ಇತ್ತೀಚೆಗೆ ಸೇರಿಸಿದ ಪುಟಗಳು

llಪ್ರೇಮ ಪ್ರಾಸll

ಮುಖದಲ್ಲಿ ಹಾಗೆಯೆ ಮುಗುಳು ನಗೆ ಮೂಡುವುದು
ನಾ ನಿನ್ನ ಸನಿಹವಿರುವಂತೆ ಕಲ್ಪಿಸಿಕೊಂಡು
ನನ್ನ ಕಣ್ಣ ಕಾಂತಿ ಹೆಚ್ಚಾದಂತೆ ಕಾಣುವುದು
ದಿನವೂ ನೀನು ನನ್ನ ಕನಸಿನಲ್ಲಿ ಕಾಣಿಸಿಕೊಂಡು

ಉಸಿರಾಟವೇಕೋ ಏರುಪೇರಾದಂತಿದೆ
ನಿನ್ನ ಉಸಿರು ನನಗೆ ಸೋಕದೆ
ಹೃದಯ ಬಡಿತವೇ ಆಗಾಗ ನಿಲ್ಲುತ್ತಿದೆ
ನಿನ್ನ ಹೃದಯದ ಮಿಡಿತ ಕೇಳಿಸದೆ

ಕನಸಿನಲ್ಲಿ ನೀನು ಜೊತೆಗಿರಲು ನಾನು ಒಂಟಿತನ ಮರೆತೆ
ಮಂದಹಾಸದಿ ಪ್ರಾಸ ನೀಡುವ ನೀನೊಂದು ಪ್ರೇಮ ಚರಿತೆ

ಕಣ್ಣ ರೆಪ್ಪೆಯು ಮುಚ್ಚಲೊಲ್ಲೆ ಎನ್ನುತ್ತಿದೆ
ನಿನ್ನ ನೋಟದ ಊಟ ಸಿಗದೆ
ಮನದಲ್ಲಿ ವಿರಹದ ಕಿಡಿ ಕಿಚ್ಚಾಗಿ ಉರಿದಿದೆ
ನಿನ್ನ ಸಲುಗೆಯ ಸರಸವಿರದೆ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ನಾ ಬರೆಯದ ಕಥೆ

ಖಾಲೀ ಪುಸ್ತಕದ ಕೊನೆಯ ಪುಟದಲಿ
ಬರೆದ ಹೆಸರು ನಿನ್ನದು…
ಮರೆಯ ಬಯಸಿದ ಬಾಳ ಕಥೆಯಲಿ
ನೆನಪಿಗೊಡೆತನ ನನ್ನದು...

ಕೃತಕ ಕಥೆಯಲಿ ಕಳೆದೆ ನಾನು
ನನ್ನ ಕನಸಲಿ ಕಂಡ ಆಸೆಗೆ...
ಕಥೆಯ ಕೃತಕತೆ ಅರಿತಮೇಲೆಯೂ
ಮುಗಿಸಲಾರೆ ನೋವುಮಾಡಿ ಮನಸಿಗೆ...

ಮನದ ಒಳಗಿನ ನೂರು ಭಾವವ
ಗೀಚಲಾರದೆ ಹೋದೆನು...
ನನ್ನ ಹತ್ತಿರ ಎಂದೂ ಬಾರದ
ನಿನಗಾಗೇ ನಾ ಕಾದೆನು...

ನನ್ನ ಕಥೆಯ ಖಾಲೀ ಪುಟಗಳೆ
ನನ್ನ ಮನಸಿಗೆ ಹಿಡಿದ ಕನ್ನಡಿ...
ಕಥೆಯು ಬಹಳ ದೊಡ್ಡದಿದ್ದರೂ
ಬರೆಯಲಾರದೆ ಹೋದೆ ಮುನ್ನುಡಿ...

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

llನಿರಾಳll

ಬಿಡಲಾಗುತ್ತಿಲ್ಲ ಈ ಬರೆಯುವ ಚಟ
ಮನಸೇಕೋ ಮೆಲ್ಲನೆ ಮಾಡುತ್ತಿದೆ ಹಠ

ಒಂದೊಂದೇ ಪದಗಳು ಈಗ
ಮನದೊಳಗಿನಿಂದ ಹೊರಗೆ ಬರುತ್ತಿದೆ
ನಾನೆಂದೆಂದೂ ನೋಡಿರದಂತಹ
ನನ್ನನ್ನೇ ನನಗೀಗ ಪರಿಚಯಿಸುತ್ತಿದೆ

ಲೇಖನಿ ಹಿಡಿಯುವಂತೆ ಮಾಡಿದೆ
ಭಾವನೆಯು ನದಿಯಾಗಿ ಹರಿದಿದೆ
ನೆಮ್ಮದಿಯು ನಿಟ್ಟುಸಿರಿನಲ್ಲಿ ಗೋಚರಿಸಿದೆ

ಹಿಂದೆಂದೋ ನಡೆದ ಘಟನೆಗಳ
ನೆನಪೆಲ್ಲ ಗಡಿಪಾರು ಮಾಡಿಯಾಗಿದೆ
ಮುಂದೇನೋ ಎಂಬ ಚಿಂತೆಗಳ
ಸುಳಿವೇ ಸ್ವಲ್ಪವೂ ಇಲ್ಲವಾಗಿದೆ

ತನುವೀಗ ತುಸು ಹಗುರವಾಗಿದೆ
ಕನಸೀಗ ಹೊಸ ರೂಪ ಪಡೆದಿದೆ
ಹುರುಪೀಗ ಮೈಮನಸ್ಸನ್ನೆಲ್ಲಾ ಆವರಿಸಿದೆ

-ಕೆಕೆ (ಕೀರ್ತನ್ ಕೆ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ದಸರಾ ಸಡಗರ

ಬಂತು ನಮ್ಮ ನಾಡಿಗೆ ಶರನ್ನವರಾತ್ರಿಯ ಸಡಗರ
ನವದುರ್ಗೆಯರ ಪೂಜೆ ನೋಡಲು ನಯನ ಮನೋಹರ
ನಿತ್ಯ ಶಾಲೆಗೆ ರೋಗುತಿದ್ದ ಮಕ್ಕಳಿಗೆ ರಜೆಯ ಸಂಭ್ರಮ
ಮುಚ್ಚಿ ಬಚ್ಚಿಟ್ಟ ಬೊಂಬೆಗಳ ಅಲಂಕಾರ ನೋಡಲು ವಿಹಂಗಮ

ಕನ್ನಡ ನಾಡಲ್ಲಿ ಈ ನವರಾತ್ರಿಯೇ ದಸರಾ
ದಸರಾ ಎಂದರೆ ನೆನಪಾಗುವುದೇ ಮೈಸೂರು ನಗರ
ಕಂಗೊಳಿಸುವುದು ಹೊದ್ದು ವಿದ್ಯುದೀಪಾಲಂಕಾರ
ನೋಡಲೆರಡು ಕಣ್ಗಳು ಸಾಲದು ಸಂಸ್ಕೃತಿಯ ತವರೂರ

ನವರಾತ್ರಿಯಲಿ ನಡಯುವುದು ದಿನಕೊಂದು ಉತ್ಸವ
ದಶಮಿಯಂದು ವಿಶ್ವ ವಿಖ್ಯಾತ ಅಂಬಾರಿ ಮಹೋತ್ಸವ
ಅರಮನೆಯಲಿ ಪ್ರತಿದಿನವೂ ಪೂಜಾ ಕೈಂಕರ್ಯ
ಉತ್ಸವಕೆ ಮುಕುಟವಿದುವೆ ಗಜಪಡೆಯ ಗಾಂಭೀರ್ಯ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಅರ್ಥವಿಲ್ಲದ ಹೋರಾಟ

ಕಗ್ಗತ್ತಲಿನ ರಣರಂಗದಲ್ಲಿ
ಕತ್ತಿಬೀಸುತ್ತಿರುವ ಕುರುಡು ಸೈನಿಕ..
ಕೇಳಿಸುತ್ತಿರುವುದು ಅವನಿಗೊಬ್ಬನಿಗೇ
ಭ್ರಮೆಯ ಕುದುರೆಯೋಟದ ಠೇಂಕಾರ
ವೈರಿ ಶಂಖನಾದದ ಝೇಂಕಾರ..
ಅವನ ರೋಷಾವೇಷಕ್ಕೆ ಹರಿಯುತ್ತಿರುವುದು
ವೈರಿ ರಕ್ತದ ಕೋಡಿಯೇನಲ್ಲ
ಅದವನ ಬೆವರಿನ ಹನಿಗಳು ಮಾತ್ರ
ಇಲ್ಲದ ರಾಜ್ಯವ ರಕ್ಷಿಸುತ್ತಿರುವವನಿಗೆ
ಇದಾವುದರ ಪರಿವೆಯೇ ಇಲ್ಲ..
ತನ್ನ ಭ್ರಮೆಯ ಅರಿವೂ ಇಲ್ಲ..
ಯಾರಿಗಾಗಿ ಹೋರಾಟ?ಏಕೆ ಈ ಯುದ್ಧ?
ತಿಳಿಯದವನ ಪಾಲಿಗದುವೇ ಕ್ಷತ್ರಿಯ ಧರ್ಮ
ಯಾರೂ ಅರಿಯಲಾರದ ವಿಧಿಯ ಮರ್ಮ..
ತಾನೆಣಿಸಿರುವ ಕರ್ತವ್ಯ ಪೂರೈಸಲು
ಹೋರಾಡುತ್ತಿರುವನು ಜೀವದ ಹಂಗು ತೊರೆದು
ಇದರಲ್ಲಿ ಮರೆತಿಹನು ತಾನೇತನ್ನ ವೈರಿಯೆಂದು..

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಸಹೋದರಿ

ಸಹನೆಯಲಿ ನೀನಾದೆ ಎಲ್ಲರಿಗೂ ಮಾದರಿ
ನೋವ ನುಂಗಿ ಪ್ರೀತಿ ಹಂಚುವ ಉದಾರಿ
ತೋರಿದೆ ನಮಗೆಲ್ಲ ಬಾಳಲಿ ಸರಳತೆಯ ದಾರಿ
ನೂರು ಕಾಲ ನಗುತಾ ಬಾಳು ಎನ್ನ ಸಹೋದರಿ

ನಾ ಎಲ್ಲಿ ಸೋಲುವೆನೋ ಎಂಬ ಆತಂಕ ನಿನ್ನ ಕಣ್ಣಲ್ಲಿ
ಕಂಡಾಗ ಇಮ್ಮಡಿಸಿದೆ ನಿನ್ನ ಮೇಲಿನ ಗೌರವ ನನ್ನಲ್ಲಿ
ನನ್ನ ಬುದ್ಧಿವಾದದ ನುಡಿ ಗುಂಯ್ ಗುಟ್ಟಿ ಕಿವಿಯಲ್ಲಿ
ಹುರಿದುಂಬಿಸಿ ಗರಿಗೆದರಿಸಿದೆ ಧೈರ್ಯ ಮನದಲ್ಲಿ

ಅಮ್ಮನಾ ಪ್ರೀತಿಯಾ ಅನುಕರಣೆ ಮಾಡುವವಳು
ಅಕ್ಕರೆಯ ಹಂಚುವಲ್ಲಿ ಅವಳನ್ನೇ ಮೀರಿಸುವವಳು
ಈ ಸಂಬಂಧ ಬೆಸೆದ ದೇವರಿಗೆ ನನ್ನ ನಮನಗಳು
ಅಕ್ಕ ನಿನಗಿದೋ ಜನುಮ ದಿನದ ಶುಭಾಶಯಗಳು

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

Pages