ಇತ್ತೀಚೆಗೆ ಸೇರಿಸಿದ ಪುಟಗಳು

ಪು ತಿ ನ - ೬

ಒ೦ದೇ ಜನ್ಮದಿ ಬಹು ಜನ್ಮ೦ಗಳ ಚೆ೦ದವಗಾಣಿಸುವಮಳ ಕಲೆ ಮ೦ದಿಗೆ ದೇವರ ವರವಲೆ ಅದುವೇ ಮು೦ದಿನ ಬಿಡುಹುಕು ಹಾನಿಯಲೆ.

ಪು ತಿ ನ

ಪು ತಿ ನ - ೩

ಶೋಧನ ಭೋಧನ ಮೋಧನ ಮಾರ್ಗದಿ ಓದುಗ ಮನದಾರಾಧನಕೆ ಪ್ರಾದುರ್ ಭವಿಸುತ ಕವಿವಾಕ್ ನಡೆವುದು ನಾದ ಬ್ರಹ್ಮ ನಿಕೇತನಕೆ.

ಪು ತಿ ನ

ಪು ತಿ ನ - ೭

ಮ೦ಗಳವೆ೦ಬೆನು ಜಗಕಿದಕೆಲ್ಲಕು ಹಿ೦ಗಲಿ ಭವ ತಾಪ೦ ದೋಷ೦ ತ೦ಗಲಿ ಮನ ಶಮದೊಳು ನಿರ್ವೈರ್ಯ೦ ಅ೦ಗವಿಸಲಿ ಸದ್ರಸತೋಷ೦.

ಪು ತಿ ನ

ಪು ತಿ ನ - ೯

ಭಾರತ ದಾತ್ಮ೦ ಕ೦ಗೆಡುತಿದೆ ಪರ ಸಾರಸ್ವತ ಸ೦ಪದ ಭರದಿ೦ ತಾರಿ ಹೋಗಿತಿದೆ ತಾಯ್ನಾಡಿನ ಮನ ಏರುವಿದೇ ಸ್ವಪ್ರತ್ಯಯದಿ೦

ಪು ತಿ ನ

ಪು ತಿ ನ - ೧೨

ಭಾರತ ಚಿತ್ತವಪ್ಪಳಿಸುತಿವೆ ಬೇರೆಯ ನಾಡಿನ ಚಿತ್ತಗಳು ಬೇರೆಯಾಗುತಿದೆ ಸ್ವ೦ತಿಕೆಯಳಿಯುತ ನೇರಗಾಣದೀ ಒತ್ತಿನೊಳು.

ಪು ತಿ ನ

ಪು ತಿ ನ - ೫

ದುರ್ಬಲಮತಿಗಿಲ್ಲಾತ್ಮ ರಸೋದಯ ದುರ್ಬಲ ಸಮಾಜಕದು ಮೃಗ್ಯ ಹಬ್ಬುಗೆಯರಿವರ್ಗವ ಪಳಗಿಸಿ ಮನ ದುಬ್ಬ ಪಡೆವವರಿಗಾ ಭಾಗ್ಯ.

ಪು ತಿ ನ

ಪು ತಿ ನ - ೧೧

ತಣ್ಣನೆ ಮನದಿ೦ ತಣ್ಣಮಾನಸಕೆ ಮಣ್ಣಿನ ಕ೦ಪಿದು ಹರಡುತಿದೆ ಬಣ್ಣದ ಮಾತೊಳು ಬ್ರಹ್ಮವನಾತ್ಮಕೆ ಉಣ್ಣಬಡಿಸಿಯೌತಣಿಸುತಿದೆ.

ಪು ತಿ ನ

ಪು ತಿ ನ - ೮

ಸು:ಖ ದು:ಖ ಗಳನು ತಟಸ್ಥಭಾವದಿ ಸಕಲಕು ವಿತರಿಸುವುದು ಪ್ರಕೃತಿ ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ ಯುಕುತಿಯೆನಿಸುವುದು ಸ೦ಸ್ಕೃತಿ.

ಪು ತಿ ನ

ಪು ತಿ ನ - ೨

ಕಿವಿಯ೦ ದನಿಯೊಳು ಮನವನರ್ಥಧಿ೦ ಭವದರ್ಶನದೊಳು ಬುದ್ದಿಯನು ನವರಸದಿ೦ ಹ್ಹೃದಯವ ತಣಿಸದ ಕೃತಿ ಬುವಿಗೆ ತರದು ರಸಬುದ್ದಿಯನು

- ಪು ತಿ ನ

ಪು ತಿ ನ - ೧

ನುಡಿಯೊಳು ಹೊಳೆವುದು ನಾಡಿನ ನಡವಳಿ. ನುಡಿಯೊಳು ಕ೦ಪಿಡುವುದು ಬದುಕು ನುಡಿಯಿರದವನಿಗೆ ಇಲ್ಲವು ನಾಡೂ ನುಡಿಯಲಿ ಸಲ್ಲನದಾವುದಕೂ.

ಪು ತಿ ನ

Pages