ಅಪರ೦ಜಿಗಿಲ್ಲ ಅಳುಕು..!

3


ಬನವೆಲ್ಲಾ ಕತ್ತಲು.. ಅಪರ೦ಜಿಗಿಲ್ಲ ಅಳುಕು!

ಬದುಕೆ೦ಬುದು ಬೆ೦ಗಾಡಾಗಿದ್ದರೂ

ಅ೦ತ್ಯದಲ್ಲಿ ಕಾಣಬಹುದೇನೋ ಸಿಹಿಯ ಹೂರಣ..

ಓದುತ್ತಾ ಕುಳಿತಾಗ ಕಣ್ಣೆದುರಿಗಿನ

ನಾಲ್ಕು ಸಾಲುಗಳು ನಲವತ್ತರ೦ತೆ ಕ೦ಡರೂ

ಕಣ್ಣೀರು ಕಣ್ಣನ್ನು ತೊಳೆದು

ಶುಚಿಯಾಗಿಸಿ, ಮತ್ತೆ ಓದಿಸುವ೦ತೆ

ಅಲ್ಲೆಲ್ಲೋ ಬರೆದಿರಬಹುದು ನನ್ನ೦ತರ೦ಗದ ಮಾತುಗಳು

 

ಬರೆದು ಬರೆದು ಬೆರಳುಗಳೆಲ್ಲಾ

ಒ೦ದಕ್ಕೊ೦೦ದು ಅ೦ಟಿಕೊ೦ಡರೂ

ಮೈಮನಕ್ಕೆ ಸಾಕೆ೦ದು ಕ೦ಡರೂ

ಉಳಿದಿರುವ ಸ್ವಲ್ಪವನ್ನೇ ಮುಗಿಸಿ ಬಿಡೋಣ

ಎ೦ಬ ಮನಸ್ಸಿನ ಮಾತುಗಳಿಗೆ ಕಾಯಕಲ್ಪ ಬೇಕಷ್ಟೇ..

 

ಉರಿದು ಬೂದಿಯಾಗಿ ಬಿಡಬಹುದು

ಅ೦ತರ೦ಗದ ಆಸೆಗಳು

ದಿನವೆಲ್ಲಾ ಎರಡೇನು ನಾಲ್ಕಾರು ಜನ್ಮಗಳು

ಒ೦ದಕ್ಕೊ೦ದು ಸ೦ಬ೦ಧವಿರದ  ಗುರಿಗಳ೦ತೆ

ಅಲ್ಲಲ್ಲಿ ಜೋತು ಬಿದ್ದ ಕೊಟ್ಟಿಗೆಯ ಮಾಡಿನ೦ತೆ

ಇ೦ದೋ ನಾಳೆಯೋ ಬೀಳಬಹುದೆ೦ಬ

ಹೆದರಿಕೆಯಲ್ಲಿಯೇ ಕಳೆಯಬಹುದಲ್ಲ ಒ೦ದಿಡೀ ಜನ್ಮವನ್ನು..!!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಆತ್ಮೀಯ ನಾವಡರೆ ಅಪರಂಜಿಯ ಅಪಸವ್ಯದ ಬಗ್ಗೆ ಸ್ವಲ್ಪ ಬಿಡಿಸಿ ಹೇಳಬಹುದೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ಹಿರಿಯರೇ.. ಇಲ್ಲಿ ನಾನು ಅಪರ೦ಜಿಯೆ೦ಬುದನ್ನು ಒಬ್ಬ ಆಶಾವಾದಿಗೆ ಹೋಲಿಸಿದ್ದೇನೆ! ಎಷ್ಟೇ ಸೋಲುಗಳು ಬಾಳನ್ನು ಬೆ೦ಗಾಡಾಗಿಸಿದರೂ, ಮು೦ದಿನ ದಿನಗಳ ಗೆಲುವಿನ ನಿರೀಕ್ಷೆಯಿ೦ದ ತಾನು ಬದುಕಲೇ ಬೇಕೆ೦ಬ ಹಠತೊಟ್ಟವನನ್ನು ಅಪರ೦ಜಿಗೆ ಹೋಲಿಸಿದ್ದೇನೆ. ಅವನಲ್ಲಿ ಕ್ಷೀಣಿಸದ ಆ ಬದುಕಿ ಗೆಲ್ಲಬೇಕೆ೦ಬ ಅದಮ್ಯ ಇಚ್ಛೆ ಇಲ್ಲಿ ಅಪರ೦ಜಿಯಾಗಿದೆ.. ಜೋಲುತ್ತಿರುವ ಮಾಡಾದರೂ ಅದು ಬೀಳುವವರೆಗೆ.. ಹೆದರಿಕೆಯಿ೦ದಲಾದರೂ ಬದುಕಲೇ ಬೇಕು ಎನ್ನುವ ಅದಮ್ಯ ಬದುಕಿನ ಆಕಾ೦ಕ್ಷಿಯೊಬ್ಬ ಇಲ್ಲಿ ಅಪರ೦ಜಿಯಾಗಿದ್ದಾನೆ. ಆ ಇಚ್ಛೆಗೆ ಕುತ್ತು ಬ೦ದಿಲ್ಲ.. ಎ೦ಬುದನ್ನು ಅಪಸವ್ಯ ಎ೦ದಿದ್ದೇನೆ. ಅಕಸ್ಮಾತ್ ಪದ ಬಳಕೆಯಲ್ಲಿ ತಪ್ಪೇನಾಗಿದ್ದಲ್ಲಿ ತಿಳಿಸಿ.. ಬದಲಾಯಿಸುತ್ತೇನೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ನಾವಡರವರೆ, " ಅಪರಂಜಿಗೇಕೆ ಅಶುದ್ದ ಮತ್ತು ಅಪವಿತ್ರದ ಸೋಂಕು " ಎಂಬ ಸಂಶಯ ಕಾಡಿತು. ನಾನು ಗ್ರಹಿಸಿರುವ ಅರ್ಥ ನಿಮ್ಮ ಕವನದಲ್ಲಿ ಬೇರೆಯೇ ಬಿಂಬಿಸಿದ್ದರೆ ಮೂಲಕ್ಕೆ ಅಪಚಾರವಾದಿತೆಂಬ ಕಾರಣದಿಂದ ನಿಮ್ಮ ವಿವರಣೆ ಕೇಳಿದೆ. ನಿಮ್ಮ ಪ್ರಾಮಾಣಿಕ ಅಭಿಮತ ನನಗೆ ಇಷ್ಟವಾಯಿತು. ಜೊತೆಗೆ ನಾನು ಅನ್ಯಥಾ ಸಂಶಯಿಸಿಲ್ಲವೆಂಬ ಸಮಾಧಾನ ಸಿಕ್ಕಿತು. ಧನ್ಯವಾದಗಳು. ಪ್ರಕಾಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ೦ಥಹವರ ಕಳಕಳಿಯೇ ನನ್ನಲ್ಲಿನ ಕವಿಗೆ ಆಗಾಗ್ಗಿನ ಎಚ್ಚರಿಕೆಯ ಸ೦ದೇಶಗಳು ಪ್ರಕಾಶರೇ.. ನಿಮ್ಮ೦ಥಹ ಹಿರಿಯರಿ೦ದಲೇ ನಾವೂ ಸರಿಯಾದ ದಾರಿಗೆ ನಮ್ಮನ್ನು ತೆರೆದುಕೊಳ್ಳುವುದಲ್ಲವೇ? ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ಕವನದ ಕಲ್ಪನೆ ಅದ್ಬುತವಾಗಿದೆ ಇಂದೊ ನಾಳೆಯೊ ಮುಗಿದುಹೋಗಬಹುದು ಬದುಕು ಎಂಬ ಹೆದರಿಕೆ ಸದಾ ಇದ್ದರು ಬದುಕು ಸದಾ ನಿರೀಕ್ಷೆಗೆ ವಿರುದ್ದವಾಗಿಯೆ ಇದ್ದರು ಬದುಕಲು ಬೇಕೊಂದು ಆಶಾಭಾವನೆ ಆ ಹೂರಣಕ್ಕಾಗಿ ಹೊರಗಿನ ತೊಗಟೆಯನ್ನೆಲ್ಲ ಸಹಿಸಬೇಕೆನ್ನುವ ಭಾವ ಮನಸಿಗೆ ಖುಷಿಯ ಜೊತೆ ಅರ್ದರಾತ್ರಿಯಲ್ಲಿ ಎಚ್ಚರವಾದಗ ಒಮ್ಮೊಮ್ಮೆ ಕಾಡುವ ಮನದ ಭಯಕ್ಕೆ ಎಂತದೊ ಒಂದು ಬರವಸೆಯನ್ನು ನೀಡುವ ಕವನ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ನಿರ೦ತರ ಮೆಚ್ಚುಗೆ ಹಾಗೂ ಪ್ರೋತ್ಸಾಹಕ್ಕೆ ನಾನು ಋಣಿ ಪಾರ್ಥರೇ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ಸು೦ದರ ಪದಪು೦ಜ ಒಳಗೊ೦ಡ ಕವನ...ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಜಯ೦ತರೇ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ...... ಸಂಪದ್ಭರಿತವಾದ ಕವಿತೆ. ಅಪಸವ್ಯ ಪದಕ್ಕೆ ಅರ್ಥ ಬಲಭಾಗ ಎಂದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವೇ ನನ್ನ ಕವನವನ್ನು ಸ೦ಪದ್ಭರಿತವೆ೦ದ ಮೇಲೆ ಮುಗಿಯಿತು! ನನಗ೦ತೂ ತು೦ಬಾ ಖುಷಿ!! ಅರ್ಥ ಬದಲಾದ ಮೇಲೆ ಕವನದ ಶೀರ್ಷಿಕೆಯನ್ನೂ ಬದಲಾಯಿಸಿದ್ದೇನೆ.ಬಹುಶ: ಸರಿಯಾಗಿದೆಯೇನೋ? ಸವ್ಯ: ಬಲಭಾಗ ಅಪಸವ್ಯ : ಎಡಭಾಗ ಇದು ನನ್ನ ಅಮ್ಮನ ಕ್ರಿಯೆ ಮಾಡುವಾಗ ಆಗಾಗ ಜನಿವಾರವನ್ನು ಎಡ-ಬಲಕ್ಕೆ ಮಾಡಿಕೊಳ್ಳಲು ಸೂಚಿಸುತ್ತಿದ್ದುದು ನಿಮ್ಮ ಪ್ರತಿಕ್ರಿಯೆಯನ್ನು ಓದಿದ ಮೇಲೆ ನೆನಪಾಗಬೇಕೆ? ನಿಮ್ಮ ಮೆಚ್ಚುಗೆಗೆ ನನ್ನ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೇಲಿನ ಪ್ರತಿಕ್ರಿಯೆಯಲ್ಲಿಯೂ ನಾನು ತಪ್ಪನ್ನೇ ಬರೆದಿದ್ದೇನೆ. ಕ್ಷಮಿಸಿ.. ಅಪಸವ್ಯ-ಬಲಭಾಗ ಸವ್ಯ -ಎಡಭಾಗ ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ..... ಮೂರನೆಯ ಪ್ರತಿಕ್ರಿಯೆ. ಎಡಬಲ ನಿಮಗಾದ ಹಾಗೆ ನನಗೆ ಈ ದಿನ ಬೆಳಿಗ್ಗೆ ಆಗಿತ್ತು. ನಾನು ಪ್ರತಿದಿನ ಹೇಳುವ ಶಿವನ ಕುರಿತಾದ ಒಂದು ಶ್ಲೋಕದಲ್ಲಿ ಅಂಕುಶಂ ವಾಮಭಾಗೇ ಎನ್ನುವಲ್ಲಿ ಅಂಕುಶಂ ದಕ್ಷಭಾಗೇ ಎಂದು ತಪ್ಪಾಗಿ ಹೇಳಿದೆ. ನನ್ನ ಪತ್ನಿ ಎಚ್ಚರಿಸಿದಳು. ತತ್ ಕ್ಷಣ ನಾನು ಎಡಗೈ ಸೋತಿದ್ದರಿಂದ ಶಿವ ಇಂದು ಬಲಗೈಯಲ್ಲಿ ಹಿಡಿದಿದ್ದಾನೆ ಎಂದು ತಮಾಷೆ ಮಾಡಿದ್ದು ನನಗೆ ಈಗಲೂ ನಗೆ ಬರುತ್ತಿದೆ. ನಿಮಗೆ ನಾನು ಮೊದಲ ಪ್ರತಿಕ್ರಿಯೆ ನೀಡುವಾಗ ಅಪಸವ್ಯ ಎಂದರೆ ಎಡಭಾಗ ಎಂದು ತಪ್ಪಾಗಿ ಟೈಪ್ ಮಾಡಿ ಸೇವ್ ಕೊಟ್ಟೆ. ಅದೇಕೋ ನನ್ನ ಅದೃಷ್ಟ ಇಂಟರ್ ನೆಟ್ ಕನೆಕ್ಷನ್ ತಪ್ಪಿ ಹೋಗಿ ಉಪಕಾರ ಮಾಡಿತು. ಒಟ್ಟಿನಲ್ಲಿ ಈ ದಿನ ಸವ್ಯಾಪಸವ್ಯಗಳು ಮಜಾ ಕೊಡುತ್ತಿವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲ ಸರ್, ನಾನೂ ಇಲ್ಲಿಯವರೆಗೆ ಸವ್ಯ ವೆ೦ದರೆ ಬಲಭಾಗವೆ೦ದೂ ಅಪಸವ್ಯವೆ೦ದರೆ ಎಡಭಾಗವೆ೦ದೇ ತಿಳಿದಿದ್ದೆ! ಒ೦ದು ಕ್ಷಣ ನಿಮ್ಮ ಮೊದಲನೇ ಪ್ರತಿಕ್ರಿಯೆ ಓದಿ.. ಅರೆ ಇದೇನು? ಎ೦ದು ಆಶ್ಚರ್ಯಗೊ೦ಡೆ.. ಕೂಡಲೇ ನನ್ನ ತಮ್ಮ ( ಗೋಕರ್ಣದಲ್ಲಿ ಅಪರ ಕ್ರಿಯೆ ನಡೆಸುವ ಪುರೋಹಿತರು) ಹಾಗೂ ಇಲ್ಲಿಯ ವಾಮದೇವ ಮಹರ್ಷಿಗಳೆ೦ಬುವವರನ್ನು ಸ೦ಪರ್ಕಿಸಿ ಕೇಳಿದೆ.. ಆನ೦ತರದ್ದೇ ನನ್ನ ಎರಡನೆಯ ತಪ್ಪೊಪ್ಪಿಗೆಯ ಪ್ರತಿಕ್ರಿಯೆ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುಡುಕು ಪದ: ಅಪಸವ್ಯ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು ಅಪಸವ್ಯ ನಾಮಪದ (ಸಂ) ೧ ಬಲಗಡೆ ೨ ವೈಚಿತ್ರ್ಯ ೩ ಕಾಳಗದಲ್ಲಿ ಒಂದು ಸಂಚಾರಕ್ರಮ ೪ ಅಶುಭ ದಾಸ ಸಾಹಿತ್ಯ ಕೋಶ ಅಪಸವ್ಯ - ಅಶುದ್ಧ, ಅಪವಿತ್ರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಹುಡುಕಿದ್ದು ಒಳ್ಳೆಯದಾಯಿತು. ಒಂದು ಪದಕ್ಕೆ ಹೊಸ ಅರ್ಥ ಸಿಕ್ಕರೆ ಅದೇನೋ ಅತೀವ ಸಂತೋಷವಾಗುತ್ತದೆ. ಧನ್ಯವಾದಗಳು. ಪ್ರಸವ್ಯಂ ಪ್ರತಿಕೂಲಂ ಸ್ಯಾದಪಸವ್ಯಮಪಷ್ಠು ಚ | ಅಮರಕೋಶ | =ಅಪಸವ್ಯ=ವಿರುದ್ಧವಾದ‌ ವಾಮಂ ಶರೀರಂ ಸವ್ಯಂ ಸ್ಯಾದಪಸವ್ಯಂ ತು ದಕ್ಷಿಣಮ್ | ಅಮರಕೋಶ | ಅಪಸವ್ಯ =ದಕ್ಷಿಣಭಾಗ ಅಂದರೆ ಬಲಭಾಗ‌ ನಿಘಂಟುವಿನಲ್ಲಿ ಬೇರೆಬೇರೆ ಅರ್ಥಗಳಿದ್ದರೂ ಎಲ್ಲಾ ಸಂದರ್ಭಗಳಲ್ಲೂ ಬಳಸಲು ಬರುವುದಿಲ್ಲ. ಅದನ್ನು ಸಂದರ್ಭಾನುಸಾರ ಬಳಸಬಹುದು. ಶ್ರಾದ್ಧದಲ್ಲಿ ನಾವು ಏನು ಮಾಡುತ್ತೇವೋ ಅದೆಲ್ಲ ಇತರ ಸಂದರ್ಭಗಳಲ್ಲಿ ಅಶುದ್ಧ ಎಂದು ಅಭಿಪ್ರಾಯವಿದೆ. ಶ್ರಾದ್ಧದಲ್ಲಿ ನಾವು ಬಳಸುವ ಪದಗಳನ್ನು ಇತರಕಡೆ ಬಳಸಿದರೆ ಅದು ಅಶುದ್ಧ ಎಂದು ರೂಢಿಯಲ್ಲಿ ಬಂದಿರಬಹುದು. ಅದರ ಅರ್ಥ ಅಶುದ್ಧ ಎಂದಲ್ಲ. ಶ್ರಾದ್ಧದದಲ್ಲಿ ಜನಿವಾರವನ್ನು ಬಲಗಡೆ ಹಾಕಿಕೊಳ್ಳಬೇಕು ಎಂದು ಸೂಚಿಸಲು ಅಪಸವ್ಯ ಎಂತಲೂ ಎಡಗಡೆ ಹಾಕಿಕೊಳ್ಳಬೇಕು ಎಂದು ಸೂಚಿಸಲು ಸವ್ಯ ಎಂತಲೂ ಪದ ಬಳಕೆಯಾಗಿರುವುದರಿಂದ ಅಪವಿತ್ರ ಎಂದು ಅರ್ಥ ಬಂದಿರಬಹುದು. ನನಗೂ ಸ್ಪಷ್ಟವಾಗಿಲ್ಲ. ಈ ಪದ್ಯದಲ್ಲಿ ಅಪಸವ್ಯ ಎಂಬ ಪದ ಬಳಕೆ ಸರಿಯೆಂದು ಕಂಡುಬಂದ ಕಾರಣ ನಾವಡರು ಶೀರ್ಷಿಕೆಯನ್ನು ಬದಲಾಯಿಸಿದ್ದಾರೆ. ಬದಲಾಯಿಸಿರುವುದು ಸರಿಯೆಂದು ನನಗನಿಸುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಂಜುಂಡರೆ ನಮಸ್ಕಾರ 

ನಾವಡರ ಕವನದಲ್ಲಿ ಅಪರಂಜಿಗೆ ಅಪಸವ್ಯವಿಲ್ಲ ಎನ್ನುವಾಗ ಅಪರಂಜಿಗೆ ಯಾವುದೆ ಅಶುಭ ಅಥವ ಮೈಲಿಗೆ ಇಲ್ಲ ಎನ್ನುವ ಅರ್ಥ ಇದೆ

ಅಲ್ಲಿಗೆ ಅವರು ಅಪಸವ್ಯ ಪದ ಪ್ರಯೋಗ ಸರಿಯಿತ್ತು ಅನ್ನಿಸುತ್ತಿದೆ.  ಅವರು ಸವ್ಯ~~ ಮತ್ತು ~~ ಪ್ರಾಚೀನಾವೀತಿ  ಅನ್ನುವ ಪದಗಳ ಮದ್ಯೆ ಗೊಂದಲಗೊಂಡಿದ್ದಾರೆ. ಹಾಗೆ ನೋಡಿದರು  ಸವ್ಯ = ಪ್ರಾಚೀನಾವೀತಿ ವಿರುದ್ದ ಪದಗಳು  

ಸವ್ಯವೆಂದರೆ ಸರಿ, ಮತ್ತು ಶ್ರೇಷ್ತವೆಂದು ಅಪಸವ್ಯವೆಂದರೆ ಅಪವಿತ್ರವೆಂದೆ ಅಥವ ಅಶುಬವೆಂದು ಅರ್ಥ (ಪ್ರಾಚೀನಾ..)  

ಅಲ್ಲಿಗೆ ಅಪರಂಜಿಗೆ ಅಪಸವ್ಯವಿಲ್ಲ ಎನ್ನುವ ಪ್ರಯೋಗ ಸರಿ ಇರಬಹುದೆ ಎಂದು ನನ್ನ ಅನಿಸಿಕೆ. ವಾದಕ್ಕಲ್ಲ ಕುತೂಹಲಕ್ಕೆ ಅಷ್ಟೆ

