ಇತ್ತೀಚೆಗೆ ಸೇರಿಸಿದ ಪುಟಗಳು

 • ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 8)
  addoor

  ೩೬.ಉತ್ತರ ಅಮೇರಿಕಾದ ಬಯಲುಗಳಲ್ಲಿ ಕಾಡುಕೋಣಗಳ ಹಿಂಡುಗಳು ಸ್ವಚ್ಛಂದವಾಗಿ ಓಡಾಡುತ್ತಿದ್ದ ಕಾಲದಲ್ಲಿ, ಥೋಮಸ್ ಫರ್ನ್-ಹಾಮ್ ಎಂಬಾತ ಬೃಹತ್ ಹಿಂಡು ಕಂಡದ್ದು ದಾಖಲಾಗಿದೆ. ಸಂಟಾ ಫೆ ಎಂಬಲ್ಲಿ ೧೮೩೯ರಲ್ಲಿ ಪ್ರಯಾಣಿಸುತ್ತಿದ್ದ ಆತ ಆ ಹಿಂಡನ್ನು ದಾಟಲು ಮೂರು ದಿನಗಳು ತಗಲಿದ್ದವು. ಹತ್ತು ಲಕ್ಷಗಳಿಗಿಂತ ಅಧಿಕ ಕಾಡುಕೋಣಗಳಿದ್ದ ಆ ಬೃಹತ್ ಹಿಂಡು ೧,೩೫೦ ಚದರ ಮೈಲು ಪ್ರದೇಶವನ್ನು ಆವರಿಸಿತ್ತು ಎಂದು ಅಂದಾಜಿಸಲಾಗಿದೆ.

  ೩೭.ಅಧಿಕೃತ ಅಂಕೆಸಂಖ್ಯೆಗಳ ಅನುಸಾರ, ಇಪ್ಪತ್ತನೆಯ ಶತಮಾನದ ಆರಂಭದ ವರುಷಗಳಲ್ಲಿ, ಅಮೇರಿಕಾದ ನ್ಯೂಯಾರ್ಕ್ ನಗರದ ರಸ್ತೆಗಳಲ್ಲಿ ಒಂದು ಲಕ್ಷಕ್ಕಿಂತ ಜಾಸ್ತಿ ಕುದುರೆಗಳು ಓಡಾಡುತ್ತಿದ್ದವು…

  ಮುಂದೆ ಓದಿ...
 • ಸಸ್ಯಗಳ ಆರೋಗ್ಯ ರಕ್ಷಣೆಗೆ ‘ಟ್ರೀ ಹಾಸ್ಪಿಟಲ್'
  Ashwin Rao K P

  ನಮಗೆ ಅನಾರೋಗ್ಯವಾದರೆ ನಾವು ವೈದ್ಯರ ಬಳಿ ಹೋಗುತ್ತೇವೆ. ಅನಾರೋಗ್ಯದ ಪ್ರಮಾಣ ಹೆಚ್ಚಿದ್ದರೆ ಆಸ್ಪತ್ರೆಗೆ ದಾಖಲಾಗುತ್ತೇವೆ. ಹಾಗೆಯೇ ನಾವು ಸಾಕುವ ಪ್ರಾಣಿಗಳಾದ ದನ, ನಾಯಿ, ಬೆಕ್ಕು ಮುಂತಾದುವುಗಳಿಗೆ ಆರೋಗ್ಯ ಸಮಸ್ಯೆಯಾದರೆ ನಾವು ಪಶು ವೈದ್ಯರೆಡೆಗೆ…

  ಮುಂದೆ ಓದಿ...
 • ಪ್ರಾಣಿಗಳೇ ಗುಣದಲ್ಲಿ ಮೇಲು…!
  Shreerama Diwana

  ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ತಿಂದು ಬದುಕುತ್ತವಂತೆ, ಏಡಿಗಳು ಮೇಲಕ್ಕೇರಲು ಪ್ರಯತ್ನಿಸುವ ಮತ್ತೊಂದು ಏಡಿಯ ಕಾಲು ಹಿಡಿದು ಕೆಳಕ್ಕೆ ಎಳೆಯುತ್ತವಂತೆ, ತಲೆತಗ್ಗಿಸಿ ನಡೆಯುವ ಕುರಿಗಳು ಮುಂದೆ ಸಾಗುತ್ತಿದ್ದ…

  ಮುಂದೆ ಓದಿ...
 • ‘ಸುವರ್ಣ ಸಂಪುಟ' (ಭಾಗ ೩೪) - ಜಯದೇವಿ ತಾಯಿ ಲಿಗಾಡೆ
  Ashwin Rao K P

  ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮರಾಠಿ ಹೆಣ್ಣು ಮಗಳೇ ಜಯದೇವಿ ತಾಯಿ ಲಿಗಾಡೆ. ನಾವು ಈ ವಾರ ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವಯತ್ರಿ ಜಯದೇವಿ ತಾಯಿ ಲಿಗಾಡೆ ಇವರು. ಇವರ ಬಗ್ಗೆ ಈಗಾಗಲೇ ಸಂಪದದಲ್ಲಿ (ಜೂನ್ ೨೩, ೨೦೨೧) ವಿವರವಾಗಿ ಲೇಖನ…

  ಮುಂದೆ ಓದಿ...
 • ಕೆಲವು ದಶಕಗಳ ಹಿಂದಿನ ಬಸ್ಸಿನ ಪ್ರಯಾಣದ ನೆನಪುಗಳು…
  Shreerama Diwana

  ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಬಸ್ ಸಂಚಾರ ಅತ್ಯಂತ ವಿರಳವಾಗಿತ್ತು. ಅದರಲ್ಲೂ ಖಾಸಗಿ ಬಸ್ಸುಗಳು ಮಾತ್ರ ಸಂಚರಿಸುತ್ತಿದ್ದವು. ವೆಂಕಟೇಶ್ವರ - ರೇವಣ ಸಿದ್ದೇಶ್ವರ - ಚನ್ನಬಸವೇಶ್ವರ - ಜನತಾ - ನಟರಾಜ - ಗಣೇಶ -…

  ಮುಂದೆ ಓದಿ...
 • ಸ್ಟೇಟಸ್ ಕತೆಗಳು (೩) - ಯಾರಿವನು?
  ಬರಹಗಾರರ ಬಳಗ

  ಆತ ನಮ್ಮಂತೆ ಇಲ್ಲ. ವಸ್ತ್ರ ವಿಕಾರ, ಜಡ್ಡುಗಟ್ಟಿದ ಕೇಶರಾಶಿ ಕಂಡು ಜನ "ಹುಚ್ಚಾ" ಅಂತಿದ್ದಾರೆ. ತೊಟ್ಟಿಲಲ್ಲಿ ಜೋಗುಳ ಹಾಡುತ್ತಾ ಅವನಮ್ಮ ಕೂಗಿದ ಹೆಸರ ನೆನಪಿಲ್ಲ. ಈಗ ಕರಿಯೋ ಹುಚ್ಚನೆಂಬ ನಾಮಧೇಯಕ್ಕೆ ಬೇಸರವೂ ಇಲ್ಲ…

  ಮುಂದೆ ಓದಿ...
 • ಕನ್ನಡ ಪತ್ರಿಕಾ ಲೋಕ (೨೭) - ಕಾಸರಗೋಡು ಸಮಾಚಾರ
  Shreerama Diwana

  ಕೆ.ವೆಂಕಟಕೃಷ್ಣಯ್ಯ, ವೈ.ಮಹಾಲಿಂಗ ಭಟ್ಟರ "ಕಾಸರಗೋಡು ಸಮಾಚಾರ"

  ಮುಂದೆ ಓದಿ...
 • ನಿಮ್ಮ ಪ್ರತಿಕ್ರಿಯೆ ನಮಗೆ ಮುಖ್ಯ, ಏಕೆಂದರೆ…
  Ashwin Rao K P

  ಓಶಿನಾ ಧರ್ಮರಾಜ್- ಸಾಮಾಜಿಕ ಜಾಲತಾಣದಲ್ಲಿ ಪ್ರಚಲಿತ ಹೆಸರು. ವಯಸ್ಸು ಇನ್ನೂ ೨೧. ಫೇಸ್ಬುಕ್, ಇನ್ಸ್ಟಾಗ್ರಾಂ, ವಾಟ್ಸಾಪ್, ಟ್ವಿಟರ್ ಎಲ್ಲೆಡೆಯಲ್ಲಿ ಅವಳ ಬರಹಗಳು ಕಂಡು ಬರುತ್ತಿದ್ದವು. ಕವನ, ಕಥೆ ಎಲ್ಲವನ್ನೂ ಬರೆಯುತ್ತಿದ್ದಳು. ಎಲ್ಲದಕ್ಕೂ…

  ಮುಂದೆ ಓದಿ...
 • ಮಳೆರಾಯನ ಅಂತರಂಗದ ಅಳಲು...
  Shreerama Diwana

  ಯಾಕಪ್ಪ ಮಳೆರಾಯ? ಕೊಬ್ಬು ಜಾಸ್ತಿಯಾಯ್ತ ನಿನಗೆ. ಇಷ್ಟ ಬಂದಾಗ ಎಲ್ಲೆಂದರಲ್ಲಿ ಮಳೆ ಸುರಿಸಿ ಪ್ರವಾಹ ಸೃಷ್ಟಿಸಿ ನಮ್ಮ ಜನಗಳಿಗೆ ತೊಂದರೆ ಕೊಡುವೆ, ಬೇಸರವಾದಾಗ ಈ ಕಡೆ ವರ್ಷಗಟ್ಟಲೆ ತಲೆ ಹಾಕುವುದಿಲ್ಲ? ನೀನೇನು…

  ಮುಂದೆ ಓದಿ...
 • ಸ್ಟೇಟಸ್ ಕತೆಗಳು (೨) -ಆ ಮೂರು ದಿನ
  ಬರಹಗಾರರ ಬಳಗ

  ತಿಂಗಳಲ್ಲಿ ಮೂರು ದಿನ ಅಮ್ಮ ಮನೆಯಿಂದ ಹೊರ ಇರಬೇಕು, ಅವಳಿಗೆ ಕಾಗೆ ಮುಟ್ಟಿದೆ ಅಂತ ಅಪ್ಪ  ಅಂದರು. ನಾನು ಅಮ್ಮನ ಜೊತೆನೇ ಇದ್ದೆ. ನನಗೆ ಎಲ್ಲೋ ಕಾಗೆ ಅಮ್ಮನ ಹತ್ತಿರ ಸುಳಿದಾಡುವುದು ಕಂಡಿಲ್ಲ. ಅಪ್ಪ ಎಷ್ಟೊತ್ತಿಗೆ…

  ಮುಂದೆ ಓದಿ...