ಇತ್ತೀಚೆಗೆ ಸೇರಿಸಿದ ಪುಟಗಳು

 • ಬೀchi ಯವರು ಕನ್ನಡವನ್ನೇಕೆ ಅಪ್ಪಿಕೊಂಡರು?
  Kavitha Mahesh

  ಆ ಕಾಲದಲ್ಲಿ ಸಂಜೆ ಹೆಂಡತಿ ಜತೆ ವಾಕಿಂಗ್ ಹೋಗುವುದೂ ಒಂದು ರೀತಿಯ ಸಂಪ್ರದಾಯವಾಗಿತ್ತು. ಬೀChi (ಬೀಚಿ) ಕೂಡ ವಾಕಿಂಗ್‌ಗೆ ಹೊರಟಿದ್ದರು. ಹಾಗೆ ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಕಂಡ ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿರುವ ‘ಸಾಹಿತ್ಯ ಭಂಡಾರ’ದತ್ತ ಕೈತೋರಿ “ಇದೇ ನನ್ನ ಆಫೀಸು, ಈ…

  ಮುಂದೆ ಓದಿ...
 • ದುಡಿದು ತಿನ್ನಲು ನಾಚಿಕೆ ಏಕೆ?
  Ashwin Rao K P

  ಕೆಲವು ದಿನಗಳ ಹಿಂದೆ ನನ್ನ ಪತ್ನಿಯ ಚಪ್ಪಲಿ ತುಂಡಾಗಿ, ಅದನ್ನು ಸರಿ ಪಡಿಸಲು ಮನೆಯ ಹತ್ತಿರವೇ ಇದ್ದರ ಚಮ್ಮಾರ ಕುಟೀರಕ್ಕೆ ಹೋಗಿದ್ದೆ. ಅಲ್ಲಿದ್ದ ವ್ಯಕ್ತಿ ಚಪ್ಪಲಿ ನೋಡಿದ ಕೂಡಲೇ ‘ಎಲ್ಲಾ ಬದಿ ಹೊಲಿಗೆ ಹಾಕಬೇಕು. ನೂರು ರೂಪಾಯಿ ಆಗುತ್ತದೆ' ಎಂದು ಮುಖಕ್ಕೆ ಹೊಡೆದಂತೆ ಹೇಳಿದ. ನನಗೆ ಒಂದು ಕ್ಷಣ…

  ಮುಂದೆ ಓದಿ...
 • ನಮ್ಮ ಹೆಮ್ಮೆಯ ಭಾರತ (ಭಾಗ 43 - 44)
  addoor

  ೪೩.ಸೆಣಬು ಉತ್ಪಾದನೆಯಲ್ಲಿಯೂ ಭಾರತಕ್ಕೆ ಮೊದಲ ಸ್ಥಾನ
  ಸೆಣಬಿನ ಚೀಲ ಮತ್ತು ಹಗ್ಗವನ್ನು ನಾವೆಲ್ಲರೂ ಬಳದಿದ್ದೇವೆ. ಸಸ್ಯಮೂಲದ ಈ ಉದ್ದನೆಯ, ಮೃದುವಾದ ನಾರನ್ನು ಬಲವಾದ ಹಗ್ಗವಾಗಿ ಹೊಸೆಯಬಹುದು. ಬಹುಪಯೋಗಿ ನೈಸರ್ಗಿಕ ನಾರುಗಳಲ್ಲಿ ಹತ್ತಿಯ ನಂತರ ಸೆಣಬಿಗೆ ಎರಡನೇ ಸ್ಥಾನ. ಪರಿಸರ ರಕ್ಷಣೆಯ ತುರ್ತಿನ ಇಂದಿನ ಕಾಲಮಾನದಲ್ಲಿ ಪರಿಸರಸ್ನೇಹಿ ಸೆಣಬಿಗೆ “ಬಂಗಾರದ ನಾರು" ಎಂಬುದು ಅನ್ವರ್ಥ ಹೆಸರು.

