ಇತ್ತೀಚೆಗೆ ಸೇರಿಸಿದ ಪುಟಗಳು

ಗೋದಿ ಹಲ್ವಾ

ಗೋದಿಯನ್ನು ಹಿಂದಿನ ರಾತ್ರಿಯೇ ನೆನೆಸಿಟ್ಟಿರಬೇಕು. ಬೆಳಿಗ್ಗೆ ಅದನ್ನು ಬಸಿದು ಮಿಕ್ಸಿಯಲ್ಲಿ ಸ್ವಲ್ಪ ನೀರು ಸೇರಿಸಿ ಅದರ ಹಾಲು ತೆಗೆದುಕೊಳ್ಳುವುದು. ಆ ಹಾಲಿನ ಜೊತೆಗೆ ಒಂದು ತೆಂಗಿನ ಕಾಯಿ ಹೋಳಿನ ಹಾಲನ್ನು ತೆಗೆದು ಬೆರೆಸಬೇಕು. ಅದರ ಜೊತೆಗೆ ೧/೨ ಲೇಟರ್ ಹಾಲು ಬೆರೆಸುವುದು. ಬೆಲ್ಲವನ್ನು ಕರಗಿಸಿ ಫಿಲ್ಟರ್ ಮಾಡಿ, ಯಾಲಕ್ಕಿ ಪುಡಿ ಸೇರಿಸಿ ಅದಕ್ಕೆ ಬೆರೆಸುವುದು. ಒಲೆಯ ಮೇಲೆ ಇಟ್ಟು ಕೈಯಾಡುತ್ತಿರಬೇಕು. ಪಾತ್ರೆ ತಳಬಿಟ್ಟು ಮುದ್ದೆಯಾಗಿ ಬರುವಾಗ ಅದನ್ನು ತುಪ್ಪ ಹಚ್ಚಿದ ತಟ್ಟೆಗೆ ಹಾಕಿ ಆರಿದ ನಂತರ ಅದನ್ನು ಬೇಕಾದ ಆಕಾರಕ್ಕೆ ಸ್ಲೈಸ್ ಮಾಡಿ ಹುರಿದ ದ್ರಾಕ್ಷಿ, ಗೊಡಂಬಿ ಹಾಗೂ ಗಸಗಸೆ ಉದುರಿಸುವುದು. ಸೂ: ೧) ತುಂಬಾ ನೀರಾಗಿ ಹಾಲು ತೆಗೆದರೆ ಪ್ರಿಪೇರ್ ಮಾಡುವ ಸಮಯ ದೀರ್ಘವಾಗುವುದು.

ಕೋಡುಬಳೆ

ಅಕ್ಕಿಹಿಟ್ಟನ್ನು ಬಾಂಡಲೆಯಲ್ಲಿ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಹುರ್ಗಡ್ಲೆ ಪುಡಿ ಮಾಡಿಕೊಂಡು ಒಂದು ಸೇರಿಗೆ ಒಂದು ಪಾವು ಹುರ್ಗಡ್ಲೆ ಪುಡಿ ಬೆರೆಸಬೇಕು. ಒಂದು ಕಪ್ಪು ಎಣ್ಣೆ ಬಾಂಡಲೆಯಲ್ಲಿಟ್ಟು ಒಂದು ಚಮಚ ಸಾಸಿವೆ ಹಾಕಿ, ಸಿಡಿದ ಮೇಲೆ ಇಂಗು ಹಾಕಿ ಒಣ ಮೆಣಸಿನಕಾಯಿ ಹುರಿದು ತೆಗೆಯಬೇಕು. ಇದರ ಜೊತೆ ಕೊಬ್ಬರಿ ಅಥವಾ ತೆಂಗಿನಕಾಯಿ ತುರಿಯನ್ನು (ಕಾಯಿ ಹಾಕುವಾಗ ಸ್ವಲ್ಪ ಬಿಸಿ ಮಾಡಿಕೊಂಡರೆ ಒಳಿತು) ಸೇರಿಸಿ ಪುಡಿ ಮಾಡಿಕೊಳ್ಳಬೇಕು. ಅದನ್ನು ಹಿಟ್ಟಿಗೆ ಬೆರೆಸಿ ರುಚಿಗೆ ತಕ್ಕಂತೆ ಉಪ್ಪು ಬೆರೆಸಿ ಬಾಂಡಲೆಯಲ್ಲಿ ಉಳಿದಿರುವ ಎಣ್ಣೆಯನ್ನು ಹಿಟ್ಟಿಗೆ ಬೆರೆಸಿ ಕಲಸಿಕೊಳ್ಳುವುದು.

ಮಂಕುತಿಮ್ಮ - ೧೪೦

ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು । ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು ।। ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ । ಸತತ ಕೃಷಿಯೋ ಪ್ರಕೃತಿ -- ಮಂಕುತಿಮ್ಮ ।

ಡಿ.ವಿ.ಜಿ

ಮಂಕುತಿಮ್ಮ - ೩೧೦

ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ । ಅಭಾಸವನು ಸತ್ಯವೆಂದು ಬೆಮಿಸುವುದುಮ್ ।। ಸೌಭಾಗ್ಯಗಳನರಸಿ ದೌರ್ಭಾಗ್ಯಕ್ಕೀಡಹುದುಮ್ । ಅಭಿಶಾಪ ನರಕುಲಕೆ -- ಮಂಕುತಿಮ್ಮ ।।

ಡಿ.ವಿ.ಜಿ.

ಕಾಲಕೋಶ (ಕಾಲ್ಸೆಂಟರ್ (ತರ್ಲೆ) ಪದಕೋಶ)

field_vote: 
No votes yet
To prevent automated spam submissions leave this field empty.
ಕಾಲೆಳೆಯುವ ವಿದ್ಯೆ: ಕಾಲ್ಸೆಂಟರ್ನಲ್ಲಿ ಒಂದು ಕರೆಯನ್ನು ಗಂಟೆಗಟ್ಟಲೆ ಎಳೆಯುವ ವಿದ್ಯೆ. ಕಾಲನೇಮಿ: ಕಾಲ್ಸೆಂಟರ್ನಲ್ಲಿ ಬಂದ ಕರೆಗಳನ್ನು ಬೇರೆಬೇರೆ ಉದ್ಯೋಗಿಗಳಿಗೆ ಹಂಚುವಾತ. ಕಾಲಪುರುಷ: ಕಾಲ್ಸೆಂಟರ್ನಲ್ಲಿ ಕೆಲಸ ಮಾಡುವ ಗಂಡಸು. ಕಾಲೇಜು: ಕಾಲ್ಸೆಂಟರ್ನಲ್ಲಿ ಕೆಲಸ ಮಾಡಲು ಸರಿಯಾದ ಪ್ರಾಯ (age). ಕಾಲಮಾನ: ಕಂಪೆನಿಯ ಮಾನ ಉಳಿಯುವಂತೆ ಬಂದ ಕರೆಯನ್ನು ಉತ್ತರಿಸುವ ಚಾಕಚಕ್ಯತೆ.
ಲೇಖನ ವರ್ಗ (Category): 

ಜೀವನ ನಾಟಕ

ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ

--- ಟಿ.ಪಿ.ಕೈಲಾಸಂ

೧೯ ಆಗಸ್ಟ್ ೨೦೦೫

ನಿನ್ನೆಯ ದಿನ ವರಮಹಾಲಕ್ಷಿ ವ್ರತ, ರಕ್ಷಾ ಬಂಧನ ಮತ್ತು ಯಜುರುಪಾಕರ್ಮ. ಮುಂಬೈನಲ್ಲಿ ರಕ್ಷಾ ಬಂಧನಕ್ಕಾಗಿ ಇಂದು ಶನಿವಾರ ರಜೆ ಘೋಷಿಸಿದ್ದಾರೆ. ಆದರೇ ರಜೆ ಇರಲಿ ಇಲ್ಲದಿರಲಿ ಮುಂಬೈವಾಸಿಗಳು ಹಬ್ಬವನ್ನಂತೂ ಆಚರಿಸಿಯೇ ಆಚರಿಸುತ್ತಾರೆ. ಶುಕ್ರವಾರ ರಕ್ಷಾಬಂಧನವಾದ್ದರಿಂದ ಅಂದು ರಜೆ ಇಲ್ಲದಿದ್ದರೂ ಹೆಚ್ಚಿನ ಜನರು ಕಛೇರಿ ಕಾರ್ಯಾಲಯಗಳಿಗೆ ರಜೆ ಹಾಕಿದ್ದರು. ಬೆಳಗ್ಗೆ ಕೆಲಸಕ್ಕೆಂದು ಹೊರಟಾಗ ಲೋಕಲ್ ಟ್ರಿನ್ ನಲ್ಲಿ ಸಾಮಾನ್ಯದ ಜನಜಂಗುಳಿ ಇರಲೇ ಇಲ್ಲ. ಎಲ್ಲೆಲ್ಲೂ ಸ್ಮಶಾನದ ವಾತಾವರಣ. ಇದೇನಪ್ಪ ನಾನು ಗೊತ್ತಿಲ್ಲದೇ ರಜೆಯ ದಿನ ಬ್ಯಾಂಕಿಗೆ ಹೋಗುತ್ತಿದ್ದೇನಾ ಅಂತ ಸ್ವಲ್ಪ ಯೋಚಿಸುವಂತಾಯ್ತು. ಸ್ನೇಹಿತರುಗಳನ್ನು ಕಂಡ ಮೇಲೆ ಆ ಸಂಶಯ ನಿವಾರಣೆ ಆಯ್ತು. ಗಂಡಸರು ತಮ್ಮ ತಮ್ಮ ಅಕ್ಕ ತಂಗಿಯರ ಮನೆಗೆ ರಾಖಿಯನ್ನು ಕಟ್ಟಿಸಿಕೊಳ್ಳಲು ಹೋಗುವರು. ಹೋಗುವಾಗ ತಮ್ಮ ಸಂಸಾರ ಸಮೇತರಾಗಿ ಹೋಗುವರು. ಆದ್ದರಿಂದ ಬೆಳಗ್ಗೆ ಅಷ್ಟು ಬೇಗ ಜನಜಂಗುಳಿ ಇರಲಿಲ್ಲ. ಈ ವಿಷಯ ನನಗೆ ಸಂಜೆ ಮನೆಗೆ ಮರುಳುವ ಸಮಯದಲ್ಲಿ ಅರಿವಾಯಿತು. ಸಂಜೆ ಬರುವಾಗ ಎಲ್ಲೆಲ್ಲಿ ನೋಡಿದರೂ ಮಕ್ಕಳ ಅರಚಾಟ ಕಿರುಚಾಟ. ಪುಟ್ಟ ಪುಟ್ಟ ಮಕ್ಕಳ ದಂಡೇ ಎಲ್ಲೆಲ್ಲಿಯೂ ಕಾಣುತ್ತಿತ್ತು. ಲೋಕಲ್ ಒಳಗೆ ಮಕ್ಕಳೊಡನೆ ತಂದೆ ತಾಯಿಗಳು ಬಂದರೆ ಇದ್ದ ಪ್ರಯಾಣಿಕರೆಲ್ಲಾ ಎದ್ದು ನಿಲ್ಲಬೇಕಾಯ್ತು. ಪಾಪ ಮಕ್ಕಳನ್ನು ಎತ್ತಿಕೊಂಡ ತಾಯಿಯನ್ನು ನಿಲ್ಲಲು ಬಿಡುವುದೇ - ಕೂತುಕೊಳ್ಳಲು ಜಾಗ ಕೊಡಬೇಕು. ಲೋಕಲ್ ಚರ್ಚ್ ಗೇಟ್ ನಿಂದ ದಾದರಿಗೆ ಬರುವುದರೊಳಗೆ ಮುಂದೆ ಬರುವ ಮಗು ತಾಯಂದಿರುಗಳಿಗೆ ಕೂತುಕೊಳ್ಳಲಲ್ಲ, ನಿಲ್ಲಲೇ ಸ್ಥಳವಿಲ್ಲ. ಆದರೂ ಇಲ್ಲಿಯ ಜನರು ಸ್ವಲ್ಪ ಬೇಜಾರಿಲ್ಲದೇ, ಇರುಸು ಮುರುಸುಗಳಿಲ್ಲದೇ ಅವರುಗಳಿಗೆ ಹೇಗೋ ಜಾಗ ಮಾಡಿಕೊಡುವರು. ಅವರುಗಳೂ ಅಷ್ಟೇ, ಹೆಂಗಸರ ಕಂಪಾರ್ಟ್ ಮೆಂಟ್ ಬಿಟ್ಟು ಗಂಡಸರ ಕಂಪಾರ್ಟ್ ಮೆಂಟಿಗೇ ಬರುವರು. ಇದಕ್ಕೆ ಕಾರಣವೇನೆಂದರೆ, ಮೊದಲನೆಯದಾಗಿ, ಗಂಡಸರು ತಮ್ಮೊಂದಿಗಿರುವುದು, ಎರಡನೆಯದಾಗಿ, ಇದು ಸುರಕ್ಷಿತ ಸ್ಥಳ. (ಹೆಂಗಸರ ಡಬ್ಬಿಯಲ್ಲೇ ಕಳ್ಳತನಗಳು ಜಾಸ್ತಿ ಆಗುವುದು). ಮತ್ತು ಮೂರನೆಯದಾಗಿ ಹೆಚ್ಚಿನದಾಗಿ ಮಾನವಂತಿಕೆ ತೋರುವುದು ಇಲ್ಲಿಯೇ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಲಂಡನ್ ಪ್ರವಾಸ ಭಾಗ ೨: ಇಷ್ಟು ಚಳಿ, ಜಿಟಿ ಮಳೆ ಮತ್ತು ದೃಶ್ಯ ಕಲೆ

field_vote: 
No votes yet
To prevent automated spam submissions leave this field empty.

www.anilkumarha.com

ಲಂಡನ್ ಪ್ರವಾಸ ಭಾಗ ೨: ಇಷ್ಟು ಚಳಿ, ಜಿಟಿ ಮಳೆ ಮತ್ತು ದೃಶ್ಯ ಕಲೆ

(ಅ) "ವಿ ಅಂಡ್ ಎ" ಎಂಬ ವರ್ಣಬೇಧ ಸಂಗ್ರಹಾಲಯ

ಲೇಖನ ವರ್ಗ (Category): 

ಪತಂಜಲಿಯ ಯೋಗ ಭಾಗ ೩

field_vote: 
Average: 3.7 (3 votes)
To prevent automated spam submissions leave this field empty.

ಪತಂಜಲಿಯ ಯೋಗ

ಮೂರನೆಯ ಲೇಖನ
ವೃತ್ತಿಗಳು ಮನಸ್ಸಿನಲ್ಲಿ ಏಳುವುದನ್ನು ಕಡಿಮೆ ಮಾಡಲು ಎಡಬಿಡದೆ ಮಾಡುವ ಪ್ರಯತ್ನವೇ ಅಭ್ಯಾಸ.ಯೋಗ ಸೂತ್ರ.ಪಾದ೧. ಸೂತ್ರ.೧೩
ಈ ಪ್ರಯತ್ನವನ್ನು ಧೀ‍ರ್ಘ ಕಾಲ ನಿರಂತರವಾಗಿ ಒಳ್ಳೆಯ ಮನಸ್ಸಿನಿಂದ ಮಾಡಿದಲ್ಲಿ ಕ್ರಮೇಣ ವೃತ್ತಿಗಳು ಮನಸ್ಸಿನಲ್ಲಿ ಏಳುವುದು ಕಡಿಮೆಯಾಗುತ್ತದೆ.

ಯೋಗ ಸೂತ್ರ.ಪಾದ೧. ಸೂತ್ರ.೧೪
ನಮಗಿರುವ ಅನುಭವಗಳೆಲ್ಲಾ ಪಂಚೇಂದ್ರಿಯಗಳ ಮೊಲಕ ಸಿಗುತ್ತದೆ. ಆದನ್ನು ಸ್ಮೃತಿ ನೆನಪಿನಲ್ಲಿಟ್ಟುಕೊಂಡಾಗ 'ನನ್ನತನ' ‍ಉಂಟಾಗುತ್ತದೆ. ನಾವು

ಲೇಖನ ವರ್ಗ (Category): 

Pages