ಇತ್ತೀಚೆಗೆ ಸೇರಿಸಿದ ಪುಟಗಳು

llಯೋಗದ ಹಾದಿll

ಆಧ್ಯಾತ್ಮದ ಕಡಗೋಲಲ್ಲಿ
ಕಡೆಯುತ್ತಿರುವೆನು ಮನೋಸಾಗರವನೀಗ
ಅನವರತ ಅಭ್ಯಾಸದಲ್ಲಿ
ಕಡಿಮೆಯಾಗುತ್ತಿರುವುದು ಇಂದ್ರಿಯದ ವೈಭೋಗ

ಕಾಣದ ಪದರಗಳ ಅನಾವರಣ,
ಮೌನದಿ ಮನಸ್ಸಿನ ಒಳ ಹೊಕ್ಕಾಗ
ಎಂದೂ ಕೇಳದ ನಾದಗಳ ಶ್ರವಣ,
ಧ್ಯಾನದಿ ಅನಾಹತ ತೆರೆದಾಗ

ಮಲಗಿದ್ದ ಕುಂಡಲಿನಿಯು ಎದ್ದು ಬುಸುಗುಡುತ್ತ
ಸೀಳಿ ಷಟ್ಚಕ್ರಗಳ, ಸಾಗಿದೆ ಸಹಸ್ರಾರದತ್ತ

ಸುಸ್ಪಷ್ಟ ತೇಜೋಮಯ ಕಿರಣ,
ಗೋಚರ ಆಜ್ಞೆಯ ಕಣ್ಣಲ್ಲಿ ಕಂಡಾಗ
ಆ ಬೆಳಕಿನ ಮೇಲೆಯೇ ಧಾರಣ,
ಆಗಿದೆ ಸಮಾಧಿ ಧ್ಯಾನದಿ ಮೈಮರೆತಾಗ

ಜೀವ ಬ್ರಹ್ಮನ ಜೊತೆ ಸೇರಿ ನಲಿಯುತ್ತ
ಒಡೆದು ಪುಡಿಯಾಗಿದೆ, ಕಟ್ಟಿಕೊಂಡಿದ್ದ ಬಂಧನದ ಹುತ್ತ

-ಕೆಕೆ (ಕೀರ್ತನ್ ಕೆ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

llರುದ್ರll

ಜಡೆಯನ್ನು ಬಿಚ್ಚಿದ
ಡಮರುಗ ಕುಟ್ಟಿದ
ತ್ರಿಶೂಲ ಹಿಡಿದು ನಾಟ್ಯ ಮಾಡುತ್ತಿರುವ ರುದ್ರನು

ಮೂರನೆ ಕಣ್ಣನ್ನು ತೆರೆದ
ಮೈಯಿಗೆ ವಿಭೂತಿ ಬಳಿದ
ಕ್ರೋದಗ್ನಿಯ ಜ್ವಾಲೆ ಪಸರಿಸುತ್ತಿರುವ ರುದ್ರನು

ಶಾಂತ ಶಿವನು ಈಗ ಕೆರಳಿದನೋ
ರೌದ್ರ ರೂಪದ ರುದ್ರ ಆಗಿಹನೋ

ಬಾ ಬಾರೋ ಮೃತ್ಯುಂಜಯ ಬೇಗ ಬಾರೋ
ಈ ಮೋಸ ಅನ್ಯಾಯವ ಕೊನೆ ಮಾಡು ಬಾರೋ

ನೊಂದಿರುವ ಮುಗ್ಧ ಜನರು
ಕೂಗುತ್ತಿರುವರು ನಿನಗೆ
ಹಿಂದೆ ಮುಂದೆ ಯೋಚಿಸದೆ
ನೀ ಹೋಗೋ ಅವರ ಬಳಿಗೆ

ಕಣ್ಣ ನೀರು ವರೆಸು, ನೀ ಕೈಯ ಹಿಡಿದು ನಡೆಸು
ನಿನ್ನ ನಂಬಿಕೊಂಡ ಬಾಳು ವ್ಯರ್ಥವಾಗದೆಂದು ತಿಳಿಸು

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

llಅವಶೇಷll

ಮರೆತು ಹೋಗೆಂದು ಪುನಃ ಪುನಃ
ಹೇಳ ಬೇಡ ನೀನು ನನಗೆ
ಮರೆತಂತೆ ನಾನು ನಟಿಸುವೆ ವಿನಃ
ಬಿಡಿಸಲಾರೆ ನೆನಪಿನೊಂದಿಗಿನ ಬೆಸುಗೆ