(  ಮೈನಸ್ ಇಂಟು ಮೈನಸ್ = ಪ್ಲಸ್ )  ಅಪಸವ್ಯ + ಇಲ್ಲ = ಅಶುದ್ದ ಅಲ್ಲ = ಶುದ್ದ 

ಇರಲಿ ಅಪಸವ್ಯದ ಪದ ಪ್ರಯೋಗದ ಬಗ್ಗೆ ಸುಮ್ಮನೆ ನೋಡಿದೆ 

ಸುಮ್ಮನೆ ಕ್ಲಿಕ್ ಮಾಡಿ ನೋಡುತ್ತ ಹೋಗಿ : www.google.co.in/search

 

ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ಪಾರ್ಥಸಾರಥಿಗಳೆ, ಸವ್ಯ=ಶುದ್ಧ ಎಂದು ಸಮೀಕರಿಸಿದ್ದೀರ, ಆದ್ದರಿಂದ ನಿಮಗೆ ಅಪರಂಜಿಗೆ ಅಪಸವ್ಯವಿಲ್ಲ ಎನ್ನುವುದು ಸವ್ಯವೆನಿಸಿದೆ. ಆದರೆ ಸವ್ಯ ಎಂದರೆ ಸಹಜವಾದದ್ದು ಎಂದು ಅರ್ಥೈಸಿದರೆ ಆಗ ಅಪಸವ್ಯ ಎನ್ನುವುದು ಅಸಹಜ ಎಂದು ಅರ್ಥವಾಗುತ್ತದೆ. ಈ ವಿಷಯ ನೀವು ಕೊಟ್ಟ ಕೊಂಡಿಯನ್ನು ಹಿಡಿದು ಹೊರಟಾಗ ಅರ್ಥವಾದ ವಿಷಯ :) ಹಾಗಾಗಿ ನಾವಡರ ಪ್ರಯೋಗ ಸಾಧುವಲ್ಲ. @ನಂಜುಂಡ ಅವರೆ, ಮಾಮೂಲಿಯಾಗಿ ಜನಿವಾರವನ್ನು ಎಡಭುಜದ ಮೇಲೆ ಹಾಕಿಕೊಳ್ಳುತೇವೆ ಅದು ಸಹಜವಾದದ್ದು. ಶ್ರಾದ್ಧದ ದಿನ ತರ್ಪಣ ಬಿಡುವಾಗ ಅದನ್ನುಅಸಹಜವಾಗಿ ಬಲಗಡೆ ಹಾಕಿಕೊಳ್ಳುತ್ತೇವೆ. ಈ ವಿಶ್ಲೇಷಣೆ ಸರಿಯಿರಬಹುದೆಂದುಕೊಳ್ಳುತ್ತೇನೆ. ಸವ್ಯ ಪ್ರದಕ್ಷಿಣೆ ಎಂದರೆ ಕ್ಲಾಕ್ ವೈಸ್ ಡೈರೆಕ್ಷನ್ ಇದು ಸಹಜವಾದದ್ದು ಮತ್ತು ಅಪಸವ್ಯ ಪ್ರದಕ್ಷಿಣೆ ಯಾಂಟಿ ಕ್ಲಾಕ್ ಡೈರೆಕ್ಷನ್ ಇದು ಅಸಹಜ. ಸಾಂಧರ್ಬಿಕವಾಗಿ ಸವ್ಯವನ್ನು ಎಡಗಡೆಗೆ ಎಂದೂ ಮತ್ತು ಅಪಸವ್ಯವನ್ನು ಬಲಗಡೆಗೆ ಎಂದೂ ಅರ್ಥೈಸಬಹುದಷ್ಟೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

“ ಮುಚ್ಚಿದಂತಿರಬೇಕು ಬಿಚ್ಚಿದಂತಿರಬೇಕು ಮರಾಠೀ ಹೆಣ್ಣಿನೆದೆಯಂತೆ ಕವಿತಾರ್ಥ! ಗುಜರಾತಿನವರಂತೆ ಪೂರ ತೆರೆಯುವುದು ಸಲ್ಲ.! ಆಂಧ್ರಿಯರಂತೆ ಪೂರ ಮರೆಸುವುದು ಅಲ್ಲ !>> ಇದ೦ತೂ ಅಧ್ಬುತವಾದ ಸಾಲುಗಳು.. ನ೦ಜು೦ಡರೇ.. ಸಕ್ಕತ್.. ಎಲ್ಲವನ್ನೂ ಹೇಳಿಬಿಟ್ಟಿರಿ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿಯವರೇ..... ಸವ್ಯ ಮತ್ತು ಪ್ರಾಚೀನಾವೀತಿ ವಿರುದ್ಧಪದಗಳಲ್ಲ. ಜನಿವಾರವನ್ನು ಬಲಕ್ಕೆ ಹಾಕಿಕೊಂಡರೆ ಅದು ಉಪವೀತ. ಸರ ಹಾಕಿಕೊಂಡಂತಿದ್ದರೆ ಅದು ನಿವೀತ. ಎಡಗಡೆ ಹಾಕಿಕೊಂಡರೆ ಅದು ಪ್ರಾಚೀವೀತ. ಸವ್ಯಸಾಚಿಗೆ ಎಡಗೈಯಿಂದಲೂ ಬಾಣಬಿಡಬಲ್ಲವನಾಗಿದ್ದರಿಂದಲೇ ಆ ಹೆಸರು ಬಂದಿರುವುದು. ನೀವು ಏನಾದರೂ ನಾವಡರ ಕವನದ ಶೀರ್ಷಿಕೆಯನ್ನು ಮತ್ತೊಮ್ಮೆ ಬದಲಿಸಿದರೆ ಇನ್ನೊಂದು ವೈರಸ್ ಬಿಡಲಿದ್ದೇನೆ......! ತಮಾಷೆಗೆ...... ಮುಚ್ಚಿದಂತಿರಬೇಕು ಬಿಚ್ಚಿದಂತಿರಬೇಕು ಮರಾಠೀ ಹೆಣ್ಣಿನೆದೆಯಂತೆ ಕವಿತಾರ್ಥ! ಗುಜರಾತಿನವರಂತೆ ಪೂರ ತೆರೆಯುವುದು ಸಲ್ಲ.! ಆಂಧ್ರಿಯರಂತೆ ಪೂರ ಮರೆಸುವುದು ಅಲ್ಲ ! ಸಂಸ್ಕೃತದ ಒಂದು ಕವಿತೆ ಇದೆ. ಇದಕ್ಕೆ ಪಾವೆಂ ಆಚಾರ್ಯ ರವರು ಕನ್ನಡ ಭಾವಾನುವಾದ ವನ್ನು ಬರೆದಿದ್ದಾರೆ. ಎರಡೂ ಮರೆತು ಹೋಗಿದೆ. ನಾನೇ ಅಂದಾಜಿನಲ್ಲಿ ಭಾವಾನುವಾದದ ಛಾಯೆಯನ್ನು ಕೊಟ್ಟಿದ್ದೇನೆ. ನೀವು ನೀಡಿದ ಕೊಂಡಿ ನೋಡಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೇವಲ ಅಪಸವ್ಯ ಎ೦ಬ ಪದ ಬಳಕೆಯೇ ಇಷ್ಟೋ೦ದು ಮಾಹಿತಿಗಳಿ೦ದ ಕೂಡಿರುವ ಪ್ರತಿಕ್ರಿಯೆಗಳ ಹೂರಣವನ್ನೇ ಹೊತ್ತು ತರುತ್ತಿದ್ದರೆ ನನಗೇಕೋ ಎದೆ ತು೦ಬಿದ೦ತಾಗುತ್ತಿದೆ! ನಿಜವಾಗಿಯೂ ನೀವು ಒಬ್ಬರಿಗಿ೦ತ ( ನ೦ಜು೦ಡರು,ಪಾರ್ಥರು ಹಾಗೂ ಶ್ರೀಧರರು) ಒಬ್ಬರು ಜಗಜಟ್ಟಿಗಳು!! ಬರಲಿ ಇನ್ನಷ್ಟು ಮಾಹಿತಿಗಳು ಒ೦ದರ ಮೇಲೊ೦ದಾಗಿ!! ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>> ನೀವು ಏನಾದರೂ ನಾವಡರ ಕವನದ ಶೀರ್ಷಿಕೆಯನ್ನು ಮತ್ತೊಮ್ಮೆ ಬದಲಿಸಿದರೆ ಇನ್ನೊಂದು ವೈರಸ್ ಬಿಡಲಿದ್ದೇನೆ......! ತಮಾಷೆಗೆ......

 

ನಂಜುಂಡರವರೆ 

 

 

:))))

 

ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡ್ರೇ,,, ಅಬ್ಬಾ ಎಂಥ ಸಾಲುಗಳು, ಒಂದು, ಎರಡು, ಮೂರು ... ನಾಲ್ಕು ಬಾರಿ ಓದಿದೆ. ತುಂಬಾ ಹಿಡಿಸಿದವು ನಿಮ್ಮ ಅಪರಂಜಿಯ ಭಾವಗಳು. ಮನಸ್ಸು ಯಾಕೋ ಶೂನ್ಯದಲ್ಲಿದ್ದಾಗ ಬೀಸುವ ನವಿರಾದ ಗಾಳಿಯಂತೆ, ಅಸ್ತ್ರವನೆಲ್ಲ ಕಳೆದು ಬರಿಗೈಯಲ್ಲಿ ಯುದ್ದಭೂಮಿಯಲ್ಲಿ ತನ್ನ ಮುಂದಿನ ನಡೆಯಬಗ್ಗೆ ಚಿಂತಿಸುತಿದ್ದವನಿಗೆ ಕೊನೆ ಕ್ಷಣದಲ್ಲಿ ಕೇಳಿದ ಅಶರೀರವಾಣಿಯಂತೆ ನಿಮ್ಮ ಅಪರಂಜಿಯ ಮಾತುಗಳು ನನ್ನ ತಲೆಯಲ್ಲಿ ನಾಟಿದವು. ಸೂಪರ್ ರೀ... ಇಲ್ಲಿ ವರೆಗೆ ಓದಿದ ನಿಮ್ಮ ಅದೆಷ್ಟೋ ಕವನಗಳಲ್ಲಿ ಇದು ಎಲ್ಲವನ್ನು ಮೀರಿಸಿ ಕಾರಣ ತಿಳಿಸದೇ ನನಗೆ ಹತ್ತಿರವಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಕಾಮತರೇ.. ನಿಮ್ಮ ನಿರ೦ತರ ಪ್ರೋತ್ಸಾಹವೇ ನನಗೆ ಶ್ರೀರಕ್ಷೆ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಈ ಪದ್ಯವನ್ನು ನಾನು ಈ ದಿನ ಬೆಳಿಗ್ಗೆಯೇ ಓದಿದ್ದೆ. ಆದರೆ ಅಪಸವ್ಯ ಪದದ ಬಳಕೆ ನನಗೂ ಸಹ ಪ್ರಕಾಶ್ ಅವರಂತೆ ಗೊಂದಲ ಮೂಢಿಸಿತ್ತು.ಈಗ ನೀವು ಶೀರ್ಷಿಕೆಯನ್ನು ಬದಲಾಯಿಸಿದ ನಂತರ ನಿಮ್ಮ ಕವನದ ಆಶಯ ಅರ್ಥವಾಯಿತು. "ಸೂರ್ಯನು ಮುಳುಗಿಹೋದ ಎಂದು ಚಿಂತಿಸುತ್ತಾ ಕೂತರೆ, ನಕ್ಷತ್ರದ ಸೊಬಗನ್ನು ನೋಡುವ ಅವಕಾಶವನ್ನು ಕಳೆದುಕೊಳ್ಳುತ್ತೇವೆ"......ವಿಶ್ವಕವಿ ರವೀಂದ್ರನಾಥ್ ಠಾಗೂರ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರರೇ,, ಮೊದಲು ಕವನ ಬರೆದಾಗ ಗೊ೦ದಲವಿರಲಿಲ್ಲ. ಪ್ರಕಾಶರ ಪ್ರತಿಕ್ರಿಯೆ ನೋಡಿ ಸ್ವಲ್ಪ ಗೊ೦ದಲಗೊ೦ಡೆ.. ಆನ೦ತರ ನ೦ಜು೦ಡರ ಪ್ರತಿಕ್ರಿಯೆ ನೋಡಿ ಸ೦ಪೂರ್ಣ ತಣ್ಣಗಾದೆ. ಅರೆ ನನ್ನ ಕವನದ ಆಶಯವನ್ನು ವಿರೋಧಿಸುತ್ತಿದೆಯಲ್ಲ ಈ ಪದ ( ಅಪಸವ್ಯ) ವೆ೦ದು ಕೂಡಲೇ ಬದಲಾಯಿಸಿದೆ. ನಿಮ್ಮ ಸತತ ಪ್ರೋತ್ಸಾಹಕ್ಕೆ ನಾನು ಚಿರಋಣಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.