  ಜಗತ್ತಿನ ಒಟ್ಟು ಸೆಣಬು ಉತ್ಪಾದನೆಯಲ್ಲಿ ಶೇಕಡಾ ೮೫ ಗಂಗಾ ನದಿಯ ಬಯಲಿನ ಕೊಡುಗೆ. ಆದ್ದರಿಂದಲೇ ಸೆಣಬಿನ ಉತ್ಪಾದನೆಯಲ್ಲಿ ಭಾರತಕ್ಕೆ ಜಗತ್ತಿನಲ್ಲಿ ಮೊದಲ ಸ್ಥಾನ. ಸೆಣಬಿನ ಉದ್ಯಮ ಸುಮಾರು ೪೦ ಲಕ್ಷ…

  ಮುಂದೆ ಓದಿ...
 • ಅಭಿವೃದ್ಧಿಯ ರೂಪ ಮತ್ತು ಪರಿಣಾಮ...
  Shreerama Diwana

  ಪ್ರಕೃತಿ ವಿಕೋಪ ಮತ್ತು ಅಭಿವೃದ್ಧಿ ಒಂದಕ್ಕೊಂದು ಬೆಸದಿದೆಯೇ? ಅನಾರೋಗ್ಯ ಮತ್ತು ಅಭಿವೃದ್ಧಿ ಜೊತೆಗಾರರೇ? ಅಪಘಾತ ಅಸಹನೆ ವಂಚನೆ ಮಾನಸಿಕ ರೋಗ ಅಭಿವೃದ್ಧಿಯ ಭಾಗವೇ?

  ಮುಂದೆ ಓದಿ...
 • ಝೆನ್ ಪ್ರಸಂಗ: ಇನ್ನೂ ಹೊತ್ತುಕೊಂಡೇ ಇದ್ದೀಯಾ?
  addoor

  ಅವತ್ತು ಭಾರೀ ಮಳೆ ಸುರಿದು ನಗರದ ರಸ್ತೆಗಳಲ್ಲಿ  ಮಳೆ ನೀರು ತುಂಬಿ ಹರಿಯುತ್ತಿತ್ತು. ತನ್‌ಜನ್ ಮತ್ತು ಎಕಿಡೋ ಎಂಬ ಭಿಕ್ಷುಗಳಿಬ್ಬರು ಕೆಸರುಗದ್ದೆಯಂತಿದ್ದ ರಸ್ತೆಯಲ್ಲಿ ನಡೆಯುತ್ತಿದ್ದರು.

  ಆ ರಸ್ತೆಯ ತಿರುವಿನಲ್ಲಿ ನಿಂತಿದ್ದಳು ಚೆಲುವಿನ ಯುವತಿಯೊಬ್ಬಳು. ಅಂದವಾದ ರೇಷ್ಮೆ ಉಡುಪು ಧರಿಸಿದ್ದ ಅವಳು ಆತಂಕದಲ್ಲಿದ್ದಳು. ಯಾಕೆಂದರೆ ರಸ್ತೆಯಲ್ಲಿ ಮೊಳಕಾಲೆತ್ತರದ ಕೆಸರು ನೀರು ಹರಿಯುತ್ತಿತ್ತು ಹಾಗೂ ಅವಳಿಗೆ ರಸ್ತೆ ದಾಟಿ ಹೋಗಬೇಕಿತ್ತು.

  ತನ್‌ಜನ್ ಅವಳ ಪಕ್ಕಕ್ಕೆ ಹೋಗಿ, “ರಸ್ತೆ ದಾಟಬೇಕೇನು? ಬಾ" ಎನ್ನುತ್ತಾ ತೋಳುಗಳಿಂದ ಅವಳನ್ನು ಎತ್ತಿಕೊಂಡು, ರಸ್ತೆ ದಾಟಿ, ಆ ಬದಿಯಲ್ಲಿ ಕೆಳಗಿಳಿಸಿದ.

  ಮುಂದೆ ಓದಿ...
 • ಬೆಳೆಗಳಿಗೆ ಸಾವಯವ ಗೊಬ್ಬರ ಹಾಕುವುದು ಹೇಗೆ?
  Ashwin Rao K P

  ಯಾವುದೇ ಬೆಳೆಯು ಸಂಮೃದ್ಧವಾಗಿ ಬೆಳೆಯಲು ಸರಿಯಾದ ಗೊಬ್ಬರ ಅವಶ್ಯಕ. ಬೆಳೆಗಳಿಗೆ ಸಾವಯವ ಗೊಬ್ಬರಗಳನ್ನು ಸರಿಯಾದ ವಿಧಾನದಲ್ಲಿ ಹಾಕಿದರೆ ಮಾತ್ರ ಅದರ ಫಲಿತಾಂಶ ಹೆಚ್ಚು. ಮನುಷ್ಯ ಎಷ್ಟೇ ಉತ್ತಮ ಆಹಾರ ಸೇವನೆ ಮಾಡಿದರೂ ಸಹ, ಅದು ಸರಿಯಾಗಿ ಜೀರ್ಣ ಆಗಬೇಕಿದ್ದರೆ ಅದರ ಜೊತೆಗೆ ತೇವಾಂಶ ( ನೀರು) ಅಗತ್ಯ.…

  ಮುಂದೆ ಓದಿ...
 • ವರಂಗದ ಕೆರೆ ಬಸದಿ
  Ashwin Rao K P

  ಕೊರೋನಾ ಕಾಲದಲ್ಲಿ ಮನೆಯಿಂದ ಹೊರಗೆ ಹೋಗದೇ ಇದ್ದ ನನ್ನ ಗೆಳೆಯ ಶರತ್ ಕೊನೆಗೂ ಬೆಂಗಳೂರು ಬಿಟ್ಟು ತಮ್ಮ ಊರಾದ ಕಾರ್ಕಳಕ್ಕೆ ಬರಲು ಮನಸ್ಸು ಮಾಡಿದರು. ಕೆಲಸ ಹೇಗೂ ಆನ್ ಲೈನ್ ನಲ್ಲೇ ಮಾಡಬಹುದಾದುದರಿಂದ, ಮಗಳಿಗೂ ಶಾಲೆ ಇಲ್ಲದೇ ಮನೆಯಲ್ಲೇ ಇದ್ದು ಬೋರ್ ಆದುದರಿಂದ ತಮ್ಮ ಊರಿಗೆ ಪ್ರಯಾಣ ಬೆಳೆಸಿದರು.…

  ಮುಂದೆ ಓದಿ...
 • ವರಂಗದ ಕೆರೆ ಬಸದಿ
  Ashwin Rao K P

  ಕೊರೋನಾ ಕಾಲದಲ್ಲಿ ಮನೆಯಿಂದ ಹೊರಗೆ ಹೋಗದೇ ಇದ್ದ ನನ್ನ ಗೆಳೆಯ ಶರತ್ ಕೊನೆಗೂ ಬೆಂಗಳೂರು ಬಿಟ್ಟು ತಮ್ಮ ಊರಾದ ಕಾರ್ಕಳಕ್ಕೆ ಬರಲು ಮನಸ್ಸು ಮಾಡಿದರು. ಕೆಲಸ ಹೇಗೂ ಆನ್ ಲೈನ್ ನಲ್ಲೇ ಮಾಡಬಹುದಾದುದರಿಂದ, ಮಗಳಿಗೂ ಶಾಲೆ ಇಲ್ಲದೇ ಮನೆಯಲ್ಲೇ ಇದ್ದು ಬೋರ್ ಆದುದರಿಂದ ತಮ್ಮ ಊರಿಗೆ ಪ್ರಯಾಣ ಬೆಳೆಸಿದರು.…

  ಮುಂದೆ ಓದಿ...
 • ಅಂಧರ ಬಾಳಿನ ಬೆಳಕಾದ ಲೂಯಿ ಬ್ರೈಲ್
  Ashwin Rao K P

  ಮಾನವನ ಪ್ರತಿಯೊಂದು ಅಂಗಾಂಗವೂ ಅತ್ಯಮೂಲ್ಯ. ಯಾವುದಕ್ಕೂ ಬೆಲೆಕಟ್ಟಲಾಗದು. ಅದರಲ್ಲೂ ಕಣ್ಣುಗಳು ನಮ್ಮ ದೇಹದ ಅತ್ಯಂತ ಪ್ರಮುಖ ಅಂಗ. ಈ ಸುಂದರ ಪ್ರಪಂಚವನ್ನು ನೋಡಲು ನಮಗೆ ಸಹಾಯ ಮಾಡುವುದೇ ಕಣ್ಣುಗಳು. ಆದರೆ ದುರಾದೃಷ್ಟವಶಾತ್ ಪ್ರಪಂಚದಲ್ಲಿ ಲಕ್ಷಾಂತರ ಮಂದಿ ಹುಟ್ಟುವಾಗಲೇ ಅಂಧರಾಗಿ ಜನಿಸುತ್ತಾರೆ.…

  ಮುಂದೆ ಓದಿ...