ಇತ್ತೀಚೆಗೆ ಸೇರಿಸಿದ ಪುಟಗಳು

 • ಬ್ರಿಟಿಷರು‌ ನಂಬಿ ಕರೆದರೆ‌ ಓ ಎನ್ನನೇ ಶಿವನು?
  Kavitha Mahesh

  ವಿಸ್ಮಯದ ಶಿವಾಲಯವೊಂದು ಮಧ್ಯಪ್ರದೇಶದ ಶಾಜಾಪೂರ್ ಜಿಲ್ಲೆಯ ಅಗರ್ ಎಂಬಲ್ಲಿದೆ. ವಿಸ್ಮಯವೇನೆಂದರೆ ಇದನ್ನು ಕಟ್ಟಿಸಿದವರು (ಪುನರ್ ನಿರ್ಮಾಣ) ಬ್ರಿಟಿಷ್ ಸೈನ್ಯದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಮಾರ್ಟಿನ್ ಎಂಬ ಕ್ರಿಶ್ಚಿಯನ್ ಅಧಿಕಾರಿ! ಇದರ ಹಿಂದಿನ ರೋಚಕ ಪ್ರಸಂಗ ಹೀಗಿದೆ…

  ಮುಂದೆ ಓದಿ...
 • ಚಿರನಿದ್ರೆಗೆ ಜಾರಿದ ಮಹಾನ್ ವಿದ್ವಾಂಸ - ಬನ್ನಂಜೆ ಗೋವಿಂದಾಚಾರ್ಯ
  Ashwin Rao K P

  ‘ವಿದ್ಯಾವಾಚಸ್ಪತಿ' ಬನ್ನಂಜೆ ಗೋವಿಂದಾಚಾರ್ಯರು ಇನ್ನಿಲ್ಲ ಎಂಬ ಸುದ್ದಿಯನ್ನು ಏಕೋ ಅರಗಿಸಿಕೊಳ್ಳಲಾಗುತ್ತಿಲ್ಲ. ಅವರ ವಿದ್ವತ್ ಪೂರ್ಣ ನುಡಿಗಳು ಇನ್ನೂ ಕಿವಿಯಲ್ಲಿ ರಿಂಗಣಿಸುತ್ತಿದೆಯೋ ಎಂದು ಅನಿಸುತ್ತಿದೆ. ಸ್ವಲ್ಪ ದಿನಗಳ ಹಿಂದೆಯಷ್ಟೇ ಗೋವಿಂದಾಚಾರ್ಯರು ತಮ್ಮ ಪುತ್ರನನ್ನು ಕಳೆದುಕೊಂಡಿದ್ದರು…

  ಮುಂದೆ ಓದಿ...
 • ಪಾಂಡು ಟೆಡ್ದಿ ಕರಡಿಯ ಗೊಣಗಾಟ
  addoor

  ಅಲಾರಮ್ ಸದ್ದು ಮಾಡಿದೊಡನೆ ಸರಸು ಸರಕ್ಕನೆ ಹಾಸಿಗೆಯಿಂದ ಎದ್ದಳು. ಅವಳ ಪಕ್ಕದಲ್ಲಿದ್ದ ಪಾಂಡು ಟೆಡ್ಡಿ ಕರಡಿ ತನ್ನ ಒಂದು ಕಣ್ಣನ್ನು ತೆರೆದು ನೋಡಿತು. ಯಾಕೆಂದರೆ ಅದರ ಇನ್ನೊಂದು ಕಣ್ಣು ವರುಷಗಳ ಮುಂಚೆ ಕುರುಡಾಗಿತ್ತು.

  “ಇನ್ನೊಂದು ಮುಂಜಾನೆ. ಈ ದಿನ ಚೆನ್ನಾಗಿರುವುದಿಲ್ಲ” ಎಂದಿತು ಪಾಂಡು ಟೆಡ್ಡಿ ಕರಡಿ. ಅದಕ್ಕೆ ವಯಸ್ಸಾಗಿದ್ದು, ಅದು ಯಾವಾಗಲೂ ಹೀಗೆ ಗೊಣಗುಟ್ಟುತ್ತಲೇ ಇರುತ್ತದೆ. ಸರಸುವಿನ ತಾಯಿ ಯುವತಿಯಾಗಿದ್ದಾಗ ಅದು ಅವಳೊಂದಿಗಿತ್ತು. ಆಗ ಚುರುಕಾಗಿ ಖುಷಿಯಾಗಿ ಇದ್ದ ಪಾಂಡು ಕರಡಿ ಈಗ ಎಲ್ಲದರ ಬಗ್ಗೆಯೂ ಟೀಕೆ ಮಾಡುತ್ತದೆ. ಉಳಿದೆಲ್ಲ ಗೊಂಬೆಗಳಿಗಿಂತ ಜಾಸ್ತಿ ವಯಸ್ಸಾಗಿರುವ ಪಾಂಡು ಕರಡಿ ಹಲವು…

  ಮುಂದೆ ಓದಿ...
 • ದೃಷ್ಟಿ ಬದಲಾದರೆ ದೃಶ್ಯವೂ ಬದಲು !
  Ashwin Rao K P

  ಬದುಕಿನಲ್ಲಿ ಯಾವಾಗಲೂ ಸಕಾರಾತ್ಮಕ ದೃಷ್ಟಿ ಮುಖ್ಯ. ತಾವರೆ ಅರಳುವುದು ಕೆಸರು ತುಂಬಿದ ಕೆರೆಯಲ್ಲಿಯೇ ಹೊರತು ಸ್ವಚ್ಛವಾದ ಕೊಳದಲ್ಲಿ ಅಲ್ಲ. ನಾವು ಗಮನಿಸಿಸಬೇಕಾದದ್ದು ತಾವರೆಯನ್ನೇ ಹೊರತು, ಅದು ಹುಟ್ಟಿದ ಜಾಗವಲ್ಲ. ಏಕೆಂದರೆ ಪ್ರತಿಭೆಗೆ ಶ್ರೀಮಂತ, ಬಡವ ಎಂಬ ಭೇಧಭಾವವಿಲ್ಲ. ಅದು ಯಾರದ್ದೂ…

  ಮುಂದೆ ಓದಿ...
 • ಹಿತ್ತಲ ಗಿಡ ಮದ್ದಲ್ಲ ಎಂಬ ನಮ್ಮ ಪ್ರಾದೇಶಿಕ ಜ್ಞಾನ
  Kavitha Mahesh

  ವಿಜ್ಞಾನವು ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಎಂಬ ನಂಬಿಕೆ ಇದೆ. ಆದರೆ, ವಿಜ್ಞಾನ ಕೂಡ ಸಮಾಜ ಜೀವನದ ಒಂದು ಭಾಗ ಎಂಬ ಬಗ್ಗೆ ನಮ್ಮಲ್ಲಿ ಅರಿವು ಕಡಿಮೆ. ಆಯಾ ಕಾಲಘಟ್ಟದಲ್ಲಿ ಆಯಾ ಪ್ರದೇಶದ ಜನಜೀವನಕ್ಕೆ ಅನುಗುಣವಾಗಿ, ಆ ಪ್ರದೇಶದ ಕಲೆ-ಸಂಸ್ಕೃತಿ ಮಾತ್ರವಲ್ಲ, ವಿಜ್ಞಾನ ಕೂಡ ಬೆಳೆದು ಬರುತ್ತದೆ. ಈ…

  ಮುಂದೆ ಓದಿ...
 • ಆಟಕ್ಕೆ ವಿದಾಯ ಹೇಳಿದ ಮಗು ಮುಖದ ‘ಪಾರ್ಥಿವ್'
  Ashwin Rao K P

  ‘ಧೋನಿಯವರು ಭಾರತ ಟೀಂಗೆ ಬರುವ ಮೊದಲೇ ನಾನು ತಂಡದಲ್ಲಿ ಬೇರೂರಬೇಕಿತ್ತು. ಆದರೆ ನಾನು ಅದರಲ್ಲಿ ಸಫಲನಾಗಲಿಲ್ಲ. ಈಗ ಧೋನಿಯನ್ನು ದೂಷಿಸಿ ಪ್ರಯೋಜನವಿಲ್ಲ' ಎಂಬ ಅಪ್ಪಟ ಕ್ರೀಡಾ ಸ್ಪೂರ್ತಿಯ ಮಾತುಗಳನ್ನು ಆಡಿದ್ದು ಬೇರೆ ಯಾರೂ ಅಲ್ಲ, ಮುದ್ದು ಮಗು ಮುಖದ, ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಪಾರ್ಥಿವ್…

  ಮುಂದೆ ಓದಿ...
 • ನಮ್ಮ ಹೆಮ್ಮೆಯ ಭಾರತ (ಭಾಗ 35- 36)
  addoor

  ಕೃಷಿ ಮತ್ತು ವಾಣಿಜ್ಯ
  ೩೫.ಭಾರತದ ಹೈನಪಶುಗಳ ಸಂಖ್ಯೆ ಜಗತ್ತಿನಲ್ಲೇ ಅತ್ಯಧಿಕ
  ಭಾರತದಲ್ಲಿ ದನಗಳನ್ನು "ಗೋಮಾತೆ" ಎಂದು ಪೂಜಿಸಲಾಗುತ್ತದೆ. ಸಂಕ್ರಾಂತಿ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಗೋವುಗಳನ್ನು ಅಲಂಕರಿಸಿ ಪೂಜಿಸಲಾಗುತ್ತದೆ. ಹಳ್ಳಿಗಳಲ್ಲಿ ಗೋಮಾಳಕ್ಕೆ ಮತ್ತು ನಗರಗಳಲ್ಲಿ ಬೀದಿಗಳಲ್ಲಿ ದನಗಳನ್ನು ಅಡ್ಡಾಡಲು ಬಿಡುತ್ತಾರೆ. ದನಗಳು ದೇವರ ಕೊಡುಗೆ ಎಂದು ಹಿಂದೂಗಳು ನಂಬುತ್ತಾರೆ. ಆದ್ದರಿಂದ ದನದ ಮಾಂಸವನ್ನು ಹಿಂದೂಗಳು ತಿನ್ನುವುದಿಲ್ಲ. ಗೋಮಾಂಸ ಮಾರಾಟವನ್ನು ಹಲವು ರಾಜ್ಯಗಳಲ್ಲಿ ನಿಷೇಧಿಸಲಾಗಿದೆ.

  ಭಾರತದ ಹೈನಪಶುಗಳ ಸಂಖ್ಯೆ ಜಗತ್ತಿನಲ್ಲೇ ಅತ್ಯಧಿಕ. ಜಗತ್ತಿನ ಹೈನಪಶುಗಳ…

  ಮುಂದೆ ಓದಿ...
 • ಡಿಸೆಂಬರ್ ೭ : ಎರಡು ವಿಶೇಷತೆಗಳ ದಿನ
  Ashwin Rao K P

  ಮೊನ್ನೆ ತಾನೇ ಡಿಸೆಂಬರ್ ೭ ಕಳೆದು ಹೋಯಿತು. ಆಯಾ ದಿನದ ವಿಶೇಷತೆಗಳನ್ನು ಗುರುತಿಸುವವರು ಆ ದಿನದ ಎರಡು ಮಾಹಿತಿಗಳನ್ನು ಗಮನಿಸಿರಬಹುದು. ದಿನ ವಿಶೇಷದ ಬಗ್ಗೆ ತಿಳಿಯದವರಿಗಾಗಿ ಚುಟುಕಾದ ಮಾಹಿತಿ ಇಲ್ಲಿ ನೀಡ ಬಯಸುವೆ. ಡಿಸೆಂಬರ್ ೭ನ್ನು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನ (International…

  ಮುಂದೆ ಓದಿ...
 • ಡಿಸೆಂಬರ್ ೭ : ಎರಡು ವಿಶೇಷತೆಗಳ ದಿನ
  Ashwin Rao K P

  ಮೊನ್ನೆ ತಾನೇ ಡಿಸೆಂಬರ್ ೭ ಕಳೆದು ಹೋಯಿತು. ಆಯಾ ದಿನದ ವಿಶೇಷತೆಗಳನ್ನು ಗುರುತಿಸುವವರು ಆ ದಿನದ ಎರಡು ಮಾಹಿತಿಗಳನ್ನು ಗಮನಿಸಿರಬಹುದು. ದಿನ ವಿಶೇಷದ ಬಗ್ಗೆ ತಿಳಿಯದವರಿಗಾಗಿ ಚುಟುಕಾದ ಮಾಹಿತಿ ಇಲ್ಲಿ ನೀಡ ಬಯಸುವೆ. ಡಿಸೆಂಬರ್ ೭ನ್ನು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನ (International…

  ಮುಂದೆ ಓದಿ...
 • ಝೆನ್ ಪ್ರಸಂಗ: ಮೌನ ವ್ರತ
  addoor

  ಒಂದು ಗುರುಕುಲದಲ್ಲಿದ್ದರು ನಾಲ್ವರು ಆತ್ಮೀಯ ಶಿಷ್ಯರು. ಅವರೊಮ್ಮೆ “ಏಳು ದಿನಗಳ ಮೌನ ವ್ರತ" ಆಚರಿಸಲು ನಿರ್ಧರಿಸಿದರು.

  ಮೊದಲನೆಯ ದಿನ ಹಗಲಿಡೀ ಮೌನದಿಂದಿದ್ದ ಅವರು ಸಂಜೆಯ ಹೊತ್ತಿಗೆ ದಣಿದಿದ್ದರು. ಕತ್ತಲಾಗುತ್ತಿದ್ದಂತೆ ಗುರುಕುಲದ ಎಣ್ಣಿ ದೀಪಗಳು ಮಂದವಾಗ ತೊಡಗಿದವು. ಬೆಳಗ್ಗೆಯಿಂದ ಮಾತನ್ನೆಲ್ಲ ಅದುಮಿ ಕೂತಿದ್ದ ಒಬ್ಬ ಶಿಷ್ಯನಿಗೆ ಇನ್ನು ತಡೆಯಲಾಗಲಿಲ್ಲ. ಕೊನೆಗೆ ಆತ "ಆ ದೀಪಗಳನ್ನು ತೆಗೆದಿಡು” ಎಂದು ಗುರುಕುಲದ ಸೇವಕನಿಗೆ ಕೂಗಿ ಹೇಳಿದ.

  ಮೊದಲನೆಯ ಶಿಷ್ಯ ಮಾತಾಡಿದ್ದನ್ನು ಕೇಳಿ ಎರಡನೆಯ ವಿದ್ಯಾರ್ಥಿ ಗೊಂದಲಕ್ಕೊಳಗಾದ. ಆತ ಮೊದಲನೆಯವನನ್ನು ಎಚ್ಚರಿಸಿದ, "ನಾವು ನಾಲ್ವರೂ ಮೌನ ವ್ರತದಲ್ಲಿ…

  ಮುಂದೆ ಓದಿ...