ಇತ್ತೀಚೆಗೆ ಸೇರಿಸಿದ ಪುಟಗಳು

ಬದುಕಿನ ‘ಇನ್ನಿಂಗ್ಸ್’ ಮುಗಿಸಿದ ಚೇತನ್ ಚೌಹಾಣ್

Submitted by Ashwin Rao K P on Tue, 08/18/2020 - 09:47

ಚೇತನ್ ಪ್ರತಾಪ್ ಸಿಂಗ್ ಚೌಹಾಣ್ ಅರ್ಥಾತ್ ಚೇತನ್ ಚೌಹಾಣ್ ತಮ್ಮ ಬದುಕಿನಲ್ಲಿ ಕ್ರಿಕೆಟ್ ಮತ್ತು ರಾಜಕೀಯ ಎಂಬ ಎರಡೂ ಇನ್ನಿಂಗ್ಸ್ ಮುಗಿಸಿ ಮರಳಲಾಗದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಆಗಸ್ಟ್ ೧೬, ೨೦೨೦ ರಂದು ನಿಧನ ಹೊಂದಿದ ಈ ಮಾಜಿ ಕ್ರಿಕೆಟಿಗ ಒಂದು ಕಾಲದಲ್ಲಿ ಕ್ರಿಕೆಟ್ ದಂತ ಕತೆ ಸುನಿಲ್ ಗಾವಾಸ್ಕರ್ ಜೊತೆ ಟೆಸ್ಟ್ ಕ್ರಿಕೆಟ್ ನಲ್ಲಿ ಆರಂಭಿಕರಾಗಿ ಆಟವಾಡಿದ್ದರು. ಸುನಿಲ್ ಗಾವಾಸ್ಕರ್ ಅವರ ಜೊತೆ ಹಲವಾರು ಶತಕಗಳ ಜೊತೆಯಾಟವಾಡಿದ ಕ್ರಿಕೆಟ್ ಆಟಗಾರ ಚೇತನ್ ಚೌಹಾಣ್. ಕ್ರಿಕೆಟ್ ಬದುಕಿನಿಂದ ನಿವೃತ್ತಿ ಪಡೆದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರಾಗಿ ಲೋಕಸಭಾ ಸದಸ್ಯ, ಪ್ರಸ್ತುತ ಉತ್ತರ ಪ್ರದೇಶ ರಾಜ್ಯದ ಸಚಿವರಾಗಿದ್ದರು.

Image

ಕಲ್ಲಂಗಡಿ ಹಂಚಿ ತಿಂದದ್ದು

Submitted by addoor on Mon, 08/17/2020 - 23:01

ರಾಜು ಹುಲ್ಲು ಕತ್ತರಿಸುವ ಕೆಲಸ ಮಾಡುತ್ತಿದ್ದ. ಬಡವನಾದ ಅವನು ಚಿಂಚು ಎಂಬ ಒಂದು ಗಿಳಿ ಮತ್ತು ಪಂಚು ಎಂಬ ಆಡನ್ನು ಸಾಕುತ್ತಿದ್ದ. ಕಾಡಿನಿಂದ ಹುಲ್ಲು ಕತ್ತರಿಸಿ ತಂದು ಮಾರುಕಟ್ಟೆಯಲ್ಲಿ ಮಾರುತ್ತಿದ್ದ ರಾಜುವಿಗೆ ಹೆಚ್ಚು ಆದಾಯ ಸಿಗುತ್ತಿರಲಿಲ್ಲ. ಕೆಲವೊಮ್ಮೆ ಅವನು ರಾತ್ರಿ ಗಂಜಿಯೂಟ ಮಾಡಿ ಮಲಗುತ್ತಿದ್ದ.

ಬೇಸಗೆಕಾಲ ಆರಂಭವಾಯಿತು. ಕಾಡಿನಲ್ಲಿ ಹುಲ್ಲು ಒಣಗುತ್ತಾ ಬಂತು. ಒಂದು ಮೂಟೆ ಹುಲ್ಲು ಕತ್ತರಿಸಬೇಕಾದರೆ ರಾಜು ಹಲವು ಗಂಟೆ ಕೆಲಸ ಮಾಡಬೇಕಾಗುತ್ತಿತ್ತು. ಅದೊಂದು ದಿನ ಬೆಳಗ್ಗೆಯಿಂದ ಸಂಜೆಯ ವರೆಗೆ ಹುಲ್ಲು ಕತ್ತರಿಸಿದರೂ ರಾಜುವಿಗೆ ಸಿಕ್ಕಿದ್ದು ಒಂದು ಮೂಟೆ ಹುಲ್ಲು.

Image

ಹಲಸಿನ ಹಣ್ಣಿನ ಉಪ್ಪಿನಕಾಯಿ ರುಚಿ ನೋಡಿರುವಿರಾ?

Submitted by Ashwin Rao K P on Mon, 08/17/2020 - 09:32

ನಾವು ಮಳೆಗಾಲದ ಮಧ್ಯ ಭಾಗದಲ್ಲಿದ್ದೇವೆ. ಹಲಸಿನ ಹಣ್ಣುಗಳು ಇನ್ನೂ ಕೆಲವು ಮರಗಳಲ್ಲಿ ನೇತಾಡುತ್ತಿವೆ. ನಮ್ಮಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದ ಹಣ್ಣು ಎಂದರೆ ಹಲಸಿನ ಹಣ್ಣು. ನಿಜಕ್ಕೂ ನೋಡಲು ಹೋದರೆ ಬಹು ಉಪಯೋಗಿಯಾದ ಈ ಹಣ್ಣು ಎಳೆಯದಾಗಿದ್ದರೆ ತರಕಾರಿಯಂತೆಯೂ ಬಳಕೆಗೆ ಯೋಗ್ಯ. ಹಲಸಿನ ಸೊಳೆಯನ್ನು ಉಪ್ಪು ನೀರಿನಲ್ಲಿ ಹಾಕಿಟ್ಟು ರುಚಿಕರವಾದ ಖಾದ್ಯವನ್ನೂ ತಯಾರಿಸ ಬಹುದು. ಹಲಸಿನ ಬೀಜವನ್ನು ಬೇಯಿಸಿ, ಕೆಂಡದಲ್ಲಿ ಸುಟ್ಟು ತಿನ್ನಲೂ ಬಹುದು. ಹಪ್ಪಳ, ಚಿಪ್ಸ್ ಮಾಡಿಟ್ಟು ಮಳೆಗಾಲದಲ್ಲಿ ತಿಂದರೆ ಅದರ ರುಚಿಯೇ ಬೇರೆ. ಇಷ್ಟೆಲ್ಲಾ ಬಹು ಉಪಯೋಗಿಯಾದ ಹಲಸು ಬೆಳೆಯುವಷ್ಟು ಬಳಕೆಯಾಗುತ್ತಿಲ್ಲ. ಅವಿಭಜಿತ ದಕ್ಷಿಣ ಕನ್ನಡದಾದ್ಯಂತ ಈಗಲೂ ಮರದಲ್ಲೇ ಹಲಸು ಹಣ್ಣಾಗಿ ಕೊಳೆಯುವುದನ್ನು ನೋಡಬಹುದು.

Image

ನಮ್ಮ ಹೆಮ್ಮೆಯ ಭಾರತ (1 - 2)

Submitted by addoor on Sat, 08/15/2020 - 21:34

೧೫ ಆಗಸ್ಟ್ ಭಾರತದ ಸ್ವಾತಂತ್ರ್ಯ ದಿನ. ನಮ್ಮ ಹೆಮ್ಮೆಯ ಭಾರತದ ಬಗ್ಗೆ ನಮ್ಮಲ್ಲಿ ಪುಟಿದೇಳುತ್ತದೆ ಅಭಿಮಾನ. ಈ ಅಭಿಮಾನವನ್ನು ಇನ್ನಷ್ಟು ಗಟ್ಟಿಗೊಳಿಸಲು ನಮ್ಮ ಮಾತೃಭೂಮಿಯ ಬಗ್ಗೆ ಕುತೂಹಲಕರ ಸಂಗತಿಗಳನ್ನು ತಿಳಿಯೋಣ.

Image

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ತುಳುನಾಡಿನ ಅಪ್ರತಿಮ ವೀರರ ನೆನಪಿನಲ್ಲಿ...

Submitted by Shreerama Diwana on Sat, 08/15/2020 - 08:51

ಆಗಸ್ಟ್ 15 ನಮಗೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ದಿನ. ಪರಕೀಯರ ದಾಸ್ಯದಿಂದ ಭಾರತಮಾತೆ ಮುಕ್ತಿಯಾದ ಪುಣ್ಯ ದಿನ. ಈ ಸ್ವಾತಂತ್ರ್ಯ ನಮಗೆ ಸಿಗಲು ಹಲವಾರು ಮಂದಿ ತಮ್ಮ ಪ್ರಾಣಗಳ ಬಲಿದಾನ ನೀಡಿದ್ದಾರೆ. ನಮ್ಮ ದಕ್ಷಿಣ ಕನ್ನಡದಲ್ಲೂ ಸ್ವಾತಂತ್ರ್ಯಕ್ಕಾಗಿ ಬಲಿದಾನ ನೀಡಿ ಅಮರರಾದ ವೀರರನ್ನು ನಾವಿಂದು ನೆನಪಿಸಿಕೊಳ್ಳಲೇ ಬೇಕಾಗಿದೆ.  

Image

ಝೆನ್ ಪ್ರಸಂಗ: ಗುರು, ಶಿಷ್ಯರಿಗೆ ಒಂದೇ ಆಹಾರ

Submitted by addoor on Fri, 08/14/2020 - 21:23

ಝೆನ್ ಗುರು ಬಂಕೆಯವರಿಗೆ ವಯಸ್ಸಾಯಿತು. ಆಗ ಅವರ ಅಡುಗೆಯ ಮೇಲ್ವಿಚಾರಕ ಮತ್ತು ಸ್ವತಃ ಒಬ್ಬ ಭಿಕ್ಕು (ಬೌದ್ಧ ಸನ್ಯಾಸಿ) ಆದ ದೈರ್ಯೋಗೆ ಅನಿಸಿತು: ಗುರುಗಳ ಆರೋಗ್ಯ ಸುಧಾರಿಸಲಿಕ್ಕಾಗಿ ಅವರಿಗೆ ಉತ್ತಮ ಆಹಾರ ನೀಡಬೇಕು ಎಂದು.

ಹಾಗಾಗಿ, ರುಚಿರುಚಿಯಾದ ಹಾಗೂ ಪುಷ್ಟಿಕರವಾದ ಅಡುಗೆ ಸಿದ್ಧಪಡಿಸಿ ಗುರು ಬಂಕೆಯವರಿಗೆ ಬಡಿಸಲಾಯಿತು. ತಮ್ಮ ಮುಂದೆ ತಂದಿಟ್ಟ ಆಹಾರವನ್ನು ನೋಡಿದ ಗುರು ಬಂಕೆಯವರು ದೈರ್ಯೋ ಅವರನ್ನು ಕರೆಯಿಸಿದರು. ತನಗೆ ಮಾತ್ರ ಯಾಕೆ ಒಳ್ಳೆಯ ಆಹಾರ ನೀಡಲಾಗಿದೆ ಎಂದು ಪ್ರಶ್ನಿಸಿದರು.

Image

ಕಥಾ ಲೋಕ:ಮತ್ತೆ ನೆನಪಾದಳು ಕಪ್ಪು ಹುಡುಗಿ

Submitted by Ashwin Rao K P on Fri, 08/14/2020 - 09:07

ಯಾವುದೋ ಪತ್ರಿಕಾ ವರದಿ ಮಾಡಲು ನಾನು ಆ ದಿನ ದಾವಣಗೆರೆಯಲ್ಲಿದ್ದೆ. ಪ್ರಗತಿಪರ ಕೃಷಿಕರೊಬ್ಬರ ಸಂದರ್ಶನ ಮುಗಿಸಿ ಅಲ್ಲೇ ಸೈಬರ್‍ನಲ್ಲಿ ಕುಳಿತು ವರದಿಯನ್ನು ಬರೆದು ಫೋಟೋ ವರದಿ ಎಲ್ಲಾ ಕಚೇರಿಗೆ ಮೇಲ್ ಮಾಡಿದೆ. ನನಗೆ ರಾತ್ರಿ ಬಸ್‍ಗೆ ಟಿಕೆಟ್ ಬುಕ್ ಆಗಿತ್ತು. ಸಮಯ ನೋಡಿದೆ ಬೆಳಿಗ್ಗೆ 11 ಗಂಟೆ. ಇನ್ನೂ ತುಂಬಾ ಸಮಯವಿದೆ ಎಂದು ನಮ್ಮ ಪತ್ರಿಕಾ ಏಜೆಂಟ್ ಅಣ್ಣಪ್ಪನವರಿಗೆ ಫೋ ಮಾಡಿದೆ. ಬಿಡುವಾಗಿದ್ರೆ ಒಮ್ಮೆ ಗಾಂಧಿ ಸರ್ಕಲ್ ಕಡೆ ಬರ್ತೀರಾ ಅಂದೆ. ಮಧ್ಯರಾತ್ರಿಯಲ್ಲೂ ಎಬ್ಬಿಸಿ ಹೊರಡೋಣ್ವಾ ಎಂದರೆ ಎಲ್ಲಿಗೆ ಎಂದು ಕೇಳದೇ ಹೊರಟು ಬಿಡುವ ಆಸಾಮಿ ಅವನು.

Image

“ಭಾರತ ಬಿಟ್ಟು ತೊಲಗಿ": ಆಗಸ್ಟ್ ೧೯೪೨ರ ಕ್ರಾಂತಿ ಕಹಳೆ

Submitted by addoor on Thu, 08/13/2020 - 16:32

"ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ" ಎಂಬ ಮಹಾತ್ಮಾ ಗಾಂಧಿಯವರ ಘೋಷಣೆ, ೮ ಆಗಸ್ಟ್ ೧೯೪೨ರಂದು ಭಾರತದ ಉದ್ದಗಲದಲ್ಲಿ ವಿದ್ಯುತ್ ಸಂಚಾರ ಮೂಡಿಸಿತು. ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸಲೇ ಬೇಕೆಂದು ಕೋಟಿಗಟ್ಟಲೆ ಭಾರತೀಯರು ಸಂಕಲ್ಪ ತೊಡಲು ಅದು ಕಾರಣವಾಯಿತು.

ಅಲ್ಲಿಯ ವರೆಗೆ, ಭಾರತೀಯರಿಗೆ ಆಡಳಿತದಲ್ಲಿ ಭಾಗಶಃ ಸ್ವಾತಂತ್ರ್ಯ ನೀಡುವ ಪ್ರಸ್ತಾಪಗಳನ್ನು ಚರ್ಚಿಸಲಾಗುತ್ತಿತ್ತು. ಆದರೆ, “ಕ್ವಿಟ್ ಇಂಡಿಯಾ" ಅಥವಾ “ಭಾರತ್ ಛೋಡೋ” ಆಂದೋಲನ ಭಾರತೀಯರಿಗೆ ಬೇಕಾದ್ದು ಸಂಪೂರ್ಣ ಸ್ವಾತಂತ್ರ್ಯ ಎಂಬುದನ್ನು ಇಡೀ ಜಗತ್ತಿಗೆ ಘೋಷಿಸಿ, ೧೫ ಆಗಸ್ಟ್ ೧೯೪೭ರಂದು ಭಾರತ ಸ್ವತಂತ್ರವಾಗಲು ಕಾರಣವಾಯಿತು.  

Image

ಕಲಾಚಿಯ ನಿದ್ರಾನಗರಿಯ ಬಗ್ಗೆ ನಿಮಗೆ ಗೊತ್ತೇ?

Submitted by Ashwin Rao K P on Thu, 08/13/2020 - 12:25

ದಿನವಿಡೀ ಶ್ರಮ ವಹಿಸಿ ದುಡಿದು ಮನೆಗೆ ಮರಳುವ ನೀವು ಸುಖವಾದ ನಿದ್ರೆಯ ಆಶೆಯಲ್ಲಿರುತ್ತೀರಿ. ಆದರೆ ನೀವು ಹಾಸಿಗೆಯಲ್ಲಿ ಮಲಗಿದಾಗ ಎಷ್ಟು ಸಮಯವಾದರೂ ನಿದ್ರಾದೇವಿ ನಿಮ್ಮನ್ನು ಆವರಿಸದೇ ಇದ್ದಾಗ, ಇಡೀ ರಾತ್ರಿ ಹೊರಳಾಡಿ ಹಾಗೂ ಹೀಗೂ ಬೆಳಿಗ್ಗೆ ಆದಾಗ ನಿಮ್ಮ ದೇಹದ ಚೈತನ್ಯ ಮಾಯವಾಗಿರುತ್ತದೆ. ದಣಿದ ದೇಹಕ್ಕೆ ನಿದ್ರೆ ಅತ್ಯವಶ್ಯಕ. ವಯಸ್ಕರಿಗೆ ಕನಿಷ್ಟ ೬ ಗಂಟೆ ನಿದ್ರೆ ಅಗತ್ಯ ಎನ್ನುತ್ತದೆ ವೈದ್ಯಶಾಸ್ತ್ರ. ನಿದ್ರೆಯೇ ಬಾರದೇ ನಿದ್ರಾ ಮಾತ್ರೆಗೆ, ಕುಡಿತಕ್ಕೆ ಶರಣಾದವರ ಸಂಖ್ಯೆ ಕಮ್ಮಿಯೇನಿಲ್ಲ. ಹಲವು ಮಂದಿಗೆ ರಾತ್ರಿ ಮದ್ಯ ಕುಡಿಯದೇ ನಿದ್ರೆ ಬರುವುದೇ ಇಲ್ಲ. ಇದು ಒಂದು ಚಟವಾಗಿ ಮಾರ್ಪಟ್ಟಿರುತ್ತದೆ. ನಮಗೆ ನೆಮ್ಮದಿ ನೀಡುವ ನಿದ್ರೆಯೇ ಸಮಸ್ಯೆಯಾದರೆ? ಈ ಬಗ್ಗೆ ನೀವು ಯೋಚಿಸಿರಲಿಕ್ಕಿಲ್ಲ.

Image