ಅಂಬೇಡ್ಕರ ದೃಷಷ್ಟಿಯಲ್ಲಿ: ಹಿಂದು ಧರ್ಮ ಮತ್ತು ಗೋ ಮಾಂಸ

ಹಿಂದೂ ಧರ್ಮ ಮತ್ತು ಗೋ ಮಾಂಸ
ಸೋಮವಾರ - ಮೇ -31-2010 
ಹಿಂದೂಗಳು ಎಂದಾದರೂ ಗೋಮಾಂಸ ಸೇವಿಸಿದ್ದರೇ ಎಂದು ಪ್ರಶ್ನಿಸಿದಲ್ಲಿ, ಬ್ರಾಹ್ಮಣರಾಗಲೀ ಬ್ರಾಹ್ಮಣೇತರರಾಗಲೀ ಎಲ್ಲ ಹಿಂದೂಗಳು ಒಕ್ಕೊರಲಿನಿಂದ ಇಲ್ಲವೇ ಇಲ್ಲ ಎಂದು ಉತ್ತರಿಸುತ್ತಾರೆ. ಒಂದು ಅರ್ಥದಲ್ಲಿ ಇದು ಸರಿ. ಶತಮಾನಗಳಿಂದಲೂ ಯಾವುದೇ ಒಬ್ಬ ಹಿಂದೂ ಗೋಮಾಂಸ ಸೇವಿಸಿಲ್ಲ ಎಂಬ ಉತ್ತರವನ್ನೇ ಸ್ಪಶ್ಯ ಹಿಂದೂ ಹೇಳಬಯಸಿ ದಲ್ಲಿ ಯಾವುದೇ ಅಭ್ಯಂತರವಿಲ್ಲ. ಆದರೆ ಬ್ರಾಹ್ಮಣ ವಿದ್ವಾಂಸರು, ‘ಹಿಂದೂಗಳು ಗೋಮಾಂಸವನ್ನು ಸೇವಿಸದೇ ಇದ್ದುದಷ್ಟೇ ಅಲ್ಲ ಸದಾಕಾಲವೂ ಗೋವನ್ನು ಪವಿತ್ರ ಪಶುವಾಗಿಯೇ ಗೌರವಿಸು ತ್ತಿದ್ದರು ಮತ್ತು ಸದಾ ಗೋಹತ್ಯೆಯನ್ನು ವಿರೋಧಿಸುತ್ತಿದ್ದರು’ ಎಂದು ಹೇಳಿದಲ್ಲಿ ಒಪ್ಪಲು ಸಾಧ್ಯವಿಲ್ಲ...
ಋಗ್ವೇದದ ಆರ್ಯರು ಆಹಾರಕ್ಕಾಗಿ ಗೋವನ್ನು ಕೊಂದು ಗೋಮಾಂಸ ಸೇವಿಸುತ್ತಿದ್ದುದು ಋಗ್ವೇದದಿಂದಲೇ ನಿರೂಪಿತವಾಗುತ್ತದೆ. ಋಗ್ವೇಗದದ ಅಧ್ಯಾಯ 10 ಶ್ಲೋಕ 86.14ರಲ್ಲಿ ಇಂದ್ರನು ‘‘ಅವರು ಪ್ರತಿಯೊಬ್ಬರಿಗೆ 35 ವೃಷಭಗಳನ್ನು ಅಡುಗೆ ಮಾಡುತ್ತಾರೆ’’ ಎಂದು ಹೇಳುತ್ತಾನೆ. ಅಧ್ಯಾಯ 10, 91.14ರಲ್ಲಿ ಅಗ್ನಿಯ ಸತ್ಕಾರಕ್ಕಾಗಿ ಅಶ್ವ, ಗೂಳಿ, ವೃಷಭ, ಬರಡು ಗೋವು ಮತ್ತು ಗಂಡು ಕುರಿಗಳನ್ನು ಬಲಿ ನೀಡುತ್ತಿದ್ದರೆಂದು ಹೇಳಲಾಗಿದೆ. ಋಗ್ವೇದದ ಅಧ್ಯಾಯ 10 72.6ರ ಪ್ರಕಾರ ಗೋವನ್ನು ಕತ್ತಿ ಅಥವಾ ಕುಡುಗೋಲಿನಿಂದ ಕೊಲ್ಲಲಾಗುತ್ತಿತ್ತೆಂದು ಹೇಳಲಾಗಿದೆ...
