ಇತ್ತೀಚೆಗೆ ಸೇರಿಸಿದ ಪುಟಗಳು

 • ಕೋಳಿಮರಿಗಳು ಮತ್ತು ಕುತಂತ್ರಿ ನರಿ
  addoor

  ತೋಟದ ಕೋಳಿಗೂಡಿನಲ್ಲಿ ತಾಯಿಕೋಳಿ ಮತ್ತು ಕೋಳಿಮರಿಗಳು ವಾಸ ಮಾಡುತ್ತಿದ್ದವು. ತಾಯಿಕೋಳಿ ಅಥವಾ ತಾವೇ ಹುಡುಕಿದ ಆಹಾರವನ್ನು ಪಾಲು ಮಾಡಿಕೊಂಡು ತಿನ್ನುತ್ತಿದ್ದವು. ಅವು ಒಂದರೊಡನೆ ಇನ್ನೊಂದು ಅನ್ಯೋನ್ಯವಾಗಿದ್ದವು.

  ಅಲ್ಲೇ ಹತ್ತಿರದ ಮರದ ಕೆಳಗಿದ್ದ ಗುಹೆಯಲ್ಲೊಂದು ಮೋಸಗಾರ ನರಿ ವಾಸ ಮಾಡುತ್ತಿತ್ತು. ಈ ಕೋಳಿಮರಿಗಳನ್ನು ಕಂಡಾಗಲೆಲ್ಲ ನರಿಗೆ ಇದೊಂದೇ ಯೋಚನೆ: ‘ಓ, ಇವು ನನ್ನ ಊಟಕ್ಕೆ ಸಿಗುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು! ಎಳೆ ತಾಯಿಕೋಳಿಯ ಮಾಂಸ ಒಳ್ಳೆಯ ಭೋಜನವಂತೆ.”

  ಅದೊಂದು ದಿನ ಬೆಳಗ್ಗೆ ಕೋಳಿಮರಿಗಳಿಗೆ ಎಚ್ಚರವಾದಾಗ ಕೋಳಿಗೂಡಿನಲ್ಲಿ ತಾಯಿಕೋಳಿ ಕಾಣಿಸಲಿಲ್ಲ. ಆಹಾರ…

  ಮುಂದೆ ಓದಿ...
 • ಹನಿ ನೀರಾವರಿ – ರೈತನ ಐಡಿಯಾ
  addoor

  ಸುಡು ಬೇಸಗೆಯ ಉರಿಬಿಸಿಲಿಗೆ ಕೆರೆಬಾವಿಗಳೆಲ್ಲ ಬತ್ತುತ್ತವೆ. ಅಲ್ಲಿಯ ವರೆಗೆ ಜತನದಿಂದ ಬೆಳೆಸಿದ ಗಿಡಮರಬಳ್ಳಿಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದೇ ರೈತರ ಚಿಂತೆ. ಬಾವಿ ಅಥವಾ ನೀರಿನಾಸರೆಯಲ್ಲಿರುವ ಚೂರುಪಾರು ನೀರನ್ನು ಹನಿ ನೀರಾವರಿಯಿಂದ ನಾಲ್ಕು ಪಟ್ಟು ಹೆಚ್ಚು ಜಮೀನಿಗೆ ಎರೆಯಬಹುದು. ಆದರೆ, ಅದಕ್ಕೆ ಹೆಕ್ಟೇರಿಗೆ ಒಂದು ಲಕ್ಷದಿಂದ ಒಂದೂವರೆ ಲಕ್ಷ ರೂಪಾಯಿ ವೆಚ್ಚವಾದೀತು.
  “ಇದು ತನ್ನಿಂದಾಗದು” ಎಂದು ಹತಾಶರಾಗಿದ್ದ ರೈತ ಮಧ್ಯಪ್ರದೇಶದ ಜಬುವಾ ಜಿಲ್ಲೆಯ ರೋಟಲಾ ಗ್ರಾಮದ ರಮೇಶ್ ಪರ್ಮಾರ್. ಅವರು ಜಬುವಾದಲ್ಲಿ ಒಂದು ಕಾರ್ಯಾಗಾರಕ್ಕೆ ಹಾಜರಾಗಿದ್ದಾಗ, ಪರಿಣತರಿಗೆ ಪ್ರಶ್ನೆ ಕೇಳಿದ್ದರು, “ಕಡಿಮೆ…

  ಮುಂದೆ ಓದಿ...
 • ಡಿಜಿಟಲ್ ಯೋಗಕ್ಷೇಮ - ೩ - ದಿನ ನಿತ್ಯದ ಸ್ಕ್ರೀನ್ ಟೈಮ್
  hpn

  ದಿನ ನಿತ್ಯದ ಸ್ಕ್ರೀನ್ ಟೈಮ್

  ಸಾಮಾನ್ಯವಾಗಿ ಈಗ ಮಾರುಕಟ್ಟೆಗೆ ಬರುತ್ತಿರುವ ಎಲ್ಲ ಗ್ಯಾಜೆಟ್ ಗಳಲ್ಲಿ ನಿಮ್ಮ ದಿನ ನಿತ್ಯದ ಸ್ಕ್ರೀನ್ ಟೈಮ್ ಎಷ್ಟಾಯಿತು ಎಂಬುದರ ಲೆಕ್ಕ ಇಡಬಹುದು. ಅಂದರೆ ನಿಮ್ಮ ಟ್ಯಾಬ್ಲೆಟ್ ಅಥವ ಸ್ಮಾರ್ಟ್ ಫೋನನ್ನು ಎಷ್ಟು ಹೊತ್ತು ದಿಟ್ಟಿಸಿ ನೋಡುತ್ತಿದ್ದಿರಿ ಎಂಬುದರ ಲೆಕ್ಕ. ಮನೆಯಲ್ಲಿ ಮಡದಿ “ನನ್ನ ಮುಖ ನೋಡುವುದಕ್ಕಿಂತ ಹೆಚ್ಚು ನೀವು ಆ ಸ್ಮಾರ್ಟ್ ಫೋನನ್ನು ನೋಡುತ್ತಿರುತ್ತೀರ” ಎಂಬ ಆಪಾದನೆ ಮಾಡಿದರೆ, ಮಡದಿಯ ಮುಖವನ್ನು ನೋಡಿದ ಲೆಕ್ಕ ಗೊತ್ತಿಲ್ಲ, ಆದರೆ ಸ್ಮಾರ್ಟ್ ಫೋನನ್ನು ಎಷ್ಟು ಹೊತ್ತು ಎವೆಯಿಕ್ಕದೆ ನೋಡುತ್ತಿದ್ದಿರಿ ಎಂಬುದರ ಖರೆ ಲೆಕ್ಕ ನಿಮಗೆ ಈಗ ಸಿಗುತ್ತದೆ…

  ಮುಂದೆ ಓದಿ...
 • ಕರಾವಳಿಯಲ್ಲಿ ಯುಗಾದಿ
  addoor

  ಕರ್ನಾಟಕದ ಕರಾವಳಿಯಲ್ಲಿ ಎಪ್ರಿಲ್ ೧೪ರ ಯುಗಾದಿ ಸಂಭ್ರಮದ ಹಬ್ಬ. ತುಳುವರಿಗೆ ಇದು “ಬಿಸು ಹಬ್ಬ" (ತುಳುವಿನಲ್ಲಿ ಬಿಸು ಪರ್ಬ)

  ಸೌರಮಾನ ದಿನಗಣನೆ ಅನುಸಾರ ಹೊಸ ವರುಷದ ಮೊದಲ ದಿನ ಯುಗಾದಿ. ದೇವರಿಗೆ “ಕಣಿ” (ವಿಷು ಕಣಿ) ಸಮರ್ಪಣೆ ಯುಗಾದಿಯ ವಿಶೇಷ. ಕೃಷಿಕರಾದರೆ ತಮ್ಮ ಜಮೀನಿನಲ್ಲಿ ಬೆಳೆದ ಭತ್ತ, ಹೂ, ಹಣ್ಣು, ತರಕಾರಿಗಳನ್ನು ತಂದು ದೇವರಿಗೆ ಅರ್ಪಿಸಿ ಕೈಮುಗಿಯುತ್ತಾರೆ. ಈಗ ನಗರಗಳಲ್ಲಿ ವಿವಿಧ ಧಾನ್ಯ, ಹೂ, ಹಣ್ಣು, ತರಕಾರಿಗಳನ್ನು ಖರೀದಿಸಿ ತಂದು ದೇವರ ಮೂರ್ತಿಯೆದುರು ಇಟ್ಟು ನಮಿಸುತ್ತಾರೆ.

  ಇಲ್ಲಿ ಯುಗಾದಿಯಂದು ಬೆಳಗ್ಗೆ ಎದ್ದೊಡನೆ ಯುಗಾದಿ "ಕಣಿ" ನೋಡಿ, ಕಣ್ತುಂಬಿಸಿಕೊಂಡು ಅದಕ್ಕೆ…

  ಮುಂದೆ ಓದಿ...
 • ಅಪರಾಧ ಮತ್ತು ದಂಡನೆ
  addoor

  (“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.

  ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ…

  ಮುಂದೆ ಓದಿ...
 • ಪುಟ್ಟ ಆಮೆಗೊಂದು ಉದ್ಯೋಗ
  addoor

  ಅಂಚೆಕಚೇರಿಗೆ ಕೆಲವು ಅಂಚೆಯಾಳುಗಳು ಬೇಕಾಗಿದ್ದಾರೆಂಬ ಸುದ್ದಿ ಪುಟ್ಟ ಆಮೆಗೆ ತಿಳಿಯಿತು. “ಓ, ಪತ್ರಗಳ ಬಟವಾಡೆ ಆಸಕ್ತಿಯ ಕೆಲಸ. ನಾನು ಹೋಗಿ ಅರ್ಜಿ ಹಾಕ್ತೇನೆ” ಎಂದು ಹೊರಟಿತು ಪುಟ್ಟ ಆಮೆ.

  ಅಂಚೆ ಕಚೇರಿಗೆ ಪುಟ್ಟ ಆಮೆ ಹೋದಾಗ, ಅಲ್ಲಿ ಅರ್ಜಿ ಹಾಕಲು ಕಾಂಗರೂ ಕೂಡ ಕಾದಿತ್ತು. ಪೋಸ್ಟ್ ಮಾಸ್ಟರ್ ಉಷ್ಟ್ರ ಪಕ್ಷಿ  ಇಬ್ಬರಿಗೂ ಒಂದೊಂದು ಹಸುರು ಟೊಪ್ಪಿ ಕೊಟ್ಟರು. ಪುಟ್ಟ ಆಮೆಯದು ಪುಟ್ಟ ತಲೆ. ಹಾಗಾಗಿ ಅದಕ್ಕೆ ಪುಟ್ಟ ಟೊಪ್ಪಿ - ಅರ್ಧ ಸೇಬು ಹಣ್ಣಿನ ಗಾತ್ರದ್ದು. ಹಸುರು ಟೊಪ್ಪಿ ತಲೆಗಿಟ್ಟ ಪುಟ್ಟ ಆಮೆ ಚಂದ ಕಂಡಿತು.

  ಮರುದಿನ ಬೆಳಗ್ಗೆ ಪುಟ್ಟ ಆಮೆ ಮತ್ತು ಪುಟ್ಟ ಕಾಂಗರೂ ಪತ್ರಗಳ ಬಟವಾಡೆಗೆ…

  ಮುಂದೆ ಓದಿ...
 • ಬೀಜ ಮೊಳೆಯದ ಒಣಜಮೀನಿನಲ್ಲಿ ಹಣ್ಣಿನ ತೋಟ
  addoor

  “ಬಾ, ಬೇಗ ಬಾ, ಒಮ್ಮೆ ಈ ಮಣ್ಣು ನೋಡು” ಎಂದು ಮಡದಿ ಎರ್ರಮ್ಮನನ್ನು ಕೂಗಿ ಕರೆದ ಎನಿಮಲ ಗೋಪಾಲ. ಉರಿಬಿಸಿಲನ್ನೂ ಲೆಕ್ಕಿಸದೆ, ಇನ್ನೊಂದು ಮಾವಿನ ಗಿಡದ ಹತ್ತಿರ ಓಡಿ ಹೋಗಿ, ಅದರ ಬುಡದಿಂದ ಒಂದು ಮುಷ್ಠಿ ಒದ್ದೆ ಮಣ್ಣನ್ನೆತ್ತಿ ಎರ್ರಮ್ಮನಿಗೆ ತೋರಿಸಿದ. ಅವನ ಕಣ್ಣುಗಳಲ್ಲಿ ಅಚ್ಚರಿ, ಧ್ವನಿಯಲ್ಲಿ ರೋಮಾಂಚನ. ಯಾಕೆಂದರೆ ತಾನೊಂದು ಹಣ್ಣಿನ ತೋಟ ಮಾಡಿ, ಸಸಿಗಳಿಗೆ ನೀರು ಹಾಯಿಸುತ್ತೇನೆಂದು ಕನಸಿನಲ್ಲೂ ಕಲ್ಪಿಸಿರದ ಗೋಪಾಲನ ಬರಡು ಜಮೀನಿನಲ್ಲಿ ಇಂದು ನಳನಳಿಸುತ್ತಿವೆ ೧೬೦ ಮಾವಿನ ಸಸಿಗಳು.
  ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿದೆ ಗೋಪಾಲನ ಹಳ್ಳಿ ಮಾದಿಗುಬ. ಮಳೆಗಾಲ ಕಂಡರಿಯದ, ಸರಕಾರದ ನೀರಾವರಿ ಯೋಜನೆಗಳ…

  ಮುಂದೆ ಓದಿ...
 • ಡಿಜಿಟಲ್ ಯೋಗಕ್ಷೇಮ - ೨
  hpn

  ಡಿಜಿಟಲ್ well being ಅಥವಾ ಡಿಜಿಟಲ್ ಯೋಗಕ್ಷೇಮ

  ಮನೆಯಲ್ಲಿ ನಿತ್ಯವೂ ನಮ್ಮಲ್ಲಿ ಜಗಳ ಬರುವುದೇ “ನೀವು ಟ್ವಿಟ್ಟರ್ ನೋಡುವುದನ್ನು ಬಿಟ್ಟು ನನ್ನ ಕೆಲಸ ಮಾಡಿ”, “ನೀನು ಫೇಸ್ಬುಕ್ ನೋಡುವುದನ್ನು ಬಿಟ್ಟು ಕೆಲಸ ಮಾಡು” ಎಂಬ ವಿಷಯಗಳಿಂದಲೇ. ದಿನವಿಡೀ ಕೆಲಸ ಮಾಡಿ ಒಂದಷ್ಟು “ರೆಶ್ಟ್” ತೆಗೆದುಕೊಳ್ಳಲೆಂದೇ ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ನೋಡುವ ಕಾಲ ಇದು. ಕೆಲಸದ ನಡುವೆ “ಬ್ರೇಕ್" ತೆಗೆದುಕೊಳ್ಳುವ ಹುಡುಗರು ವಿಶ್ರಾಂತಿಗೆಂದು ಗೇಮ್ಸ್ ಆಡುತ್ತ ಕುಳಿತುಕೊಳ್ಳುವ ಕಾಲ ಇದು! ಹೀಗಿರುವಾಗ ಮೊಬೈಲ್ ಫೋನುಗಳ, ಗ್ಯಾಜೆಟ್ ಗಳ ಅತಿಯಾದ ಬಳಕೆಯಿಂದ ಆಗುವ…

  ಮುಂದೆ ಓದಿ...
 • “ಪದ್ಮಶ್ರೀ” ರೈತ ರಾಮ್ ಶರಣ್ ವರ್ಮಾರ ವಾರ್ಷಿಕ ಆದಾಯ ರೂ.೪೮ ಲಕ್ಷ!
  addoor

  “ಬಾಳೆ ರಾಜ” ಎಂದು ಪ್ರಖ್ಯಾತರಾಗಿರುವ ರಾಮ್ ಶರಣ್ ವರ್ಮಾ ೨೦೧೯ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಅವರ ಸಾಮ್ರಾಜ್ಯ ಅಂದರೆ ಬಾಳೆ ತೋಟ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ ಸುಮಾರು ೩೦ ಕಿಮೀ ದೂರದಲ್ಲಿ, ಬಾರಬಂಕಿ ಜಿಲ್ಲೆಯ ದೌಲತ್‍ಪುರ ಗ್ರಾಮದಲ್ಲಿದೆ.
  ಅಲ್ಲಿ ಅವರ ಕುಟುಂಬದ ಹಿಂದಿನ ಮೂರು ತಲೆಮಾರುಗಳದ್ದು ಬಡತನದ ಬದುಕು. ಹತ್ತನೆಯ ತರಗತಿಯ ನಂತರ ಶಿಕ್ಷಣ ಮುಂದುವರಿಸುವ ಕನಸು ಕಂಡಿದ್ದರು ರಾಮ್ ಶರಣ್ ವರ್ಮಾ. ಆದರೆ ಕುಟುಂಬದ ಬಡತನದಿಂದಾಗಿ ಅವರೂ ಕೃಷಿಯಲ್ಲಿ ತೊಡಗಬೇಕಾಯಿತು.
  “ಬಾಳೆ ರಾಜ” ಎಂಬ ಹೆಸರಿಗೆ ತಕ್ಕಂತೆ ೧೫೦ ಎಕ್ರೆ ವಿಸ್ತಾರದ ಜಮೀನಿನಲ್ಲಿ ಈಗ ರಾಮ್ ಶರಣ್ ವರ್ಮಾರ (೫೦ ವರುಷ)…

  ಮುಂದೆ ಓದಿ...
 • ದಶಾವತಾರ - ನಾನು ನೋಡಿದ ಹಳೆಯ ಸಿನಿಮಾ
  shreekant.mishrikoti

  ದಶಾವತಾರ ಎಂದರೆ ವಿಷ್ಣುವಿನ ಹತ್ತು ಅವತಾರಗಳು. ಈ ಬಗ್ಗೆ ಸರಿಯಾಗಿ ತಿಳಿಯಲು ಯೂಟ್ಯೂಬ್ನಲ್ಲಿ ಇರುವ ದಶಾವತಾರ ಚಲನಚಿತ್ರವನ್ನು ಇತ್ತೀಚೆಗೆ ನೋಡಿದೆ.

  ವಿಷ್ಣು ದೇವರಿಗೆ ಯಾರೋ ಭೂಮಿಯ ಮೇಲೆ ಹತ್ತು ಜನ್ಮಗಳನ್ನು ಎತ್ತಲು ಶಾಪ ಕೊಡುತ್ತಾರೆ. ಅವನು ಯಾವುದೋ ಕಾರಣಕ್ಕೆ ತನ್ನ ವೈಕುಂಠದ ಬಾಗಿಲು ಕಾಯುವ ಜಯ ವಿಜಯ ರ ಮೇಲೆ ಸಿಟ್ಟು ಮಾಡಿಕೊಂಡು ಭೂಮಿಯ ಮೇಲೆ ಜನ್ಮ ಎತ್ತಲು ಶಾಪ ಕೊಡುತ್ತಾನೆ. ಅವರಿಗೆ ಒಂದು ಆಯ್ಕೆಯನ್ನು ಕೊಡುತ್ತಾನೆ. ಶತ್ರುಗಳಾಗಿ ಮೂರುಜನ್ಮ ಅಥವಾ ಭಕ್ತರಾಗಿ ಹತ್ತು ಜನ್ಮ. ಅವರು ಬೇಗನೆ ವಿಷ್ಣುವಿನ ಸಾನ್ನಿಧ್ಯವನ್ನು ಬಯಸಿ ಶತ್ರುಗಳಾಗಿ ಮೂರು ಜನ್ಮಗಳನ್ನು ಎತ್ತಲು ತಯಾರು ಆಗುತ್ತಾರೆ.…

  ಮುಂದೆ ಓದಿ...