ಇತ್ತೀಚೆಗೆ ಸೇರಿಸಿದ ಪುಟಗಳು

llಪಾತ್ರll

ಗೆದ್ದರೂ ಸೋತರೂ, ಸಿಗುವುದೊಂದು ಅನುಭವವು
ಎಲ್ಲರೂ ಪಾತ್ರರು, ಈ ಬದುಕೇ ಬೀದಿ ನಾಟಕವು!

ಒಮ್ಮೊಮ್ಮೆ ಅಳುತ್ತ ಬರುವ,
ಇನ್ನೊಮ್ಮೆ ನಗುತ್ತ ಇರುವ,
ಮತ್ತೊಮ್ಮೆ ಪರರ ನೋಯಿಸುವ ಕೆಲಸವ ಮಾಡುವ

ಆಗೊಮ್ಮೆ ಆಕ್ರೋಶದಿ ಕೂಗುವ,
ಮಗದೊಮ್ಮೆ ಶಾಂತಿಯಲ್ಲಿ ನಲಿಯುವ,
ಕೆಲವೊಮ್ಮೆ ಅಸಹಾಯಕತೆಯ ಸುಳಿಗೆ ಸಿಕ್ಕಿ ನರಳುವ

ನಿಜವೊಮ್ಮೆ ಧೈರ್ಯದಿ ನುಡಿಯುವ,
ಹಲವೊಮ್ಮೆ ಸುಳ್ಳಲೇ ನಡೆಯುವ,
ಅರಿವೊಮ್ಮೆ ಬಂದು ಸುಳಿಯೇ ಎಲ್ಲವನ್ನು ಬಿಟ್ಟು ಹೊರಡುವ

-ಕೆಕೆ (ಕೀರ್ತನ್ ಕೆ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ವಿಕಾರಚಿತ್ತ…

ತಪ್ಪ ತಿಳಿದು,ಮತ್ತೊಂದು ತಪ್ಪಿನ ಸುತ್ತ
ಗಿರಕಿ ಹೊಡೆದು ತಿರುಗಿಬಿತ್ತು, ಮತ್ತೆ ಎತ್ತು
ಸವಾರನಿಲ್ಲದ ಕುದುರೆ, ವಿಕಾರಚಿತ್ತ…

ಕಣ್ಣ ತೆರೆದು, ಒಳಗಣ್ಣನ್ನು ಮುಚ್ಚಿ
ಸತ್ಯ ಕನಲಿ, ಅಸತ್ಯವಷ್ಟೇ ಗೋಚರಿಸಿ
ವಿನಾಶದ ಕುರುಡುಛಾಯೆ, ವಿಕಾರಚಿತ್ತ…

ಸೌಂದರ್ಯ ಕಳೆದು, ವಿಕೃತಿ ತಳೆದು
ಆಂತರ್ಯದ ಚೈತನ್ಯವೇ ಮಾಸಿಹೋಗಿ
ಯೌವ್ವನಕ್ಕೆ ಹಿಡಿದ ಮುಪ್ಪಿದು, ವಿಕಾರಚಿತ್ತ…

ತನ್ನ ಶಕ್ತಿಯ ಮರೆತು, ಸ್ವಾಭಿಮಾನಕ್ಕೆ
ಆತ್ಮವಂಚನೆಯೆಂಬ ಧಕ್ಕೆ ಮಾಡಿ
ಹೇಡಿತನದ ಪರಮಾವಧಿಯಿದು, ವಿಕಾರಚಿತ್ತ…

ಹಿಂದಿನ ನಿನ್ನೆಲ್ಲ ವಿಜಯಗಳ ಮರೆತು
ಯುದ್ಧಕ್ಕೆ ಮುನ್ನವೇ ಶಸ್ತ್ರತ್ಯಜಿಸಿ
ಸೋಲಿನ ವಿಜೃಂಭಣೆಯಿದು, ವಿಕಾರಚಿತ್ತ…

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಅಣಕ ಹಾಡು - ಬಿಡುವೆನೇನಯ್ಯ ಮೊಬೈಲು

ಬಿಡುವೆನೇನಯ್ಯ ಮೊಬೈಲನು, ನಾನು,
ಬಿಡುವೆನೇನಯ್ಯ. ||

ಬಿಡುವೆನೇನೋ ಮೊಬೈಲೇ ನಿನ್ನ
ಅಡಿಗಡಿಗೆ ತಡುಕುವೆನಯ್ಯ
ನೆಟ್ವರ್ಕ್ ತಾನು ಇಲ್ಲದ ಇರಲು
ತಡ ಮಾಡದೆ ಮಿಡುಕುವೆನಯ್ಯ ||

ಮಧ್ಯರಾತ್ರಿಯು ಮೀರಿದರೇನು
ಕಣ್ಣ ರೆಪ್ಪೆ ಎಳೆದರೆ ಏನು
ಕೈ ಯೇ ಸೋತು ನೊಂದರೆ ಏನು
ಕೈಲಿನ ಮೊಬೈಲು ಬೀಳುವ ತನಕ||

ಸದನದಿ ನಾನು ಕುಳಿತರೆ ಏನು
ಮಸಣದಿ ನಾನು ನಿಂತರೆ ಏನು
ದೇವನ ಮುಂದೆ ಬಾಗಿದರೇನು
ರೋಡಲಿ ಗಾಡಿಗೆ ಸಿಲುಕುವ ತನಕ ||

ಬಿಡುವೆನೇನಯ್ಯ ಮೊಬೈಲನು, ನಾನು ಬಿಡುವೆನೇನಯ್ಯ||

(ಪುರಂದರದಾಸರ 'ಬಿಡುವೆನೇನಯ್ಯ , ಹನುಮ ನಿನ್ನ' ಕೃತಿಯನ್ನು ಅನುಸರಿಸಿ )

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಕನ್ನಡಿಸಿದ ಹಾಡು - ಹೊರಳುತಲೇ ಇದ್ದೆ ನಾನು ರಾತ್ರಿ ಎಲ್ಲವೂ

ಮೂಲ ಹಾಡನ್ನು ಇಲ್ಲಿ - https://youtu.be/G6pt7nij6WQ - ನೋಡಿಕೊಂಡು ಬನ್ನಿ - ಕೆಳಗಿನ ನನ್ನ ಅನುವಾದವನ್ನು ಅದೇ ಧಾಟಿಯಲ್ಲಿ ಹಾಡಲು ಪ್ರಯತ್ನಿಸಿ!!)

ಹೊರಳುತಲೇ ಇದ್ದೆ ನಾನು ರಾತ್ರಿ ಎಲ್ಲವೂ
ನಿನ್ನ ಆಣೆಗೂ , ನಿನ್ನ ಆಣೆಗೂ I
ಚಿಂತೆ ಬಿಡು , ಅಗಲಿಕೆಯು ಬೇಗ ಮುಗಿವುದು
ನಿನ್ನ ಆಣೆಗೂ , ನಿನ್ನ ಆಣೆಗೂ II

ನಿನ್ನ ನೆನಪು ತನ್ನ ಜತೆಗೆ ತರುವುದು ತಾ ನೋವನು
ಕಣ್ಣು ಮುಚ್ಚಾಲೆ ನಿದಿರೆ ಜತೆಗೆ ರಾತ್ರಿಯೆಲ್ಲವೂ
ರಾತ್ರಿಯಿಡೀ ವೈರಿ ನನಗೆ ತಿಂಗಳ ಬೆಳಕು
ಬೆಂಕಿಯಂತೆ ಸುಡುತಲಿತ್ತು ಇಬ್ಬನಿ ಹನಿ
ನಿನ್ನ ಆಣೆಗೂ , ನಿನ್ನ ಆಣೆಗೂ ||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

llಪ್ರೇಮ ಪ್ರಾಸll

ಮುಖದಲ್ಲಿ ಹಾಗೆಯೆ ಮುಗುಳು ನಗೆ ಮೂಡುವುದು
ನಾ ನಿನ್ನ ಸನಿಹವಿರುವಂತೆ ಕಲ್ಪಿಸಿಕೊಂಡು
ನನ್ನ ಕಣ್ಣ ಕಾಂತಿ ಹೆಚ್ಚಾದಂತೆ ಕಾಣುವುದು
ದಿನವೂ ನೀನು ನನ್ನ ಕನಸಿನಲ್ಲಿ ಕಾಣಿಸಿಕೊಂಡು

ಉಸಿರಾಟವೇಕೋ ಏರುಪೇರಾದಂತಿದೆ
ನಿನ್ನ ಉಸಿರು ನನಗೆ ಸೋಕದೆ
ಹೃದಯ ಬಡಿತವೇ ಆಗಾಗ ನಿಲ್ಲುತ್ತಿದೆ
ನಿನ್ನ ಹೃದಯದ ಮಿಡಿತ ಕೇಳಿಸದೆ

ಕನಸಿನಲ್ಲಿ ನೀನು ಜೊತೆಗಿರಲು ನಾನು ಒಂಟಿತನ ಮರೆತೆ
ಮಂದಹಾಸದಿ ಪ್ರಾಸ ನೀಡುವ ನೀನೊಂದು ಪ್ರೇಮ ಚರಿತೆ

ಕಣ್ಣ ರೆಪ್ಪೆಯು ಮುಚ್ಚಲೊಲ್ಲೆ ಎನ್ನುತ್ತಿದೆ
ನಿನ್ನ ನೋಟದ ಊಟ ಸಿಗದೆ
ಮನದಲ್ಲಿ ವಿರಹದ ಕಿಡಿ ಕಿಚ್ಚಾಗಿ ಉರಿದಿದೆ
ನಿನ್ನ ಸಲುಗೆಯ ಸರಸವಿರದೆ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ನಾ ಬರೆಯದ ಕಥೆ

ಖಾಲೀ ಪುಸ್ತಕದ ಕೊನೆಯ ಪುಟದಲಿ
ಬರೆದ ಹೆಸರು ನಿನ್ನದು…
ಮರೆಯ ಬಯಸಿದ ಬಾಳ ಕಥೆಯಲಿ
ನೆನಪಿಗೊಡೆತನ ನನ್ನದು...

ಕೃತಕ ಕಥೆಯಲಿ ಕಳೆದೆ ನಾನು
ನನ್ನ ಕನಸಲಿ ಕಂಡ ಆಸೆಗೆ...
ಕಥೆಯ ಕೃತಕತೆ ಅರಿತಮೇಲೆಯೂ
ಮುಗಿಸಲಾರೆ ನೋವುಮಾಡಿ ಮನಸಿಗೆ...

ಮನದ ಒಳಗಿನ ನೂರು ಭಾವವ
ಗೀಚಲಾರದೆ ಹೋದೆನು...
ನನ್ನ ಹತ್ತಿರ ಎಂದೂ ಬಾರದ
ನಿನಗಾಗೇ ನಾ ಕಾದೆನು...

ನನ್ನ ಕಥೆಯ ಖಾಲೀ ಪುಟಗಳೆ
ನನ್ನ ಮನಸಿಗೆ ಹಿಡಿದ ಕನ್ನಡಿ...
ಕಥೆಯು ಬಹಳ ದೊಡ್ಡದಿದ್ದರೂ
ಬರೆಯಲಾರದೆ ಹೋದೆ ಮುನ್ನುಡಿ...

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages