ಇತ್ತೀಚೆಗೆ ಸೇರಿಸಿದ ಪುಟಗಳು

ಪು ತಿ ನ - ೧೨

ಭಾರತ ಚಿತ್ತವಪ್ಪಳಿಸುತಿವೆ ಬೇರೆಯ ನಾಡಿನ ಚಿತ್ತಗಳು ಬೇರೆಯಾಗುತಿದೆ ಸ್ವ೦ತಿಕೆಯಳಿಯುತ ನೇರಗಾಣದೀ ಒತ್ತಿನೊಳು.

ಪು ತಿ ನ

ಪು ತಿ ನ - ೫

ದುರ್ಬಲಮತಿಗಿಲ್ಲಾತ್ಮ ರಸೋದಯ ದುರ್ಬಲ ಸಮಾಜಕದು ಮೃಗ್ಯ ಹಬ್ಬುಗೆಯರಿವರ್ಗವ ಪಳಗಿಸಿ ಮನ ದುಬ್ಬ ಪಡೆವವರಿಗಾ ಭಾಗ್ಯ.

ಪು ತಿ ನ

ಪು ತಿ ನ - ೧೧

ತಣ್ಣನೆ ಮನದಿ೦ ತಣ್ಣಮಾನಸಕೆ ಮಣ್ಣಿನ ಕ೦ಪಿದು ಹರಡುತಿದೆ ಬಣ್ಣದ ಮಾತೊಳು ಬ್ರಹ್ಮವನಾತ್ಮಕೆ ಉಣ್ಣಬಡಿಸಿಯೌತಣಿಸುತಿದೆ.

ಪು ತಿ ನ

ಪು ತಿ ನ - ೮

ಸು:ಖ ದು:ಖ ಗಳನು ತಟಸ್ಥಭಾವದಿ ಸಕಲಕು ವಿತರಿಸುವುದು ಪ್ರಕೃತಿ ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ ಯುಕುತಿಯೆನಿಸುವುದು ಸ೦ಸ್ಕೃತಿ.

ಪು ತಿ ನ

ಪು ತಿ ನ - ೨

ಕಿವಿಯ೦ ದನಿಯೊಳು ಮನವನರ್ಥಧಿ೦ ಭವದರ್ಶನದೊಳು ಬುದ್ದಿಯನು ನವರಸದಿ೦ ಹ್ಹೃದಯವ ತಣಿಸದ ಕೃತಿ ಬುವಿಗೆ ತರದು ರಸಬುದ್ದಿಯನು

- ಪು ತಿ ನ

ಪು ತಿ ನ - ೧

ನುಡಿಯೊಳು ಹೊಳೆವುದು ನಾಡಿನ ನಡವಳಿ. ನುಡಿಯೊಳು ಕ೦ಪಿಡುವುದು ಬದುಕು ನುಡಿಯಿರದವನಿಗೆ ಇಲ್ಲವು ನಾಡೂ ನುಡಿಯಲಿ ಸಲ್ಲನದಾವುದಕೂ.

ಪು ತಿ ನ

ಎಂಥ ನಾಡಿದು ಎಂಥ ಕಾಡಾಯಿತೋ

ಸಂಪದಕ್ಕೆ ಲಾಗ್ ಇನ್ ಆದಾಗಲೆಲ್ಲಾ, ರಂ . ಶ್ರೀ. ಮುಗಳಿಯವರ ಈ ಮಾತು 'ಅನುಭವಾಮೃತಗಳ'ಲ್ಲಿ ಕಣ್ಣಿಗೆ ಬೀಳುತ್ತಿತ್ತು. ಇದು ನನಗೆ ಬಹಳ ಪ್ರಿಯ ವಿಷಯಗಳಾದ ಕನ್ನಡ ಹಾಗೂ ಕರ್ನಾಟಕದ ಇತಿಹಾಸಗಳನ್ನು ನೆನಪಿಗೆ ತರುತ್ತಿದ್ದವು. ಕೆಲ ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿದ್ದಾಗ ಆಗಾಗ, ವಾಚನಾಲಯಗಳಲ್ಲಿ ಓದಿದ್ದ, ಕನ್ನಡ ನುಡಿ, ಸಾಹಿತ್ಯದ ಬಗೆಗಿನ ಪುಸ್ತಕಗಳಿಂದ ನಾನು ತಿಳಿಕೊಂಡದ್ದನ್ನು ಬರೆಯೋಣವೆನಿಸಿದೆ. ಕರ್ನಾಟಕದ ಏಕೀಕರಣಕ್ಕಾಗಿ ನಡೆಯುತ್ತಿದ್ದ ಹೋರಾಟದ ಸಮಯದಲ್ಲಿ, ಶ್ರೀಯುತರುಗಳಾದ, ರಂ. ಶ್ರೀ. ಮುಗಳಿ, ಶಂಬಾ ಜೋಶಿ, ಆಲೂರು ವೆಂಕಟರಾಯರುಗಳ ಕೆಲವು ಕೃತಿಗಳನ್ನು ಓದಿದ್ದೆ. ಅವುಗಳಲ್ಲಿ, 'ಕಂನುಡಿಯ ಹುಟ್ಟು', 'ಕರ್ನಾಟಕ ಪರಂಪರೆ' ಎಂಬೆರೆಡು ಪುಸ್ತಕಗಳ ಹೆಸರು ನೆನಪಿದೆ. ಈ ಕೃತಿಗಳಲ್ಲಿ ಕೃತಿಕಾರರುಗಳು ಕನ್ನಡದ ಪ್ರಾಚೀನತೆಯ ಬಗ್ಗೆ ಹಾಗೂ ಅದರ ಹರಹಿನ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮ್ಯಾಗಿ ಪಕೋಡ

ಮ್ಯಾಗಿ ಪ್ಯಾಕಿನ ಹಿಂಬದಿಯಲ್ಲಿ ಬರೆದ ಇನ್ಸ್ಟ್ರಕ್ಶನ್ಸ್ ನೋಡಿಕೊಂಡು ಮ್ಯಾಗಿ ಮಾಡಿಟ್ಟುಕೊಳ್ಳಿ. ಅದನ್ನಾರಲು ಬಿಡಿ. ಒಂದಷ್ಟು ಕಡಲೇಹಿಟ್ಟಿಗೆ (ಸ್ವಲ್ಪ ಮಾತ್ರ) ಹೆಚ್ಚಿದ ಈರುಳ್ಳಿ, ಮೆಣಸಿನಕಾಯಿ ಜೊತೆಗೆ ಬೆರೆಸಿಟ್ಟುಕೊಂಡು ಮೆಣಸಿನಪುಡಿ, ಕೊತ್ತಂಬರಿ ಸೇರಿಸಿ. ಈ ಮಿಶ್ರಣಕ್ಕೆ ತಣ್ಣಗಾದ ಮ್ಯಾಗಿ ಸೇರಿಸಿ ಚೆನ್ನಾಗಿ ಬೆರೆಯುವಂತೆ ಕದಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಪಕೋಡದಂತೆ ಕರೆಯಿರಿ. ರೆಡೆಯಾಯ್ತು ಮ್ಯಾಗಿ ಪಕೋಡ ;) ಯಾವುದಾದರೂ sauce ಅಥವಾ ಟೊಮಾಟೊ ಕೆಚಪ್ ಜೊತೆ ತಿನ್ನಬಹುದು.

ಹಳೆಯದೊಂದು ಮ್ಯಾಗಿ ಕ್ಲಬ್ ರೆಸಿಪಿ

೪ ಜನ

30

ನನ್ನನ್ನೂ ಸೇರಿಸ್ಕೋತೀರ ತಾನೆ?

