ಇತ್ತೀಚೆಗೆ ಸೇರಿಸಿದ ಪುಟಗಳು

 • ಗಣತಂತ್ರ ದಿನ - ಭಾರತದ ಹೆಮ್ಮೆ
  Ashwin Rao K P

  ಭಾರತಕ್ಕೆ ಸ್ವಾತಂತ್ರ್ಯ ದೊರೆತ ಮೂರು ವರ್ಷಗಳ ಬಳಿಕ ದೇಶಕ್ಕೆ ಸಂವಿಧಾನ ಬಂತು. ಭಾರತವು ವಿಶ್ವದ ಅತ್ಯಂತ ದೊಡ್ದ ಪ್ರಜಾಪ್ರಭುತ್ವ ಉಳ್ಳ ದೇಶ. ಇಲ್ಲಿ ಪ್ರಜೆಗಳೇ ಪ್ರಭುಗಳು. ಭಾರತದ ಸಂವಿಧಾನವು ನಾಗರಿಕರಾದ ನಮಗೆ ಹಲವಾರು ಅನುಕೂಲತೆ ಹಾಗೂ ಮೂಲಭೂತ ಹಕ್ಕುಗಳನ್ನು ನೀಡಿದೆ. ಇದಕ್ಕೆ ಕಾರಣರಾದವರು…

  ಮುಂದೆ ಓದಿ...
 • ಪುಸ್ತಕನಿಧಿ- ಬರ್ಕ್ ವೈಟ್ ಕಂಡ ಭಾರತ- ಸ್ವಾತಂತ್ರ್ಯದೆಡೆಗೆ ಅರೆಪಯಣ
  shreekant.mishrikoti

   

  ಭಾರತವು ಸ್ವಾತಂತ್ರ್ಯ ಪಡೆಯುವ ಹೊತ್ತಿನಲ್ಲಿ ಭಾರತಕ್ಕೆ ಬಂದ ಫೋಟೋ ಜರ್ನಲಿಸ್ಟ್ ಬರ್ಕ್ ವೈಟ್ ಆ ಸಮಯದಲ್ಲಿ ಭಾರತದಲ್ಲಿ ಕಂಡುದನ್ನು ಫೋಟೋ ತೆಗೆದಳು ಅಷ್ಟೇ ಅಲ್ಲ ಹಾಫ್ ವೇ ಟು ಫ್ರೀಡಂ (ಸ್ವಾತಂತ್ರ್ಯದೆಡೆಗೆ ಅರೆಪಯಣ) ಎಂಬ ಪುಸ್ತಕವನ್ನು ಬರೆದಳು. ಇದನ್ನು ಒಂದು ಸೃಜನಶೀಲ ದಾಖಲೆ ಎಂದು ಪರಿಗಣಿಸಲಾಗುತ್ತದೆ.

   

  ಮಹಾತ್ಮಾ ಗಾಂಧಿ , ಜವಾಹರ ಲಾಲ್ ನೆಹರು, ಸರದಾರ್ ಪಟೇಲ್, ಜಿನ್ನಾ, ಅಂದಿನ ಕಾಲದ ಪ್ರಮುಖ ಕೈಗಾರಿಕೋದ್ಯಮಿಗಳಾದ ಟಾಟಾ , ಬಿರ್ಲಾ, ಕಾಶ್ಮೀರದ ಸಿಂಹ ಶೇಖ್ ಅಬ್ದುಲ್ಲಾ ಎಂಥವರು ? ಅವರುಗಳ ಬಗ್ಗೆ ನಮ್ಮ ಪೂರ್ವ ಗ್ರಹಿಕೆಗಳು ಏನೇ ಇರಲಿ, ಅವನ್ನು ಬದಿಗಿಟ್ಟು ಮುಕ್ತ…

  ಮುಂದೆ ಓದಿ...
 • ಬದಲಾವಣೆಯ ಅವಶ್ಯಕತೆ...
  Shreerama Diwana

  ಉತ್ತರ ಕರ್ನಾಟಕದ ಶಾಲಾ ಶಿಕ್ಷಕರ ಮಗನೊಬ್ಬ ಅತ್ಯಂತ ಸಾಂಪ್ರದಾಯಿಕ ಮತ್ತು ಗ್ರಾಮೀಣ ವ್ಯವಸ್ಥೆಯಲ್ಲಿ ಬೆಳೆದಿರುತ್ತಾನೆ. ಆ ಯುವಕ ಒಮ್ಮೆ ಅನಿವಾರ್ಯ ಕೆಲಸದ ಕಾರಣಕ್ಕಾಗಿ ಮೊದಲ ಬಾರಿಗೆ ಬೆಂಗಳೂರಿಗೆ ಬರಬೇಕಾಗುತ್ತದೆ. ಭಾರತೀಯ ಸಂಸ್ಕೃತಿ, ಸಂಪ್ರದಾಯ, ಭಕ್ತಿ, ನಂಬಿಕೆ ಬಗ್ಗೆ ಅಪಾರ ಅಭಿಮಾನವಿರುವ ಆತ…

  ಮುಂದೆ ಓದಿ...
 • ಮುದ್ದಣ ಕವಿಯ ನೆನಪು ಸದಾ ಅಮರ
  Ashwin Rao K P

  ನಂದಳಿಕೆಯ ಲಕ್ಷ್ಮೀನಾರಾಯಣಪ್ಪ ಎಂದೊಡನೆಯೇ ನಮಗೆ ಮುದ್ದಣ ಕವಿಯ ನೆನಪಾಗುತ್ತದೆ. ನಾವೆಲ್ಲಾ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗ ಇದೊಂದು ಬಗೆಯ ಪ್ರಶ್ನೆ ಇದ್ದೇ ಇರುತ್ತಿತ್ತು. ಆ ಮುದ್ದಣ-ಮನೋರಮೆಯ ಸಂಭಾಷಣೆಗಳು ಎಲ್ಲವೂ ಜನಜನಿತ. ವಿನಯಶೀಲ ಹಾಗೂ ಸಂಕೋಚ ಸ್ವಭಾವದ ಮುದ್ದಣರು ಬರೆದ…

  ಮುಂದೆ ಓದಿ...
 • ರಾಜುವಿನ ಮರೆಗುಳಿತನ
  addoor

  ರಾಜುವಿಗೆ ಮರೆವು ಜಾಸ್ತಿ. ಅವನು ಯಾವುದನ್ನೂ ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತಿರಲಿಲ್ಲ. ಅದರಿಂದಾಗಿ ಅವಾಂತರಗಳು ನಡೆಯುತ್ತಿದ್ದವು.

  "ರಾಜು, ನಿನಗೆ ಹೇಳಿದ್ದು ಯಾವುದೂ ನೆನಪೇ ಇರೋದಿಲ್ಲ! ಎಲ್ಲವನ್ನೂ ಮರೆತು ಬಿಡುತ್ತಿ” ಎಂದು ಅವನ ಅಮ್ಮ ಹಲವು ಸಲ ಹೇಳುತ್ತಿದ್ದಳು. “ಟೈಲರಿಗೆ ನಿನ್ನ ಹೊಸ ಷರಟು ಹೊಲಿಯಲು ನೆನಪು ಮಾಡಬೇಕಂತ ನಿನಗೆ ಮೂರು ಸಲ ಹೇಳಿರಲಿಲ್ಲವೇ? ನೀನು ಟೈಲರಿಗೆ ನೆನಪು ಮಾಡಿದಿಯಾ?” ಎಂದು ಕೇಳಿದಳು ಅಮ್ಮ.

  “ಅಯ್ಯೋ, ನನಗೆ ಮರೆತೇ ಹೋಯಿತು” ಎಂಬುದು ರಾಜುವಿನ ಉತ್ತರ. “ಅದು ಹಾಗಿರಲಿ, ನೀನು ನೆನಪು ಮಾಡಿಕೊಳ್ಳಲು ಪ್ರಯತ್ನ ಮಾಡಿದಿಯಾ? ಈಗ ನೋಡು, ನೀನು ಹಳೆಯ ಷರಟು ಹಾಕಿಕೊಂಡೇ…

  ಮುಂದೆ ಓದಿ...
 • ನತದೃಷ್ಟ ನೇತಾಜಿ...
  Shreerama Diwana

  ನಮ್ಮ ಸ್ವಾತಂತ್ರ್ಯ ಹೋರಾಟದ ಅತ್ಯಂತ ನತದೃಷ್ಟ ವ್ಯಕ್ತಿ ಸುಭಾಷ್ ಚಂದ್ರ ಬೋಸ್. ಗಾಂಧಿ ನಂತರದ ಮಹತ್ವದ ವ್ಯಕ್ತಿಯೂ ಸಹ. ನೆಹರು ಮತ್ತು ಬೋಸರ ಆಯ್ಕೆಯಲ್ಲಿ ಗಾಂಧಿ ತಮ್ಮ ಅಜ್ಞಾಪಾಲಕರು - ಸೌಮ್ಯ ಸ್ವಭಾವದವರು - ಸೂಕ್ಷ್ಮ ಮತಿಗಳು ಆದ ನೆಹರು ಅವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದಷ್ಟು…

  ಮುಂದೆ ಓದಿ...
 • ಧೀಮಂತ ನಾಯಕ ನೇತಾಜಿಗೆ ೧೨೫ರ ಹುಟ್ಟು ಹಬ್ಬ
  Ashwin Rao K P

  ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದೊಡನೆಯೇ ಎಲ್ಲರ ಮೈಯಲ್ಲೂ ವಿದ್ಯುತ್ ಸಂಚಲನವಾದಂತೆ ಆಗುತ್ತದೆ. ಭಾರತ ಮಾತೆಯ ಹೆಮ್ಮೆಯ ಪುತ್ರ ಸುಭಾಷ್ ಚಂದ್ರ ಬೋಸ್ ಹುಟ್ಟಿದ ಪುಣ್ಯ ದಿನವಾದ ಜನವರಿ ೨೩ನ್ನು ಪ್ರಸಕ್ತ ವರ್ಷದಿಂದ ‘ಪರಾಕ್ರಮ ದಿನ’ ಎಂದು ಕರೆಯಲಾಗುತ್ತದೆ. ಭಾರತೀಯರಲ್ಲಿ ಸ್ವಾತಂತ್ರ್ಯದ ಕೆಚ್ಚನ್ನು…

  ಮುಂದೆ ಓದಿ...
 • ಸಮಾಜದ ನಡೆ ದುರಂತದ ಕಡೆ...
  Shreerama Diwana

  ಸುಮಾರು ವರ್ಷಗಳಿಂದ ಕರ್ನಾಟಕದಲ್ಲಿ ವಿವಿಧ ಪಕ್ಷಗಳು  ಅಧಿಕಾರಕ್ಕೆ ಬಂದಾಗ ಅವರು ಎದುರಿಸುವ ಬಹುದೊಡ್ಡ ಸಮಸ್ಯೆ ಜನರಿಗೆ ಹೇಗೆ ಅತ್ಯುತ್ತಮ ಸೇವೆ ಒದಗಿಸಬೇಕು ಎಂಬುದಲ್ಲ, ಬದಲಾಗಿ ಸಚಿವ ಸಂಪುಟದ ವಿಸ್ತರಣೆ ಮತ್ತು ಖಾತೆಗಳ ಹಂಚಿಕೆ.

  ಮುಂದೆ ಓದಿ...
 • ಮೋಸ?!
  Ashwin Rao K P

  ಸೂರಿ ತನ್ನ ಪ್ರಿಯತಮೆಯ ಕಾಗದದ ಬರವಿಗಾಗಿ ಕಾತುರದಿಂದ ಕಾಯುತ್ತಿದ್ದ. ವಾರಕ್ಕೆರಡಾದರೂ ಪತ್ರ ಬರೆಯುತ್ತಿದ್ದ ಲತಾ ಒಂದು ತಿಂಗಳಾದರೂ ಪತ್ರವೇಕೆ ಬರೆದಿಲ್ಲವೆಂದು ಚಿಂತಿತನಾಗಿದ್ದ. ಮನಸ್ಸಿಗೆ ಬಂದ ನಾನಾ ಕೆಟ್ಟ ಆಲೋಚನೆಗಳನ್ನು ಬಲವಂತವಾಗಿ ಬದಿಗೆ ಸರಿಸಿದ್ದ. ಅಷ್ಟರಲ್ಲಿ ಸೈಕಲ್ ಗಂಟೆ ಬಾರಿಸಿತು. '…

  ಮುಂದೆ ಓದಿ...