ಅಮುಲ್ ಪೌಡರ್

3.166665
ಸಣ್ಣವರಿದ್ದಾಗ ಅಮ್ಮ ಸೌದೆ ತರಲೋ ಇಲ್ಲ ಎತ್ತಿಗೆ ಮುಸುರೆ ಕೊಡಲು ಹೋದಾಗ, ಕದ್ದು ತಿನ್ನಲು ಅಡಿಗೆ ಮನೆಗೆ ಹೋಗಿ ಡಬ್ಬಿಯನ್ನು ಜಾಲಾಡುತ್ತಿದ್ದಾಗ ಕೋಡುಬಳೆಯೋ, ಕರ್ಜಿಕಾಯಿಯೋ, ಶಂಕರಪಾಳವೋ ಖಾಲಿಯಾಗಿದ್ದರೆ ಸಿಗುತ್ತಿದ್ದ ತಿಂಡಿಯೇ ಅಮುಲ್ ಪೌಡರ್!!, ಬೇಗ ಬೇಗನೆ ಅದರಲ್ಲಿದ್ದ ಪ್ಲಾಸ್ಟಿಕ್ ಚಮಚದಿಂದ ಬಾಯಿಗೆ ೩-೪ ಚಮಚದಷ್ಟನ್ನು ಹಾಕಿಕೊಂಡು (ಜಾಸ್ತಿ ಹಾಕಿಕೊಳ್ಳುವುದಕ್ಕೆ ಬಾಯಿಗೆ ಹೋಗುತ್ತಿದ್ದದ್ದೇ ಅಷ್ಟು!) ಓಡುವಾಗ ಅಕಸ್ಮಾತ್ ಅಮ್ಮ ಸಿಕ್ಕಿ ಹಿಡಿದರೂ ಹೇಗೋ ತಪ್ಪಿಸಿಕೊಂಡು ಓಡಿ ಪೌಡರಿನ ರುಚಿಯನ್ನ ಚಪ್ಪರಿಸುತ್ತ್ತಿದ್ದ ಸಂದರ್ಭ. ಅಷ್ಟೇ ಏಕೆ ನಮ್ಮ ಮೈಮನಗಳನ್ನು ತಣಿಸಿದ ಕಾಫಿಗೆ ಹಾಲಾಗುತ್ತಿದ್ದ ಪೌಡರ್. ಇಂದು ಅದರ ಜನಕನನ್ನು ಕಳೆದುಕೊಂಡಿದೆ. ನಮ್ಮ ಬಾಲ್ಯಕ್ಕೊಂದು ಕೊಡುಗೆ ಕೊಟ್ಟ ಆ ಜನಕನಿಗೊಂದು ನಮನ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.2 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕುರಿಯನ್ ಅವರ ಆತ್ಮಕ್ಕೆ ಶಾಂತಿ ಸಿಗಲಿ.. ಅವರ ಸಾಧನೆ ಸದಾ ಸ್ಮರಿಸುವೆವು... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಚೇತನ್, ನಿಮ್ಮೊಡನೆ .........ಭಾವಪೂರ್ಣ ಶ್ರದ್ಧಾಂಜಲಿ ಕುರಿಯನ್ ರವರಿಗೆ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮಾತು ನಿಜ ಚಿಕ್ಕೂ ಅಮುಲ್ ತಿನ್ನುವ ಹುಡುಗರಿಂದ ಹಿಡಿದು ಕಾಫಿ ಕುಡಿಯುವ ಮುದುಕರವರೆಗೆ ಎಲ್ಲರೂ ದಿನನಿತ್ಯ ಸ್ಮರಿಸಬೇಕಾದ ವ್ಯಕ್ತಿ ಕುರಿಯನ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಹೇಳುತ್ತಿದ್ದಂತೆ ನಾನು ದೊಡ್ಡವನಾದ ಮೇಲು ಅಮುಲ್ ಪುಡಿಯನ್ನು ತಿನ್ನುತ್ತ ಇದ್ದದ್ದು (ಕದ್ದು) ನಿಜ‌ ಆದರೆ ಅದಕ್ಕು ಜನಕನಿರಬಹುದೆಂದು ನನಗೆ ತೋಚೆ ಇರಲಿಲ್ಲ ನನ್ನದೊಂದು ನಮನ‌ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆಯ ಭಾವಾಂಜಲಿ, ಚಿಕ್ಕೂ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.