ಇತ್ತೀಚೆಗೆ ಸೇರಿಸಿದ ಪುಟಗಳು

  • ಚಿಪ್ಕೋ ಆಂದೋಲನ: ಹಿಮಾಲಯದ ಅರಣ್ಯ ರಕ್ಷಣೆಗೆ ಜನಾಂದೋಲನ
    addoor

    ೨೦೧೮ರಲ್ಲಿ ಕೇರಳದಲ್ಲಿ ಮತ್ತು ಕರ್ನಾಟಕದ ಕೊಡಗಿನಲ್ಲಿ ಮಹಾಮಳೆ ಹಾಗೂ ಮಹಾನೆರೆಯಿಂದಾದ ಜೀವಹಾನಿ ಮತ್ತು ಸೊತ್ತು ಹಾನಿಯ ನೆನಪು ಮಾಸುವ ಮುನ್ನ ೨೦೧೯ರಲ್ಲಿ ಪುನಃ ಅಂತಹದೇ ಅನಾಹುತ. ಇದಕ್ಕೆ ಮುಖ್ಯ ಕಾರಣ ಪಶ್ಚಿಮಘಟ್ಟಗಳಲ್ಲಿ ಕಾಡಿನ ಮಹಾನಾಶ ಎಂಬುದನ್ನು ತಿಳಿಯಲು ಯಾವುದೇ ಸಂಶೋಧನೆ ಅಗತ್ಯವಿಲ್ಲ.
    ಈ ಸಂದರ್ಭದಲ್ಲಿ, ಐದಾರು ದಶಕಗಳ ಮುಂಚೆಯೇ ಹಿಮಾಲಯ ಪರ್ವತ ಶ್ರೇಣಿಯ ಉದ್ದಕ್ಕೂ ಸುಂದರಲಾಲ್ ಬಹುಗುಣ “ಚಿಪ್ಕೋ” (ಮರಗಳನ್ನು ರಕ್ಷಿಸಲಿಕ್ಕಾಗಿ ಅಪ್ಪಿಕೋ) ಆಂದೋಲನದ ಮೂಲಕ ಅರಣ್ಯ ರಕ್ಷಣೆ ಮಾಡಿದ್ದನ್ನು ನೆನಪು ಮಾಡಿಕೊಳ್ಳುವುದು ಅಗತ್ಯ.
    ಆ ಜಗತ್ಪ್ರಸಿದ್ಧ ಆಂದೋಲನ ಹಿಮಾಲಯದ ತಪ್ಪಲಿನ ಹಳ್ಳಿಹಳ್ಳಿಗೆ…

    ಮುಂದೆ ಓದಿ...
  • ಜಲಜಾಗೃತಿಗೆ ಹಳ್ಳಿಗೊಬ್ಬ ಸಾಕು
    addoor

    "ನಿನ್ನದು ಕೆರೆ ಹತ್ತಿರದ ಜಮೀನು. ಬೋರ್‍ವೆಲ್ ಹಾಕ್ಸು. ಬಾಳೆ ಮತ್ತು ಟೊಮೆಟೊ ಬೆಳೆಸಿ, ಚೆನ್ನಾಗಿ ದುಡ್ಡು ಮಾಡು" ಎಂದು ತನಗೆ ಹಳ್ಳಿಯಲ್ಲಿ ಹಲವರು ಉಪದೇಶ ಮಾಡಿದ್ದನ್ನು ನೆನೆಯುತ್ತಾರೆ ಬಿ. ಎಲ್. ಶೋಬನಬಾಬು. ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಪಾಸಾದದ್ದು ೧೯೮೮ರಲ್ಲಿ. ಸಂಬಳದ ಕೆಲಸಕ್ಕೆ ಹೋಗಬೇಕೆಂದು ಅವರಿಗೆ ಅನಿಸಲಿಲ್ಲ. ’ತಂದೆ ಲಕ್ಷ್ಮಣ ಶೆಟ್ಟಿಯವರ ಪಾಲಿಗೆ ಬಂದ ೧೨ ಎಕ್ರೆ ಜಮೀನಿದೆ. ಅಲ್ಲೇ ಕೆಲಸ ಮಾಡಿದರಾಯಿತು’ ಎಂಬ ಯೋಚನೆಯಿಂದ ತನ್ನ ಹಳ್ಳಿ ಎಸ್. ಬಿದರೆಗೆ ಮರಳಿದರು.

    ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಹೋಬಳಿಯ ಹಳ್ಳಿ ಎಸ್. ಬಿದರೆ. ಅಲ್ಲಿಗೆ ತಲಪಲು…

    ಮುಂದೆ ಓದಿ...
  • ಅನ್ನದ ಕೃಷಿಗೆ ಸಾಂಘಿಕ ಸ್ಪರ್ಶ
    Na. Karantha Peraje

    “ಭತ್ತ ಬೆಳೆಯುವವರ ಸಂಖ್ಯೆ ತೀರಾ ತೀರಾ ಕಡಿಮೆ. ಮನೆ ತುಂಬಿಸುವಂತಹ ಧಾರ್ಮಿಕ ವಿಧಿಗಳನ್ನು ಪ್ರತಿ ವರುಷವೂ ಚಾಚೂ ತಪ್ಪದೆ ಮಾಡ್ತಾ ಇರ್ತೇವೆ. ಮನೆ ತುಂಬಿಸಲು ನಮ್ಮ ಗದ್ದೆಯ ತೆನೆಗಳೇ ಸಿಕ್ಕರೆ ಎಷ್ಟೊಂದು ಅಂದ, ಚಂದ. ನಾವು ಯಾರದ್ದೋ ಗದ್ದೆಯಿಂದ ತೆನೆಗಳನ್ನು ತಂದು ನಮ್ಮ ಮನೆಯನ್ನು ತುಂಬಿಸಿಕೊಳ್ಳುತ್ತೇವೆ. ಖುಷಿ ಪಡುತ್ತೇವೆ. ಯೋಚಿಸಿ ನೋಡಿ, ಇದರಲ್ಲಿ ನಿಜವಾಗಿಯೂ ಖುಷಿ ಇದೆಯಾ? ಬದಲಿಗೆ ಮನೆ ತುಂಬಿಸಲೆಂದೇ ಅಂಗಳದ ಬದಿಯಲ್ಲಿ ಸ್ವಲ್ಪ ಭತ್ತ ಬೆಳೆಯಿರಿ,” ಎನ್ನುವ ಕಿವಿಮಾತನ್ನು ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕ ಅಮೈ ದೇವರಾವ್ ಹೇಳುತ್ತಾರೆ. ಇವರಲ್ಲಿ ನೂರೈವತ್ತು ಭತ್ತದ ತಳಿಗಳು ಸಂರಕ್ಷಣೆಯಾಗತ್ತಿವೆ.…

    ಮುಂದೆ ಓದಿ...
  • ಮಂಗಳೂರಿನ ಮಣ್ಣಗುಡ್ಡೆ ಗುರ್ಜಿ – ೧೫೦ನೇ ವರುಷದ ಸಂಭ್ರಮ
    addoor

    ಮಂಗಳೂರಿನ ಜನಪ್ರಿಯ ಉತ್ಸವ “ಮಣ್ಣಗುಡ್ಡೆ ಗುರ್ಜಿ”. ಇದರ ೧೫೦ನೇ ವರುಷದ ಕಾರ್ಯಕ್ರಮಗಳು ಅದ್ದೂರಿಯಾಗಿ ಮುಕ್ತಾಯವಾದದ್ದು ೨೪ ನವಂಬರ್ ೨೦೧೯ರ ಭಾನುವಾರದಂದು. ಆ ದಿನ ಸಂಜೆಯಿಂದ ಮಣ್ಣಗುಡ್ಡೆ ಪರಿಸರದಲ್ಲಿ ಜನಸಾಗರ.
    ಗುರ್ಜಿಯ ೧೫೦ನೇ ವರ್ಷಾಚರಣೆ ಅಂಗವಾಗಿ, ಯಕ್ಷಗಾನ, ತಾಳಮದ್ದಲೆ, ಹರಿಕಥೆ, ಸಂಗೀತ ಕಚೇರಿ, ಉಚಿತ ಆರೊಗ್ಯ ಶಿಬಿರ, ಆಯುರ್ವೇದ ಮತ್ತು ಮಳೆನೀರು ಕೊಯ್ಲು ಬಗ್ಗೆ ಉಪನ್ಯಾಸಗಳು, ಕ್ರಿಕೆಟ್ ಪಂದ್ಯಾಟ , ಕ್ರೀಡೋತ್ಸವ ಇತ್ಯಾದಿ ಜನೋಪಯೋಗಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜನವರಿ ೨೦೧೯ರಿಂದ ತಿಂಗಳಿಗೊಂದರಂತೆ ಸಂಭ್ರಮದಿಂದ ಜರಗಿಸಲಾಯಿತು.
    ಮಣ್ಣಗುಡ್ಡೆ ಮತ್ತು ಬಲ್ಲಾಳಬಾಗ್ ಎಂಬ ಎರಡು…

    ಮುಂದೆ ಓದಿ...
  • ನನ್ನೊಬ್ಬನಿಂದ ಏನೆಲ್ಲ ಆದೀತು!
    addoor

    ಸಮುದ್ರ ತೀರದಲ್ಲಿ ಒಬ್ಬ ವ್ಯಕ್ತಿ ನಡೆಯುತ್ತಿದ್ದ. ಆಗಾಗ ಬಗ್ಗಿ, ಹೊಯಿಗೆಯಲ್ಲಿ (ಮರಳಿನಲ್ಲಿ) ಸಿಲುಕಿದ್ದ ನಕ್ಷತ್ರ ಮೀನುಗಳನ್ನು ಹೆಕ್ಕಿ, ಸಮುದ್ರದ ನೀರಿಗೆ ಎಸೆಯುತ್ತಿದ್ದ.
    ಅವನಿಗೆದುರಾಗಿ ನಡೆದು ಬರುತ್ತಿದ್ದ ಇನ್ನೊಬ್ಬ ವ್ಯಕ್ತಿ. ಮೊದಲನೆಯ ವ್ಯಕ್ತಿ ಹತ್ತಿರ ಬಂದಾಗ ಎರಡನೆಯಾತ ಕೇಳಿದ, “ಅದೇನು ಮಾಡುತ್ತಿದ್ದಿ?” ಮೊದಲನೆಯಾತ ಮುಗುಳ್ನಕ್ಕು ತನ್ನ ಕೆಲಸ ಮುಂದುವರಿಸಿದ. ಆತನನ್ನು ಹಿಂಬಾಲಿಸಿದ ಎರಡನೆಯಾತ ಪುನಃ ಅದೇ ಪ್ರಶ್ನೆ ಕೇಳಿದ. ಈಗ ಮೊದಲನೇ ವ್ಯಕ್ತಿ ಉತ್ತರಿಸಿದ: “ಕಾಣುತ್ತಿಲ್ಲವೇ? ನಕ್ಷತ್ರ ಮೀನುಗಳನ್ನು ಹೆಕ್ಕಿಹೆಕ್ಕಿ ನೀರಿಗೆ ಎಸೆಯುತ್ತಿದ್ದೇನೆ – ಅವು ಬದುಕಿಕೊಳ್ಳಲಿ ಎಂದು.”

    ಮುಂದೆ ಓದಿ...
  • ಹಾರೋಗೇರಿ ಬಾಂದಾರ - ಗ್ರಾಮೀಣ ಸಮುದಾಯದಿಂದ ಜಲಸಂರಕ್ಷಣೆಯ ಮಾದರಿ
    addoor

    ಹಾರೋಗೇರಿ ಬಾಂದಾರದ ಮೇಲೆ ನಿಂತಿದ್ದೆವು. ಅಂದು (೧೮ ಜೂನ್ ೨೦೦೯) ಹುಬ್ಬಳ್ಳಿಯಿಂದ ಹೊರಟು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಅರ್ಧ ತಾಸಿನಲ್ಲಿ ವರೂರು ಮುಟ್ಟಿದ್ದೆವು. ಅಲ್ಲಿಂದ ಬಲಕ್ಕೆ ತಿರುಗಿ, ೬ ಕಿಮೀ ದೂರದ ಸೂರಶೆಟ್ಟಿಕೊಪ್ಪ ಹಾದು ಹಾರೋಗೇರಿ ತಲಪಿದ್ದೆವು. ಕಳೆದೆರಡು ವಾರಗಳಲ್ಲಿ ಬಿದ್ದ ಮಳೆಯ ನೀರು ಬಾಂದಾರದಲ್ಲಿ ಸಂಗ್ರಹವಾಗಿತ್ತು. ಸುತ್ತಲಿನ ಗುಡ್ಡಗಳಲ್ಲಿ ಹಸುರು ಚಿಗುರು ನಗುತ್ತಿತ್ತು.

    ಕರ್ನಾಟಕದಲ್ಲಿ ಇಂತಹ ಹಲವು ಬಾಂದಾರಗಳಿವೆ. ಇದರದ್ದೇನು ವಿಶೇಷ? ಇದು ಹಳ್ಳಿಗರು ೩ ತಿಂಗಳ ಶ್ರಮದಾನದಿಂದ ಕಟ್ಟಿದ ಬಾಂದಾರ. ಸರ್ವೋದಯ ಮಹಾಸಂಘದ ಅಧ್ಯಕ್ಷರಾದ ಬಸವಣ್ಣಿಪ್ಪ ಅಂಗಡಿ ಶ್ರಮದಾನದ…

    ಮುಂದೆ ಓದಿ...
  • ಈರೋಡಿನ ಅರಿಶಿನಕ್ಕೆ ಭೌಗೋಳಿಕ ಸೂಚಕದ ಹೆಗ್ಗಳಿಕೆ
    addoor

    ಅಲ್ಲಿ ಮೇಜುಗಳ ಸಾಲುಸಾಲುಗಳಲ್ಲಿ ಅರಿಶಿನದ ಗೆಡ್ಡೆಗಳು. ಸುತ್ತಲೂ ಅರಿಶಿನದ ಘಮ. ಮಾರಾಟಕ್ಕಿಟ್ಟ ಅರಿಶಿನವನ್ನು ಪರಿಶೀಲಿಸುತ್ತಿರುವ ಜನರು. ಇದು, ಪೂರ್ವಾಹ್ನ ೧೧ ಗಂಟೆಯ ಹೊತ್ತಿಗೆ ತಮಿಳ್ನಾಡಿನ ಈರೋಡಿನ ನಸಿಯನೂರಿನ ವಿಶಾಲ ಅರಿಶಿನ ಮಾರುಕಟ್ಟೆ ಪ್ರಾಂಗಣದ ನೋಟ.
    ಈಗ ೬೫ನೇ ವರುಷಕ್ಕೆ ಕಾಲಿಟ್ಟಿರುವ ಅಲ್ಲಿನ ಅರಿಶಿನ ವರ್ತಕರ ಸಂಘಟನೆಯ ಸದಸ್ಯರ ಸಂಖ್ಯೆ ೩೫೭. ಈರೋಡಿನಿಂದ ೯ ಕಿಮೀ ದೂರದಲ್ಲಿರುವ ವಿಸ್ತಾರವಾದ ಮಾರುಕಟ್ಟೆ ಪ್ರಾಂಗಣವನ್ನು ಮಂಜಲ್ ಮಾನಗರಮ್ (ಅರಿಶಿನದ ರಾಜಧಾನಿ) ಎಂದು ಕರೆಯಲಾಗುತ್ತದೆ. ವರುಷವಿಡೀ ತೆರೆದಿರುವ ಆ ಮಾರುಕಟ್ಟೆಯಲ್ಲಿ ಶೇಖರಿಸಿಡಲಾಗಿದೆ ತಮಿಳ್ನಾಡು ಮತ್ತು ಪಕ್ಕದ ರಾಜ್ಯಗಳಿಂದ…

    ಮುಂದೆ ಓದಿ...
  • ಎರಡು ವರುಷ ಮುಂಚೇನೇ ಮಾಡ್ಬೇಕಿತ್ತು !
    addoor

    "ಮುಂಚೆ ನಾವೆಲ್ಲ ಹೊಲದಲ್ಲಿ ಅಲ್ಲಲ್ಲಿ ಬದುಗಳನ್ನ ಮಾಡ್ತಿದ್ವಿ. ಒಂದೆಕ್ರೆಗೆ ನಾಲ್ಕು ಬದು ಆದ್ರೂ ಇರೋದು. ಈವಾಗ ನಾವೆಲ್ಲ ಸೋಮಾರಿಗಳಾಗಿದ್ದೀವಿ. ನಮ್ ಹೊಲ ಉಳುಮೆಗೆ ಎತ್ತುಗಳೇ ಇಲ್ಲ ಅನ್ನೋ ಹಾಗಾಗಿದೆ. ಆದರೆ ಉಳುಮೆ ಮಾಡ್ಬೇಕಲ್ಲ? ಅದಕ್ಕೆ ಟ್ರಾಕ್ಟರ್ ತರಿಸ್ತೀವಿ. ಟ್ರಾಕ್ಟರ್‍ನೋನು ಉಳುಮೆ ಮಾಡ್ಬೇಕಾರೆ ಈ ಬದುಗಳು ಅಡ್ಡ ಬರ್ತವೆ. ಅದಕ್ಕೆ ಬದುಗಳ್‍ನೆಲ್ಲ ಕಿತ್ ಹಾಕ್ತೀವಿ. ಹಿಂಗಾಗಿ ಈಗ ಒಂದೆಕ್ರೆಯೊಳ್ಗೆ ಒಂದ್ ಬದೂನೂ ಇರಲ್ಲ. ಅಡ್ಡ ಮಳೆ ಬಂದ್ರೆ ನೀರು ಹಂಗೇ ಕೊಚ್‍ಕೊಂಡು ಹೋಗ್‍ತೈತೆ. ಹಿಂಗಾದ್ರೆ ನಮ್ ಹೊಲದಾಗೆ ನೀರಿಂಗೋದು ಹೆಂಗೆ?" ಎಂದು ಲಕ್ಯದ ಹಿರಿಯರಾದ ಮರಿಗೌಡರು ಪ್ರಶ್ನಿಸಿದಾಗ ಅಲ್ಲಿ ಮೌನ…

    ಮುಂದೆ ಓದಿ...
  • ನಾಲಗೆ ಗೆಲ್ಲಬಲ್ಲ ಪುಲಾಸಾನ್
    Na. Karantha Peraje

    ಉಜಿರೆ ಎಸ್.ಡಿ.ಎಂ.ಕಾಲೇಜಿನ ಉಪ ಪ್ರಾಂಶುಪಾಲ ಕೇಶವ ಟಿ.ಎನ್.ಫೋನಿಸಿದ್ದರು -“ಗಿಡ ತುಂಬಾ ಪುಲಾಸಾನ್ ಹಣ್ಣಿದೆ. ತಕ್ಷಣ ಬಂದರೆ ನೋಡಲು ಸಿಗಬಹುದು.”     ಜುಲೈ ಮಧ್ಯಭಾಗ ಇರಬೇಕು, ಅಂಗಳ ಮುಂದಿರುವ ಪುಲಾಸಾನ್ ಗಿಡದಲ್ಲಿ ತೊನೆಯುವ ಹಣ್ಣುಗಳು. ಬಹುಶಃ ಒಂದೆರಡು ಕೊಯಿಲಿನಲ್ಲಿ ಪೂರ್ತಿ ಖಾಲಿಯಾಗುವ ಹಂತಕ್ಕೆ ತಲುಪಿತ್ತು. ಕಪ್ಪು ಮಿಶ್ರಿತ ಕಡು ನೇರಳೆ ವರ್ಣದ ಹಣ್ಣುಗಳ ನೋಟ ಸೆಳೆಯುವಂತಹುದಲ್ಲವಾದರೂ ಆಕರ್ಷಕ.  
        ಇದರದು ಮಲೇಶ್ಯಾ ಮೂಲ. ರಂಬುಟಾನ್ ಹಣ್ಣಿನ ಸಂಬಂಧಿ. ಹಣ್ಣಿನ ಹೊರಮೈ ದಪ್ಪ. ಮೇ-ಜುಲೈ ಹಣ್ಣು ಬಿಡುವ ಋತು. ರಂಬುಟಾನ್ ಹಣ್ಣಿಗಿಂತ ಸಿಹಿ. ಗುಳದ ಗಾತ್ರ ಸಣ್ಣ.  ಒಂದು ಹಣ್ಣು ಸುಮಾರು 40-60…

    ಮುಂದೆ ಓದಿ...
  • ಬಂಪರ್ ಅಲಸಂಡೆ ಬೆಳೆ: ಯುವ ಕೃಷಿಕರಿಬ್ಬರ ಸಾಧನೆ
    addoor

    ಕೇರಳದ ವಯನಾಡಿನ ಮೀನನ್‍ಗಾಡಿ ಪಂಚಾಯತಿನ ಮೈಲಂಬಾಡಿ ಗ್ರಾಮದ ಬಿನು ಮತ್ತು ಬೆನ್ನಿ ಬಾಲ್ಯಕಾಲದ ಗೆಳೆಯರು. ಇಬ್ಬರೂ ಕೃಷಿ ಕುಟುಂಬದವರು.
    ವಿದ್ಯಾಭ್ಯಾಸ ಮುಗಿಸಿದ ನಂತರ, ಅವರಿಬ್ಬರೂ ಕೃಷಿ ಬದುಕಿಗೆ ಹೆಜ್ಜೆಯಿಡಲಿಲ್ಲ. ಬದಲಾಗಿ, ಬಿನು ಚಿನ್ನದೊಡವೆ ಮಳಿಗೆಯಲ್ಲಿ ದುಡಿದರು. ಬೆನ್ನಿ ಸ್ವಂತ ಟ್ಯಾಕ್ಸಿ ಸೇವೆ ಶುರು ಮಾಡಿದರು. ವರುಷಗಳು ಉರುಳಿದವು. ಇಬ್ಬರಿಗೂ ನೆಮ್ಮದಿಯಿಲ್ಲ.
    “ದಿನಕ್ಕೆ ಹನ್ನೆರಡು ಗಂಟೆಗಿಂತ ಜಾಸ್ತಿ ದುಡಿದರೂ, ರಜೆ ಪಡೆಯುವುದೇ ಅಸಾಧ್ಯವಾಗಿತ್ತು. ಏಕತಾನದ ಬದುಕಿನಿಂದ ಬೇಸತ್ತಿದ್ದೆ. ನನ್ನ ಹಳ್ಳಿಗೆ ಹಿಂತಿರುಗಬೇಕೆಂದು ಯೋಚಿಸುತ್ತಿದ್ದೆ” ಎಂದು ನೆನಪು ಮಾಡಿಕೊಳ್ಳುತ್ತಾರೆ ಬಿನು.…

    ಮುಂದೆ ಓದಿ...