ತೈತ್ತರೀಯ ಬ್ರಾಹ್ಮಣದಲ್ಲಿ ಸೂಚಿಸಲಾಗಿರುವ ಕಾಮ್ಯಾಷ್ಟಿಗಳ ಪೈಕಿ ಗೋವು ಮತ್ತು ವೃಷಭವನ್ನು ಬಲಿ ನೀಡಲು ಸೂಚಿಸಿರುವುದೇ ಅಲ್ಲದೆ ಯಾವ ಯಾವ ದೇವತೆಗಳಿಗೆ ಯಾವ ಯಾವ ಲಕ್ಷಣಗಳುಳ್ಳ ಗೋವು ಮತ್ತು ವೃಷಭಗಳನ್ನು ಅರ್ಪಿಸಬೇಕೆಂದೂ ಸೂಚಿಸಲಾಗಿದೆ. ಹಾಗಾಗಿ ವಿಷ್ಣುವಿಗೆ ಸಮರ್ಪಿಸಲು ಗಿಡ್ಡನೆಯ ಗೋವು, ವೃತ್ರನ ವಿನಾಶಕನಾಗಿರುವ ಇಂದ್ರನಿಗೆ ಜೋಜು ಹಾಕಿರುವ ಕೊಂಬುಗಳನ್ನು ಮತ್ತು ಹಣೆಯ ಮೇಲೆ ಬಿಳಿಯ ಗುರುತು ಹೊಂದಿರುವ ವೃಷಭ, ಪುಷಣನಿಗೆ ಕರಿ ವರ್ಣದ ಗೋವು, ರುದ್ರನಿಗೆ ಕೆಂಪು ವರ್ಣದ ಗೋವು ಇತ್ಯಾದಿ ಇತ್ಯಾದಿ.
ತೈತ್ತರೀಯ ಬ್ರಾಹ್ಮಣದಲ್ಲಿ ಮತ್ತೊಂದು ರೀತಿಯ ಯಜ್ಞ ಪಂಚಶರಧಿಯ ಸೇವಾ ಯಜ್ಞವನ್ನು ಉಲ್ಲೇಖಿಸಲಾಗಿದೆ. ಈ ಯಜ್ಞದ ಅತ್ಯಂತ ಪ್ರಮುಖ ಅಂಶವೆಂದರೆ ಐದು ವರ್ಷ ವಯಸ್ಸಿನ, ಗೂನು ಇಲ್ಲದಿರುವ ಗಿಡ್ಡಗಿರುವ ಹದಿನೇಳು ವೃಷಭಗಳನ್ನು ಮತ್ತು ಮೂರು ವರ್ಷದ ಕೆಳಗಿನ ಗಿಡ್ಡನೆಯ ಹದಿನೇಳು ಎಳೆಯ ಕರುಗಳನ್ನು ದಹಿಸುವುದು...ತಿಥಿಗಳಿಗಾಗಿ ಗೋಹತ್ಯೆ ಮಾಡುವುದು ಎಷ್ಟು ಮಹತ್ವ ಪಡೆದಿತ್ತೆಂದರೆ ಅತಿಥಿಗಳನ್ನು ಗೋಘ್ನ, ಅರ್ಥಾತ್ ಗೋಹಂತಕ ಎಂದೇ ಕರೆಯಲಾಗುತ್ತಿತ್ತು. 
ಈ ಗೋಹತ್ಯೆಯನ್ನು ತಡೆಯುವ ಸಲುವಾಗಿ ಅಶ್ವಲಾಯನ ಗೃಹ್ಯ ಸೂತ್ರ (1.24.25) ಅತಿಥಿಗಳು ಬಂದಾಗ ಗೋವನ್ನು ಮುಕ್ತವಾಗಿ ಬಿಟ್ಟುಬಿಡುವುದರ ಮೂಲಕ ಶಿಷ್ಟಾಚಾರದ ಉಲ್ಲಂಘನೆಯನ್ನು ತಪ್ಪಿಸಬಹುದೆಂದು ಹೇಳುತ್ತದೆ.ೋಹತ್ಯೆ ಮತ್ತು ಗೋಮಾಂಸ ಸೇವನೆಯ ಬಗ್ಗೆ ಇಷ್ಟು ಪ್ರಮಾಣದ ಸಾಕ್ಷಧಾರಗಳಿವೆ. ಇವುಗಳಲ್ಲಿ ಯಾವುದನ್ನು ಸತ್ಯವೆಂದು ಒಪ್ಪಿಕೊಳ್ಳಬೇಕು? ಸರಿಯಾದ ದೃಷ್ಟಿಕೋನವೆಂದರೆ ಶತಪಥ ಬ್ರಾಹ್ಮಣ ಮತ್ತು ಅಪಸ್ತಂಭ ಧರ್ಮಸೂತ್ರಗಳ ಪ್ರಮಾಣೀಕರಣವೆಂದು ಹೇಳಬಹುದು. 
ಹಿಂದೂಗಳು ಗೋಹತ್ಯೆಯನ್ನು ವಿರೋಧಿಸುತ್ತಿದ್ದರು ಎಂಬ ಅಭಿಪ್ರಾಯವು ಅತಿಯಾದ ಗೋಹತ್ಯೆಯ ವಿರುದ್ಧ ಧರ್ಮಶಾಸನವಾಗಿತ್ತೇ ಹೊರತು ಗೋಹತ್ಯೆ ನಿಷೇಧದ ವಿರುದ್ಧವಲ್ಲ ಎಂಬ ಅಭಿಪ್ರಾಯವನ್ನು ಈ ಎರಡು ಗ್ರಂಥಗಳು ವ್ಯಕ್ತಪಡಿಸುತ್ತವೆ. ಹಾಗಾಗಿ ಈ ದೃಷ್ಟಿಕೋನವನ್ನು ಒಪ್ಪಬಹುದಾಗಿದೆ. ಈ ಧರ್ಮಶಾಸನಗಳೇ ಗೋ ಹತ್ಯೆ ಮತ್ತು ಗೋಮಾಂಸ ಸೇವನೆ ಸಾಮಾನ್ಯವಾಗಿತ್ತೆಂಬ ಅಂಶವನ್ನು ನಿರೂಪಿಸುತ್ತದೆ. ಈ ಧರ್ಮಶಾಸನಗಳ ಹೊರತಾಗಿಯೂ ಗೋಹತ್ಯೆ ಮತ್ತು ಗೋಮಾಂಸ ಸೇವನೆ ಮುಂದುವರಿದೇ ಇತ್ತು.
ಈ ಧರ್ಮಶಾಸನಗಳನ್ನು ಬಹುತೇಕ ನಿರ್ಲಕ್ಷಿಸಿರುವುದು ಆರ್ಯರ ಮಹಾನ್ ಋಷಿ ಯಾಜ್ಞವಲ್ಕನ ಪ್ರಕರಣದಲ್ಲಿ ವ್ಯಕ್ತವಾಗು ತ್ತದೆ. ಯಾಜ್ಞವಲ್ಕನು ಒಮ್ಮೆ ‘‘ನಾನು ಅದನ್ನು ತಿನ್ನುತ್ತೇನೆ ಆದರೆ ಅದು ಎಳೆಯದಾಗಿರಬೇಕು’’ ಎಂದು ಹೇಳುವುದು.ಂದು ಕಾಲಘಟ್ಟದಲ್ಲಿ ಹಿಂದೂಗಳು ಗೋಹತ್ಯೆ ಮಾಡುತ್ತಿದ್ದರು ಹಾಗೂ ಗೋಮಾಂಸ ಸೇವಿಸುತ್ತಿದ್ದರು ಎಂಬ ಸಂಗತಿಯನ್ನು ಬೌದ್ಧ ಸೂತ್ರಗಳಲ್ಲಿ ಉಲ್ಲೇಖವಾಗಿರುವ ವೇದೋತ್ತರ ಕಾಲದ ಮತ್ತು ಬ್ರಾಹ್ಮಣೋತ್ತರ ಕಾಲದ ಯಜ್ಞಗಳ ವಿವರಣೆಗಳಿಂದ ಸ್ಪಷ್ಟವಾಗಿ ಗ್ರಹಿಸಬಹುದು.
ಗೋವು ಮತ್ತಿತರ ಪ್ರಾಣಿಗಳ ಹತ್ಯೆ ಬೃಹತ್ ಪ್ರಮಾಣದಲ್ಲಿ ನಡೆಯುತ್ತಿದ್ದುದೂ ಅಷ್ಟೇ ಸತ್ಯ. ಧರ್ಮದ ಹೆಸರಿನಲ್ಲಿ ಬ್ರಾಹ್ಮಣರು ವಿವಿಧ ಸನ್ನಿವೇಶಗಳಲ್ಲಿ ಹತ್ಯೆ ಮಾಡಿದ ಗೋವುಗಳ ಸಂಖ್ಯೆಯನ್ನು ನಿಖರವಾಗಿ ಹೇಳುವುದು ದುಸ್ತರವಾಗುತ್ತದೆ. ಆದರೆ ಬೌದ್ಧ ಸಾಹಿತ್ಯದಲ್ಲಿ ಉಲ್ಲೇಖವಾಗಿರುವ ದಾಖಲೆಗಳಿಂದ ಗೋ ಹತ್ಯೆಯ ಪ್ರಮಾಣವನ್ನು ಅಲ್ಪಮಟ್ಟಿಗೆ ಊಹಿಸಬಹುದು. ನಿದರ್ಶನ ರೂಪದಲ್ಲಿ ಕುತದಂತ ಸೂತ್ರವನ್ನು ಉಲ್ಲೇಖಿಸಬಹುದು. ಬುದ್ಧನು ವಿರೋಧಿಸುತ್ತಾನೆ. ಹಾಸ್ಯ ಮಿಶ್ರಿತ ಅಣುಕು ದನಿಯಲ್ಲಿ ಬುದ್ಧನು ವೇದಕಾಲದ ಯಜ್ಞಗಳನ್ನು ಕುರಿತು ಉತ್ತಮ ನಿದರ್ಶನವನ್ನು ಹೀಗೆ ಒದಗಿಸತ್ತಾನೆ.
ಮುಂದುವರಿಯುತ್ತಾ, ಓ ಬ್ರಾಹ್ಮಣನೆ ಯಜ್ಞದಲ್ಲಿ ಯಾವುದೇ ವೃಷಭದ ಹತ್ಯೆಯಾಗಿರಲಿಲ್ಲ ಅಥವಾ ಮೇಕೆಗಳ, ಪಕ್ಷಿಗಳ, ಕೊಬ್ಬಿದ ಹಂದಿಗಳ ಅಥವಾ ಯಾವುದೇ ರೀತಿಯ ಜೀವಸಂಕುಲಗಳ ಹತ್ಯೆ ನಡೆದಿರಲಿಲ್ಲ. ಸ್ತಂಭಗಳನ್ನು ನಿರ್ಮಿಸಲು ಯಾವುದೇ ವೃಕ್ಷಗಳನ್ನು ಕಡಿದಿರಲಿಲ್ಲ. ಯಜ್ಞ ಪೀಠವನ್ನು ರಕ್ಷಿಸಲು ಯಾವುದೇ ದರ್ಭೆ ಹುಲ್ಲನ್ನು ಉಪಯೋಗಿಸಲಾಗಿರಲಿಲ್ಲ. ಗುಲಾಮರು, ಸುದ್ದಿವಾಹಕರು ಮತ್ತು ಕೆಲಸಗಾರರನ್ನು ಸಲಾಕೆಗಳಿಂದಾಗಲೀ, ಭೀತಿಯಿಂದಾ ಗಲೀ ನಿಯಂತ್ರಿಸಲಾಗಿರಲಿಲ್ಲ ಅಥವಾ ಈ ಕೆಲಸಗಾರರು ಕಣ್ಣೀರು ಸುರಿಸುತ್ತಾ ಕೆಲಸ ನಿರ್ವಹಿಸುತ್ತಲೂ ಇರಲಿಲ್ಲ.
ಮತ್ತೊಂದೆಡೆ ಕುತದಂತನು ತಾನು ಮತಾಂತರಗೊಂಡಿದಕ್ಕಾಗಿ ಬುದ್ಧನಿಗೆ ಅಭಿನಂದಿಸುತ್ತಾ ಇಂತಹ ಯಜ್ಞಗಳಲ್ಲಿ ಸಂಭವಿಸುತ್ತಿದ್ದ ಪ್ರಾಣಿ ಬಲಿಯ ಅಗಾಧತೆಯನ್ನು ಕುರಿತು ಹೀಗೆ ಹೇಳುತ್ತಾನೆ.ನಾನು ಗೌರವಯುತ ಗೌತಮನನ್ನು ಮಾರ್ಗದರ್ಶಿಯಾಗಿ ಸ್ವೀಕರಿಸುತ್ತಾ ಆತನ ತತ್ತ್ವ ಮತ್ತು ಆದೇಶವನ್ನು ಪಾಲಿಸುತ್ತಾ, ಗೌರವಯುತ ಗೌತಮನು ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಲಿ ಎಂದು ಪ್ರಾರ್ಥಿಸುತ್ತೇನೆ. 
ನಾನು ಪ್ರಥಮ ದಿನದಿಂದಲೇ ನನ್ನ ಜೀವನಪರ್ಯಂತ ಆತನನ್ನು ನನ್ನ ಮಾರ್ಗದರ್ಶಿಯಾಗಿ ಸ್ವೀಕರಿಸಿದ್ದೇನೆ. ಗೌತಮನೇ, ನಾನೇ ಖುದ್ದಾಗಿ ಏಳು ನೂರು ವೃಷಭಗಳನ್ನು, ಏಳು ನೂರು ಹೋರಿಗಳನ್ನು, ಏಳು ನೂರು ಎಳೆಯ ಕರುಗಳನ್ನು, ಏಳು ನೂರು ಮೇಕೆಗಳನ್ನು ಮತ್ತು ಏಳು ನೂರು ಗಂಡು ಕುರಿಗಳನ್ನು ಮುಕ್ತಗೊಳಿಸುತ್ತೇನೆ. ಈ ಜಾನುವಾರುಗಳಿಗಾಗಿ ನಾನು ಪ್ರಾಣವನ್ನೂ ತೆರಲು ಸಿದ್ಧನಿದ್ದೇನೆ. ಅವುಗಳು ಹುಲ್ಲು ತಿನ್ನಲಿ, ಶುದ್ಧ ನೀರು ಕುಡಿಯಲಿ ತಂಪುಗಾಳಿ ಅವುಗಳ ಸುತ್ತ ಸುಳಿದಾಡಲಿ.
-ಡಾ. ಬಿ.ಆರ್. ಅಂಬೇಡ್ಕರ್

ಹಿಂದೂ ಧರ್ಮ ಮತ್ತು ಗೋ ಮಾಂಸ: ಅಂಬೇಡ್ಕರ‍್ ದೃಷ್ಟಿಯಲ್ಲಿ

Rating
No votes yet