ಇತ್ತೀಚೆಗೆ ಸೇರಿಸಿದ ಪುಟಗಳು

ಶ್ರೀ ಸಾಯಿನಾಥ -ಅಭಯಂಕರ !

ಶ್ರೀ ಸಾಯಿನಾಥ ಬಾಳಿನ ಆಶಾದೀಪ
ಮನ ಮನೆಗೆಲ್ಲ ನೀವೇ ನಂದಾದೀಪ
ಎಲ್ಲೆಡೆಯಲ್ಲೂ ನಿಮ್ಮದೇ ಸುಪ್ರತಾಪ
ಕರುಣಿಸಿ ಎಮಗೆ ನಿಮ್ಮ ದಿವ್ಯಸ್ವರೂಪ .

ಹೇ ಶಿರಡಿವಾಸ ದುಃಖ ವಿನಾಶಕ
ಹೇ ದಯಾನಿಧೇ ಸುಖ ಸಂಪತ್ತಿ ವರ್ಧಕ
ಹೇ ದೀನ ಬಂಧುವೇ ಪರಿಹರಿಸೆಲ್ಲಾ ಕಂಟಕ
ಈ ಯುಗದಿ ನೀವೇ ಭಕ್ತ ಪರಿಪಾಲಕ .

ಸಾಯಿರಾಂ ಸಾಯಿಶಾಂ ತಾರಕ ಮಂತ್ರ
ಜಪಿಸಲಿ ನಮ್ಮ ಮನ ನಿರಂತರ
ಈ ಜಗಕೆ ನೀವೇ ರಾಜಾಧಿರಾಜ ಅಭಯಂಕರ
ಸದ್ಗುರುವೇ ನಿಮ್ಮೆಡೆಯೆಲ್ಲೇ ಸಚ್ಚಿದಾನಂದ .

ಶ್ರೀ ನಾಗರಾಜ್ . 4/4/19

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ನೆನಪಿನಂಗಳದ ಮಧುರ ಪುಟಗಳಿಂದ ಎಸ್. ಜೆ. ಸಿ. ಇ.

ಅದು 2011 ರ ಸಮಯ, ಆಗ ತಾನೇ ಡಿಪ್ಲೊಮಾ ಮುಗಿಸಿ ಮುಗಿಲೆತ್ತರದ ಬಯಕೆಗಳ ಗೂಡಾಗಿದ್ದ ಮನಸ್ಸು,
ಬಯಸಿದ್ದು ಇಂಜಿನಿಯರ್ ಆಗಬೇಕೆಂದು. ಕಾಲೇಜು ದಿನಗಳ ತುಂಟತನಗಳ ನಡುವೆ, ಭವಿಷ್ಯದ ಕನಸಿನ
ಕೂಸಿಗೆ ಕೂವಾಲಿ ಎಣೆಯುತ್ತಾ, ಮನಸ್ಸು ಚಿಟ್ಟೆಯಂತೆ ಹರಿದಾಡುತ್ತಿದ್ದ ವಯಸ್ಸು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಭಗವದ್ಗೀತೆ ಕೇವಲ ಇದೊಂದು ಗ್ರಂಥವಲ್ಲ ; ನಮ್ಮ ಜೀವನದ ಮಾರ್ಗದರ್ಶಕ

ಭಗವದ್ಗೀತೆಗಿಂತ ಶ್ರೇಷ್ಠವಾದ ಗ್ರಂಥ ಇನ್ನೊಂದಿಲ್ಲ.ಅಲ್ಲದೆ ಹಿಂದೂ ಧರ್ಮದಲ್ಲಿ ಅತ್ಯಂತ ಪೂಜನೀಯವಾದ ಗ್ರಂಥ. ಇದು ಮನುಷ್ಯನ ಜೀವನದ ಮೌಲ್ಯಗಳನ್ನು ತಿಳಿಸಿಕೊಡುವ ಮಾರ್ಗದರ್ಶನ. ನಮ್ಮ ಹಿಂದೂ ಧರ್ಮದಲ್ಲಿ ಭಗವದ್ಗೀತೆಯ ಬಗ್ಗೆ ಅರಿವಿಲ್ಲದ ಅದೆಷ್ಟೊ ಜನರಿದ್ದಾರೆ. ಎಷ್ಟೋ ಜನಕ್ಕೆ ಭಗವದ್ಗೀತೆ ನಮ್ಮ ಪವಿತ್ರ ಗ್ರಂಥ ಎಂಬುದೆ ತಿಳಿದಿಲ್ಲ. ಇಂದಿನ ಯುವ ಪೀಳಿಗೆಯೂ ಇದಕ್ಕೆ ಹೊರತಾಗಿಲ್ಲ. ಈ ಮಧ್ಯೆ ಹಿಂದೂಗಳು ಮುಖ್ಯವಾಗಿ ಒಂದು ದಿನವನ್ನು ನೆನಪಿನಲ್ಲಿ ಇಡಲೇ ಬೇಕು ಅದು ೧೮೯೩, ಸೆಪ್ಟೆಂಬರ್ ೧೧. ಅಂದು ಸ್ವಾಮಿವಿವೇಕಾನಂದರು ಅಮೇರಿಕದ ಚಿಕಾಗೊದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಗವದ್ಗೀತೆಯ ತತ್ವಗಳ ಬಗ್ಗೆ ಇಡೀ ವಿಶ್ವಕ್ಕೆ ಅದರ ಮಹತ್ವವನ್ನು ತಿಳಿಸಿ, ವಿಶ್ವವೇ ಭಾರತವನ್ನು ಗೌರವಿಸುವಂತೆ ಮಾಡಿದ್ದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

llಎಚ್ಚರಗೊಂಡ ಕವಿll

ಬರೆದೆ ನಾ ಎಷ್ಟೋ ಕವಿತೆಗಳ ನಿನಗಾಗಿ 
ಓದದೇ ನೀ ಕಾದಿರಿಸಿದೆ ಅವಮಾನ ನನಗಾಗಿ 
 
ಹೇಳು ನೀ ನನಗೆ 
ನಿಲ್ಲಿಸಲೇ ನಾ ಬರೆಯುವುದಾ 
ಕೇಳುವೆ ನಾ ನಿನಗೆ 
ಹೇಗೆ ಮರೆಯಲಿ ನೀ ತಂದ ಅನುರಾಗ 
 
ಮಲಗಿದ್ದ ಕವಿಯ ಎಬ್ಬಿಸಿ 
ನೀ ದೂರ ಹೋದೆಯಲ್ಲೆ 
ಎಚ್ಚರಗೊಂಡ ಕವಿ ನಿನ್ನರಸಿ 
ಬರೆಯುತ್ತಿರುವನು ಪ್ರೇಮದ ಓಲೆ ನಲ್ಲೆ 
 
ನನ್ನ ಗಂಡೆದೆ ನಿನಗೆ ಕರಗಿ ಹೋಯಿತು
ನಿನ್ನ ಹಣ್ಣೆದೆ ಕಲ್ಲೆಂದು ನನಗೆ ಅರಿವಾಯಿತು 
 
ಮೋಹನ ರಾಗದಿ ಕೊಳಲನೂದಿ 
ನಿನ್ನ ಸೆಳೆಯಲೆತ್ನಿಸಿದೆ 
ಮಂದ್ರ ಸ್ಥಾಯಿಯ ನನ್ನ ಭಾವನೆ 
ನಿನಗೆ ತಲುಪುವ ಮೊದಲೇ ಮಾಯವಾಗಿದೆ 
 
ತಾರಸ್ಥಾಯಿಯಲ್ಲಿ ನನ್ನ ಕವಿತೆ ಹಾಡಲಾಗುತ್ತಿಲ್ಲ 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

llಬಿಟ್ಟಿರಲಾರೆll

ನಿನ್ನ ಬಿಟ್ಟು ಇರುವ ನಾನು 
ನರಳುತ್ತಿರುವೆನೇಕೆ ಇಲ್ಲಿ ?
ನನ್ನ ಬಿಟ್ಟು ಇರುವ ನೀನು 
ನಲಿಯುತ್ತಿರುವೆ ಹೇಗೆ ಅಲ್ಲಿ ?
 
ಮೊದಲ ಪ್ರೀತಿ ಚಿಗುರಿನಲ್ಲೇ
ಚಿವುಟಿ ಹೋದೆ ನೀನು 
ದಿನವೂ ಪ್ರೇಮ ನೋವಿನಲ್ಲೇ
ಮಂಕಾಗಿ ಕುಳಿತೆ ನಾನು 
 
ಮತ್ತೆ ನಿನ್ನ ಮೇಲೆ ಕನಸು
ಕಾಣುತ್ತಿರುವೆನೇಕೆ ನಲ್ಲೆ ?
ನಿನ್ನ ನಾ ಸೇರುವ ಸೊಗಸು
ಇದೆ ಯಾವ ಪ್ರೇಮ ಲೋಕದಲ್ಲೆ ?
 
- ಕೆಕೆ (ಕೀರ್ತನ್ ಕೆ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಓ ಮಹಿಳೆ

ಓ ......ಮಹಿಳೆ
ಕೃಷಿ ಕೆಲಸದಲಿ ನಿನಗೆ ಸಮಪಾಲು
ಬಂದ ಆದಾಯದಲ್ಲಿ ಕೊನೆ ಪಾಲು.
ನೀ ಹಡೆದಾಗ ಹೊದಿಸುವರು ಶಾಲು
ಮಕ್ಕಳ ಅಡ್ಮಿಷನ್ ಕಾರ್ಡ್ ನಲ್ಲಿ ತಂದೆಯದೇ ಇನೀಷಿಯಲ್ಲು .

ಮದುವೆಯ ಬಂಧನ ಗಂಡು-ಹೆಣ್ಣು ಇಬ್ಬರಿಗೆ
ಬದಲಾವಣೆ ಮಾತ್ರ ನಿನ್ನೊಬ್ಬಳಿಗೆ.
ಕೆಲ ಪುರುಷ ಸಂಘಗಳು ಹೋರಾಟಕ್ಕೆ ಅರಚಾಟಕ್ಕೆ
ನಿನ್ನ ಸ್ತ್ರೀಶಕ್ತಿ ಸಂಘ ಮನೆ, ಹೊಟ್ಟೆ, ಬಟ್ಟೆಯ ಕಾಟಕ್ಕೆ.

ಮಗನಿಗೆ ಹೇಳುವರು ಎದೆ ಉಬ್ಬಿಸಿ ನಡೆ
ಮಗಳಿಗೆ ಹೇಳುವರು ತಲೆ ತಗ್ಗಿಸಿ ನಡೆ.
ಮಗ ಗೆಳೆಯರೊಡನಾಡಿ ತಡವಾಗಿ ಬಂದರೆ ಸ್ವಾತಂತ್ರ್ಯ ಮಗಳು ಅದೇ ಕೆಲಸ ಮಾಡಿದರೆ ಸ್ವೇಚ್ಛಾಚಾರ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages