ಇತ್ತೀಚೆಗೆ ಸೇರಿಸಿದ ಪುಟಗಳು

 • ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಪುಣ್ಯಸ್ಮರಣೆ
  ಬರಹಗಾರರ ಬಳಗ

  ನಮ್ಮ ದೇಶ ಭಾರತ ಬಹಳ ವಿಶಾಲವಾದ್ದು ಮತ್ತು ವಿಶಿಷ್ಟವಾದ್ದು. ಇಂದು ಭಾರತದ ಸ್ವಾತಂತ್ರ್ಯಾ ನಂತರದ ಎರಡನೇ ಪ್ರಧಾನಿಯಾಗಿದ್ದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ೫೪ನೆಯ ಪುಣ್ಯ ತಿಥಿ.

  ಮುಂದೆ ಓದಿ...
 • ಸೂಕ್ತ ಬಸಿಗಾಲುವೆ ವ್ಯವಸ್ಥೆಯಿಂದ ರೋಗ ಕಮ್ಮಿ, ಇಳುವರಿ ಹೆಚ್ಚು
  Ashwin Rao K P

  ಬಹಳ ರೈತರ ತೋಟಗಳಲ್ಲಿ ಮರಗಳು ಆರೋಗ್ಯವಾಗಿರುವುದಿಲ್ಲ, ಉತ್ತಮ ಫಸಲು ಇಲ್ಲ. ಇಂತಹ ಅನಾರೋಗ್ಯ ಸಮಸ್ಯೆಗೆ ಮೂಲ ಕಾರಣ ಅಸಮರ್ಪಕ ಬಸಿ ವ್ಯವಸ್ಥೆ, ಹೆಚ್ಚಿನ ಇಳುವರಿ  ಪಡೆಯಲು ಕೇವಲ ಗೊಬ್ಬರ, ನೀರಾವರಿ ಮಾಡಿದರೆ ಸಾಲದು. ಬೆಳೆಯ ಉತ್ಪಾದನೆ ಮತ್ತು ಆರೋಗ್ಯಕ್ಕಾಗಿ ಭೂಮಿಯನ್ನು ಸದಾ ಸುಸ್ಥಿತಿಯಲ್ಲಿ…

  ಮುಂದೆ ಓದಿ...
 • ಸ್ವಾಮಿ ವಿವೇಕಾನಂದರ ಆದರ್ಶ ವ್ಯಕ್ತಿತ್ವ
  addoor

  ಮತ್ತೆ ಬಂದಿದೆ ಸ್ವಾಮಿ ವಿವೇಕಾನಂದರ ಜಯಂತಿ (೧೨ ಜನವರಿ). ಪ್ರತಿಯೊಬ್ಬರ ಆತ್ಮಕ್ಕೂ ಚೇತನ ತುಂಬಬಲ್ಲ, ಪ್ರತಿಯೊಬ್ಬರ ಬದುಕಿಗೂ ಬೆಳಕು ನೀಡಬಲ್ಲ ಅದ್ಭುತ ವ್ಯಕ್ತಿತ್ವ ಅವರದು. ಕೇವಲ ೩೯ ವರುಷ (೧೨.೧.೧೮೬೩ - ೪.೭.೧೯೦೨) ಬಾಳಿದ ಅವರ ಬದುಕಿನ ಸಾಧನೆಗಳು ಅಮೋಘ.

  ಮಾನವ ಜನ್ಮ ದೊಡ್ಡದು ಎಂದು ನಂಬಿದ್ದ ಅವರು ಮಾನವ ಜನಾಂಗದ ಒಳಿತಿಗಾಗಿ ತಮ್ಮ ಬದುಕನ್ನೇ ಸಮರ್ಪಿಸಿದವರು. ರಾಷ್ಟ್ರದ ಹಾಗೂ ವ್ಯಕ್ತಿಗಳ ಪ್ರಗತಿ ಸಾಧನೆಗಾಗಿ ೧೮೯೭ರಲ್ಲಿ ರಾಮಕೃಷ್ಣ ಮಠವನ್ನು ಸ್ಥಾಪಿಸಿ, ಧ್ಯೇಯಬದ್ಧ ಸನ್ಯಾಸಿಗಳ ತಂಡ ಕಟ್ಟಿ, ಮುನ್ನಡೆಸಿದ್ದು ಅವರ ದೂರಾಲೋಚನೆಯ ಉಜ್ವಲ ಉದಾಹರಣೆ.

  ಸ್ವಾಮಿ ವಿವೇಕಾನಂದರ ಬಗ್ಗೆ ಉನ್ನತ…

  ಮುಂದೆ ಓದಿ...
 • ಪ್ರಾರ್ಥನೆ ಮತ್ತು ವಿಶ್ವಾಸ
  Kavitha Mahesh

  ಈ ಕಿರು ಕಥೆಯನ್ನು ನೀವು ವಾಟ್ಸಾಪ್, ಫೇಸ್ ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಬಾರಿ ಓದಿರಬಹುದು, ಆದರೆ ಈ ಕಥೆಯನ್ನು ಪ್ರತೀಬಾರಿ ಓದುವಾಗಲೂ ನಮ್ಮಲ್ಲಿ ಹೊಸದಾದ ಚೈತನ್ಯವೊಂದು ಮೂಡುತ್ತದೆ ಎನ್ನುವುದು ಸತ್ಯ. 

  ಮುಂದೆ ಓದಿ...
 • ಕಸದ ರಾಶಿಯಿಂದ ಪಾರಾದ ಟೆಡ್ಡಿ ಕರಡಿ
  addoor

  “ಇಲ್ಲಿನ ಕಸದ ರಾಶಿಯನ್ನು ಒಮ್ಮೆ ದಾಟಿ ಹೋದರೆ ಸಾಕಾಗಿತ್ತು" ಎನ್ನುತ್ತಾ, ಮೂಗು ಮುಚ್ಚಿಕೊಂಡು ಆಕಾಶದಲ್ಲಿ ಮಾಯಾ ಕಿನ್ನರಿ ಹಾರಿ ಹೋಗುತ್ತಿದ್ದಳು. ಆಗ ಅವಳಿಗೆ ಆ ಕಸದ ರಾಶಿಯಿಂದ ಒಂದು ಸದ್ದು ಕೇಳಿಸಿತು - ಯಾರೋ ಅಳುತ್ತಿರುವ ಸದ್ದು.

  “ಅಯ್ಯೋ, ಇದೊಂದು ಟೆಡ್ಡಿ ಕರಡಿ ಅಳುವ ಸದ್ದು. ನನ್ನಿಂದ ಏನಾದರೂ ಸಹಾಯ ಮಾಡಲಾದೀತೇ ನೋಡುತ್ತೇನೆ” ಎಂದು ಕಿನ್ನರಿ ಅತ್ತ ಹಾರಿದಳು. ಆಕೆ ಕೆಳಕ್ಕೆ ಹಾರುತ್ತಾ ಅತ್ತಿತ್ತ ನೋಡಿದಳು. ನಿಜಕ್ಕೂ ಅಲ್ಲೊಂದು ಹಳೆಯ ಟೆಡ್ಡಿ ಕರಡಿ ಕುಳಿತಿತ್ತು!ಅದು ಆಲೂಗಡ್ಡೆ ಮತ್ತು ಬಾಳೆಹಣ್ಣಿನ ಸಿಪ್ಪೆ ಇತ್ಯಾದಿ ಕಸದ ರಾಶಿಯ ಮೇಲೆ ಕುಳಿತು ಅಳುತ್ತಿತ್ತು.

  ಟೆಡ್ಡಿ ಕರಡಿ ಮಾಯಾ…

  ಮುಂದೆ ಓದಿ...
 • ‘ಡಿಂಡಿಮ ಕವಿ' ಶನಿ ಮಹಾದೇವಪ್ಪನವರಿಗೆ ನುಡಿನಮನ
  Ashwin Rao K P

  ‘ಕಮಲೇ ಕಮಲೋತ್ಪತ್ತಿ' ಎಂದು ಹೇಳುತ್ತಾ ತನ್ನ ಡಮರುಗವನ್ನು ಆಡಿಸಿ ಶಬ್ದ ಮಾಡುತ್ತಾ ಭೋಜರಾಜನ ಆಸ್ಥಾನಕ್ಕೆ ಬಂದು ಅಲ್ಲಿಯ ವಿದ್ವಾಂಸರಿಗೆ ಪಂಥ ಒಡ್ಡುವ ಡಿಂಡಿಮ ಕವಿಯ ಅಭಿನಯವನ್ನು ನೋಡಿ ಮೆಚ್ಚದವರು ಯಾರಿದ್ದಾರೆ? ಈ ದೃಶ್ಯವಿರುವುದು ‘ಕವಿರತ್ನ ಕಾಳಿದಾಸ' ಚಲನಚಿತ್ರದಲ್ಲಿ. ಅದರಲ್ಲಿ ಡಿಂಡಿಮ…

  ಮುಂದೆ ಓದಿ...
 • ಬೀchi ಯವರು ಕನ್ನಡವನ್ನೇಕೆ ಅಪ್ಪಿಕೊಂಡರು?
  Kavitha Mahesh

  ಆ ಕಾಲದಲ್ಲಿ ಸಂಜೆ ಹೆಂಡತಿ ಜತೆ ವಾಕಿಂಗ್ ಹೋಗುವುದೂ ಒಂದು ರೀತಿಯ ಸಂಪ್ರದಾಯವಾಗಿತ್ತು. ಬೀChi (ಬೀಚಿ) ಕೂಡ ವಾಕಿಂಗ್‌ಗೆ ಹೊರಟಿದ್ದರು. ಹಾಗೆ ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಕಂಡ ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿರುವ ‘ಸಾಹಿತ್ಯ ಭಂಡಾರ’ದತ್ತ ಕೈತೋರಿ “ಇದೇ ನನ್ನ ಆಫೀಸು, ಈ…

  ಮುಂದೆ ಓದಿ...
 • ದುಡಿದು ತಿನ್ನಲು ನಾಚಿಕೆ ಏಕೆ?
  Ashwin Rao K P

  ಕೆಲವು ದಿನಗಳ ಹಿಂದೆ ನನ್ನ ಪತ್ನಿಯ ಚಪ್ಪಲಿ ತುಂಡಾಗಿ, ಅದನ್ನು ಸರಿ ಪಡಿಸಲು ಮನೆಯ ಹತ್ತಿರವೇ ಇದ್ದರ ಚಮ್ಮಾರ ಕುಟೀರಕ್ಕೆ ಹೋಗಿದ್ದೆ. ಅಲ್ಲಿದ್ದ ವ್ಯಕ್ತಿ ಚಪ್ಪಲಿ ನೋಡಿದ ಕೂಡಲೇ ‘ಎಲ್ಲಾ ಬದಿ ಹೊಲಿಗೆ ಹಾಕಬೇಕು. ನೂರು ರೂಪಾಯಿ ಆಗುತ್ತದೆ' ಎಂದು ಮುಖಕ್ಕೆ ಹೊಡೆದಂತೆ ಹೇಳಿದ. ನನಗೆ ಒಂದು ಕ್ಷಣ…

  ಮುಂದೆ ಓದಿ...
 • ನಮ್ಮ ಹೆಮ್ಮೆಯ ಭಾರತ (ಭಾಗ 43 - 44)
  addoor

  ೪೩.ಸೆಣಬು ಉತ್ಪಾದನೆಯಲ್ಲಿಯೂ ಭಾರತಕ್ಕೆ ಮೊದಲ ಸ್ಥಾನ
  ಸೆಣಬಿನ ಚೀಲ ಮತ್ತು ಹಗ್ಗವನ್ನು ನಾವೆಲ್ಲರೂ ಬಳದಿದ್ದೇವೆ. ಸಸ್ಯಮೂಲದ ಈ ಉದ್ದನೆಯ, ಮೃದುವಾದ ನಾರನ್ನು ಬಲವಾದ ಹಗ್ಗವಾಗಿ ಹೊಸೆಯಬಹುದು. ಬಹುಪಯೋಗಿ ನೈಸರ್ಗಿಕ ನಾರುಗಳಲ್ಲಿ ಹತ್ತಿಯ ನಂತರ ಸೆಣಬಿಗೆ ಎರಡನೇ ಸ್ಥಾನ. ಪರಿಸರ ರಕ್ಷಣೆಯ ತುರ್ತಿನ ಇಂದಿನ ಕಾಲಮಾನದಲ್ಲಿ ಪರಿಸರಸ್ನೇಹಿ ಸೆಣಬಿಗೆ “ಬಂಗಾರದ ನಾರು" ಎಂಬುದು ಅನ್ವರ್ಥ ಹೆಸರು.

  ಜಗತ್ತಿನ ಒಟ್ಟು ಸೆಣಬು ಉತ್ಪಾದನೆಯಲ್ಲಿ ಶೇಕಡಾ ೮೫ ಗಂಗಾ ನದಿಯ ಬಯಲಿನ ಕೊಡುಗೆ. ಆದ್ದರಿಂದಲೇ ಸೆಣಬಿನ ಉತ್ಪಾದನೆಯಲ್ಲಿ ಭಾರತಕ್ಕೆ ಜಗತ್ತಿನಲ್ಲಿ ಮೊದಲ ಸ್ಥಾನ. ಸೆಣಬಿನ ಉದ್ಯಮ ಸುಮಾರು ೪೦ ಲಕ್ಷ…

  ಮುಂದೆ ಓದಿ...