಟ ಬೇಕಿಲ್ಲ, ಸಹಾಯ ಧನ ಬೇಕಿಲ್ಲ, ಉಚಿತವಾಗಿ ಏನೂ ಬೇಡ, ಕೇಳಿಸಿಕೊಳ್ಳು ಕೋರಿಕೆಯನ್ನ,
ಸರಳ, ಸುಂದರ, ಜೀವನಕ್ಕೊಂದು ಅವಕಾಶ, ಇಷ್ಟೇ ಸಾಕು, ಅರ್ಥ ಮಾಡಿಕೋ ನಮ್ಮ ಕಳಕಳಿನಾ,
ದುಡಿಯುವರಿಗೊಂದು ಸಾಧ್ಯತೆ, ಗಲಭೆ, ದಂಗೆಗಳಿಲ್ಲದ ಜಗತ್ತು, ಇಷ್ಟೇ ಸಾಕು, ಸವಲತ್ತು,
ಬೇಧ ಭಾವವಿಲ್ಲದ, ಆಡಳಿತ, ಹೊರಜಗತ್ತಿನಲ್ಲಿ, ಒಂದಿಷ್ಟ್ಟು ಮಾನ, ಸನ್ಮಾನ, ನೋಡು ಆ ಗಮ್ಮತ್ತು,
ಮಂದಿರ ಮಾಡ್ತಿಯೋ, ಪ್ರತಿಮೆ ಮಾಡ್ತಿಯೋ, ನಮಗೆ ಬೇಡ, ಪ್ರಜೆಗಳಿಗೆ ಮೂಡಿದರೆ ಸಾಕು, ಆತ್ಮಗೌರವ,

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸಂಪನ್ನ

ಕೆಲವು ಜವಾಬ್ದಾರಿಗಳನ್ನು ಮುಗಿಸಿ, ಕೆಲವೊಂದನ್ನು ಎದುರು ನೋಡುತ್ತಾ ಕೂತಿದ್ದೇನೆ ಸಂಪನ್ನ,
ಅನುಭವಿಸುತ್ತಿದ್ದೇನೆ ಮಧ್ಯವಯಸ್ಸಿನ ತಳಮಳಗಳನ್ನ, ಗೊದಲಗಳನ್ನ ಹಾಗೆ, ಅದರ ತಂಪನ್ನ,
ನಡೆಯೋಷ್ಟು ವಯಸ್ಸಾಗಿಲ್ಲ, ಓಡೋ ಚೈತನ್ಯ ಉಳಿದಿಲ್ಲ, ಅರ್ಥಮಾಡಿಕೊಳ್ಳಿ ನನ್ನ ಭಾವನೆಗಳನ್ನ,
ತಲೆಯಲ್ಲಿರೋ ನೆರೆಕೂದಲಿನ ಕೃಪೆಯಿಂದ ಸಂಪಾದಿಸುತ್ತಿದೇನೆ ಹೊಸ ಗೌರವವನ್ನ,
ಯೌವ್ವನದ ಕನಸ್ಸಿನ್ನು ಮುಗಿದಿಲ್ಲ, ತತ್ವಜ್ಞಾನಿ ನನ್ನಲ್ಲಿನ್ನೂ ಹುಟ್ಟಿಲ್ಲ, ಸಹಿಸಿಕೊಳ್ಳುತ್ತೇನೆ ಈ ಶೂನ್ಯವನ್ನ,
ವೃದ್ಧರ ನಡುವೆ ಇನ್ನೂ ಜಾಗ ಸಿಕ್ಕಿಲ್ಲ, ಯುವಕರು ಇಷ್ಟ ಪಡಲ್ಲ, ಭರಿಸುತ್ತೇನೆ ಈ ಕಿರಿಕಿರಿಯನ್ನ,
ಈ ಮಜಲಿಗೂ, ಒಂದು ಸೌಂದರ್ಯವಿದೆ, ಭಾವವಿದೆ, ಅದರ ವಶಕ್ಕೆ ನೀಡಿದ್ದೇನೆ ನನ್ನನ್ನ,

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನೀನೆಲ್ಲಿದ್ದೆ ಮಳೆ

ನೀನೆಲ್ಲಿದ್ದೆ ಮಳೆ, ಕಾಣದೆ ನಿನ್ನ ನಾವೆಲ್ಲ, ಕಂಗಾಲಾಗಿದ್ದೆವು, ಹತಾಶರಾಗಿದ್ದೆವು,
ಸುಡುಬೇಸಿಗೆಯ ನಡುವೆ, ಭಗವಂತನನ್ನ ನೆನೆಯುವಂತೆ ನಿನ್ನ ನೆನೆಯುತ ಕಾದಿದ್ದೆವು,
ನಿನ್ನ ಆಗಮನಕ್ಕೆ ಕಾದು, ಭೂಮಿಯ ಮರಗಳೆಲ್ಲ ಸೋತು ಹೋಗಿದ್ದವು, ವಿರಹದಿಂದ ಬರಡಾಗಿದ್ದವು,
ಭೂಮಿಯ ಅಂಗುಲ ಅಂಗುಲವೂ, ಹಸಿದು ಬರಗೆಟ್ಟಿದ್ದವು, ಕಾದ ಸೀಸದಂತಾಗಿದ್ದವು,
ಮುನಿದ ಇನಿಯನಂತೆ ನೀನು ಬರೋ ಸೂಚನೆ ಕೊಟ್ಟು, ಬರದೇ ಹೋಗಿದ್ದು ಯಾಕೆ?
ಇಂದಾದರೂ ಬರುವೆಯಾ? ಅಥವಾ ಮತ್ತೆ ಆಸೆ ತೋರಿಸಿ, ನಿರಾಸೆ ಮಾಡುವೆಯಾ, ಎಂಬುದೇ, ಅಂಜಿಕೆ,
ನಿನ್ನಯ ಹನಿಗಳು ಭೂಮಿಗೆ ಬಿದ್ದು, ಭೂಮಿಯಾಗಲಿದೆ ಮತ್ತೆ ಹಸಿರು,
ಅಬ್ಬಾ ಏನದ್ರುಷ್ಟ, ಎಲ್ಲರ,  ಬಾಯಲ್ಲೂ ನಿನದೆ ಹೆಸರು, ನಿನ್ನ ಆಗಮನ ತುಂಬಲಿದೆ, ಉಸಿರು,
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ವಿಶ್ವಪರಿಸರ ದಿನಾಚರಣೆ

ವಿಶ್ವಮನೆಗಾಗಿ...
---------------------
ಬಾ ಪ್ರಾರ್ಥಿಸೋಣ
ದ್ವೇಷ ಹಗೆತನ ಜಾತಿ ವಿಜಾತಿಗಳ
ಒಳ ಜಗಳಗಳೆಲ್ಲವ ಮರೆತು
ಭೂಮಿ ಬಿಸಿಲ ತಾಪದಿಂದ
ಉರಿದು ಹೋಗದಿರಲೆಂದು!!

ಉಳಿಯಲೀ ಭೂಮಿ
ನಮ್ಮೆಲ್ಲರ ನಾಳಿನವರಿಗಾಗಿ!
ಬೆಳೆಯಲಿ ಹಸಿರಿಲ್ಲಿ
ಎಲ್ಲರಾ ಉತ್ತಮ ಉಸಿರಿಗಾಗಿ
ಬೆಳೆಯಲೆಲ್ಲರು ಇಲ್ಲಿ ಆರೋಗ್ಯವಂತರಾಗಿ!!

ಪ್ರಾರ್ಥನೆಯ ಕೈಯಿಂದ
ಗಿಡ ಮರ ಬೆಳೆಸೋಣ
ನೀರೆರೆದು ಪೋಷಿಸೋಣ
ಕಡಿಯದಂತೆ ಕಾಪಾಡೋಣ!
ನಗರ ಸ್ವಚ್ಛ ವಾಗಿಡೋಣ
ಕೆರೆಯ ಅಂದಗೊಳಿಸೋಣ!!

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

llಪರಿತಾಪll

ಗೊಂದಲದ ಗೂಡಿನೊಳಗಡೆ
ಸಿಲುಕಿರುವ ಹಂಬಲಗಳು
ಬಿಡುಗಡೆಗೆ ಹಪಹಪಿಸುತ್ತಿರುವುದು

ಮನದ ಗುಡಿಸಲಿನೊಳಗಡೆ
ಎಲ್ಲೆಲ್ಲೂ ಸೋರಿಕೆಗಳು
ಅಸುರಕ್ಷಿತ ಭಾವನೆಗಳೇ ಕಾಡುತ್ತಿರುವುದು

ಬೇಸರದಿ ಒಂಟಿತನದೆಡೆ
ಮೌನದಿ ಮಾತುಗಳು
ಪದಗಳ ಬಿಟ್ಟು ಸಮಾದಿಯಾಗುತ್ತಿರುವುದು

ನಾನ್ಯಾರೆಂಬ ಪ್ರಶ್ನೆಯೊಂದುಕಡೆ
ಸಿಗುವ ತಪ್ಪು ಉತ್ತರಗಳು
ವೈರುದ್ಧ್ಯ ದಿಕ್ಕುಗಳಿಂದ ತರ್ಕೊನ್ಮಾದದಲ್ಲಿರುವುದು

ದ್ವೈತ ಅದ್ವೈತದೆಡೆ
ಸಾಗುವ ಪ್ರಕ್ರಿಯೆಗಳು
ಪರಿಪರಿಯ ಪರಿತಾಪಗಳನ್ನು ನೀಡುತ್ತಿರುವುದು

-ಕೆಕೆ (ಕೀರ್ತನ್ ಕೆ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages