ಇತ್ತೀಚೆಗೆ ಸೇರಿಸಿದ ಪುಟಗಳು

ಉಸಿರು ಹಸಿರೊಳಗ್ಹೋದಾಗ

ನಾನು ಎಂಬ ನನ್ನನ್ನು ನನ್ನ
ಮೇಲ್ಪದರದಲ್ಲೇ ನಿಂತು ನೋಡುವ ನನಗೆ

ಈ ಹಸಿರೆಂಬುದು
ತನ್ನ ರೌದ್ರ ಸೌಂದರ್ಯದ ಒಳಗೆ
ಸೆಳೆಯುತ ನನ್ನ
ಮೌನದ ಆಳಕ್ಕೆ ಇಳಿಸುತ್ತ

ನೀನೆಂದುಕೊಂಡ ನೀನು ನೀನಲ್ಲ
ಇಲ್ಲಿರುವೆ ನೋಡು ಹುಡುಕು ನಿನ್ನನ್ನು

ಎಂದು

ಹಸಿರಲ್ಲಿ ಉಸಿರನ್ನು ಲೀನವಾಗಿಸಿ ಕೈಬಿಡುವ
ಮರು ಅರ್ಥ ನೀಡಿ ಮತ್ತೆ ಹೊರಕ್ಕೆ ಹರಹುವ
ಈ ಪ್ರಕೃತಿಗೆ ಅದಾವ ಶಕ್ತಿ ಇದೆಯೋ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸ್ನೇಹಿತರು

ಹುಟ್ಟಿದಂದು ಯಾರು ಇಲ್ಲ ಅಳುವೆ ನನ್ನ ಗೆಳೆಯ
ಸ್ವಲ್ಪ ಬೆಳೆದ ನನ್ನ ಜಗದೊಳಗೆ ಅಮ್ಮನೇ ಎಲ್ಲ
ತೊದಲ ಮಾತು ನುಡಿಯುವಾಗ ಅಕ್ಕ ಅಣ್ಣ ಅಪ್ಪ
ಮನೆಯೊಳಗೆ ಕಲಿಸಿದರು ಪ್ರಥಮ ಸ್ನೇಹ ಪಾಠ

ಶಾಲೆಯಲ್ಲಿ ಕಲಿಯುವಾಗ ಸಿಕ್ಕ ಸ್ನೇಹವೆಷ್ಟೋ
ವೃತ್ತಿ ಜೀವನದಲ್ಲಿ ಬಂದ ಗೆಳೆತನಗಳದೆಷ್ಟೋ
ಗೆಳೆಯರೊಂದಿಗೆ ಕಳೆದ ಕ್ಷಣಗಳು ಇಂದಿಗೂ ಅಮೂಲ್ಯ
ಗಟ್ಟಿಯಾದಷ್ಟು ಬೆಳೆಯುವುದು ಗೆಳೆತನದ ಮೌಲ್ಯ

ನನಗೆಂದೇ ದೈವ ಬರೆದ ಸಂಗಾತಿಯ ಸ್ನೇಹ ಸಂಬಂಧ
ಮಕ್ಕಳೊಡನೆ ಸ್ನೇಹದ ಸವಿ ಸವಿಯುವುದೇ ಆನಂದ
ಸ್ನೇಹವೊಂದು ಮಧುರ ಬಂಧ ಇಲ್ಲ ಯಾವ ಕಟ್ಟಳೆ
ಸ್ನೇಹವಿರದ ಬಾಳಿನಲ್ಲಿ ಒಂದಿಲ್ಲೊಂದು ರಗಳೆ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮುದ್ದು ಗಣಪ

ಬಂದ ನೋಡು ಚಂದದಿಂದ ಮುದ್ದುಗಣಪ ಮನೆಗೆ
ತನ್ನ ಭಕ್ತರನ್ನು ನೋಡಲೆಂದು ಕೈಲಾಸದಿಂದ ಧರೆಗೆ
ಹೂವು ಪತ್ರೆ ಏನು ಬೇಡ ಎನ್ನುತ್ತಿರುವ ಪೂಜೆಗೆ
ಸ್ವಲ್ಪ ಭಕ್ತಿ ನೀಡಿ ಮನದಿ ಹರಸುವನು ಎಲ್ಲರಿಗೆ

ಸಣ್ಣ ಇಲಿಯ ಮೇಲೆ ಕುಳಿತು ಲೋಕವ ಸಂಚರಿಪನು
ತಂದೆ-ತಾಯಿ ಸುತ್ತಿ ಬಂದು ಜಗವೇ ಅವರೆಂದನು
ಸಕಲ ವಿದ್ಯೆಗಳಿಗೆ ಗುರು ಇವನು ವಿದ್ಯಾವಿನಾಯಕನು
ಸರ್ವ ಸಂಕಷ್ಟಗಳನ್ನು ನಾಶಮಾಡುವ ವಿಘ್ನರಾಜನು

ಎಷ್ಟು ಬಾರಿ ನೋಡಿದರೂ ಮನಕೆ ಮತ್ತೆ ನೋಡುವಾಕರ್ಷಣೆ
ಏನೇ ಇರಲಿ ಪ್ರಥಮ ಪೂಜೆ ನಿನ್ನ ಪಾದಕರ್ಪಣೆ
ಭಕ್ತಿಯಿಂದ ನಿನ್ನ ಭಜಿಪಗೆ ಸಿಗುವುದೆಲ್ಲ ಮನ್ನಣೆ
ದುಷ್ಟತನದಿ ಮೆರೆಯುವವರಿಗೆ ಎಂದೂ ಇಲ್ಲ ನಿನ್ನ ರಕ್ಷಣೆ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

llಸನ್ನಿವೇಶll

ಸನ್ನಿವೇಶವು ವೇಷ ಧರಿಸಿ
ವಿವಿಧ ರೂಪದಿ ಬರುತ್ತಿದೆ
ಮನದ ಶಾಂತಿಯ ನಿದ್ದೆಗೆಡಿಸಿ
ಕುಹಕ ನಗೆಯಲ್ಲಿ ಕಾಡುತ್ತಿದೆ

ತಾಳ್ಮೆ ಗೋಡೆಯು ಒಡೆದಿದೆ
ಮನದ ಮನೆ ಶಿಥಿಲವಾಗಿದೆ
ಗಾಳಿ ವೇಗದಿ ಬೀಸುತ್ತಿದೆ
ಪೂರ್ಣ ಕೆಡವುವ ಸಂಚಿದೆ

ಒಂಟಿಯಾಗಿ ಹೋರಾಡಬೇಕಿದೆ
ಸವಾಲುಗಳ ಸೈನ್ಯ ದೊಡ್ಡದಿದೆ
ಮಂಡಿಗಳು ನೆಲಕ್ಕೆ ಕುಸಿಯುತ್ತಿದೆ
ಸೋಲು ಖಚಿತತೆಯ ತೀರದಲ್ಲಿದೆ

ಹತಾಶೆ ಹಾರವಾಗಿ ಸುತ್ತಿಕೊಂಡಿದೆ
ಭಾರವಾದ ಭಾವನೆ ಒಳಗೆ ಬಂದಿದೆ
ಮೌನ ಮಾತೆಲ್ಲವನ್ನೂ ಕಸಿದುಕೊಂಡಿದೆ
ನಯನದಲ್ಲಿ ನೀರೊಂದು ಸ್ಥಾನ ಪಡೆದಿದೆ

-ಕೆಕೆ (ಕೀರ್ತನ್ ಕೆ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನೀ ಬೆರಸದ ಭೇದ

ಸಮಾನತೆಯೇ ಉಸಿರಾಗಿದ್ದ
ಅಲ್ಲಮನ 'ಅನುಭವ' ದೊಳಗೆ
ನೀ ಬಂದು ಕೂತು 
ದೃಷ್ಠಿ ಹಾಯಿಸಿದ ಘಳಿಗೆ
ಅಲ್ಲಿ, 
ಜಾತಿ, ಮತ, ಭೇದಗಳು 
ಒಟ್ಟಾಗಿ
ನಿನ್ನನುಭವದೊಳಗೆ 
ಬಟ್ಟಿ ಇಳಿದು 
ಪ್ರಸಾದವಾದವೋ..
ವೈವಿದ್ಯತೆಗಳಲ್ಲಿ
ಪೂಜೆ ಪಡೆಯುತ್ತಿದ್ದ
ಮುಕ್ಕೋಟಿ ದೇವತೆಗಳು
ನಿನ್ನ ಸುಜ್ಞಾನದೊಂದಿಗೆ
ಬೆರೆಯಲಾಗದೆ ಮಣ್ಣಾದವೋ...
ಜನತೆ 
ವಚನಾಮೃತದೊಳಗೆ ಮುಳುಗಿ
ಅಂತರಂಗದ ಕಲ್ಮಶ ತೊಳೆದು
ಸಮಾನತೆಯ ಲಿಂಗವ ತೊಟ್ಟು
ನೀ ತೋರಿದ ದಾರಿಯಲ್ಲೇ ನಡೆಯುತ್ತಾ..
ಇವನಾರವ.....
ಇವನಾರವ..... ಎನ್ನದೆ
ಬದುಕುತ್ತಿದ್ದರೋ.....
ಗುರುವೇ.
ಈಗ ಕಾಲ ಬದಲಾಗಿದೆ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages