ಇತ್ತೀಚೆಗೆ ಸೇರಿಸಿದ ಪುಟಗಳು

llಯೋಗಿll

ನಿನ್ನಂತೆಯೇ ನಾನಾಗಬೇಕು ಯೋಗಿ
ಆಧ್ಯಾತ್ಮದ ಜಗತ್ತಿಗೆ ಕರೆದೊಯ್ಯೋ ವೇಗವಾಗಿ

ಕಾಮವನ್ನು ಸುಟ್ಟು
ಪ್ರೇಮವನ್ನು ನೆಟ್ಟು
ಮನದ ಹೊಲದಲ್ಲಿ
ಪರಮಾರ್ಥಕ್ಕೆ ಉಳುತ್ತಿರುವ ಯೋಗಿ

ಭೋಗದ ಆಸೆ ಬಿಟ್ಟು
ಯೋಗದ ಬಯಕೆಯಿಟ್ಟು
ದೇಹವ ಪಳಗಿಸುತ್ತಾ
ದೃಢಕಾಯವ ಪಡೆದ ಯೋಗಿ

ಕ್ಷಣ ಸುಖಕ್ಕೆ ಪೆಟ್ಟು
ಚಂಚಲತೆಗೂ ಕೊಟ್ಟು
ಚಿತ್ತ ಏಕಾಗ್ರಗೊಳಿಸಿ
ಸ್ಥಿರಮನದಲ್ಲಿ ನಲಿಯುತ್ತಿರುವ ಯೋಗಿ

ಅರಿಯಲು ಬ್ರಹ್ಮನ ಗುಟ್ಟು
ಹಸಿವನ್ನೇ ಮರೆತು ಬಿಟ್ಟು
ಧ್ಯಾನದಿ ಕುಳಿತುಕೊಂಡು
ಜ್ಞಾನವ ಪಡೆದು ಬೆಳಗಿದ ಯೋಗಿ

ನಿನ್ನಂತೆಯೇ ನಾನಾಗಬೇಕು ಯೋಗಿ
ಅದ್ವೈತದಲ್ಲಿ ನೆಲೆಯಾಗಬೇಕು ಸ್ಥಿರವಾಗಿ

-ಕೆಕೆ (ಕೀರ್ತನ್ ಕೆ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

llಆಧ್ಯಾತ್ಮದ ಬೆತ್ತll

ಹಸಿರನ್ನಾವರಿಸಿರುವ ಮರ ಗಿಡಗಳ ನಡುವೆ
ಮೌನವ ಹೊತ್ತು ಏಕಾಂತದಿ ಕುಳಿತಿರುವೆ
ಮುಂಜಾನೆಯ ರವಿಯ ಕಿರಣ ಸೋಕಿದೊಡನೆ
ಜೀವ ಚೈತನ್ಯವನ್ನು ಅತಿಯಾಗಿ ಪಡೆದಿರುವೆ

ಪಕ್ಷಿಗಳ ಕಲಕಲರವವು ತುಂಬಿದೆ ಸುತ್ತ
ದೂರದ ತಣ್ಣನೆ ಗಾಳಿಯ ಆಗಮನ ನನ್ನತ್ತ
ಒಡೆಯುತ್ತಿದೆ ಕಟ್ಟಿರುವ ಅಶಾಂತಿಯ ಹುತ್ತ
ಹೊಡೆಯುತ್ತಿದೆ ಹಿಡಿದು ಆಧ್ಯಾತ್ಮದ ಬೆತ್ತ

ಒಳ ಹೊರಗಿನ ಅಂತರವು ಸರಿಯುತ್ತಿದೆ
ಅದ್ವೈತದ ಭಾವನೆಯು ಅರಿವಿಗೆ ಬರುತ್ತಿದೆ
ಆನಂದದ ಭಾಷ್ಪ ಕಣ್ಣಲ್ಲಿ ಸುರಿಯುತ್ತಿದೆ
ಜೀವ, ಯೋಗದ ಕೊನೆಯ ಮೆಟ್ಟಿಲೇರುತ್ತಿದೆ

-ಕೆಕೆ (ಕೀರ್ತನ್ ಕೆ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

llಪ್ರೇಮಜಾಲll

ಸೋಕುತ್ತಿದೆ ಮಳೆಹನಿಯು ನನ್ನ ಮೈಯ
ಜ್ಞಾಪಿಸುತ್ತಿದೆ ಹೃದಯದಲ್ಲಿ ಆದ ಗಾಯ

ನೀನು ದೂರ ಹೋಗುವಾಗ,
ಒಮ್ಮೆ ತಿರುಗಿ ನೋಡದೆ ಹೋದೆ
ನಾನು ತೀರ ಬರುವೆ ಎಂದಾಗ,
ಸನಿಹ ಸಿಗದೆ ನಾ ತುಂಬ ನೊಂದೆ

ಮರೆತು ಹೋಗಲು ಸಾಧ್ಯವೇ?
ಅತಿಯಾಗಿ ಪ್ರೀತಿಸಿರುವ ನಿನ್ನನು
ಜೋಪಾನವಾಗಿ ಕೂಡಿ ಇಡುವೆ
ನೀನು ತುಂಬಿರುವ ನೆನಪನು

ಒಂಟಿಯಾಗಿ ನಾನೀಗ ನಡೆವಾಗ,
ಸಿಗಬಾರದೆ ನೀನು ನನ್ನ ಮುಂದೆ
ಹೇಳದಿರುವ ಮಾತೆಲ್ಲ ಹೇಳುವೆ ಆಗ,
ಆಗುವುದು ಹೃದಯ ಹಗುರ ಅಂದೆ

ಖಾಲಿ ಮಾಡಲು ಆಗುವುದೆ?
ನೀನು ತುಂಬಿರುವ ಮನಸ್ಸನ್ನು
ಬಿಡಿಸಿ ಹೊರಗೆ ಬರಬಹುದೆ?
ಭ್ರಮಿಸಿ ಹೆಣೆದ ಪ್ರೇಮ ಜಾಲವನ್ನು

-ಕೆಕೆ (ಕೀರ್ತನ್ ಕೆ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

ನಾನು ನೋಡಿದ ಹಳೆಯ ಸಿನಿಮಾ - ಸೀತಾ

ಈ ಚಿತ್ರದ 'ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲ್ಲಿ ' ಹಾಡು ಎರಡು ಆವೃತ್ತಿಗಳಲ್ಲಿದ್ದು ನೀವು ಕೇಳಿರಬಹುದು. ಶೋಕದ ಹಾಡನ್ನು P. B. ಶ್ರೀನಿವಾಸ್ ಅವರು ಹಾಡಿದ್ದು ಸಂಗೀತ ಶ್ರೀಮಂತವಾಗಿದೆ.

ಕತೆಯು ಸಾಮಾಜಿಕವಾಗಿದ್ದರೂ ಒಂದಷ್ಟು ಸಸ್ಪೆನ್ಸ್ , ಕ್ರೈಂ ಇದೆ. ಒಂದು ಅದ್ಭುತ ದೃಶ್ಯ ಕೂಡ ಇದೆ.

ಕತೆ ಹೀಗಿದೆ, ನಾಯಕನ ಹೆಸರು ರಾಮ. ಇವನದು ಶ್ರೀಮಂತ ಮನೆತನ. , ತಂದೆಗೆ ತನ್ನ ಮನೆತನದ ಬಗೆಗೆ ತುಂಬಾ ಅಭಿಮಾನ. ಮನೆಯಲ್ಲಿ ಈ ರಾಮನ ಸಮವಯಸ್ಕ ಒಬ್ಬ ಇದ್ದಾನೆ. ತಂದೆಗೆ ಅವನೂ ಮಗನ ಸಮಾನ.

ರಾಮನು ಒಬ್ಬ ಸಾಮಾನ್ಯ ಹುಡುಗಿ ಸೀತೆಯನ್ನು ಮದುವೆ ಆಗಲು ಬಯಸಿದಾಗ ತಂದೆ ಅದಕ್ಕೆ ಅಡ್ಡ ಬರುವದಿಲ್ಲ. ಅದರಂತೆ ಮದುವೆ ಆಗುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಅಪ್ಪ.....

                    ಅಪ್ಪ.....
ಅಂದದ ಕೂಸಿನ ಕನಸಿನ ಕಂಗಳಿಗೆ ರಂಗನ್ನು ತುಂಬಿಸಿ ತ 
ಪ್ಪನ್ನು ಒಪ್ಪವಾಗಿಸಿ ಬದುಕಿನ ಚಿತ್ರವನ್ನು ಚಂದಗೊಳಿಸುವ  ಅಪ್ಪ
ಪಿಸುಮಾತಿನ ನಲ್ನುಡಿ ನಲಿವು ಗೆಲುವಿನ ಪ್ರೀತಿಯ      
ತವರಿನ ತೇರನು ತಡೆಯಿಲ್ಲದೆ ನಡೆಸಿ ಒಲಿಸುವನು ಪಿತ
ಜತನದಲಿ ತನುಜ ತನುಜೆಯರನು ಕಾದು        
ನಮಿಸಿ ರಮಿಸಿ ಜನಜನಿತವಾಗಿಸಿ ಕಾಣುವ       
ಕನಸುಗಳ ಸಾಕಾರಗೊಳಿಸುವ ಯಜಮಾನ ಜನಕ
ತಂಗಾಳಿಯ ತಂಪಿನ ಮಮತೆಯನು ಹಿತವಾಗಿ    
ದೆಸೆಯಾಗಿಸಿ ದುರಿತವನು ತರಿಯುವ ಧೀರ ತಂದೆ
——Rukku 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

Pages