ನಾನು ಈ ತಾಣಕ್ಕೆ ಹೊಸಬ. ನನ್ನ ನಾಮಧೇಯ ವೆಂಕಟೇಶ. ಊರು: ಅಟ್ಲಾಂಟ. ಕೆಲಸ: ಸಂಪದ ದಲ್ಲಿ ಹರಟೆ. ಈ ತಾಣ ನನಗೆ ಬಹಳ ಸಂತಸ ತಂದಿತು. ಕನ್ನಡದ ಅಕ್ಷರಗಳನ್ನು ನೋಡಿ ನನಗೆ ಮಹದಾನಂದವಾಯ್ತು. ನನಗೆ ನಮ್ಮ ತ.ವಿ.ಶ್ರೀ. ಇಂದ ಈ ತಾಣದ ಬಗ್ಗೆ ತಿಳಿಯಿತು. ಈ ತಾಣ ಮಾಡಿದ ನಾಡಿಗ್ ಅವರಿಗೆ ನನ್ನ ಶುಭ ಕಾಮನೆಗಳು. ಇಲ್ಲಿ ಹೆಚ್ಚಿನ ಗೆಳೆಯರು ಸಿಗುತ್ತಾರೆಂಬ ಆಶಯದೊಂದಿಗೆ -ನುಡಿಕನ್ನಡ.

ಬಾಂಡ್... ಶೇನ್ ಬಾಂಡ್


ಚಿತ್ರ ಕೃಪೆ: [:http://cricinfo.com|ಕ್ರಿಕ್ ಇನ್ಫೊ]

ಶ್ರೀಲಂಕಾದಲ್ಲಿ ಹೀನಾಯವಾಗಿ ಸೋತು ಬಂದು ಇನ್ನೂ ವಾರಗಳೇ ಕಳೆದಿಲ್ಲ, ಭಾರತ ತಂಡಕ್ಕೆ... ಆಗಲೇ ಅಷ್ಟು ನಮ್ಮ ಯೋಗ್ಯತೆಗೆ ಸಾಲದು ಎಂಬಂತೆ ಮತ್ತೊಂದು ಬಾರಿ ಇನ್ನಷ್ಟು ಹೀನಾಯವಾಗಿ ಸೋತಿದ್ದಾರೆ.

ಇಂದು ಅವರನ್ನು ಮನೆಗೋಡಿಸಿ ಮೊದಲೇ ಕೆಟ್ಟದಾಗಿ ಆಡುತ್ತಿರುವ ಭಾರತ ತಂಡವನ್ನು ಇನ್ನೂ ಕೆಟ್ಟದಾಗಿ ಕಾಣುವಂತೆ ಮಾಡಿದವರು ಬ್ರಿಟಿಷ್ ಧೂತ ವಿಭಾಗದ ಬಾಂಡ್ ಅಲ್ಲ... ನ್ಯೂಜಿಲೆಂಡಿನ ಬಾಂಡ್. 'ಪಾಪ ಈಗ ತಾನೆ ಇಂಜುರಿಯಿಂದ ವಾಪಸ್ ಬಂದಿದ್ದಾನೆ, ಅವನಿಗೆ ಮೊದಲ ತರಹ ಬೌಲಿಂಗ್ ಮಾಡಲು ಸಾಧ್ಯವಾಗುವುದಿಲ್ಲ' ಎಂದು ಕಾಮೆಂಟ್ರಿ ತಂಡ ಮಾತನಾಡಿಕೊಂಡ ಕೆಲವೇ ನಿಮಿಷಗಳಲ್ಲಿ ಭಾರತ ತಂಡದ ಮೂರು ವಿಕಟ್ ಉರುಳಿಸಿಯೇ ಬಿಟ್ಟಿದ್ದ. ನಮ್ಮವರು ಹೀಗೆ ಆಡುವರೆ? ಇಂಜುರಿಯಿಂದ ವಾಪಸ್ ಬಂದ ಬೌಲರ್ ಒಬ್ಬ ನಮ್ಮ ಭಾರತ ತಂಡದವನಾದರೆ ಅರ್ಧಕ್ಕರ್ಧ ಸ್ಪೀಡ್ ಕಮ್ಮಿಯಾಗಿ ಹೋಗಿರುತ್ತೆ! (ನಮ್ಮ ತಂಡದ ಝಹೀರ್ ಖಾನ್ ಗೊತ್ತಲ್ಲ!)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages