ಇತ್ತೀಚೆಗೆ ಸೇರಿಸಿದ ಪುಟಗಳು

ಮ್ಯಾಜಿಕ್ ಮದ್ದಳೆ

Submitted by addoor on Fri, 02/28/2020 - 20:10

ಒಂದಾನೊಂದು ಕಾಲದಲ್ಲಿ ಜಪಾನಿನಲ್ಲಿ ಗೆನ್‌ಗೊರೊ ಎಂಬ ಹೆಸರಿನವನೊಬ್ಬನಿದ್ದ . ಅವನ ಬಳಿ ಇತ್ತೊಂದು ಮ್ಯಾಜಿಕ್ ಮದ್ದಳೆ.

ಅವನು ಅದರ ಬಲಬದಿ ಬಡಿಯುತ್ತಾ “ಮೂಗು ಉದ್ದವಾಗಲಿ” ಎಂದು ಹೇಳುತ್ತಿದ್ದರೆ ಮೂಗು ಉದ್ದವಾಗುತ್ತಿತ್ತು. ಅದರ ಎಡಬದಿ ಬಡಿಯುತ್ತಾ “ಮೂಗು ಗಿಡ್ಡವಾಗಲಿ” ಎಂದು ಹೇಳುತ್ತಿದ್ದರೆ ಮೂಗು ಗಿಡ್ಡವಾಗುತ್ತಿತ್ತು. ಆದರೆ, ಈ ಮದ್ದಳೆಯನ್ನು ಮೋಜಿಗಾಗಿ ಬಳಸಬಾರದೆಂಬುದು ನಿಯಮ. ಜನರನ್ನು ಸಂತೋಷ ಪಡಿಸಲಿಕ್ಕಾಗಿ ಮಾತ್ರ ಅದನ್ನು ಬಳಸಬೇಕಾಗಿತ್ತು.

ಯಾರಾದರೂ ಬಂದು ತನ್ನ ಮೂಗನ್ನು ಉದ್ದ ಅಥವಾ ಗಿಡ್ಡ ಮಾಡಬೇಕೆಂದು ವಿನಂತಿಸಿದರೆ, ಗೆನ್‌ಗೊರೊ ಅವರಿಗಾಗಿ ಮದ್ದಳೆ ಬಾರಿಸುತ್ತಿದ್ದ. ಅವರ ಕೋರಿಕೆ ಈಡೇರಿಸಿ ಅವರನ್ನು ಖುಷಿ ಪಡಿಸುತ್ತಿದ್ದ.

Image

ಬರಪೀಡಿತ ಜಿಲ್ಲೆ ಹಸುರಾಗಿಸಲು ಮಳೆಕೊಯ್ಲು – ಜಲ ಸಂರಕ್ಷಣೆ

Submitted by addoor on Fri, 02/28/2020 - 15:22

ಸಂಭಾಜಿ ನೆಹರ್‍ಕರ್ ಅವರ ಜಮೀನು ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿದೆ. ಬರಗಾಲದಿಂದಾಗಿ ಅವರು ಬವಣೆ ಪಟ್ಟಿದ್ದ ವರುಷಗಳು ಹಲವು. ಯಾಕೆಂದರೆ, ಅಲ್ಲಿನ ಸರಾಸರಿ ವಾರ್ಷಿಕ ಮಳೆ ಕೇವಲ ೬೬೬ ಮಿಮೀ. ೨೦೧೪-೧೫ರಲ್ಲಿ ಮರಾಠವಾಡ ಪ್ರದೇಶದಲ್ಲಿ ದಿನನಿತ್ಯದ ಬಳಕೆಗೂ ನೀರಿನ ತತ್ವಾರ ಆಗಿತ್ತು; ಕೃಷಿಗೆ ನೀರಿಲ್ಲವಾಗಿತ್ತು.
ಅಂತಹ ಪರಿಸ್ಥಿತಿಯಲ್ಲಿ ರೈತರು ಊರು ಬಿಟ್ಟು ಗುಳೇ ಹೋಗಬೇಕಾಗುತ್ತದೆ. ೨೦೧೮ರಲ್ಲಿಯೂ ಇಂತಹದೇ ಪರಿಸ್ಥಿತಿ ಬೀಡ್‍ನಲ್ಲಿ ಎದುರಾಗಿತ್ತು. ಆದರೆ ಈ ವರುಷ ಹಾಗಾಗಿಲ್ಲ. ಅಲ್ಲಿನ ಬಾವಿಗಳು, ರೈತರ ಬೆಳೆಗಳು ಒಣಗಿಲ್ಲ.

Image

ಬದುಕಿನ ದೊಡ್ಡ ಪಾಠ

Submitted by addoor on Thu, 02/27/2020 - 08:15

ಗುಂಡನ ಮಗ ಪರೀಕ್ಷೆಯಲ್ಲಿ ಫೈಲಾದ. ಮಗನನ್ನು ಹಿಗ್ಗಾಮುಗ್ಗ ಬಡಿದು ಹಾಕಿದ ಗುಂಡ. ಮಗ ಸಿಕ್ಕಾಬಟ್ಟೆ ಅತ್ತ. ಆಗಲೇ ಮಗ ನಿರ್ಧರಿಸಿದ: ಇನ್ನು ಮುಂದೆ ಚೆನ್ನಾಗಿ ಕಲಿಯುತ್ತೇನೆಂದು.
ಮುಂದಿನ ವರುಷ ಗುಂಡನ ಮಗ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ. ಹೆಮ್ಮೆಯಿಂದ ಮನೆಗೆ ಬಂದ ಮಗ ಗುಂಡನಿಗೆ ತನ್ನ ಅಂಕಪಟ್ಟಿ ತೋರಿಸಿದ. ಅದನ್ನೊಮ್ಮೆ ನೋಡಿದ ಗುಂಡ, ತಕ್ಷಣವೇ ಮಗನನ್ನು ಹಿಡಿದುಕೊಂಡು ಕೋಲಿನಿಂದ ಚೆನ್ನಾಗಿ ಚಚ್ಚಿ ಹಾಕಿದ. ಅನಂತರ ಮಗನಿಗೆ ಅಬ್ಬರಿಸಿ ಹೇಳಿದ ಗುಂಡ: “ನಿನ್ನ ಕ್ಲಾಸಿನಲ್ಲಿ ಫಸ್ಟ್ ಬಂದು ಏನು ಪ್ರಯೋಜನ? ಆಟೋಟಗಳಲ್ಲಿ ನಿನಗೆ ಅಂಕಗಳೇ ಇಲ್ಲ. ನಿನಗೆ ಈ ಪಾಠ ಕಲಿಸಬೇಕಂತ ಕೋಲಿನಿಂದ ಚಚ್ಚಿದ್ದೇನೆ.”

Image

ತರಕಾರಿ ಬೆಳೆಗೆ ಶಾಕ್ ಕೊಡುವ ಕೀಟ

Submitted by Ashwin Rao K P on Mon, 02/24/2020 - 17:54

ಇದೇನು ಹೊಸ ಕೀಟವೆಂದುಕೊಂಡಿರಾ? ತೋಟದ ನಡುವೆ ಅಂಗಿ ಹಾಕದೆ ಹೋದಾಗ ಮೈಗೆ ಏನೋ ಶಾಕ್ ತಗುಲಿದಂತ ಅನುಭವ ಸಾಮಾನ್ಯವಾಗಿ ಎಲ್ಲಾ ಕೃಷಿಕರಿಗೂ ಆಗಿರುತ್ತದೆ. ಮಾವು, ಕೊಕ್ಕೋ ಬೆಳೆಗಳ ಎಲೆಯ ಅಡಿ ಭಾಗದಲ್ಲಿ ಈ ಕೀಟ ಇರುತ್ತದೆ. ಕೆಲವು ಹಸುರು, ಮತ್ತೆ ಕೆಲವು ಹಳದಿ ಬಣ್ಣದಲ್ಲಿರುತ್ತದೆ. 
ಇದು ತರಕಾರಿ ಬೆಳೆಗೆ ತೊಂದರೆ ಮಾಡುತ್ತದೆ. ಹೀರೆ, ಹಾಗಲ ಕಾಯಿ, ಪಡುವಲಕಾಯಿ, ಸೌತೆ ಮುಂತಾದ ತರಕಾರಿ ಬೆಳೆಗಳಿಗೆ ಇದರ ತೊಂದರೆ ಹೆಚ್ಚು. ಇದು ಎಲೆಯ ಹರಿತ್ತು ತಿನ್ನುವ ಕೀಟ. ಹರಿತ್ತು ತಿಂದ ಕಾರಣ  ಗಿಡದ ಬೆಳವಣಿಗೆ ಕುಂಠಿತವಾಗಿ ಎಲೆ ಒಣಗಲು ಪ್ರಾರಂಭವಾಗುತ್ತದೆ. ಕ್ರಮೇಣ ಬಳ್ಳಿಗಳು ಸಾಯುತ್ತವೆ. ಇಳುವರಿಯೂ ಗಣನೀಯ ಪ್ರಮಾಣದಲ್ಲಿ ಕುಂಠಿತವಾಗುತ್ತದೆ.

Image

ಪಾಲಿಹೌಸಿನಲ್ಲಿ ರಾಜಕುಮಾರರ ತಪಸ್ಸಿಗೊಲಿದ ತರಕಾರಿ ಕೃಷಿ

Submitted by addoor on Sat, 02/22/2020 - 17:14

ಮಂಗಳೂರು – ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಣಂಬೂರು ಬಂದರು ದಾಟಿದ ನಂತರ ಸಿಗುವ ಊರು ಹೊಸಬೆಟ್ಟು. ಅಲ್ಲಿನ ಬಸ್‍ನಿಲ್ದಾಣದ ಪಕ್ಕದಲ್ಲಿ ಪೂರ್ವ ದಿಕ್ಕಿಗೆ ಕಾಂಕ್ರೀಟು ರಸ್ತೆಯಲ್ಲಿ ಸುಮಾರು ಅರ್ಧ ಕಿಮೀ ಸಾಗಿದರೆ ಸಿಗುತ್ತದೆ ಶ್ರೀನಗರ ಬಡಾವಣೆ.
ಅಲ್ಲಿ ವಿ. ರಾಜಕುಮಾರ್ ಅವರ ಮನೆಯಿರುವ ಕಂಪೌಂಡಿಗೆ ಇತ್ತೀಚೆಗೆ ಕಾಲಿಟ್ಟಾಗ ಕಾಣಿಸಿತು: ಒಂದು ಸೆಂಟ್ಸ್ ವಿಸ್ತೀರ್ಣದ ಪಾಲಿಹೌಸ್. ಅದರೊಳಗೆ ಹೊಕ್ಕರೆ ಕೃಷಿಲೋಕವೊಂದರ ದರ್ಶನ.

Image

ಪುಸ್ತಕನಿಧಿ - ಕನ್ನಡ ಕೀಚಕ - ಜಿ ಪಿ ರಾಜರತ್ನಂ / ಕೈಲಾಸಂ ಅವರ ಪುಸ್ತಕ

Submitted by shreekant.mishrikoti on Sat, 02/22/2020 - 11:32
ಚಿತ್ರ

 ಕನ್ನಡದ ಶ್ರೇಷ್ಠ ನಾಟಕಕಾರ ಕೈಲಾಸಂ ಅವರು ಕೆಲವು ನಾಟಕಗಳನ್ನು ಇಂಗ್ಲೀಷ್ನಲ್ಲಿ ಬರೆದಿದ್ದಾರೆ.  ಒಂದು ನಾಟಕವನ್ನು ಕೀಚಕನ ಕುರಿತಾಗಿ ಇಂಗ್ಲೀಷಿನಲ್ಲಿ ಬರೆಯುವ ವಿಚಾರ ಇತ್ತು. ಅದರ ಕುರಿತು ಕೆಲವು ಸಂಗತಿಗಳನ್ನು ತಮ್ಮ ಆಪ್ತರೊಬ್ಬರಲ್ಲಿ ಹೇಳಿದ್ದರು. ಆ ನಾಟಕವನ್ನು ಬರೆಯುವ ಮುನ್ನವೇ ಅವರು ತೀರಿಕೊಂಡರು. ಮುಂದೆ ಆ ನಾಟಕವನ್ನು ತಮಗೆ ನೆನಪಿದ್ದ ಹಾಗೆ ಆಪ್ತರು ಇಂಗ್ಲಿಷ್ ನಲ್ಲಿ ಬರೆದರು. ಅದನ್ನು ಕನ್ನಡಿಗರಿಗೆ ತಲುಪಿಸುವ ಉದ್ದೇಶದಿಂದ ಜಿ ಪಿ ರಾಜರತ್ನಂ ಅವರು ಅನುವಾದಿಸಿದರು.  ಈ ಪುಸ್ತಕದ ಮುಖಪುಟವನ್ನು ಜೊತೆಯಲ್ಲಿನ ಚಿತ್ರದಲ್ಲಿ ನೋಡಬಹುದು. ಈ ಪುಸ್ತಕವು archive.org ನಲ್ಲಿ ನೀವು ಕೀಚಕ ಎಂದು ಹುಡುಕಿದರೆ ಸಿಗುತ್ತದೆ. 

ರೈತರ ಬೀಜದ ಹಕ್ಕು: ಪೆಪ್ಸಿ ಕಂಪೆನಿಯ “ಕೊಕ್”

Submitted by addoor on Fri, 02/21/2020 - 23:31

ಗುಜರಾತಿನ ಕೆಲವು ರೈತರು, ಹಲವಾರು ವರುಷಗಳಿಂದ ಆಲೂಗಡ್ಡೆ ಬೆಳೆಯುತ್ತಿದ್ದಾರೆ. ಈ ಬಾರಿ ಮಾತ್ರ ಅವರಿಗೆ ಸಿಡಿಲು ಬಡಿದಂತಾಯಿತು. ಯಾಕೆಂದರೆ, ಅಮೇರಿಕಾದ ದೈತ್ಯ ಕಂಪೆನಿ ಪೆಪ್ಸಿಕೋ ೧೧ ರೈತರ ಮೇಲೆ ೮ ಮೊಕದ್ದಮೆ ಹೂಡಿತು – ತಮ್ಮ ಕಂಪೆನಿಯ ಬೈದ್ಧಿಕ ಸೊತ್ತಾದ ಆಲೂಗಡ್ದೆ ತಳಿಯನ್ನು “ಕಾನೂನುಬಾಹಿರವಾಗಿ” ಬೆಳೆಯುತ್ತಿದ್ದಾರೆ ಎಂಬ ಕಾರಣಕ್ಕಾಗಿ! ಪ್ರತಿಯೊಬ್ಬ ರೈತನೂ ರೂಪಾಯಿ ೧.೦೫ ಕೋಟಿ ಪರಿಹಾರ ಪಾವತಿಸಬೇಕೆಂಬುದು ಪೆಪ್ಸಿಕೋ ಕಂಪೆನಿಯ ಆಗ್ರಹ!

Image

ಶಾಲಾಕಾಲೇಜುಗಳಲ್ಲಿ ನೀರಪಾಠ, ಪ್ರಾತ್ಯಕ್ಷಿಕೆ

Submitted by addoor on Tue, 02/18/2020 - 22:44

ಫಸಲು ಬೇಕಿದ್ದರೆ ಹೊಲಗಳಲ್ಲಿ ಬೀಜ ಬಿತ್ತಬೇಕು. ಜಲಜಾಗೃತಿಯ ಫಸಲು ಬೇಕಿದ್ದರೆ ಜಲಸಾಕ್ಷರತೆಯ ಬೀಜ ಬಿತ್ತಬೇಕು. ಎಲ್ಲಿ? ಶಾಲೆಗಳಲ್ಲಿ. ಅದೆಲ್ಲ ಹೇಗೆ ಸಾಧ್ಯ ಅಂತೀರಾ? ಅದು ಸಾಧ್ಯವೆಂದು ತೋರಿಸಿಕೊಟ್ಟ ಮಂಗಳೂರಿನ ಎರಡು ಕಾಲೇಜುಗಳ ನಿದರ್ಶನಗಳಿಲ್ಲಿವೆ.

Image

ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜು: ೧೫೨ನೇ ವರುಷದ ಸಂಭ್ರಮ

Submitted by addoor on Wed, 02/12/2020 - 19:23

ಮಂಗಳೂರಿನ ಪ್ರಸಿದ್ಧ ಕಾಲೇಜುಗಳು ಎಂದಾಗ ನೆನಪಿಗೆ ಬರುವ ಹೆಸರುಗಳಲ್ಲಿ ಮುಖ್ಯವಾದದ್ದು, ಇಲ್ಲಿನ ಕೇಂದ್ರಭಾಗವಾದ ಹಂಪನಕಟ್ಟೆಯಲ್ಲಿರುವ "ಗವರ್ನಮೆಂಟ್ ಕಾಲೇಜು". ಇದು ೧೯೯೩ರಲ್ಲಿ “ಯುನಿವರ್ಸಿಟಿ ಕಾಲೇಜ್” ಆಗಿ ಪರಿವರ್ತನೆಗೊಂಡಿದ್ದರೂ, ನನ್ನಂತಹ ಹಳೆಯ ತಲೆಮಾರಿನವರಿಗೆ ಆ ಕಾಲೇಜಿನ ಪ್ರಸ್ತಾಪ ಮಾಡುವಾಗಲೆಲ್ಲ ಬಾಯಿಗೆ ಬರುವ ಹೆಸರು ಗವರ್ನಮೆಂಟ್ ಕಾಲೇಜ್.

ಈ ಕಾಲೇಜಿಗೆ ಇದೀಗ ೧೫೦ ಸಾರ್ಥಕ ವರುಷಗಳ ಸಂಭ್ರಮ. ೬ ಫೆಬ್ರವರಿ ೨೦೨೦ರಂದು ಕಾಲೇಜಿಗೆ ೧೫೦ ವರುಷ ತುಂಬಿದ್ದನ್ನು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಆಚರಿಸಲಾಯಿತು. ಆ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ವಸ್ತುಪ್ರದರ್ಶನವಂತೂ ಜನಮನ ಗೆದ್ದಿತು. ಸಂದರ್ಶಕರ ದಟ್ಟಣೆಯಿಂದಾಗಿ ಅದನ್ನು ಕೆಲವು ದಿನ ವಿಸ್ತರಿಸಬೇಕಾಯಿತು.

Image

ರೇಡಿಯೋ ಕೇಳಲು ಲೈಸೆನ್ಸ್ ಬೇಕಿತ್ತಾ?

Submitted by Ashwin Rao K P on Wed, 02/12/2020 - 12:10

ಮೇಲಿನ ಶೀರ್ಷಿಕೆ ಓದಿದಾಗ ಈಗಿನ ಯುವಕರಿಗೆ ಆಶ್ಚರ್ಯವಾದೀತು. ಆದರೆ ಹಿಂದೆ ೭೦ರ ದಶಕದಲ್ಲಿ ನೀವು ರೇಡಿಯೋ ಬಳಸಬೇಕಾದಲ್ಲಿ ಲೈಸೆನ್ಸ್ ಮಾಡಿಸಕೊಳ್ಳ ಬೇಕಿತ್ತು. 
ಇತ್ತೀಚೆಗೆ ಮನೆಯನ್ನು ನವೀಕರಣ ಸಲುವಾಗಿ ಸ್ವಚ್ಛಗೊಳಿಸುತ್ತಿರುವಾಗ ರೇಡಿಯೋ ಲೈಸನ್ಸ್ ಸಿಕ್ಕಿತು. ಇದು ನನ್ನ ಅಮ್ಮನ ಹೆಸರಿನಲ್ಲಿ ೧೯೭೯-೮೦ರ ಸಮಯದ ಲೈಸನ್ಸ್. ಆ ಸಮಯದಲ್ಲಿ ಈಗಿನಂತೆ ಉಚಿತವಾಗಿ ರೇಡಿಯೋ ಕೇಳಲು ಅನುಮತಿಯಿರಲಿಲ್ಲ. ಅದಕ್ಕೆ ಸಂಬಂಧಿಸಿದ ಅಧಿಕಾರಿಗಳಿಂದ ಲೈಸೆನ್ಸ್ ಪಡೆದುಕೊಳ್ಳ ಬೇಕಿತ್ತು. ಅಂಚೆ ಇಲಾಖೆಯಲ್ಲಿ ಅದಕ್ಕೆ ಬೇಕಾಗುವ ಹಣ ಕೊಟ್ಟು ಅಂಚೆ ಚೀಟಿ ಪಡೆದುಕೊಂಡು ಮೊಹರು ಒತ್ತಿಸಿ ಪ್ರತೀ ವರ್ಷ ಲೈಸೆನ್ಸ್ ನವೀಕರಣ ಮಾಡಿಕೊಳ್ಳ ಬೇಕಾಗುತ್ತಿತ್ತು. ಮೊದಲ ವರ್ಷ ರೂ.೭.೫೦ ಇದ್ದ ಪಾವತಿ ಎರಡನೇ ವರ್ಷಕ್ಕೆ ೧೫ ರೂ ಆಗಿರುವುದನ್ನು ಗಮನಿಸಬಹುದು.

Image