ನೆನಪುಗಳ ಕೋಟೆ ಪೂರ್ತಿ ಕೆಡವಲು,
ಇಲ್ಲ ಯಾವ ಸಾಧನವು ನನ್ನ ಬಳಿ
ಅವಶೇಷವಾಗಿ ಉಳಿಯಲಿ ಅದು ಹಾಗೆ,
ನೋಡಿ ನೆನಪಾದರೆ, ಪ್ರೇಮ ಕುಂಚದಿ ಬಣ್ಣ ಬಳಿ

ಒಂಟಿ ಹೃದಯಕೆ ಸಿಗದೆ ಸಂಗವು,
ಖಿನ್ನತೆಯಲ್ಲಿ ಒದರುತ್ತಲಿರಲಿ ಹೀಗೆ
ಎಂದಾದರು ಮೂಡಿದರೆ ನನ್ನ ಬಿಂಬವು,
ನಿನ್ನ ಕಣ್ಣಲ್ಲಿ, ಅಳಿಸಿ ಹಾಕು ಕಂಬನಿ ಸುರಿಸದೆ ಹಾಗೆ

-ಕೆಕೆ (ಕೀರ್ತನ್ ಕೆ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕಾರ್ನಾಡರ ನಿರ್ಗಮನ

ಸಾವು ಯಾರದೇ ಆಗಿರಲಿ
ಅದೊಂದು ಬೆಚ್ಚಿ ಬೀಳಿಸುವ ಸಂಗತಿ
ಜಗ ಕಂಡ ಅದ್ಭುತ ನಾಟಕಕಾರ
ಕಾರ್ನಾಡ ನಿರ್ಗಮಿಸಿದ್ದಾರೆ
ಇದೊಂದು ವಿಷಾದದ ಸಂಗತಿ
ತುಂಬಲಾಗದ ಖಾಲಿತನ ಅವರ
ನಾಟಕಗಳ ಪಾತ್ರಗಳು ಅವುಗಳಾಡುವ
ಮಾತುಗಳು ಕತ್ತಲಲಿ ಮಿನುಗುವ
ನಕ್ಷತ್ರ ಸಾಲುಗಳು ನೀರವ ರಾತ್ರಿಯಲಿ
ಸಾಗಿ ಬರುವ ಮಿಂಚುಹುಳ ಸಾಲುಗಳು
ಜ್ಞಾನದ ಬೆಳಕು ಚೆಲ್ಲುವ ಹಣತೆಗಳು
ಕತ್ತಲೆಯ ದಾರಿಯಲಿ ಕನಸುಗಳನರಸಿ
ಪಯಣಿಸಿದವರು ಗಿರೀಶ ಕಾರ್ನಾಡ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

llಮರು ಭೇಟಿll

ಕುತೂಹಲ ನನ್ನಲ್ಲಿ ಮೂಡಿದೆ,
ನಿನ್ನ ನೋಡಲು
ಸತಾಯಿಸಿ ದೂರವೇ ಉಳಿದೆ,
ನೀನಿಷ್ಟು ದಿನಗಳು

ಮರೆಯಾಗಿ ನೀನು, ಕಾಣದೆ ಇರುವಾಗ
ಬೇಸರದ ಸ್ಥಿತಿ ಮನದೊಳಗೆ
ಮುಖತಃ ನಿನ್ನ, ನೋಡುವ ಸಮಯ
ತಂದಿದೆ ತಾಳಲಾರದ ಚಡಪಡಿಕೆ

ದಿನವೆಲ್ಲ ನಿನ್ನ, ನೆನೆಯುತ್ತ ನಾನು
ಕಳೆದಿರುವೆ ಸಮಯ ಇದುವರೆಗೆ
ಮರುಕ್ಷಣವೆ ನಿನ್ನ, ನೋಡುವೆನು ಎಂಬ
ತವಕವೆ ಸುಂದರ ಅನುಭವಕ್ಕೆ

-ಕೆಕೆ (ಕೀರ್ತನ್ ಕೆ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಆ ನನ್ನ ಮನಸ್ಸು

       ಅನಾಮಿಕ ಬೆರಳ ಉಂಗುರದ ಹೊಳಪು ಕುಂದಿದೆ...ಎರಡು ತಿಂಗಳ ಹಿಂದೆಯೇ ನಿಶ್ಚಿತವಾದರೂ, ಅರ್ಥವಾಗುತ್ತಿಲ್ಲ ನೀನೇಕೆ ಜೊತೆಗಿಲ್ಲವೆಂದು. ವಿರಹದ ವೇದನೆಯೆಂದರೆ ಏನೆಂದು ತಿಳಿಸುವ ಪರಿಯೇ...? ನಿನ್ನ ಕಾಣದೆ, ನೋಡದೆ, ಸುಳಿವೇ ಇಲ್ಲದೆ ನನ್ನಿನಿಯನೇ ನನಗಿಲ್ಲವೆಂಬ ದುಃಖ ಬೇರೂರಿದೆ. ಬಿರುಗಾಳಿಯಂತಹ ಈ ಆವೇಗ ನನ್ನಿಂದ ತಡೆಯಲಸಾಧ್ಯವಾಗಿದೆ. ನೀನು ಸಿಗದೇ ಇದ್ದಿದ್ದರೆ ನನಗಾವ ಚಿಂತೆಯೂ ಕಾಡುತ್ತಿರಲಿಲ್ಲ. ಈಗ ಸಿಕ್ಕಿದರೂ ಸಿಗದಂತೆ ಮರೆಯಾದರೆ, ಕಣ್ಣಿದ್ದೂ ಕಾಣದಂತಲ್ಲವೆ...? ಯಾರ ಬಳಿ ಹೇಳಿ ಕಳುಹಿಸಲಿ, ನಿನಗಾಗಿ ಬಕಪಕ್ಷಿಯಂತೆ ಕಾದಿಹೆನು ನಾನೆಂದು. ಬೇಜಾರಿನ ಈ ಮನತರಂಗಗಳು ಕಂಗಳಲ್ಲಿ ಅಬ್ಭರಿಸುತ್ತಿವೆ. ನನ್ನ ಅಂತರಂಗದ ಆಕಾಶ ಖಾಲಿ ಖಾಲಿ ಎನಿಸುತ್ತಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

llತಿಳಿಯದೆll

ಬಯಕೆಗಳು ಹುಟ್ಟುವುದು,
ತಿಳಿಯಲು ಆಗುವುದೇ?
ಬೇಕೆಂದು ಅನ್ನಿಸುವುದು,
ಸುಲಭದಲ್ಲಿ ಸಿಗಬಹುದೇ?

ಸಿಕ್ಕದೇ ಹೋದಾಗ,
ಆಗುವ ನೋವನ್ನು,
ವಿಧವಿಧ ಪದಗಳ ಬಳಸಿ,
ವಿವರಿಸಲು ಆಗುವುದೇ?

ಹೇಳಲು ಹೋದಾಗ,
ಕೇಳುವ ಕಿವಿಯನ್ನು,
ನೀಡದೇ ಹೋದರೆ ಹೇಗೆ,
ಮನಸ್ಸು ಹಗುರ ಆಗುವುದೇ?

ಬರೆಯುವೆ ಯಾಕೆ ಹೀಗೆ ?
ಹೇಳಬೇಕಿರುವುದು ಏನೆಂದು ತಿಳಿಯದೆ!
ಹುಡುಕುವೆ ನನ್ನ ನಾನೇ!
ಕಳೆದಿರುವೆನೆಲ್ಲಿ ಎಂದು ಅರಿಯದೆ!!

-ಕೆಕೆ (ಕೀರ್ತನ್ ಕೆ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages