ಇತ್ತೀಚೆಗೆ ಸೇರಿಸಿದ ಪುಟಗಳು

 • ಶಾಲಾಮಕ್ಕಳಿಂದ ಜಲಜಾಗೃತಿ
  addoor

  "ಅದು ನನ್ನ ನೀರಿನ ಟ್ಯಾಂಕ್. ಅದರಿಂದ ಏನು ಬೇಕಾದರೂ ಮಾಡಿಕೊಳ್ತೇನೆ. ಅದನ್ನು ಕೇಳಲಿಕ್ಕೆ ನೀವ್ಯಾರು?"

  "ನಾನು ಯಾರಂತ ಗೊತ್ತುಂಟಾ? ನನ್ನ ಟ್ಯಾಂಕ್ ಮೊದಲು ಭರ್ತಿ ಆಗಬೇಕು. ಇಲ್ಲಾಂದ್ರೆ ನಿಮ್ಮ ಟ್ಯಾಂಕಿಗೆ ಬೆಂಕಿ ಕೊಡ್ತೇನೆ."

  ಇದನ್ನು ಹೇಳಿದವರು ಯಾರು? ದೇಶದ ರಾಜಧಾನಿ ನವದೆಹಲಿಯ ಪ್ರಧಾನ ಪ್ರದೇಶವಾದ ವಸಂತಕುಂಜದ ನಿವಾಸಿಗಳು.

  ಅವರು ಈ ಮಾತುಗಳನ್ನು ಹೇಳಿದ್ದು ಯಾರಿಗೆ? "ನಿಮ್ಮ ಟ್ಯಾಂಕಿನಿಂದ ನೀರು ಉಕ್ಕಿ ಹರಿದು ಪೋಲಾಗುತ್ತಿದೆ. ನಿಮ್ಮ ನೀರಿನ ಪಂಪ್ ಬಂದ್ ಮಾಡಿ" ಎಂದು ವಿನಂತಿಸಿದ ಶಾಲಾಮಕ್ಕಳಿಗೆ.

  ಇದೆಲ್ಲದರ ಹಿನ್ನೆಲೆ ಏನು? ವಸಂತಕುಂಜ ಪ್ರದೇಶದ ನಿವಾಸಿಗಳಿಗೆ ಹಲವು…

  ಮುಂದೆ ಓದಿ...
 • ಹೊಸ ವರುಷಕ್ಕಾಗಿ ಐದು ಸಂಕಲ್ಪ
  addoor

  ಹೊಸ ವರುಷ ಮತ್ತೆಮತ್ತೆ ಬರುತ್ತದೆ. ಅದು ಕಾಲ ನಿಯಮ. ಹೊಸ ವರುಷ ಬಂದಾಗ ಹೊಸತನದಿಂದ ಮುನ್ನಡೆಯುದಷ್ಟೇ ನಾವು ಮಾಡಬಹುದಾದ ಕೆಲಸ.
  ಅದಕ್ಕಾಗಿ "ಹೊಸ ವರುಷದ ಸಂಕಲ್ಪ”ಗಳನ್ನು ಮಾಡುವ ಹುಮ್ಮಸ್ಸು ಹಲವರಿಗೆ. ಇದು ಒಳ್ಳೆಯ ಕೆಲಸ. ಆದರೆ, ಈ ಸಂಕಲ್ಪಗಳು ಮಳೆಗಾಲದ ಮಿಂಚಿನಂತಾಗಬಾರದು ಅಷ್ಟೇ. ಸಂಕಲ್ಪಗಳನ್ನು ಸಾಧಿಸುವ ಛಲ ಬೆಳೆಸಿಕೊಳ್ಳೋಣ.
  ಎಲ್ಲರೂ ಸಾಧಿಸಬಹುದಾದ ಐದು ಸಂಕಲ್ಪಗಳನ್ನು ಪರಿಶೀಲಿಸೋಣ.
  ೧)ಮನೆಯಿಂದ ಹೋಗುವಾಗೆಲ್ಲ ಬಟ್ಟೆ ಚೀಲವೊಂದನ್ನು ಒಯ್ಯುವುದು. ಖರೀದಿಸಿದ ವಸ್ತುಗಳನ್ನೆಲ್ಲ ಮನೆಗೆ ತರಲಿಕ್ಕಾಗಿ ಅದರ ಬಳಕೆ ಮಾಡೋಣ. ಈ ವರೆಗೆ ದಿನಕ್ಕೆ ಸರಾಸರಿ ಒಂದು ಪ್ಲಾಸ್ಟಿಕ್ ಕೈಚೀಲ…

  ಮುಂದೆ ಓದಿ...
 • ಪೆರ್ಡೂರು ಕುಂಬಾರರ ಗುಡಿ ಕೈಗಾರಿಕೆ ಸಂಘದ ಪರಿಸರಸ್ನೇಹಿ ಯೋಜನೆ
  addoor

  ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕಿನ ನಿಷೇಧದಿಂದಾಗಿ, ಕುಂಬಾರಿಕೆಗೆ ದೊಡ್ಡ ಅವಕಾಶವೊಂದು ಒದಗಿ ಬಂದಿದೆ. ಆ ಪ್ಲಾಸ್ಟಿಕಿನಿಂದ ತಯಾರಿಸುವ ನಿತ್ಯ ಬಳಕೆಯ ವಸ್ತುಗಳನ್ನು ಮಣ್ಣಿನಿಂದ ತಯಾರಿಸಿದರೆ, ಪರಿಸರಸ್ನೇಹಿಯಾದ ಈ ವಸ್ತುಗಳಿಗೆ ಬೇಡಿಕೆ ಇದ್ದೇ ಇರುತ್ತದೆ.
  ಈ ಅವಕಾಶ ಬಳಸಿಕೊಳ್ಳಲು ಮುಂದಾಗಿದೆ ಉಡುಪಿ ಹತ್ತಿರದ ಪೆರ್ಡೂರಿನ ಕುಂಬಾರರ ಗುಡಿ ಕೈಗಾರಿಕೆ ಸಂಘ. ಪ್ಲಾಸ್ಟಿಕ್ ಕಪ್‍ಗಳಿಗೆ ಬದಲಿಯಾಗಿ ಮಣ್ಣಿನ ಕಪ್ ತಯಾರಿಸುವುದು ಈ ಸಂಘದ ಸದ್ಯದ ಯೋಜನೆ. ಆದರೆ, ಪ್ಲಾಸ್ಟಿಕ್ ಅಥವಾ ಪೇಪರ್ ಕಪ್‍ನ ಬೆಲೆಯಲ್ಲಿ ಮಣ್ಣಿನ ಕಪ್ ತಯಾರಿಸುವುದು ಸವಾಲಿನ ಕೆಲಸ.
  ಪೆರ್ಡೂರು ಸಂಘದ ನಿಯೋಗ, ಉತ್ತರ ಭಾರತದಲ್ಲಿ…

  ಮುಂದೆ ಓದಿ...
 • ಮಂಗಳೂರಿನ ನೀರಿನ ಬಿಲ್‍ಗಳ "ಸುದ್ದಿ"
  addoor

  ಮಂಗಳೂರು ಮಹಾನಗರಪಾಲಿಕೆಯ ೨೦೦೯-೧೦ರ ಬಜೆಟನ್ನು ೨೮ ಜೂನ್ ೨೦೦೯ರಂದು ಮಂಡಿಸಲಾಯಿತು. ಇದರಲ್ಲಿ ಮಂಗಳೂರಿನ ನೀರು ಬಳಕೆದಾರರಿಗೆ ವಿಧಿಸುವ ನೀರಿನ ಶುಲ್ಕದಿಂದ ಸಂಗ್ರಹವಾಗುವ ಆದಾಯ ರೂಪಾಯಿ ೨೮.೫ ಕೋಟಿ ಎಂದು ಅಂದಾಜಿಸಲಾಗಿದೆ. (ಈ ಸಾಲಿನ ಪಾಲಿಕೆಯ ಒಟ್ಟು ಆದಾಯ ರೂ.೧೭೫.೩೮ ಕೋಟಿ ಮತ್ತು ಒಟ್ಟು ವೆಚ್ಚ ರೂ. ೧೭೩.೯೦ ಕೋಟಿ)

  ನೀರಿನ ಶುಲ್ಕದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾ ಹೋದಂತೆ ಅದರ ವಿವಿಧ ಮುಖಗಳು ತೆರೆದುಕೊಳ್ಳುತ್ತವೆ. ಮಂಗಳೂರು ಮಹಾನಗರಪಾಲಿಕೆ ಪ್ರದೇಶದಲ್ಲಿ ಸುಮಾರು ೫೪,೦೦೦ ನೀರಿನ ಮೀಟರ್‍ಗಳನ್ನು ಅಳವಡಿಸಲಾಗಿದೆ. ಈ ಎಲ್ಲ ನೀರಿನ ಬಳಕೆದಾರರಿಗೆ ಜೂನ್ ೨೦೦೮ರ ವರೆಗೆ ಅರ್ಧ ವಾರ್ಷಿಕ (ಆರು…

  ಮುಂದೆ ಓದಿ...
 • ವಾಹನ – ರೈಲುಗಳಿಂದಾಗುವ ಅಸಹಜ ಸಾವುಗಳ ಇಳಿಕೆಯ ತುರ್ತು
  addoor

  ಸಪ್ಟಂಬರ್ ೨೦೧೪ರಲ್ಲಿ ಕಾಶ್ಮೀರದಲ್ಲಿ ಭೀಕರ ನೆರೆಯಿಂದಾಗಿ ಹಲವರ ಸಾವು. ಅದರಿಂದಾದ ಹಾನಿ ಸಾವಿರಾರು ಕೋಟಿ ರೂಪಾಯಿಗಳೆಂದು ಅಂದಾಜು. ೨೦೧೩ರಲ್ಲಿ ಉತ್ತರಖಂಡದಲ್ಲಿ ಚರಿತ್ರೆಯಲ್ಲೇ ಕಂಡರಿಯದ ಹಠಾತ್ ನೆರೆಯಿಂದಾಗಿ ಸತ್ತವರು ಸುಮಾರು ೫,೦೦೦ ಜನರೆಂದು ಸರಕಾರದಿಂದಲೇ ಘೋಷಣೆ. ೨೦೧೦ರಲ್ಲಿ ಮೇಘಸ್ಫೋಟದಿಂದ ಲೆಹ್‍ನಲ್ಲಿ ಭಾರೀ ಹಾನಿ. ೨೦೧೮ರಲ್ಲಿ ಕೇರಳದಲ್ಲಿ ಶತಮಾನದ ಮಹಾನೆರೆಯಿಂದಾಗಿ ಅಪಾರ ಹಾನಿ. ೨೦೧೮ರ ಆಗಸ್ಟಿನಲ್ಲಿ ಮಹಾಮಳೆಯಿಂದಾಗಿ ಕೊಡಗಿನಲ್ಲಾದ ಅನಾಹುತ ಹಾಗೂ ಜೀವಹಾನಿ ನಮ್ಮ ನೆನಪಿನಿಂದ ಮಾಸಿಲ್ಲ.
  ಇವಲ್ಲದೆ, ಹಲವು ಭೂಕಂಪ ಹಾಗೂ ಬಿರುಗಾಳಿಗಳಿಂದಾದ ಹಾನಿಯನ್ನು ನೆನೆದಾಗ ನಮಗನಿಸುತ್ತದೆ: ನಮ್ಮ…

  ಮುಂದೆ ಓದಿ...
 • ಪರಿಸರಸ್ನೇಹಿ ಮಣ್ಣಿನ ಟೀ ಕಪ್ ಕಥನ
  addoor

  ಇತ್ತೀಚೆಗೆ ಬದರಿನಾಥಕ್ಕೆ ಹೋಗಿದ್ದಾಗ, ಅಲ್ಲಿ ಬಾದಾಮಿ ಹಾಲನ್ನು ನಮಗೆ ಕುಡಿಯಲು ಕೊಟ್ಟದ್ದು ಮಣ್ಣಿನ ಲೋಟದಲ್ಲಿ. ಆಗ ನೆನಪಾಯಿತು ಕೊಲ್ಕತಾದ ಮಣ್ಣಿನ ಟೀ ಕಪ್. ಅಲ್ಲಿ ಈಗಲೂ ಟೀ ಷಾಪ್‍ಗಳಲ್ಲಿ ಮಣ್ಣಿನ ಕಪ್‍ಗಳಲ್ಲಿ ಟೀ ಲಭ್ಯ.
  ಅದೊಂದು ಕಾಲವಿತ್ತು, ಉತ್ತರ ಭಾರತದಲ್ಲೆಲ್ಲ ಮಣ್ಣಿನ ಕಪ್‍ನಲ್ಲೇ ಟೀ ಕುಡಿಯುತ್ತಿದ್ದ ಕಾಲ. ಆದರೆ ಕಾಲ ಸರಿದಂತೆ ಆ ಅಭ್ಯಾಸ ನಿಂತೇ ಹೋಯಿತು. ಮಣ್ಣಿನ ಕಪ್‍ಗಳ ಸ್ಥಾನವನ್ನು ಬಳಸಿ-ಎಸೆಯುವ ಪ್ಲಾಸ್ಟಿಕ್ ಮತ್ತು ಕಾಗದದ ಕಪ್‍ಗಳು ಆಕ್ರಮಿಸಿಕೊಂಡವು.
  ಹದಿನೈದು ವರುಷಗಳ ಮುಂಚೆ, ಆಗಿನ ಕೇಂದ್ರ ರೈಲ್ವೇ ಸಚಿವ ಲಾಲು ಪ್ರಸಾದ ಯಾದವ್, ರೈಲು ನಿಲ್ದಾಣಗಳಲ್ಲಿ ಮಣ್ಣಿನ ಕಪ್‍…

  ಮುಂದೆ ಓದಿ...
 • ಚಂಚಲ ಮನಸ್ಸು
  addoor

  ಎರಡು ಗುರುಕುಲಗಳಿದ್ದವು: ಪೂರ್ವ ಮತ್ತು ಪಶ್ಚಿಮ. ಅಲ್ಲಿನ ಶಿಷ್ಯರೊಳಗೆ ಯಾವಾಗಲೂ ಪೈಪೋಟಿ. ಅದೊಂದು ದಿನ, ಮಾರುಕಟ್ಟೆಗೆ ಹೋಗುವ ಹಾದಿಯಲ್ಲಿ ಪೂರ್ವ ಗುರುಕುಲದ ಒಬ್ಬ ಶಿಷ್ಯ ಮತ್ತು ಪಶ್ಚಿಮ ಗುರುಕುಲದ ಇನ್ನೊಬ್ಬ ಶಿಷ್ಯನ ಮುಖಾಮುಖಿ.
  ಆಗ ಪೂರ್ವ ಗುರುಕುಲದ ಶಿಷ್ಯ, ದೂರದ ದೇವಾಲಯದ ಮೇಲೆ ಹಾರಾಡುತ್ತಿದ್ದ ಧ್ವಜವನ್ನು ತೋರಿಸುತ್ತಾ ಹೇಳುತ್ತಾನೆ, “ಧ್ವಜ ಅಲ್ಲಾಡುತ್ತಿದೆ ನೋಡು.” ತಕ್ಷಣವೇ ಪಶ್ಚಿಮ ಗುರುಕುಲದ ಶಿಷ್ಯನ ಪ್ರತಿಕ್ರಿಯೆ: “ಧ್ವಜ ಅಲ್ಲಾಡುತ್ತಿಲ್ಲ, ಗಾಳಿ ಅಲ್ಲಾಡುತ್ತಿದೆ.” ಇಬ್ಬರೂ ತಮ್ಮದೇ ಸರಿ ಎಂದು ವಾದ ಮಾಡುತ್ತಾ, ಹೊಡೆದಾಡಲು ಮುನ್ನುಗ್ಗುತ್ತಾರೆ. ಆಗ, ಅಲ್ಲಿ ಹಾದು ಹೋಗುತ್ತಿದ್ದ…

  ಮುಂದೆ ಓದಿ...
 • ನೀರಿಂಗಿಸಿದರೆ ಸಾಲದು, ಮಣ್ಣಿನ ಸಾವಯವಾಂಶ ಹೆಚ್ಚಿಸಬೇಕು
  addoor

  ಚಿಕ್ಕಮಗಳೂರಿನಿಂದ ಕೆ.ಬಿದರೆಗೆ ಬಸ್ಸಿನಲ್ಲಿ ಎರಡೂವರೆ ಗಂಟೆಗಳ ಪ್ರಯಾಣ. ಕಡೂರಿನಲ್ಲಿ ಬಸ್ ಬದಲಾಯಿಸಿ ಅಂದು ಕೆ.ಬಿದರೆ ತಲಪಿದಾಗ ಬಿಸಿಲೇರುತ್ತಿತ್ತು. ಹಿರಿಯರಾದ ಟಿ.ಬಿ. ಕುಮಾರಪ್ಪ ನಮಗಾಗಿ ಕಾದಿದ್ದರು.

  ಅಲ್ಲಿ ಕುಮಾರಪ್ಪನವರದು ೨೭ ಎಕ್ರೆಗಳ ತೆಂಗಿನ ತೋಟ. ೩೫ ವರುಷಗಳ ಮುನ್ನ ಅವರು ಅಲ್ಲಿ ತೋಟ ಮಾಡಿದಾಗ ಕೊರೆಸಿದ್ದು ಒಂದೇ ಕೊಳವೆಬಾವಿ. ಅದರಲ್ಲಿ ೧೦೦ ಅಡಿ ಆಳದಲ್ಲೇ ಸೊಂಪಾಗಿ ನೀರು ಸಿಕ್ಕಿತ್ತು. ಆದರೆ ೨೦೦೦ ವರುಷದಿಂದೀಚೆಗೆ ಅದರಲ್ಲಿ ನೀರು ಕಡಿಮೆ ಆಗ್ತಾ ಬಂದು, ೨೦೦೪ರಲ್ಲಿ ಕೇವಲ ೨ ಇಂಚು ನೀರು ಸಿಗತೊಡಗಿತು. ಹಾಗಾಗಿ ಆ ಅವಧಿಯಲ್ಲಿ ಇನ್ನೂ ಏಳು ಕೊಳವೆಬಾವಿ ಕೊರೆಸಿದರು. ಇವುಗಳಲ್ಲಿ ನೀರು…

  ಮುಂದೆ ಓದಿ...
 • ನೀರಿಂಗಿಸಿದರೆ ಸಾಲದು, ಮಣ್ಣಿನ ಸಾವಯವಾಂಶ ಹೆಚ್ಚಿಸಬೇಕು
  addoor

  ಚಿಕ್ಕಮಗಳೂರಿನಿಂದ ಕೆ.ಬಿದರೆಗೆ ಬಸ್ಸಿನಲ್ಲಿ ಎರಡೂವರೆ ಗಂಟೆಗಳ ಪ್ರಯಾಣ. ಕಡೂರಿನಲ್ಲಿ ಬಸ್ ಬದಲಾಯಿಸಿ ಅಂದು ಕೆ.ಬಿದರೆ ತಲಪಿದಾಗ ಬಿಸಿಲೇರುತ್ತಿತ್ತು. ಹಿರಿಯರಾದ ಟಿ.ಬಿ. ಕುಮಾರಪ್ಪ ನಮಗಾಗಿ ಕಾದಿದ್ದರು.

  ಅಲ್ಲಿ ಕುಮಾರಪ್ಪನವರದು ೨೭ ಎಕ್ರೆಗಳ ತೆಂಗಿನ ತೋಟ. ೩೫ ವರುಷಗಳ ಮುನ್ನ ಅವರು ಅಲ್ಲಿ ತೋಟ ಮಾಡಿದಾಗ ಕೊರೆಸಿದ್ದು ಒಂದೇ ಕೊಳವೆಬಾವಿ. ಅದರಲ್ಲಿ ೧೦೦ ಅಡಿ ಆಳದಲ್ಲೇ ಸೊಂಪಾಗಿ ನೀರು ಸಿಕ್ಕಿತ್ತು. ಆದರೆ ೨೦೦೦ ವರುಷದಿಂದೀಚೆಗೆ ಅದರಲ್ಲಿ ನೀರು ಕಡಿಮೆ ಆಗ್ತಾ ಬಂದು, ೨೦೦೪ರಲ್ಲಿ ಕೇವಲ ೨ ಇಂಚು ನೀರು ಸಿಗತೊಡಗಿತು. ಹಾಗಾಗಿ ಆ ಅವಧಿಯಲ್ಲಿ ಇನ್ನೂ ಏಳು ಕೊಳವೆಬಾವಿ ಕೊರೆಸಿದರು. ಇವುಗಳಲ್ಲಿ ನೀರು…

  ಮುಂದೆ ಓದಿ...
 • "ನಮ್ಮ ಅಜ್ಜಿಗೆ ಒಪ್ಪಿಗೆ ಆದೀತೇ ನಮ್ಮ ಆಹಾರ?"
  addoor

  "ನನ್ನ ಅಜ್ಜಿ ಇದನ್ನು ಆಹಾರ ಎಂದು ಒಪ್ಪುತ್ತಿದ್ದರೇ?” ಇದು ಅಮೇರಿಕದಿಂದ ಮಹಾರಾಷ್ಟ್ರದ ಹಳ್ಳಿಗೆ ಮರಳಿದ ಗಾಯತ್ರಿ ಭಾಟಿಯಾ ಕೇಳುವ ನೇರ ಪ್ರಶ್ನೆ. ತಾವು ಖರೀದಿಸುವ ಹಣ್ಣು, ತರಕಾರಿ, ಧಾನ್ಯ ಸಹಿತ ಎಲ್ಲ ಆಹಾರದ ಬಗ್ಗೆಯೂ ಗ್ರಾಹಕರು ಈ ಪ್ರಶ್ನೆ ಕೇಳಲೇ ಬೇಕೆಂಬುದು ಅವರ ಆಗ್ರಹ.   
  ಆಹಾರ ಖರೀದಿಸುವಾಗ ಗ್ರಾಹಕರು ಕೇಳಲೇ ಬೇಕಾದ ಇನ್ನೂ ಕೆಲವು ಪ್ರಶ್ನೆಗಳನ್ನು ಪಟ್ಟಿ ಮಾಡುತ್ತಾರೆ ಗಾಯತ್ರಿ ಭಾಟಿಯಾ: "ಇದು ಎಲ್ಲಿಂದ ಬರುತ್ತಿದೆ? ಈಗ ಇದನ್ನು ಬೆಳೆಯುವ ಹಂಗಾಮು ಹೌದೇ? ನನ್ನ ಅಜ್ಜಿ ಇದನ್ನು ಆಹಾರ ಎಂದು ಒಪ್ಪುತ್ತಿದ್ದರೇ? ಈ ಮೊಸರಿನಲ್ಲಿ ಹಾಲು ಮತ್ತು ಬ್ಯಾಕ್ಟೀರಿಯಾ ಹೊರತಾಗಿ ಬೇರೆ ವಸ್ತುಗಳಿದ್ದರೆ…

  ಮುಂದೆ ಓದಿ...